19 ಕರ್ನಾಟಕ ಬೆಟಾಲಿಯನ್ ಎನ್ ಸಿ.ಸಿ. ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ಸಮಾರೋಪ| ಸಂತಫಿಲೋಮಿನಾ ಕಾಲೇಜಿನಲ್ಲಿ ಸಮಾರಂಭ

ಪುತ್ತೂರು: ಇಲ್ಲಿನ ಸಂತಫಿಲೋಮಿನಾ ಕಾಲೇಜು ಆವರಣದಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಸಂಯೋಜಿತ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂತ ಫಿಲೋಮಿನಾ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ಸಮಾರೋಪ ಭಾಷಣ ಮಾಡಿದ ಶಿಬಿರದ ಕಮಾಂಡೆಂಟ್ ಕರ್ನಲ್ ಜೆಫ್ರಿನ್ ಜೆ. ಅರಾನ್ಹಾ, ಸಂಯೋಜಿತ ವಾರ್ಷಿಕ ತರಬೇತಿ ಶಿಬಿರದಲ್ಲಿ ಕೆಡೆಟ್ ತುರ್ತುಪರಿಸ್ಥಿತಿಯನ್ನು ಎದುರಿಸುವಲ್ಲಿ ಸಹಕಾರಿಯಾಗುವ ರೀತಿಯ ಪ್ರಾಥಮಿಕ ತರಬೇತಿಯನ್ನು ನೀಡಲಾಗುತ್ತದೆ. ಈ ಶಿಬಿರವು ಕೇವಲ 7 ದಿನಗಳದ್ಧಾಗಿದ್ದ ರೂ 3 ಜಿಲ್ಲೆಗಳ ಕೆಡೆಟ್ ಗಳನ್ನುಒಗ್ಗೂಡಿಸುತ್ತದೆ. ಪ್ರತಿಯೊಬ್ಬನ […]

19 ಕರ್ನಾಟಕ ಬೆಟಾಲಿಯನ್ ಎನ್ ಸಿ.ಸಿ. ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ಸಮಾರೋಪ| ಸಂತಫಿಲೋಮಿನಾ ಕಾಲೇಜಿನಲ್ಲಿ ಸಮಾರಂಭ Read More »

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ 2022-23 ಉದ್ಘಾಟನೆ

ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣ ಬೆಳಿಸಿಕೊಳ್ಳಿ: ಮಿತ್ತಳಿಕೆ ಗಂಗಾಧರ್ ಶೆಟ್ಟಿ ಪುತ್ತೂರು: ವಿದ್ಯಾರ್ಥಿಗಳು ಉತ್ತಮ ಅಭ್ಯಾಸದ ಜೊತೆಗೆ ನಾಯಕತ್ವ ಗುಣ ಅಳವಡಿಸಿಕೊಂಡಾಗ ಮಾತ್ರ ಸಮರ್ಥ ವ್ಯಕ್ತಿಯಾಗಿ ನಿರ್ಮಾಣವಾಗಲು ಸಾಧ್ಯ. ಅಂತಹ ಭವಿಷ್ಯವನ್ನು ರೂಪಿಸಿಕೊಳ್ಳುವ ಕಾರ್ಯವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಗುರಿಯಾಗಿಟ್ಟುಕೊಳ್ಳಿ ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ, ಪ್ರಸ್ತುತ ಬೆಂಗಳೂರಿನ ಹಿರಿಯ ನ್ಯಾಯವಾದಿ, ಸಿ.ಬಿ.ಐ.ನ ವಿಶೇಷ ಅಭಿಯೋಜಕರಾಗಿರುವ ಶ್ರೀ ಮಿತ್ತಳಿಕೆ ಗಂಗಾಧರ್ ಶೆಟ್ಟಿ ಹೇಳಿದರು. ಅವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ 2022-23ಕ್ಕೆ ದೀಪ ಬೆಳಗುವ

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ 2022-23 ಉದ್ಘಾಟನೆ Read More »

ವರದಿಗಾರರು ಬೇಕಾಗಿದ್ದಾರೆ

ಪುತ್ತೂರು :ಹೊಸದಾಗಿ ಆರಂಭಗೊಂಡ ನ್ಯೂಸ್ ಪುತ್ತೂರು ವೆಬ್‍ಸೈಟ್‍ಗೆ ವರದಿಗಾರರು ಬೇಕಾಗಿದ್ದಾರೆ. ಅರ್ಹತೆ : ಬರವಣಿಗೆಯ ಆಸಕ್ತಿ. ಫ್ರೆಷರ್ಸ್ / ಅನುಭವಿಗಳಿಗೆ ಆದ್ಯತೆ. ಆಕರ್ಷಕ ವೇತನ ನೀಡಲಾಗುವುದು. ಸಂಪರ್ಕಿಸಿ : 9108382821

ವರದಿಗಾರರು ಬೇಕಾಗಿದ್ದಾರೆ Read More »

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕರಾವಳಿಗೆ ಭರಪೂರ ಕೊಡುಗೆಯ ಭರವಸೆ

ಕರಾವಳಿಗೆ ಪ್ರತ್ಯೇಕ ಪ್ರಣಾಳಿಯನ್ನೇ ಘೋಷಿಸಿದ ಕೈ ಪಕ್ಷ ಮಂಗಳೂರು: ಕರಾವಳಿಯ ಬಿಜೆಪಿ ಭದ್ರಕೋಟೆಗೆ ನುಗ್ಗಬೇಕೆಂದು ಸಂಕಲ್ಪಸಿರುವ ಕಾಂಗ್ರೆಸ್‌ ಕರಾವಳಿ ಭಾಗಕ್ಕಾಗಿಯೇ ಪ್ರತ್ಯೇಕ ಪ್ರಣಾಳಿಕೆಯನ್ನು ಘೋಷಿಸಿದೆ. ಮಂಗಳೂರಿನಲ್ಲಿ ಭಾನುವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸಿರುವ ಕಾಂಗ್ರೆಸ್‌ ಪ್ರತ್ಯೇಕ ಪ್ರಣಾಲಿಕೆಯನ್ನು ಪ್ರಕಟಿಸಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಅವರು ಪ್ರತ್ಯೇಕ ಪ್ರಣಾಳಿಕೆಯ ಹತ್ತು ಅಂಶ ಘೋಷಿಸಿದ್ದಾರೆ. ಪ್ರತ್ಯೇಕ ಪ್ರಣಾಳಿಕೆಯ ಹತ್ತು ಅಂಶ ಇಂತಿವೆ:*ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಮೂಲಕ ತಾಯಂದಿರು ಮತ್ತು ಮಹಿಳೆಯರಿಗೆ ಉದ್ಯೋಗ*ಮೀನುಗಾರರಿಗೆ 10

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕರಾವಳಿಗೆ ಭರಪೂರ ಕೊಡುಗೆಯ ಭರವಸೆ Read More »

ಮುರುಡೇಶ್ವರ- ಬೆಂಗಳೂರು ರೈಲು ಮೇ ತನಕ ವಿಸ್ತರಣೆ

ಮೂರು ಜಿಲ್ಲೆಗಳ ಜನರಿಗೆ ಅನುಕೂಲ ಮಂಗಳೂರು: ಪ್ರಯಾಣಿಕರ ಬೇಡಿಕೆಗೆ ಮಣಿದು ರೈಲ್ವೆ ಇಲಾಖೆ ಮುರುಡೇಶ್ವರ- ಬೆಂಗಳೂರು ರೈಲು ಸೇವೆಯನ್ನು 2023ರ ಮೇ ತಿಂಗಳ ಕೊನೆಯ ತನಕ ವಿಸ್ತರಿಸಿ ಆದೇಶ ಹೊರಡಿಸಿದೆ. ಚಳಿಗಾಲದ ಅವಧಿಗಾಗಿ ಜನವರಿ ಅಂತ್ಯದ ತನಕ ಮಾತ್ರ ಮುರುಡೇಶ್ವರ-ಪಡೀಲ್ ಬೈಪಾಸ್-ಯಶವಂತಪುರ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಘೋಷಣೆ ಮಾಡಲಾಗಿತ್ತು.ಆದರೆ ಈ ರೈಲು ಜನರಿಗೆ ಬಹಳ ಅನುಕೂಲಕರವಾಗಿರುವುದರಿಂದ ವಿಸ್ತರಿಸಲು ಒತ್ತಾಯವಿತ್ತು. ಕರಾವಳಿ ಜನರಿಗೆ ಬೆಂಗಳೂರಿಗೆ ಹೋಗಿ ಬರಲು ಈ ರೈಲು ಅನುಕೂಲಕರವಾಗಿದೆ. ಮೂರು ಜಿಲ್ಲೆಗಳ ಜನರು

ಮುರುಡೇಶ್ವರ- ಬೆಂಗಳೂರು ರೈಲು ಮೇ ತನಕ ವಿಸ್ತರಣೆ Read More »

ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸಲು ಕೇಂದ್ರ ಚಿಂತನೆ

ಒಂಭತ್ತು ರಾಜ್ಯಗಳ ಚುನಾವಣೆ ಮೇಲೆ ದೃಷ್ಟಿ ಹೊಸದಿಲ್ಲಿ : ಈ ವರ್ಷ ಕರ್ನಾಟಕವೂ ಸೇರಿದಂತೆ ಒಂಭತ್ತು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಇಳಿಸಲು ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿಯಂತ್ರಣದಲ್ಲಿದೆ. ತೈಲ ಕಂಪನಿಗಳು ನಷ್ಟದಿಂದ ಚೇತರಿಸಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮನವಿ ಮಾಡಿರುವುದು ಈ ಸುದ್ದಿಗೆ ಇಂಬು ನೀಡಿದೆ.ಅಂತಾರಾಷ್ಟ್ರೀಯ

ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸಲು ಕೇಂದ್ರ ಚಿಂತನೆ Read More »

ಧಗಧಗಿಸಿದ ಕ್ರಾಂತಿಯ ಕಿಡಿ ಬೋಸ್‌

ಇಂದವರ ಹುಟ್ಟುಹಬ್ಬ-ರಾಷ್ಟ್ರೀಯ ಪರಾಕ್ರಮ ದಿನ ನೇತಾಜಿ ಸುಭಾಶ್‌ಚಂದ್ರ ಬೋಸರ ಇನ್ನೊಂದು ಜನ್ಮ ಜಯಂತಿಗೆ ಇಡೀ ದೇಶ ಸಜ್ಜುಗೊಂಡಿದೆ. ಕಳೆದ ಎರಡು ವರ್ಷಗಳಿಂದ ನೇತಾಜಿ ಅವರ ಜನ್ಮ ದಿನವನ್ನು (ಜನವರಿ 23) ‘ಪರಾಕ್ರಮ ದಿನ’ವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿತ್ತು.ಇದು ನಿಜವಾಗಿಯೂ ಅತ್ಯಂತ ಸೂಕ್ತವಾದ ನಿರ್ಧಾರವಾಗಿತ್ತು. ನೇತಾಜಿ ಸುಭಾಸರನ್ನು ಇಂದಿನ ತಲೆಮಾರಿನ ಜನರು ನಿರಂತರವಾಗಿ ನೆನಪಿಸಿಕೊಳ್ಳಬೇಕು.2004ರಲ್ಲಿ ಶಾಮ್ ಬೆನೆಗಲ್ ನಿರ್ದೇಶನ ಮಾಡಿದ ಶ್ರೇಷ್ಠ ಸಿನೆಮಾ ‘ನೇತಾಜಿ ಸುಭಾಶ್‌ಚಂದ್ರ ಬೋಸ್ – ದ ಫಾರ್ಗೊಟನ್ ಹೀರೊ’ ನೋಡಿ ನಾನು

ಧಗಧಗಿಸಿದ ಕ್ರಾಂತಿಯ ಕಿಡಿ ಬೋಸ್‌ Read More »

ಕಗ್ಗದ ಸಂದೇಶ- ನಡೆ ನುಡಿ ಎಂದೆಂದೂ ಸತ್ಯವಾಗಿರಲಿ…

ಸತ್ಯವಂತನನರಸಲೆನುತ ಪೇಟೆಗಳೊಳಗೆ|ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು||ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಾಸಿಸಿದನು|ತಾತ್ವಿಕ ಡಯೋಜೆನಿಸ್ – ಮಂಕುತಿಮ್ಮ|| ಸುಮಾರು ಎರಡೂವರೆ ಸಾವಿರ ವರ್ಷುಗಳ ಹಿಂದೆ ಗ್ರೀಕ್ ದೇಶದಲ್ಲಿ ಜನಸಿದ ಡಯೋಜನಿಸ್ ಎಂಬ ತತ್ತ್ವಜ್ಞಾನಿ ಸತ್ಯವಂತರು ಯಾರಾದರೂ ಇದ್ದಾರೆಯೆ ಎಂದು ನೋಡಲು ಪೇಟೆಯಲ್ಲಿ ನಡುಹಗಲಿನಲ್ಲಿಯೇ ದೀಪವನ್ನು ಹಿಡಿದುಕೊಂಡು ನಡೆದು ನೋಡಿ ಕೊನೆಗೆ ಯಾರೂ ಸಿಗದಿದ್ದಾಗ ಈ ಜಗತ್ತು ಕೆಟ್ಟು ಹೋಗಿದೆ ಎಂದು ಮನೆಯಲ್ಲಿಯೆ ಒಂದು ತೊಟ್ಟಿಯನ್ನು ನಿರ್ಮಿಸಿಕೊಂಡು ವಾಸಿಸಿದನು ಎಂದು ಮಾನ್ಯ ಡಿವಿಜಿಯವರು ಜಗತ್ತಿನ ವಾಸ್ತವ ಸಂಗತಿಯನ್ನು ವಿಡಂಬನಾತ್ಮಕವಾಗಿ ಈ ಮುಕ್ತಕದಲ್ಲಿ

ಕಗ್ಗದ ಸಂದೇಶ- ನಡೆ ನುಡಿ ಎಂದೆಂದೂ ಸತ್ಯವಾಗಿರಲಿ… Read More »

ಹಿಂದೂ ಧರ್ಮದ ಶಕ್ತಿ ಪ್ರದರ್ಶಿಸಿದ ಒಕ್ಕಲಿಗ ಸಮಾವೇಶ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮ ಧರ್ಮದ ಶಕ್ತಿಯನ್ನು ಅನಾವರಣ ಮಾಡಿ, ಮಾದರಿ ಸಮಾರಂಭ ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಎಲ್ಲಾ ಪಕ್ಷ ಮುಖಂಡರೂ ಭಾಗವಹಿಸಿದ್ದು ಪಕ್ಷಾತೀತ ಎಂದು ಸಾಬೀತಾದರೆ, ಎಲ್ಲಾ ಸಮುದಾಯದವರು ಭಾಗವಹಿಸುವ ಮೂಲಕ ಆದಿಚುಂಚನಗಿರಿ ಮಹಾಸಂಸ್ಥಾನ ಇಡೀ ಸಮಾಜಕ್ಕೆ ಮಾರ್ಗದರ್ಶಕ ಎನ್ನುವುದನ್ನು ರುಜುವಾತು ಪಡಿಸಿತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಪ್ರಶಂಸೆ ವ್ಯಕ್ತಪಡಿಸಿ, ಸಂದೇಶ ರವಾನೆ ಆಗುತ್ತಿತ್ತು. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ

ಹಿಂದೂ ಧರ್ಮದ ಶಕ್ತಿ ಪ್ರದರ್ಶಿಸಿದ ಒಕ್ಕಲಿಗ ಸಮಾವೇಶ Read More »

 ವೈಭವಕ್ಕೆ ಸಾಕ್ಷಿಯಾದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ, ಗುರುವಂದನೆ, ತುಲಾಭಾರ, ಗ್ರಂಥ ಬಿಡುಗಡೆ

ಪುತ್ತೂರು: ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಹಾಗೂ ಗುರುವಂದನೆ, ತುಲಾಭಾರ ಸಮಾರಂಭ ವೈಭವದಿಂದ ಜರಗಿತು. ರವಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಯತಿವರೇಣ್ಯರ ಉಪಸ್ಥಿತಿಯಲ್ಲಿ ನಡೆದ ಸಮಾರಂಭಕ್ಕೆ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾದರು. ರಾಜಕೀಯ ನಾಯಕರ ಸಹಿತ, ಅನೇಕ ಗಣ್ಯರು ಆಗಮಿಸಿ ಗುರುಗಳ ಆಶೀರ್ವಾದ ಸ್ವೀಕರಿಸಿದರು. ಬೆಳಿಗ್ಗೆ ಪೆರಿಯಡ್ಕದಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ದರ್ಬೆಯಿಂದ ಭವ್ಯ ಶೋಭಾಯಾತ್ರೆ ನಡೆಯಿತು. ಶ್ರೀಗಳ ಉಪಸ್ಥಿತಿಯಲ್ಲಿ ಗಣ್ಯರು ಚೆಂಡೆ,

 ವೈಭವಕ್ಕೆ ಸಾಕ್ಷಿಯಾದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ, ಗುರುವಂದನೆ, ತುಲಾಭಾರ, ಗ್ರಂಥ ಬಿಡುಗಡೆ Read More »

error: Content is protected !!
Scroll to Top