ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಹುದ್ದೆ ಖಾಲಿಗೆ ಸದನದಲ್ಲಿ ಉತ್ತರ | ಶಾಸಕರ ಪ್ರಯತ್ನಕ್ಕೆ ಉನ್ನತ ಶಿಕ್ಷಣ ಸಚಿವರಿಂದ ಪರಿಹಾರದ ಭರವಸೆ
ಪುತ್ತೂರು: ಇಲ್ಲಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೊನೆಗೂ ಸಚಿವರು ಅಧಿವೇಶನದಲ್ಲಿ ಅಸ್ತು ಎಂದಿದ್ದಾರೆ. ಶಾಸಕ ಸಂಜೀವ ಮಠಂದೂರು ಅವರು ಕೇಳಿರುವ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಉತ್ತರ ನೀಡಿದ್ದರು. ಆದರೆ ಉತ್ತರ ತೃಪ್ತಿಕರವಾಗಿರದೇ ಇದ್ದುದರಿಂದ, ಸದನದಲ್ಲಿ ಮಾತನಾಡಲು ಅವಕಾಶ ಸಿಕ್ಕಾಗ, ಸಭಾಧ್ಯಕ್ಷರ ಗಮನ ಸೆಳೆದು, ಸಮಸ್ಯೆಗೆ ಪರಿಹಾರ ನೀಡುವಲ್ಲಿ ಶಾಸಕ ಸಂಜೀವ ಮಠಂದೂರು ಯಶಸ್ವಿಯಾಗಿದ್ದಾರೆ. ಹಳೆ ತಾಲೂಕು ಕಚೇರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರು ಸರಕಾರಿ ಮಹಿಳಾ ಪ್ರಥಮ […]










