ಗ್ರಾಮೀಣ ಭಾಗ ರಾಜ್ಯ ರಾಜಧಾನಿಗೆ ನೇರ ಸಂಪರ್ಕ | ಪಾಣಾಜೆಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಸ್ಲೀಪರ್ ಕೋಚಿಗೆ ಚಾಲನೆ ನೀಡಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಗಡಿಭಾಗವಾದ ಪಾಣಾಜೆ – ಬೆಟ್ಟಂಪಾಡಿ ಜನರು ರಾಜ್ಯ ರಾಜಧಾನಿಯನ್ನು ಸುಲಭವಾಗಿ ಸಂಪರ್ಕ‍ ಸಾಧಿಸುವಂತಾಗಬೇಕು ಎಂಬ ದೃಷ್ಟಿಯಿಂದ ಪಾಣಾಜೆಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಸ್ಲೀಪರ್ ಕೋಚ್ ಬಸ್ ಆರಂಭವಾಗಿದೆ. ಪಾಣಾಜೆ ಪರಿಸರದ ಜನರ ಬೇಡಿಕೆಗೆ ಮನ್ನಣೆ ದೊರೆತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಪಾಣಾಜೆಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಸ್ಲೀಪರ್ ಬಸ್ ಸೇವೆಗೆ ಡಿ. 16ರಂದು ರಾತ್ರಿ ಪಾಣಾಜೆಯಲ್ಲಿ ತೆಂಗಿನಕಾಯಿ ಒಡೆದು ಚಾಲನೆ ನೀಡಿ, ಮಾತನಾಡಿದರು. ಪಾಣಾಜೆ ಭಾಗದ ಜನರು ಬೆಂಗಳೂರಿಗೆ ತೆರಳುಬೇಕು ಎಂದರೆ, ಪುತ್ತೂರಿನಿಂದ ಬಸ್ ಹಿಡಿಯಬೇಕಿತ್ತು. […]

ಗ್ರಾಮೀಣ ಭಾಗ ರಾಜ್ಯ ರಾಜಧಾನಿಗೆ ನೇರ ಸಂಪರ್ಕ | ಪಾಣಾಜೆಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಸ್ಲೀಪರ್ ಕೋಚಿಗೆ ಚಾಲನೆ ನೀಡಿ ಶಾಸಕ ಸಂಜೀವ ಮಠಂದೂರು Read More »

ಪಠ್ಯೇತರ ಚಟುವಟಿಕೆ, ಶಾಶ್ವತಿ ವಾರ್ತಾ ಪತ್ರಿಕೆ ಉದ್ಘಾಟನೆ

ಪುತ್ತೂರು: ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಶಾಶ್ವತಿ ವಾರ್ತಾ ಪತ್ರಿಕೆ ಬಿಡುಗಡೆ ಸಮಾರಂಭ ಡಿ. 17ರಂದು ಬೆಳಿಗ್ಗೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರಗಿತು. ಶಾಸಕರೂ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು. ನಿವೃತ್ತ ಪ್ರಾಧ್ಯಾಪಕಿ ವತ್ಸಲಾ ರಾಜ್ಞಿ ಮುಖ್ಯ ಅತಿಥಿಯಾಗಿದ್ದರು. ಕಾಲೇಜು ಪ್ರಾಂಶುಪಾಲ ಡಾ. ಶ್ರೀಧರ್ ಗೌಡ ಪಿ. ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಂಘ ಸಂಚಾಲಕ ಪ್ರೊ. ಶಾಂತರಾಮ ಎ.,

ಪಠ್ಯೇತರ ಚಟುವಟಿಕೆ, ಶಾಶ್ವತಿ ವಾರ್ತಾ ಪತ್ರಿಕೆ ಉದ್ಘಾಟನೆ Read More »

ಡಿ. 20: ನಗರಸಭೆ ಆಯವ್ಯಯ ಪೂರ್ವಭಾವಿ ಸಭೆ

ಪುತ್ತೂರು: ಪುತ್ತೂರು ನಗರಸಭೆಯ 2023-24ನೇ ಸಾಲಿನ ಆಯವ್ಯಯ ತಯಾರಿಕೆ ಹಿನ್ನೆಲೆಯಲ್ಲಿ ಡಿ. 20ರಂದು ಮಧ್ಯಾಹ್ನ 3.30ಕ್ಕೆ ನಗರಸಭೆ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸುವರು. ಸ್ಥಳೀಯ ಸಂಘ- ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡುವಂತೆ ನಗರಸಭೆಯ ಪ್ರಕಟಣೆ ತಿಳಿಸಿದೆ.

ಡಿ. 20: ನಗರಸಭೆ ಆಯವ್ಯಯ ಪೂರ್ವಭಾವಿ ಸಭೆ Read More »

ಕುಕ್ಕರ್‌ ಬಾಂಬ್‌ ಉಗ್ರ ಬೆಂಗಳೂರಿಗೆ ಸ್ಥಳಾಂತರ

ನ.19 ರಂದು ನಾಗುರಿ ಬಳಿ ರಿಕ್ಷಾದಲ್ಲಿ ಬಾಂಬ್‌ ಸ್ಫೋಟಗೊಂಡ ಪ್ರಕರಣದ ಶಂಕಿತ ಆರೋಪಿ ಮಂಗಳೂರು: ಕುಕ್ಕರ್‌ ಬಾಂಬ್‌ ಸ್ಫೋಟದ ಉಗ್ರ ಶಾರಿಕ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.ಶನಿವಾರ ಬೆಳಗ್ಗೆ ಶಾರಿಕ್‌ನನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ತಿಳಿಸಿದ್ದಾರೆ.ನ.19 ರಂದು ಮಂಗಳೂರಿನ ಕಂಕನಾಡಿ ಸಮೀಪ ನಾಗುರಿ ಎಂಬಲ್ಲಿ ರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಕೊಂಡೊಯ್ಯುತ್ತಿದ್ದಾಗ ಅದು ಸ್ಫೋಟಿಸಿ ಶಾರಿಕ್‌ ಗಂಭೀರವಾಗಿ ಗಾಯಗೊಂಡಿದ್ದಾನೆ. ಶೆ.60 ರಷ್ಟು ಸುಟ್ಟ ಗಾಯಗಳಾಗಿರುವ ಅವನಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.ಮಂಗಳೂರಿನ ದೇವಸ್ಥಾನಗಳಲ್ಲಿ

ಕುಕ್ಕರ್‌ ಬಾಂಬ್‌ ಉಗ್ರ ಬೆಂಗಳೂರಿಗೆ ಸ್ಥಳಾಂತರ Read More »

ಅಪಘಾತಕ್ಕೀಡಾದ ಪುರುಷೋತ್ತಮರವರ ಆರೋಗ್ಯ ವಿಚಾರಿಸಿದ ಶಾಸಕರು

ಪುತ್ತೂರು: ಅಪಘಾತಕ್ಕೀಡಾಗಿ ಬಳಿಕ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಬನ್ನೂರಿನ ಕೊಲ್ಯ ನಿವಾಸಿ ಪುರುಷೋತ್ತಮ ಅವರ ಮನೆಗೆ ಶಾಸಕ ಶ್ರೀ ಸಂಜೀವ ಮಠಂದೂರು ಭೇಟಿ ನೀಡಿ ಯೋಗ್ಯಕ್ಷೇಮ ವಿಚಾರಿಸಿದರು. ಶಕ್ತಿ ಕೇಂದ್ರ ಸಂಚಾಲಕ ನಾಗೇಶ್, ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯ, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಅಪಘಾತಕ್ಕೀಡಾದ ಪುರುಷೋತ್ತಮರವರ ಆರೋಗ್ಯ ವಿಚಾರಿಸಿದ ಶಾಸಕರು Read More »

ಎಚ್.ಡಿ.ಕೆ ಹುಟ್ಟುಹಬ್ಬ: ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ ಜೆಡಿಎಸ್

ಪುತ್ತೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ 64ನೆಯ ಹುಟ್ಟು ಹಬ್ಬದ ಪ್ರಯುಕ್ತ ಶುಕ್ರವಾರ ಜೆಡಿಎಸ್ ಕಾರ್ಯಕರ್ತರು ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಸಮಿತಿ ಅಧ್ಯಕ್ಷ ಅಶ್ರಫ್ ಕಲ್ಲೇಗ ಮಾತನಾಡಿ, ಜೆಡಿಎಸ್ ವರಿಷ್ಠಿರಾದ ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ಬಡವರ ಹಾಗೂ ರೋಗಿಗಳ ಬಗ್ಗೆ ಬಹಳಷ್ಟು ಕಾಳಜಿ ವಹಿಸಿದ್ದರು. ಇಂದು ಅವರ ೬೪ನೆಯ ಹುಟ್ಟು ಹಬ್ಬವಾಗಿದ್ದು, ಆ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು

ಎಚ್.ಡಿ.ಕೆ ಹುಟ್ಟುಹಬ್ಬ: ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ ಜೆಡಿಎಸ್ Read More »

ದಯಾಮರಣ ಕೋರಿ ಪೊಲೀಸ್‌ ಸಿಬ್ಬದಿಯಿಂದ ರಾಷ್ಟ್ರಪತಿಗೆ ಪತ್ರ

ವಿಧಾನಸೌಧ ಭದ್ರತೆ ವಿಭಾಗದ ಡಿಸಿಪಿ ಅಶೋಕ ರಾಮಪ್ಪ ಜುಂಜರವಾಡ ವಿರುದ್ಧ ಆರೋಪ ಬೆಂಗಳೂರು : ವಿಧಾನಸೌಧ ಭದ್ರತೆ ವಿಭಾಗದ ಡಿಸಿಪಿ ಅಶೋಕ ರಾಮಪ್ಪ ಜುಂಜರವಾಡ ವಿರುದ್ಧ ವಿಧಾನಸೌಧದ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಮಾನಸಿಕ ಕಿರುಕುಳ ಹಾಗೂ ಆಡಳಿತಾತ್ಮಕ ಹಿಂಸೆಯ ಆರೋಪ ಮಾಡಿ ರಾಷ್ಟ್ರಪತಿಗೆ ದಯಾ ಮರಣ ಕೋರಿ ಅನಾಮಧೇಯ ಪತ್ರ ಬರೆದಿದ್ದಾರೆ. ಇದೀಗ ಆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಡಿಸಿಪಿ ಅಶೋಕ ರಾಮಪ್ಪ ಮಾನವೀಯತೆ ಇಲ್ಲದ ಅಧಿಕಾರಿ. ಕೆಳಹಂತದ ಅಧಿಕಾರಿ

ದಯಾಮರಣ ಕೋರಿ ಪೊಲೀಸ್‌ ಸಿಬ್ಬದಿಯಿಂದ ರಾಷ್ಟ್ರಪತಿಗೆ ಪತ್ರ Read More »

ಮೆಸ್ಸಿ… ಮೆಸ್ಸಿ… ಮೆಸ್ಸಿ… ಜಗದಗಲ ಮೆಸ್ಸಿ!

ಇನ್ನು ಫುಟ್ಬಾಲ್ ದೇವರು ಆಡುವುದಿಲ್ಲ ನಮಗೆಲ್ಲ ತಿಳಿದಿರುವ ಹಾಗೆ ಫುಟ್ಬಾಲ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ. ಶ್ರೀಮಂತ ಕ್ರೀಡೆ ಕೂಡ. ಅದಕ್ಕೆ ಕಾರಣದೇವ ಮಾನವರ ಹಾಗೆ ಇರುವ ಫುಟ್ಬಾಲ್ ಆಟಗಾರರು! ಪೀಲೆ, ಮರಡೋನಾ, ಜಿದಾನೆ ಮೊದಲಾದವರೆಲ್ಲ ಫುಟ್ಬಾಲ್ ಪ್ರೇಮಿಗಳ ಆರಾಧ್ಯ ದೇವರೇ ಆಗಿದ್ದವರು. ಕೋಟಿ ಕೋಟಿ ಬೆಲೆಬಾಳುವವರು.ವರ್ತಮಾನದ ಫುಟ್ಬಾಲ್ ಜಗತ್ತಿನ ದೇವರು ಲಿಯೋನೆಲ್ ಮೆಸ್ಸಿ ತನ್ನ ಜೀವಮಾನದ ಕೊನೆಯ ಪಂದ್ಯವನ್ನು ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಡುತ್ತಾರೆ ಎಂದರೆ ಅವರ ಲಕ್ಷಾಂತರ ಅಭಿಮಾನಿಗಳಿಗೆ ಕರುಳು ಹಿಂಡುವ ಅನುಭವ.

ಮೆಸ್ಸಿ… ಮೆಸ್ಸಿ… ಮೆಸ್ಸಿ… ಜಗದಗಲ ಮೆಸ್ಸಿ! Read More »

ಮೋದಿ ಕುರಿತು ಪಾಕ್‌ ಸಚಿವ ಭುಟ್ಟೊ ಕೀಳು ಹೇಳಿಕೆ : ಇಂದು ದೇಶಾದ್ಯಂತ ಬಿಜೆಪಿ ಪ್ರತಿಭಟನೆ

ಹೊಸದಿಲ್ಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ಥಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ನೀಡಿದ ವೈಯಕ್ತಿಕ ಕೀಳು ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದ್ದು, ಇಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿದೆ. ಪಾಕಿಸ್ಥಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಹೇಳಿಕೆ ಅತ್ಯಂತ ನಾಚಿಕೆಗೇಡಿನ ಮತ್ತು ಅವಹೇಳನಕಾರಿ ಎಂದು ಬಿಜೆಪಿ ಬಣ್ಣಿಸಿದೆ.ಬಿಲಾವಲ್ ಭುಟ್ಟೊ ಅಧಿಕಾರದಲ್ಲಿ ಉಳಿಯಲು ಮತ್ತು ಪಾಕಿಸ್ಥಾನದ ಸರ್ಕಾರವನ್ನು ಉಳಿಸಲು ಇಂಥ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಆ ಸಚಿವರ ಹೇಳಿಕೆಯು ಜಗತ್ತನ್ನು ದಾರಿ ತಪ್ಪಿಸುವ ಗುರಿಯನ್ನು ಹೊಂದಿದೆ.

ಮೋದಿ ಕುರಿತು ಪಾಕ್‌ ಸಚಿವ ಭುಟ್ಟೊ ಕೀಳು ಹೇಳಿಕೆ : ಇಂದು ದೇಶಾದ್ಯಂತ ಬಿಜೆಪಿ ಪ್ರತಿಭಟನೆ Read More »

ಡಿ. 17: ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೊಡ್ಯುಲರ್ ಒಟಿ, ಯು ಬ್ರೀದ್ ಕ್ಲಿನಿಕ್ ಉದ್ಘಾಟನೆ, ವೆಬ್’ಸೈಟ್ ಲೋಕಾರ್ಪಣೆ

ಪುತ್ತೂರು: ಇಲ್ಲಿನ ಬೊಳುವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೊಡ್ಯುಲರ್ ಒಟಿ, ಯು ಬ್ರೀದ್ ಕ್ಲಿನಿಕ್ ಉದ್ಘಾಟನಾ ಸಮಾರಂಭ ಡಿ. 17ರಂದು ಸಂಜೆ 5 ಗಂಟೆಗೆ ಆಸ್ಪತ್ರೆಯಲ್ಲಿ ನಡೆಯಲಿದೆ. ಮಾಡ್ಯುಲರ್ ಓಟಿ  ವಿಭಾಗವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಆಸ್ಪತ್ರೆಯ ವೆಬ್’ಸೈಟ್ ಅನ್ನು ಸರ್ಜನ್ ಡಾ. ಎಂ.ಕೆ. ಪ್ರಸಾದ್ ಅನಾವರಣಗೊಳಿಸಲಿದ್ದಾರೆ. ಯು ಬ್ರೀದ್ ಕ್ಲಿನಿಕ್ ಅನ್ನು ಸರ್ಜರಿ ಪ್ರೊಫೆಸರ್ ಡಾ. ಗೋಪಿನಾಥ್ ಪೈ ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲೆಯ ಮುಂದಿನ ಗವರ್ನರ್ ವಿಕ್ರಮ್ ದತ್ತ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು

ಡಿ. 17: ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೊಡ್ಯುಲರ್ ಒಟಿ, ಯು ಬ್ರೀದ್ ಕ್ಲಿನಿಕ್ ಉದ್ಘಾಟನೆ, ವೆಬ್’ಸೈಟ್ ಲೋಕಾರ್ಪಣೆ Read More »

error: Content is protected !!
Scroll to Top