ಸಾಂಸ್ಕೃತಿಕ ಜಾಂಬೂರಿಗೆ ಕ್ಷಣಗಣನೆ; ಕ್ಯಾಂಪಸ್‍ನಲ್ಲಿ ಕಳೆ ಕಟ್ಟಿದ ಸ್ಕೌಟ್ಸ್-ಗೈಡ್ಸ್

ಪುತ್ತೂರು: ಭಾರತ್ ಸ್ಕೌಟ್ಸ್-ಗೈಡ್ಸ್ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಜಾಂಬೂರಿಯ ತಯಾರಿ ಕೊನೆ ಹಂತದಲ್ಲಿದ್ದು, ದೇಶದ ವಿವಿಧ ಭಾಗಗಳ ಸ್ಕೌಟ್ಸ್, ಗೈಡ್ಸ್, ರೋರ‍್ಸ್ ಹಾಗೂ ರೇಂರ‍್ಸ್ ಪ್ರತಿನಿಧಿಗಳ ತಂಡ ಮೂಡುಬಿದಿರೆಯನ್ನು ತಲುಪಿವೆ.ಮೂಡುಬಿದರೆಯ ಸ್ವರಾಜ್ಯ ಮೈದಾನದಲ್ಲಿ ಬೃಹತ್ ನೋಂದಾವಣೆಯ ಬಳಿಕ ವಿದ್ಯಾರ್ಥಿಗಳನ್ನು ಜಿಲ್ಲೆ ಹಾಗೂ ತಾಲೂಕುಗಳಿಗೆ ಅನುಗುಣವಾಗಿ ವಿಂಗಡಿಸಿ, ವಿವಿಧ ಬ್ಲಾಕ್‍ಗಳಲ್ಲಿ ವಸತಿ ವ್ಯವಸ್ಥೆಗೆ ಅನುವು ಮಾಡಲಾಗಿದೆ. ಪ್ರತಿ ಬ್ಲಾಕ್‍ಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ನಿರ್ವಾಹಕರನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳ ಅಗತ್ಯ ವಸ್ತುಗಳ ಕಿಟ್: ಅಂತಾರಾಷ್ಟ್ರೀಯ ಸಾಂಸ್ಕೃತಿಕ […]

ಸಾಂಸ್ಕೃತಿಕ ಜಾಂಬೂರಿಗೆ ಕ್ಷಣಗಣನೆ; ಕ್ಯಾಂಪಸ್‍ನಲ್ಲಿ ಕಳೆ ಕಟ್ಟಿದ ಸ್ಕೌಟ್ಸ್-ಗೈಡ್ಸ್ Read More »

ಭೂ ಪರಿವರ್ತನೆ ಸರಳಗೊಳಿಸುವ ಮಸೂದೆ ಮಂಡನೆ

ಬೆಳಗಾವಿ: ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 95 ಮತ್ತು 96ಕ್ಕೆ ತಿದ್ದುಪಡಿ ತರುವ ಕರ್ನಾಟಕ ಭೂಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ 1964ನ್ನು ಕಂದಾಯ ಸಚಿವ ಆರ್.ಅಶೋಕ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.ಈ ತಿದ್ದುಪಡಿ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಕೆಎಲ್‌ಆರ್‌ ಕಾಯಿದೆಯ ಸೆಕ್ಷನ್ 95ರ ಉಪ-ವಿಭಾಗ (2)ನ್ನು ತಿದ್ದುಪಡಿ ಮಾಡಲು ಮಸೂದೆಯು ಪ್ರಸ್ತಾಪಿಸುತ್ತದೆ, ಕೃಷಿಭೂಮಿಯ ನಿವಾಸಿಗಳು ಅದನ್ನು ಸಂಪೂರ್ಣವಾಗಿ ಅಥವಾ ಅದರ ಭಾಗವನ್ನು ಬೇರೆ

ಭೂ ಪರಿವರ್ತನೆ ಸರಳಗೊಳಿಸುವ ಮಸೂದೆ ಮಂಡನೆ Read More »

ಬಾಲಕನನ್ನು ಮಹಡಿಯಿಂದ ದೂಡಿ ಕೊಂದ ಶಿಕ್ಷಕ ಸೆರೆ

ತಾಯಿಯ ಸಲುಗೆ ಮಗನ ಕೊಲೆಗೆ ಕಾರಣವಾಯಿತು ಗದಗ: ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಭರತ್‌ನನ್ನು ಹತ್ಯೆ ಮಾಡಿದ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿರುವ ಬಾಲಕನ ತಾಯಿ ಗೀತಾ ಬಾರಕೇರ ಹಾಗೂ ಸಹಶಿಕ್ಷಕ ಸಂಗನಗೌಡ ಪಾಟೀಲ ಅವರ ಮೇಲೂ ಆರೋಪಿ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದ.ಅತಿಥಿ ಶಿಕ್ಷಕಿ ಗೀತಾ ಬಾರಕೇರ ಮೇಲೆ ಇದ್ದ ಮತ್ಸರವೇ ಬಾಲಕನ ಕೊಲೆಗೆ ಮತ್ತು ಶಿಕ್ಷಕರ ಹಲ್ಲೆಗೆ ಕಾರಣ

ಬಾಲಕನನ್ನು ಮಹಡಿಯಿಂದ ದೂಡಿ ಕೊಂದ ಶಿಕ್ಷಕ ಸೆರೆ Read More »

ಕೊರೊನಾ ಮುನ್ನೆಚ್ಚರಿಕೆ ವಹಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

ಚೀನಾದಲ್ಲಿ ಕೊರೊನಾ ಉಲ್ಬಣ ಹಿನ್ನೆಲೆಯಲ್ಲಿ ಪತ್ರ ಹೊಸದಿಲ್ಲಿ : ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಮತ್ತೆ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಜ್ಯಗಳಿಗೆ ಎಚ್ಚರಿಕೆಯಿಂದಿರಲು ಸೂಚಿಸಿದೆ. ಚೀನಾ, ಜಪಾನ್, ದಕ್ಷಿಣ ಕೊರಿಯಾ, ಬ್ರೆಜಿಲ್, ಅಮೆರಿಕ ಸಹಿತ ಕೆಲವು ದೇಶಗಳಲ್ಲಿ ಮತ್ತೆ ಕೋವಿಡ್-19 ಹಠಾತ್ ಉಲ್ಬಣಗೊಂಡಿದೆ. ಈ ಹಿನ್ನೆಲೆಯಲ್ಲಿ ಹೊಸ ರೂಪಾಂತರಗಳ ಬಗ್ಗೆ ನಿಗಾ ವಹಿಸಲು ಪಾಸಿಟಿವ್ ಮಾದರಿಗಳ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್‌ಗೆ ಸಜ್ಜಾಗುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.ದೇಶದಲ್ಲಿ

ಕೊರೊನಾ ಮುನ್ನೆಚ್ಚರಿಕೆ ವಹಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ Read More »

ಕುಖ್ಯಾತ ಮನೆಗಳ್ಳನ ಬಂಧನ; 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಪುತ್ತೂರು, ಶಿವಮೊಗ್ಗದಲ್ಲೂ ಕಳ್ಳತನ ಮಾಡಿದ್ದ ಆರೋಪಿ ಉಡುಪಿ : ಬ್ರಹ್ಮಾವರ ಮತ್ತು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಮನೆಗಳೀಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಕೊನೆಗೂ ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾಡೂರು ತಂತ್ರಾಡಿ ನಿವಾಸಿ ವಿಜಯ್ ಕುಮಾರ್ ಶೆಟ್ಟಿ (28) ಎಂದು ಗುರುತಿಸಲಾಗಿದೆ.ಬ್ರಹ್ಮಾವರ ವೃತ್ತದ ಬ್ರಹ್ಮಾವರ ಹಾಗೂ ಕೋಟ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಹಲವು ಮನೆಗಳಲ್ಲಿ ಕಳ್ಳತನ ನಡೆದು ಜನರು ಆತಂಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ

ಕುಖ್ಯಾತ ಮನೆಗಳ್ಳನ ಬಂಧನ; 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ Read More »

21 ನಾಯಕರ ಮೇಲೆ ಇಡಿ ದಾಳಿಗೆ ಸಿದ್ಧತೆ : ಕಾಂಗ್ರೆಸ್‌ ಆರೋಪ

ಕಾಂಗ್ರೆಸ್‌ ಶಾಸಕರನ್ನು ಬೆದರಿಸಿ ಸೆಳೆಯುವ ಪ್ರಯತ್ನ ಎಂಬ ಆರೋಪ ಬೆಂಗಳೂರು : ಕಾಂಗ್ರೆಸ್ ಮುಖಂಡರನ್ನು ಬೆದರಿಸಿ ಸೆಳೆಯಲು ಬಿಜೆಪಿ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಯನ್ನು ಅಸ್ತ್ರವಾಗಿ ಮಾಡಿಕೊಂಡಿದೆ. ಚುನಾವಣೆ ಸಮೀಪಿಸುವಾಗ 21 ಕಾಂಗ್ರೆಸ್‌ ನಾಯಕ ಮೇಲೆ ದಾಳಿ ಮಾಡಲು ಸಿದ್ಧತೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.ಕಾಂಗ್ರೆಸ್‌ನ 21 ಮುಖಂಡರ ಮೇಲೆ ಇಡಿ ದಾಳಿ ಮಾಡಲು ಸಿದ್ಧತೆ ನಡೆದಿದೆ. ಕರ್ನಾಟಕಕ್ಕೆ 300 ಐಟಿ ಅಧಿಕಾರಿಗಳು ಬಂದಿದ್ದಾರೆ. ಇವರಿಗೆ 1,200 ಆರ್‌ಎಸ್‌ಎಸ್‌ ಕಾರ್ಯಕರ್ತರು

21 ನಾಯಕರ ಮೇಲೆ ಇಡಿ ದಾಳಿಗೆ ಸಿದ್ಧತೆ : ಕಾಂಗ್ರೆಸ್‌ ಆರೋಪ Read More »

ಹೆಣ್ಣುಮಕ್ಕಳ ವಿಶ್ವವಿದ್ಯಾಲಯ ಶಿಕ್ಷಣಕ್ಕೆ ತಾಲಿಬಾನ್‌ ತಡೆ

ಅಫ್ಘಾನಿಸ್ಥಾನದಲ್ಲಿ ಹೆಣ್ಣು ಮಕ್ಕಳು ವಿವಿ ಮೆಟ್ಟಿಲು ಹತ್ತದಂತೆ ಆದೇಶ ಕಾಬೂಲ್ : ಅಫ್ಘಾನಿಸ್ಥಾನದ ತಾಲಿಬಾನ್‌ ಆಡಳಿತ ಮಹಿಳೆಯರ ಮೇಲೆ ಇನ್ನಷ್ಟು ನಿರ್ಬಂಧ ವಿಧಿಸಿದೆ. ಈದೀಗ ತಾಲಿಬಾನ್ ಸರ್ಕಾರ ಮಹಿಳೆಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣವನ್ನು ನಿಷೇಧಿಸುವಂತೆ ಆದೇಶಿಸಿದೆ. ಕಳೆದ ವರ್ಷ ಅಧಿಕಾರವನ್ನು ವಶಪಡಿಸಿಕೊಂಡಾಗ ಸರಳ ಹಾಗೂ ಜನಸ್ನೇಹಿ ಆಡಳಿತದ ಭರವಸೆ ನೀಡಿದ್ದರೂ, ತಾಲಿಬಾನ್ ಅಂತರರಾಷ್ಟ್ರೀಯ ಆಕ್ರೋಶವನ್ನು ನಿರ್ಲಕ್ಷಿಸಿ ಮಹಿಳೆಯರ ಜೀವನದ ಎಲ್ಲಾ ಅಂಶಗಳ ಮೇಲೆ ನಿರ್ಬಂಧಗಳನ್ನು ಹೆಚ್ಚಿಸುತ್ತಿದೆ.ಮಹಿಳಾ ಶಿಕ್ಷಣವನ್ನು ಅಮಾನತುಗೊಳಿಸುವ ಆದೇಶವನ್ನು ತಕ್ಷಣವೇ ಜಾರಿಗೆ ತರಲು ತಿಳಿಸಲಾಗಿದೆ ಎಂದು ಉನ್ನತ

ಹೆಣ್ಣುಮಕ್ಕಳ ವಿಶ್ವವಿದ್ಯಾಲಯ ಶಿಕ್ಷಣಕ್ಕೆ ತಾಲಿಬಾನ್‌ ತಡೆ Read More »

ಲೆಜೆಂಡ್‌ಗಳು ಸಾಯಬಹುದು, ಆದರೆ ಪರಂಪರೆ ಸಾಯುವುದಿಲ್ಲ

ಎಲ್ಲರೂ ಗೆಲುವಿನ ಸಂಭ್ರದಲ್ಲಿರುವಾಗ ಆತ ಸೋತವನನ್ನು ಸಾಂತ್ವನಿಸುತ್ತಿದ್ದ! A LEGEND may die, but the LEGACY continues!ಈ ರವಿವಾರದ ರಾತ್ರಿ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯವು ಹಲವು ಸ್ಮರಣೀಯವಾದ ಕ್ಷಣಗಳನ್ನು ಬಿಟ್ಟುಹೋಯಿತು. ಅರ್ಜೆಂಟೀನಾ ತನ್ನ ಫುಟ್ಬಾಲ್ ಲೆಜೆಂಡ್ ಆದ ಮೆಸ್ಸಿಗೆ ಗೆಲುವಿನ ವಿದಾಯವನ್ನು ಕೋರಿತು. ಫ್ರಾನ್ಸ್ ಕೊನೆಯ ಕ್ಷಣದವರೆಗೂ ಫೈಟ್ ಕೊಟ್ಟು ಪೆನಾಲ್ಟಿ ಶೂಟೌಟನಲ್ಲಿ ಶರಣಾಯಿತು.ಅರ್ಜೆಂಟೀನಾ ಕಪ್ತಾನ ಮೆಸ್ಸಿ ಹೊಳೆಯುವ ಫಿಫಾ ಚಿನ್ನದ ಟ್ರೋಫಿಯನ್ನು ಎತ್ತಿಕೊಳ್ಳುವ ಕ್ಷಣಕ್ಕಾಗಿ ಇಡೀ ಜಗತ್ತು ಕಾದು ಕುಳಿತಿತ್ತು.

ಲೆಜೆಂಡ್‌ಗಳು ಸಾಯಬಹುದು, ಆದರೆ ಪರಂಪರೆ ಸಾಯುವುದಿಲ್ಲ Read More »

ಜಲಸಿರಿ ಸಮಸ್ಯೆ: ೧೫ ದಿನದೊಳಗೆ ಸಭೆ | ನಗರಸಭೆ ವಿಶೇಷ ಸಾಮಾನ್ಯ ಸಭೆ ನಿರ್ಣಯ

ಪುತ್ತೂರು: ಶುದ್ಧ ಕುಡಿಯುವ ನೀರಿನ ಯೋಜನೆ ಜಲಸಿರಿ ಕಾಮಗಾರಿಯಿಂದ ಸಾಕಷ್ಟು ಸಮಸ್ಯೆಗಳಾಗಿದ್ದು, ಸಮಸ್ಯೆ ಪರಿಹಾರಕ್ಕೆ ಮುಂದಿನ 15 ದಿನದೊಳಗೆ ಜಲಸಿರಿ ಹಾಗೂ ನಗರಸಭೆ ಕೌನ್ಸಿರ‍್ಸ್ ಸಭೆ ಕರೆಯುವ ಬಗ್ಗೆ ತೀರ್ಮಾನಿಸಲಾಗಿದೆ. ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಗರಸಭೆ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆ ನಡೆಯಿತು. ನಗರಸಭೆ ಸದಸ್ಯ ಶಕ್ತಿ ಸಿನ್ಹಾ ಮಾತನಾಡಿ, ನಗರಾದ್ಯಂತ ಜಲಸಿರಿ ಕಾಮಗಾರಿ ನಡೆಯುತ್ತಿದೆ. ಆದರೆ ತುಕ್ಕು ಹಿಡಿದ ಪೈಪ್, ರಸ್ತೆಗಳನ್ನು ಮತ್ತೆ ಮತ್ತೆ ಅಗೆಯುವುದು ಮೊದಲಾದ

ಜಲಸಿರಿ ಸಮಸ್ಯೆ: ೧೫ ದಿನದೊಳಗೆ ಸಭೆ | ನಗರಸಭೆ ವಿಶೇಷ ಸಾಮಾನ್ಯ ಸಭೆ ನಿರ್ಣಯ Read More »

ಅಡಿಕೆಯ ಹೊಸ ಬಳಕೆ ವಿಚಾರಗೋಷ್ಠಿ

ಪುತ್ತೂರು: ಸರಸ್ವತಿ ಚರಿಟೇಬಲ್ ಟ್ರಸ್ಟ್ ಪುತ್ತೂರು, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ, ಅಡಿಕೆ ಪತ್ರಿಕೆ ಸಹಯೋಗದಲ್ಲಿ ಅಡಿಕೆಯ ಹೊಸ ಬಳಕೆ ವಿಚಾರಗೋಷ್ಠಿಯಲ್ಲಿ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಡಿ. 20ರಂದು ನಡೆಯಿತು.ದೇಸಿ ಸಂಸ್ಥೆಯ ರುದ್ರಪ್ಪ ಮಾತನಾಡಿ, ನಾವು ಪ್ರತಿ ತಿಂಗಳು 15ರಿಂದ 20 ಕ್ವಿಂಟಾಲ್ ಅಡಿಕೆಯ ಬಣ್ಣ ತಯಾರಿಸಿ, ಬಟ್ಟೆಗಳಿಗೆ ಉಪಯೋಗಿಸುತ್ತಿದ್ದೇವೆ. ಕಳೆದ 18 ವರ್ಷಗಳಿಂದ ದೇಸಿ ಸಂಸ್ಥೆ ಹಾಗೂ ಚರಕ ಸಂಸ್ಥೆ ಒಟ್ಟಾಗಿ ನೈಸರ್ಗಿಕ ಬಣ್ಣಗಳನ್ನು ಬಟ್ಟೆಗಳಿಗೆ ಬಳಕೆ ಮಾಡುವ

ಅಡಿಕೆಯ ಹೊಸ ಬಳಕೆ ವಿಚಾರಗೋಷ್ಠಿ Read More »

error: Content is protected !!
Scroll to Top