ಅಪರಾಧ ತಡೆ ಮಾಸಾಚಾರಣೆ, ಜಾಗೃತಿ ಜಾಥಾ | ರೋಟರಿ, ಇಂಟರ್ಯಾಕ್ಟ್, ಪೊಲೀಸ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯಿಂದ ಜಾಥಾ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ, ಇಂಟರ್ಯಾಕ್ಟ್ ಕ್ಲಬ್ ರಾಮಕೃಷ್ಣ ಯುವ, ದ.ಕ. ಜಿಲ್ಲಾ ಪೊಲೀಸ್, ಪುತ್ತೂರು ನಗರ ಪೊಲೀಸ್ ಠಾಣೆ, ಪುತ್ತೂರು ಸಂಚಾರ ಪೊಲೀಸ್ ಠಾಣೆ ಆಶ್ರಯದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಡಿ. 28ರಂದು ಅಪರಾಧ ತಡೆ ಮಾಸಾಚರಣೆ ಜಾಗೃತಿ ಜಾಥಾ ನಡೆಯಿತು. ಕೊಂಬೆಟ್ಟಿನಿಂದ ಆರಂಭಗೊಂಡ ಜಾಗೃತಿ ಜಾಥಾ, ಗಾಂಧಿಕಟ್ಟೆಯಲ್ಲಿ ಸಮಾರೋಪಗೊಂಡಿತು. ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್ ಮಾತನಾಡಿ, ಪೊಲೀಸರಿಂದಷ್ಟೇ ಅಪರಾಧ ತಡೆ ಸಾಧ್ಯ ಎಂದುಕೊಂಡರೆ ತಪ್ಪು. ಸಾರ್ವಜನಿಕರು ಪೊಲೀಸರೊಂದಿಗೆ […]

ಅಪರಾಧ ತಡೆ ಮಾಸಾಚಾರಣೆ, ಜಾಗೃತಿ ಜಾಥಾ | ರೋಟರಿ, ಇಂಟರ್ಯಾಕ್ಟ್, ಪೊಲೀಸ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯಿಂದ ಜಾಥಾ Read More »

ಸನ್ಮಾನ: ಗೌಡ ಸಮಾಜದ ಸಾಧಕರ ಮಾಹಿತಿಗೆ ಮನವಿ

ಪುತ್ತೂರು: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ವತಿಯಿಂದ ಗೌಡ ಸಮಾಜದ ರಾಜ್ಯಮಟ್ಟದ, ರಾಷ್ಟ್ರಮಟ್ಟದ, ಅಂತಾರಾಷ್ಟ್ರೀಯ ಮಟ್ಟದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸಮಾಜದ ಸಾಧಕರ ಪರಿಚಯವನ್ನು ನೀಡುವಂತೆ ಪ್ರಕಟಣೆ ತಿಳಿಸಿದೆ. ಜ. 8ರಂದು ಬೆಂಗಳೂರಿನ ಲಗ್ಗೆರೆ ಕೆಡಿಕೆ ನಮ್ಮನೆಯಲ್ಲಿ ಗೌಡ ಸಮಾಜದ ಹತ್ತು ಕುಟುಂಬ ಹದಿನೆಂಟು ಗೋತ್ರದ 5 ಸಾಧಕರಿಗೆ ಸನ್ಮಾನಿಸು ಕಾರ್ಯಕ್ರಮ ನಡೆಯಲಿದೆ. ಗೌಡ ಸಮಾಜದ ರಾಜ್ಯಮಟ್ಟದ, ರಾಷ್ಟ್ರಮಟ್ಟದ, ಅಂತಾರಾಷ್ಟ್ರೀಯ ಮಟ್ಟದ ಸಾಧಕರ ಪರಿಚಯ ನೀಡಲು ಕೊನೆ ದಿನ ಡಿ.

ಸನ್ಮಾನ: ಗೌಡ ಸಮಾಜದ ಸಾಧಕರ ಮಾಹಿತಿಗೆ ಮನವಿ Read More »

ಇಂದು ಕುದ್ಮಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಕಿರುಷಷ್ಠಿ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ

ಪುತ್ತೂರು: ಶಾಂತಿಮೊಗರು ಕುದ್ಮಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಡಿ. 28ರಂದು ಕಿರು ಷಷ್ಠಿ ಪೂಜೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಇಂದು ಕುದ್ಮಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಕಿರುಷಷ್ಠಿ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ Read More »

ಯುವಕನ ಹತ್ಯೆ : ಕರವೇ ಅಧ್ಯಕ್ಷನ ಸಹಿತ ಐದು ಮಂದಿ ಸೆರೆ

9 ತಿಂಗಳ ಬಳಿಕ ನಿಗೂಢ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ಬೆಂಗಳೂರು: ಒಂಬತ್ತು ತಿಂಗಳ ಹಿಂದೆ ನಡೆದಿದ್ದ ಅಪಹರಣ ಹಾಗೂ ಹತ್ಯೆ ಪ್ರಕರಣವನ್ನು ಕೊನೆಗೂ ಭೇದಿಸಿರುವ ಪೊಲೀಸರು ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕಬಳ್ಳಾಪುರ ಘಟಕದ ಅಧ್ಯಕ್ಷ ಎಚ್‌.ಜಿ.ವೆಂಕಟಾಚಲಪತಿ, ಆತನ ಪುತ್ರ ಎ.ವಿ.ಶರತ್‌ ಕುಮಾರ್‌ ಸಹಿತ ಐವರನ್ನು ಬಂಧಿಸಿದ್ದಾರೆ. ಆರ್‌.ಶ್ರೀಧರ್‌, ಕೆ.ಧನುಷ್‌ ಮತ್ತು ಎಂ.ಪಿ.ಮಂಜುನಾಥ್‌ ಸೆರೆಯಾಗಿರುವ ಇತರ ಆರೋಪಿಗಳು. ಹಣಕಾಸಿನ ವಿಚಾರವಾಗಿ ಈ ಹತ್ಯೆ ನಡೆದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.ಶರತ್ ಯುವಕನನ್ನು ಬೆಂಗಳೂರಿನಿಂದ ಕಿಡ್ನಾಪ್‌ ಮಾಡಿ ಚಿತ್ರಹಿಂಸೆ ಕೊಟ್ಟು

ಯುವಕನ ಹತ್ಯೆ : ಕರವೇ ಅಧ್ಯಕ್ಷನ ಸಹಿತ ಐದು ಮಂದಿ ಸೆರೆ Read More »

ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ

ಶ್ರೀನಗರ : ಕಾಶ್ಮೀರದ ಸಿಧ್ರಾದಲ್ಲಿ ಭದ್ರತಾ ಪಡೆ ಜತೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.ಟ್ರಕ್‌ನಲ್ಲಿದ್ದ ಉಗ್ರರ ಜತೆ ಗುಂಡಿನ ಚಕಮಕಿ ನಡೆದಿದೆ. ಟ್ರಕ್ಕಿನಲ್ಲಿದ್ದ ಎಲ್ಲ ಮೂರು ಉಗ್ರರನ್ನು ಸಾಯಿಸಲಾಗಿದೆ ಮತ್ತು ಅವರ ಶವಗಳನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಭದರತಾ ಪಡೆ ಅಧಿಕಾರಿ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ Read More »

ದೇವಸ್ಥಾನಗಳ ಸಮಗ್ರ ಸಮೀಕ್ಷೆಗೆ ನಿರ್ಧಾರ

ಆಸ್ತಿ ರಕ್ಷಣೆಗೆ ಕ್ರಮ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ ಬೆಳಗಾವಿ : ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ 35 ಸಾವಿರಕ್ಕೂ ಹೆಚ್ಚಿನ ದೇವಸ್ಥಾನಗಳ ಆಸ್ತಿ ಸಂರಕ್ಷಣೆ ಮಾಡುವ ಉದ್ದೇಶದಿಂದ, ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ದೇವಾಲಯಗಳು ಮತ್ತು ಅವುಗಳ ಆಸ್ತಿ ವಿವರಗಳನ್ನ ಸಮಗ್ರ ಸಮೀಕ್ಷೆ ಮಾಡಲು ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ನಿರ್ಧರಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಧಾರ್ಮಿಕ ದತ್ತಿ

ದೇವಸ್ಥಾನಗಳ ಸಮಗ್ರ ಸಮೀಕ್ಷೆಗೆ ನಿರ್ಧಾರ Read More »

ನಾಳೆ ಅಮಿತ್‌ ಶಾ ರಾಜ್ಯಕ್ಕೆ : ಸಂಪುಟ ವಿಸ್ತರಣೆ ಕುತೂಹಲ

ಚುನಾವಣೆ ರಣತಂತ್ರಕ್ಕೆ ಮಾರ್ಗದರ್ಶನ ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿ.29 ರಿಂದ ಮೂರು ದಿನ ರಾಜ್ಯಕ್ಕೆ ಭೇಟಿ ನೀಡಲಿದ್ದು, ಮುಖ್ಯವಾಗಿ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಶಾ ರಾಜ್ಯ ಭೇಟಿ ಬಳಿಕವೇ ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟ ಚಿತ್ರಣ ಹೊರ ಬೀಳುವ ಸಾಧ್ಯತೆಯಿದೆ.ಶಾ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ನವೋತ್ಸಾಹ ತುಂಬಲಿದೆ. ಅವರ ಈ ಭೇಟಿಯು ಪಕ್ಷದ ಗೆಲುವಿನ ಓಟಕ್ಕೆ

ನಾಳೆ ಅಮಿತ್‌ ಶಾ ರಾಜ್ಯಕ್ಕೆ : ಸಂಪುಟ ವಿಸ್ತರಣೆ ಕುತೂಹಲ Read More »

ಹೊಸ ವರ್ಷಾಚರಣೆ ರಾತ್ರಿ 1 ಗಂಟೆಯೊಳಗೆ ಮುಕ್ತಾಯ

ಕೊರೊನಾ ಹಿನ್ನೆಲೆಯಲ್ಲಿ ಮಾರ್ಗಸೂಚಿ ಹೊರಡಿಸಿದ ಸರಕಾರ ಬೆಂಗಳೂರು : ಕೋವಿಡ್‌ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಶಾಲಾ-ಕಾಲೇಜುಗಳು, ಮಾಲ್‌ಗಳು ಮತ್ತು ಚಿತ್ರಮಂದಿರಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಿದೆ. ಈ ಮಾರ್ಗಸೂಚಿಯು ತಕ್ಷಣದಿಂದಲೇ ಜಾರಿಗೆ ಬರಲಿದೆ.ಹೊಸ ವರ್ಷಾಚರಣೆಗೂ ಕೆಲ ನಿಯಮಗಳನ್ನು ರೂಪಿಸಿದೆ. ಹೊಸ ವರ್ಷಾಚರಣೆ ಮಧ್ಯರಾತ್ರಿ 1 ಗಂಟೆಯೊಳಗೆ ಮುಗಿಯಬೇಕು. ಕೋವಿಡ್‌ ಬಗ್ಗೆ ಭಯಪಡುವ ಅಗತ್ಯವಿಲ್ಲ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಸಚಿವ ಸುಧಾಕರ್‌ ಹೇಳಿದ್ದಾರೆ.ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ

ಹೊಸ ವರ್ಷಾಚರಣೆ ರಾತ್ರಿ 1 ಗಂಟೆಯೊಳಗೆ ಮುಕ್ತಾಯ Read More »

ಹಾಸನ ಮಿಕ್ಸಿ ಬ್ಲಾಸ್ಟ್‌ ಭಗ್ನಪ್ರೇಮಿಯ ಕೃತ್ಯ

ಪ್ರೀತಿ ನಿರಾಕರಿಸಿದ ಮಹಿಳೆಗೆ ಮಿಕ್ಸಿಯಲ್ಲಿ ಬಾಂಬಿಟ್ಟು ಕಳುಹಿಸಿದ್ದ ಯುವಕ ಹಾಸನ: ಇಲ್ಲಿನ ಕೊರಿಯರ್ ಅಂಗಡಿಯಲ್ಲಿ ಸಂಭವಿಸಿದ ಮಿಕ್ಸಿ ಬ್ಲಾಸ್ಟ್ ಭಗ್ನ ಪ್ರೇಮಿಯೊಬ್ಬನ ಹುಚ್ಚಾಟ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ವಿಚ್ಛೇದಿತ ಮಹಿಳೆಯೊಬ್ಬಳ ಹಿಂದೆ ಬಿದ್ದಿದ್ದ ಯುವಕ ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಮಹಿಳೆಯನ್ನು ಮುಗಿಸಲು ಸ್ಕೆಚ್ ಹಾಕಿ ಮಿಕ್ಸಿ ಬಾಂಬ್ ಕಳುಹಿಸಿದ್ದ ಸಂಗತಿ ತನಿಖೆಯಿಂದ ಬಯಲಾಗಿದೆ.ನಗರದ ಕೆ.ಆರ್. ಪುರಂ ಸಬ್ ರಿಜಿಸ್ಟ್ರಾರ್ ಕಚೇರಿ ರಸ್ತೆಯ ಅಂಗಡಿಯಲ್ಲಿ ಸೋಮವಾರ ಸಂಜೆ ಮಿಕ್ಸಿ ಸ್ಫೋಟಗೊಂಡು ಆತಂಕಕ್ಕೆ ಕಾರಣವಾಗಿತ್ತು. ಇದು ಉಗ್ರ

ಹಾಸನ ಮಿಕ್ಸಿ ಬ್ಲಾಸ್ಟ್‌ ಭಗ್ನಪ್ರೇಮಿಯ ಕೃತ್ಯ Read More »

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೊಡ್ಡ ರಂಗಪೂಜೆ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಒಂದು ಮಂಡಲ ರಂಗಪೂಜೆಯು ಮಂಗಳವಾರ ರಾತ್ರಿ ನಡೆದ ದೊಡ್ಡ ರಂಗಪೂಜೆಯೊಂದಿಗೆ ಸಮಾಪನಗೊಂಡಿತು. ಬುಧವಾರ ಹಾಗೂ ಗುರುವಾರ ದೇವಸ್ಥಾನದ ವಾರ್ಷಿಕ ಕಿರುಷಷ್ಠಿ ಉತ್ಸವ ನಡೆಯಲಿದೆ. ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ ನಡೆದು, ಮಧ್ಯಾಹ್ನ ಉಗ್ರಾಣ ಪೂಜೆ, ಮಹಾಪೂಜೆ ನೆರವೇರಿತು. ಸಂಜೆ ಗಣೇಶ ಪ್ರಾರ್ಥನೆ, ದೀಪಾರಾಧನೆ ನಡೆದು ಬಳಿಕ ದೊಡ್ಡರಂಗಪೂಜೆ ಜರಗಿತು. ಕಳೆದ ೪೮ ದಿನಗಳಿಂದ ನಿರಂತರವಾಗಿ ರಂಗಪೂಜೆ ಜರಗಿತ್ತು. ವಿವಿಧ ಭಜನಾ ತಂಡಗಳು ಭಜನಾ ಸೇವೆ ನೆರವೇರಿಸಿಕೊಟ್ಟಿತು. ಕೊನೆ ದಿನವಾದ

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೊಡ್ಡ ರಂಗಪೂಜೆ Read More »

error: Content is protected !!
Scroll to Top