ಆಧಾರ್-ಪಾನ್ ಜೋಡಣೆ ಹೆಸರಿನಲ್ಲಿ ವಸೂಲಿ ಮಾಡಿದ ಹಣವನ್ನು ಸರಕಾರ ಏನು ಮಾಡುತ್ತಿದೆ ಎಂದು ಬಹಿರಂಗ ಪಡಿಸಲಿ : ರವೀಂದ್ರ ನೆಕ್ಕಿಲು ಆಗ್ರಹ

ಪುತ್ತೂರು: ಜನರ ಹಣ ಲೂಟಿ ಮಾಡಲೆಂದೇ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಹುಟ್ಟಿದ್ದು, ಆಧಾರ್ – ಪಾನ್ ಜೋಡಣೆಯ ಹೆಸರಿನಲ್ಲಿ ಜನರಿಂದ ವಸೂಲಿ ಮಾಡಿದ ಹಣವನ್ನು ಸರ್ಕಾರ ಏನು ಮಾಡುತ್ತಿದೆ ಎಂದು ಬಹಿರಂಗ ಪಡಿಸಬೇಕಾಗಿದೆ. ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು ಆಗ್ರಹಿಸಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ರೀತಿ ಸಾರ್ವಜನಿಕ ಹಣವನ್ನು ಲೂಟಿ ಮಾಡುವ ಪ್ರಕ್ರಿಯೆಯನ್ನು ಖಂಡಿಸುತ್ತೇವೆ ಮತ್ತು ಈಗಾಗಲೇ ಪಡೆದ ಹಣವನ್ನು ತಕ್ಷಣ ಮರುಪಾವತಿ ಮಾಡಬೇಕೆಂದು […]

ಆಧಾರ್-ಪಾನ್ ಜೋಡಣೆ ಹೆಸರಿನಲ್ಲಿ ವಸೂಲಿ ಮಾಡಿದ ಹಣವನ್ನು ಸರಕಾರ ಏನು ಮಾಡುತ್ತಿದೆ ಎಂದು ಬಹಿರಂಗ ಪಡಿಸಲಿ : ರವೀಂದ್ರ ನೆಕ್ಕಿಲು ಆಗ್ರಹ Read More »

ಮಜಲುಮಾರು ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ, ಧಾರ್ಮಿಕ ಸಭೆ

ಪುತ್ತೂರು: ದೇವಸ್ಥಾನ, ದೈವಸ್ಥಾನಗಳಲ್ಲಿನ ಕಲ್ಮಶಗಳು ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದಂತಹ ಪುಣ್ಯ ಕಾರ್ಯದಿಂದ ದೂರವಾಗಿ ಭಕ್ತಿ ನೆಲೆಗೊಳ್ಳುವವ ಕಾರ್ಯವಾಗುತ್ತಿದೆ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿ ನುಡಿದರು. ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ಜಾತ್ರೋತ್ಸವದ ಅಂಗವಾಗಿ ಭಾನುವಾರ ನಡೆದ  ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ನಾವು ಗಳಿಸುವ ಸಂಪತ್ತು ಧರ್ಮಾಧಾರಿತವಾಗಿರಬೇಕು. ಅಧರ್ಮದಿಂದ ಸಂಪಾಧಿಸುವ ಸಂಪತ್ತು ಶಾಶ್ವತವಲ್ಲ. ದೈಹಿಕವಾಗಿ ದೊರೆಯುವ ಸುಖವೇ ಮುಖ್ಯವಲ್ಲ.

ಮಜಲುಮಾರು ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ, ಧಾರ್ಮಿಕ ಸಭೆ Read More »

ಒಳಮೀಸಲಾತಿ ನಿರ್ಧಾರದ ವಿರುದ್ಧ ಯಡಿಯೂರಪ್ಪನವರ ಮನೆಗೆ ಕಲ್ಲು ತೂರಾಟ

ಶಿವಮೊಗ್ಗ : ರಾಜ್ಯ ಬಿಜೆಪಿ ಸರ್ಕಾರದ ಒಳಮೀಸಲಾತಿ ನಿರ್ಧಾರವನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟ, ಪ್ರತಿಭಟನೆ ತೀವ್ರವಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನಿವಾಸಕ್ಕೆ ಇಂದು ಅನೇಕ ಮಂದಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಲ್ಲದೆ ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ ಒಳ ಮೀಸಲಾತಿ ಪ್ರಮಾಣ ಕಡಿಮೆ ಮಾಡಿರುವುದನ್ನು ಖಂಡಿಸಿ ಇಂದು ಶಿಕಾರಿಪುರದಲ್ಲಿ ಬಂಜಾರ, ಕೊರಚ, ಕೊರಮ, ಭೋವಿ ಸಮುದಾಯದವರು ತೀವ್ರ ಪ್ರತಿಭಟನೆ ನಡೆಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ಒಳಮೀಸಲಾತಿ ನಿರ್ಧಾರದ ವಿರುದ್ಧ ಯಡಿಯೂರಪ್ಪನವರ ಮನೆಗೆ ಕಲ್ಲು ತೂರಾಟ Read More »

ಹಂಟ್ಯಾರು ಶಾಲೆಗೆ ನೀರಿನ ಟ್ಯಾಂಕ್ ಹಸ್ತಾಂತರ

ಪುತ್ತೂರು : ಹಂಟ್ಯಾರು ಸರಕಾರಿ ಉನ್ನತ ಹಿರಿಯ ಪ್ರಾರ್ಥಮಿಕ ಶಾಲೆಗೆ ಅಗತ್ಯವಾಗಿ ಬೇಕಾಗಿದ್ದ ಕುಡಿಯುವ ನೀರಿನ ಟ್ಯಾಂಕನ್ನು ದಾನಿಗಳ ಮೂಲಕ ಹಸ್ತಾಂತರಿಸಲಾಯಿತು. ಆರ್ಯಾಪು ಗ್ರಾಮ ಪಂಚಾಯಿತಿ ಸದಸ್ಯರಾದ ಯತೀಶ್ ದೇವ ಮತ್ತು  ಹರೀಶ್ ನಾಯಕ್ ಬಳಕ್ಕ ಅವರ ನೇತೃತ್ವದಲ್ಲಿ ಆರ್ಯಾಪು ಗ್ರಾಮ ಪಂಚಾಯಿತಿ ಮತ್ತು ದಾನಿಗಳಾದ ಗಣೇಶ್ ರೈ ಮೂಲೆ, ಸೀತಾರಾಮ ರೈ ಕೈಕಾರ ಅವರ ಸಹಕಾರದಿಂದ ಸೋಮವಾರ ಶಾಲಾ ಆಡಳಿತ ಮಂಡಳಿಗೆ  ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಆರ್ಯಾಪು ಪಂಚಾಯಿತಿ ಸದಸ್ಯರಾದ ಯತೀಶ್ ದೇವ, ಹರೀಶ್ ನಾಯಕ್ ಬಳಕ್ಕ,

ಹಂಟ್ಯಾರು ಶಾಲೆಗೆ ನೀರಿನ ಟ್ಯಾಂಕ್ ಹಸ್ತಾಂತರ Read More »

ಮಾ.30 : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ “ಪುತ್ತೂರಿನಲ್ಲಿ ಅಂದು ನಡೆದದ್ದು ಏನು ?” ಕಿರು ಇ-ಪುಸ್ತಕ ಬಿಡುಗಡೆ

ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಭಾರತ ಸ್ವಾತಂತ್ರ್ಯ ಹೋರಾಟ ಹಾಗೂ 1837 ರಲ್ಲಿ ತುಳುನಾಡಿನಲ್ಲಿ ನಡೆದ ಅಮರ ಸುಳ್ಯ ಮಹಾ ಕ್ರಾಂತಿಗೂ ಇದುವ ಅವಿನಾಭಾವ ಸಂಬಂಧದ ಕುರಿತ ದಾಖಲೆಗಳನ್ನು ಕನ್ನಡ ಅನುವಾದದಲ್ಲಿ ಪ್ರಸ್ತುತಪಡಿಸುವ “ಪುತ್ತೂರಿನಲ್ಲಿ ಅಂದು ನಡೆದದ್ದು ಏನು ?” ಕಿರು ಇ-ಪುಸ್ತಕ ಮಾ.30 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳ್ಳಳಿದೆ ಎಂದು ಲೇಖಕ ಅನಿಂದಿತ ಗೌಡ ತಿಳಿಸಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ ಪುಸ್ತಕ ಇದಾಗಿದ್ದು,, ದಾಖಲೆಗಳ

ಮಾ.30 : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ “ಪುತ್ತೂರಿನಲ್ಲಿ ಅಂದು ನಡೆದದ್ದು ಏನು ?” ಕಿರು ಇ-ಪುಸ್ತಕ ಬಿಡುಗಡೆ Read More »

ವಾರೆಂಟ್ ಜಾರಿಯಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ : 6 ತಿಂಗಳು ಜೈಲು

ಮಂಗಳೂರು : ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಾ.27 ರಂದು ಪೊಲೀಸರು ಬಂಧಿಸಿದ್ದಾರೆ. ಆತನಿಗೆ ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದೆ. ಕಡಬ ಗ್ರಾಮದ ಲಿಗೋರಿ ಡಿಸೋಜ ಪುತ್ರ ವಿಲ್ಫ್ರೇಡ್ ಡಿಸೋಜ (34) ಬಂಧಿತ ಆರೋಪಿ. ಈತ ಪ್ರಸ್ತುತ ಮಂಗಳೂರು ಕುಲಶೇಖರ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಸಿರ್ಲಾ ಪಡ್ಪು ಹೆವೆನ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದು, ಈತನ ವಿರುದ್ಧ conviction warrent ಹೊರಡಿಸಿದ ನಂತರ ಆತ ತಲೆಮರೆಸಿಕೊಂಡಿದ್ದ. ಇನ್ನು

ವಾರೆಂಟ್ ಜಾರಿಯಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ : 6 ತಿಂಗಳು ಜೈಲು Read More »

ಉಪನ್ಯಾಸಕ ಹುದ್ದೆ ಶಿಫ್ಟ್: ಜಿಡೆಕಲ್ಲು ವಿದ್ಯಾರ್ಥಿಗಳಿಂದ ಕಾಲೇಜು ಬಹಿಷ್ಕರಿಸಿ ಪ್ರತಿಭಟನೆ

ಪುತ್ತೂರು: ಎರಡು ಉಪನ್ಯಾಸಕ ಹುದ್ದೆಗಳನ್ನು ಶಿಫ್ಟ್ ಮಾಡಿರುವ ಸರಕಾರದ ಕ್ರಮವನ್ನು ಖಂಡಿಸಿ ರಕ್ಷಕ-ಶಿಕ್ಷಕ ಸಂಘದ ನೇತೃತ್ವದಲ್ಲಿ ಜಿಡೆಕಲ್ಲು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಸೋಮವಾರ ಕಾಲೇಜು ಭಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿ ನಾಯಕ ವಿನೀತ್ ಮಾತನಾಡಿ, ಕಾಲೇಜಿನಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಇನ್ನಷ್ಟು ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಆಗಬೇಕು ಎಂದು ಹೇಳುತ್ತಾರೆ. ಆದರೆ ಇರುವ ಉಪನ್ಯಾಸಕ ಹುದ್ದೆಯನ್ನೇ ಪಿರಿಯಾಪಟ್ಟಣಕ್ಕೆ ಶಿಫ್ಟ್ ಮಾಡುತ್ತಾರೆ. ಹೀಗಾದರೆ ಕಾಲೇಜು ಅಭಿವೃದ್ಧಿ ಆಗುವುದು ಹೇಗೆ? ಕಾಲೇಜಿಗೆ ಆಗಮಿಸಲು ಬಸ್

ಉಪನ್ಯಾಸಕ ಹುದ್ದೆ ಶಿಫ್ಟ್: ಜಿಡೆಕಲ್ಲು ವಿದ್ಯಾರ್ಥಿಗಳಿಂದ ಕಾಲೇಜು ಬಹಿಷ್ಕರಿಸಿ ಪ್ರತಿಭಟನೆ Read More »

ದೆಹಲಿ ಬಿಜೆಪಿ ಪದಾಧಿಕಾರಿಯಾಗಿ ಬಾನ್ಸುರಿ ಸ್ವರಾಜ್ ಆಯ್ಕೆ

ದೆಹಲಿ : ದಿವಂಗತ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರು ಭಾರತೀಯ ಜನತಾ ಪಕ್ಷದ ದೆಹಲಿ ಘಟಕದ ಕಾನೂನು ಘಟಕದ ಸಹ ಸಂಚಾಲಕರಾಗಿ ನೇಮಕಗೊಳ್ಳುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಾನ್ಸುರಿ ಅವರನ್ನು ಅಭಿನಂದಿಸಿದ ಪಕ್ಷದ ಅಧ್ಯಕ್ಷ ವೀರೇಂದ್ರ ಸಚ್‌ದೇವ, ಅವರ ನೇಮಕವು ಈಗಿನಿಂದಲೇ ಜಾರಿಗೆ ಬರಲಿದೆ ಎಂದಿದ್ದಾರೆ.ತಮ್ಮನ್ನು ಪಕ್ಷದಲ್ಲಿ ಗುರುತಿಸಿ ಹುದ್ದೆ ನೀಡಿದ್ದಕ್ಕಾಗಿ ಟ್ವೀಟ್‌ನಲ್ಲಿ, ಬಾನ್ಸುರಿ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಹಿರಿಯ

ದೆಹಲಿ ಬಿಜೆಪಿ ಪದಾಧಿಕಾರಿಯಾಗಿ ಬಾನ್ಸುರಿ ಸ್ವರಾಜ್ ಆಯ್ಕೆ Read More »

ಸುಳ್ಯದಲ್ಲಿ ಮತ್ಸ್ಯವಾಹಿನಿ ತ್ರಿಚಕ್ರ ವಾಹನ ಲೋಕಾರ್ಪಣೆ

ಮಂಗಳೂರು : ಸುಳ್ಯದ ಯುವಜನ ಸಂಯುಕ್ತ ಮಂಡಳಿ ಮೈದಾನದಲ್ಲಿ ಮಾರ್ಚ್ 26 ರಂದು ನಡೆದ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವಉದ್ಯೋಗ-ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಮತ್ಸ್ಯವಾಹಿನಿ ತ್ರಿಚಕ್ರ ವಾಹನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವ ಎಸ್‌ ಅಂಗಾರ, ಮೀನುಗಾರಿಕೆ ಕ್ಷೇತ್ರ ಕಡಿಮೆ ಆದಾಯದಲ್ಲಿ ಹೆಚ್ಚು ಸಂಪಾದನೆ ಗಳಿಸಬಹುದಾದ ಕ್ಷೇತ್ರ. ಕೃತಕ ಹಾಗೂ ಒಳನಾಡು ಮೀನುಗಾರಿಕೆಗೆ ಆದ್ಯತೆ ನೀಡಲಾಗುವುದು. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಕರ್ನಾಟಕಕ್ಕೆ ಪ್ರಾಯೋಗಿಕವಾಗಿ ಮತ್ಸ್ಯವಾಹಿನಿ ವಾಹನ

ಸುಳ್ಯದಲ್ಲಿ ಮತ್ಸ್ಯವಾಹಿನಿ ತ್ರಿಚಕ್ರ ವಾಹನ ಲೋಕಾರ್ಪಣೆ Read More »

ಲೋಕಸಭೆಯಿಂದ ರಾಹುಲ್‌ ಗಾಂಧಿ ಅನರ್ಹತೆ : ಕಾಂಗ್ರೆಸ್ ಸಂಸದರು ಸಂಸತ್​ನಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ

ದೆಹಲಿ : ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸಂಸತ್‌ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಲೋಕಸಭಾ ಕಲಾಪವನ್ನು ಸಂಜೆ 4 ಗಂಟೆವರೆಗೆ ಮುಂದೂಡಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಪ್ಪು ಬಟ್ಟೆ ಧರಿಸಿ ಆಗಮಿಸಿದ್ದರು. ರಾಹುಲ್ ಗಾಂಧಿ ಮೋದಿ ಉಪನಾಮದ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ಸೂರತ್ ನ್ಯಾಯಾಲಯವು ಅವರು ದೋಷಿ ಎಂದು ತೀರ್ಪು ನೀಡಿತ್ತು. ಜತೆಗೆ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇದೀಗ ಅವರು

ಲೋಕಸಭೆಯಿಂದ ರಾಹುಲ್‌ ಗಾಂಧಿ ಅನರ್ಹತೆ : ಕಾಂಗ್ರೆಸ್ ಸಂಸದರು ಸಂಸತ್​ನಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ Read More »

error: Content is protected !!
Scroll to Top