ಏ. 23 : ರಾಮನಿಗೆ 155 ದೇಶದ ನದಿಗಳ ನೀರಿನಿಂದ ‘ಜಲಾಭಿಷೇಕ’

ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಂದ ಜಲಾಭಿಷೇಕ ಅಯೋಧ್ಯೆ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಏ.23 ರಂದು 155 ದೇಶಗಳ ನದಿಗಳ ನೀರಿನಿಂದ ಅಯೋಧ್ಯೆಯಲ್ಲಿ ರಾಮಲಲ್ಲಾ ದೇವರಿಗೆ ‘ಜಲಾಭಿಷೇಕ’ ನಡೆಸಲಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.ದಿಲ್ಲಿಯ ರಾಮ ಭಕ್ತ ವಿಜಯ್ ಜಾಲಿ ನೇತೃತ್ವದ ತಂಡ 155 ದೇಶಗಳ ನದಿಗಳ ನೀರನ್ನು ಆದಿತ್ಯನಾಥ್‌ಗೆ ಹಸ್ತಾಂತರಿಸಲಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, 2024ರ […]

ಏ. 23 : ರಾಮನಿಗೆ 155 ದೇಶದ ನದಿಗಳ ನೀರಿನಿಂದ ‘ಜಲಾಭಿಷೇಕ’ Read More »

ವಿಮಾನ ಲ್ಯಾಂಡಿಂಗ್‌ ವೇಳೆ ತೊಡಕು

ಪ್ರಯಾಣಿಕರು ಪಾರು ಮಂಗಳೂರು : ಬೆಂಗಳೂರಿನಿಂದ ಮಂಗಳೂರಿಗೆ ಬಂದ ಇಂಡಿಗೋ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ಆಗುವ ವೇಳೆ ತೊಡಕು ಉಂಟಾದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ ಇಂಡಿಗೋ 6E6858 ವಿಮಾನ ಲ್ಯಾಂಡಿಂಗ್‌ ಆಗುವ ವೇಳೆ ತೊಂದರೆ ಉಂಟಾಗಿದೆ. ಈ ವೇಳೆ ಮತ್ತೊಮ್ಮೆ ವಿಮಾನವನ್ನು ಟೇಕ್‌ ಆಫ್‌ ಮಾಡಿ ಪುನಃ ಲ್ಯಾಂಡ್‌ ಮಾಡಲಾಗಿದೆ. ಪ್ರಯಾಣಿಕರು ಸುರಕ್ಷಿತವಾಗಿ ಬಂದಿಳಿದಿದ್ದಾರೆ.

ವಿಮಾನ ಲ್ಯಾಂಡಿಂಗ್‌ ವೇಳೆ ತೊಡಕು Read More »

ರೈಲ್ವೇ ಟ್ರ್ಯಾಕಿನಲ್ಲಿ ಪತ್ತೆಯಾಯ್ತು KSRTC ಚಾಲಕನ ಮೃತದೇಹ!

ಪುತ್ತೂರು: ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ಮೃತದೇಹ ಕಾಣಿಯೂರು ರೈಲ್ವೇ ಟ್ರ್ಯಾಕಿನಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ. ಕುಸುಮಾಧರ ಗೌಡ ಅಭೀರ (34 ವ.) ಎಂಬವರ ಮೃತದೇಹ ಇದಾಗಿದೆ. ಗುರುವಾರ ರಾತ್ರಿ ಕರ್ತವ್ಯದಿಂದ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದರು. ಶುಕ್ರವಾರ ಬೆಳಿಗ್ಗೆ ಮೃತದೇಹ ರೈಲ್ವೇ ಟ್ರ್ಯಾಕಿನಲ್ಲಿ ಪತ್ತೆಯಾಗಿದೆ. ಕೆ.ಎಸ್.ಆರ್.ಟಿ.ಸಿ. ಪುತ್ತೂರು ವಿಭಾಗದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕುಸುಮಾಧರ ಕೆಲಸ ನಿರ್ವಹಿಸುತ್ತಿದ್ದರು. 1 ವರ್ಷದ ಹಿಂದೆ ವಿವಾಹವಾಗಿದ್ದರು. ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೈಲ್ವೇ ಟ್ರ್ಯಾಕಿನಲ್ಲಿ ಪತ್ತೆಯಾಯ್ತು KSRTC ಚಾಲಕನ ಮೃತದೇಹ! Read More »

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಏ.9ರ ನಂತರ ಪ್ರಕಟ

ಅಂತಿಮ ಹಂತದ ಆಯ್ಕೆ ಪ್ರಕ್ರಿಯೆ ದಿಲ್ಲಿಯಲ್ಲಿ ಪುತ್ತೂರು : ಕರ್ನಾಟಕ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಏ.9 ರಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಪಕ್ಷದ ಕೇಂದ್ರ

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಏ.9ರ ನಂತರ ಪ್ರಕಟ Read More »

ನೈಸರ್ಗಿಕ ಅನಿಲ ದರ ನಿಗದಿಗೆ ಹೊಸ ಮಾನದಂಡ – ಗ್ಯಾಸ್‌ ಬೆಲೆ ಕಡಿಮೆಯಾಗಲಿದೆ

ಸಿಎನ್‌ಜಿ ವಾಹನ ಬಳಸುವವರಿಗೆ ಅನುಕೂಲ ದೆಹಲಿ : ನೈಸರ್ಗಿಕ ಅನಿಲದ ದರ ನಿಗದಿಗಪಡಿಸುವ ಹೊಸ ಮಾನದಂಡ ಜಾರಿ ಮಾಡಲು ಕೇಂದ್ರ ಒಪ್ಪಿಗೆ ನೀಡಿದೆ. ಈ ಮಾನದಂಡ ಜಾರಿಗೆ ಬಂದ ಬಳಿಕ ಗೃಹ ಬಳಕೆಯ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್‌ಜಿ ತೈಲದ ದರ ಶೇ. 10ರ ವರೆಗೆ ಕಡಿಮೆಯಾಗಲಿದೆ.ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಹಲವು ಮಹತ್ವದ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುವ ಬೆಲೆ ಏರಿಳಿತಗಳಿಂದ ಭಾರತದ ಗ್ರಾಹಕರನ್ನು ರಕ್ಷಿಸಲು ಇದು ನೆರವಾಗಲಿದೆ. ಹೊಸ ಮಾರ್ಗದರ್ಶಿ

ನೈಸರ್ಗಿಕ ಅನಿಲ ದರ ನಿಗದಿಗೆ ಹೊಸ ಮಾನದಂಡ – ಗ್ಯಾಸ್‌ ಬೆಲೆ ಕಡಿಮೆಯಾಗಲಿದೆ Read More »

ಆರೋಗ್ಯ ಧಾರಾ- ಬೇಸಿಗೆಯಲ್ಲಿ ದೇಹ ತಂಪಾಗಿಡುವುದು…

ಬಿಸಿಲಿನ ತಾಪ ಏರಿದಂತೆ ನಮ್ಮ ದೇಹ ಅದಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತದೆ. ಸೆಕೆಗಾಲದಲ್ಲಿ ವಾತ ದೋಷವು ಉಲ್ಬಣಗೊಳ್ಳುತ್ತದೆ. ಅಲ್ಪ ಶರೀರ ಬಲ ಹಾಗೂ ದುರ್ಬಲ ಜೀರ್ಣ ಶಕ್ತಿಯಿಂದ ದೇಹವು ಜರ್ಜರಿತವಾಗುತ್ತದೆ. ಇದನ್ನೆಲ್ಲಾ ತಡೆಯಲು ಇಲ್ಲಿದೆ ಕೆಲವು ಟಿಪ್ಸ್• ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಪ್ರಖರ ಸೂರ್ಯ ಕಿರಣವಿರುವುದರಿಂದ ಆದಷ್ಟು ಬಿಸಿಲಿನಲ್ಲಿ ಸಮಯ ಕಳೆಯಬೇಡಿ. ಅನಿವಾರ್ಯವಿದ್ದರೆ ತಲೆಗೆ ಕ್ಯಾಪ್ ಅಥವಾ ಛತ್ರಿಯನ್ನು ಉಪಯೋಗಿಸಿ. ಕಣ್ಣಿಗೆ ಗಾಗಲ್ ಹಾಕಿ. ತಿಳಿ ಬಣ್ಣದ ಬಟ್ಟೆಯನ್ನು ಧರಿಸಿ. ಹತ್ತಿ ಬಟ್ಟೆಯನ್ನು ಧರಿಸಿದರೆ

ಆರೋಗ್ಯ ಧಾರಾ- ಬೇಸಿಗೆಯಲ್ಲಿ ದೇಹ ತಂಪಾಗಿಡುವುದು… Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಜ್ಞಾನ ವೇದಿಕೆ ಕಾರ್ಯಕ್ರಮಗಳ ಉದ್ಘಾಟನೆ, ಅತಿಥಿ ಉಪನ್ಯಾಸ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಿಜ್ಞಾನ ವೇದಿಕೆ ಆಶ್ರಯದಲ್ಲಿ ವಿಜ್ಞಾನ ವೇದಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಪುತ್ತೂರಿನ ದಂತ ವೈದ್ಯ ಡಾ| ಎಲ್‌. ಕೃಷ್ಣಪ್ರಸಾದ್‌ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ವಂ|ಡಾ| ಆಂಟನಿ ಪ್ರಕಾಶ್‌ ಮೊಂತೆರೊ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕ್ಯಾಂಪಸ್‌ ನಿರ್ದೇಶಕ ವಂ| ಸ್ಟ್ಯಾನಿ ಪಿಂಟೋ ಶುಭ ಹಾರೈಸಿದರು. ಬಳಿಕ ಡಾ.ಎಲ್‌ ಕೃಷ್ಣಪ್ರಸಾದ್‌ʼದಂತ ವೈದ್ಯಕೀಯ ಮತ್ತು ರಸಾಯನ ಶಾಸ್ತ್ರ

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಜ್ಞಾನ ವೇದಿಕೆ ಕಾರ್ಯಕ್ರಮಗಳ ಉದ್ಘಾಟನೆ, ಅತಿಥಿ ಉಪನ್ಯಾಸ Read More »

ಬಲ್ಗೇರಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ 50 ಲಕ್ಷ ರೂಪಾಯಿ ವಂಚನೆ : ಆರೋಪಿ ಬಂಧನ

ಮಂಗಳೂರು : ಬಲ್ಗೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, 30ಕ್ಕೂ ಹೆಚ್ಚು ಮಂದಿಗೆ ವಂಚಿಸಿ, 50 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಿದ ಆರೋಪದ ಮೇಲೆ ಮಂಗಳೂರಿನ ವ್ಯಕ್ತಿಯೊಬ್ಬನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಿಜೈ ಮೂಲದ ಸುಧೀರ್ ರಾವ್ ವಿ ಆರ್. ಬಲ್ಗೇರಿಯಾದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಹಲವರಿಂದ 50 ಲಕ್ಷ ರೂ.ಗೂ ಹೆಚ್ಚು ಹಣವನ್ನು ವಸೂಲಿ ಮಾಡಿದ್ದನು. ಹಣ ಪಡೆದಿದ್ದ ಆತ ನಂತರ ವೀಸಾ ಕೊಡಿಸಿಲ್ಲ ಅಥವಾ ಹಣವನ್ನು ಹಿಂದಿರುಗಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿ

ಬಲ್ಗೇರಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ 50 ಲಕ್ಷ ರೂಪಾಯಿ ವಂಚನೆ : ಆರೋಪಿ ಬಂಧನ Read More »

ದೇವಪ್ಪ ನೋಂಡಾ ನಿಧನ

ಪುತ್ತೂರು: ಪುತ್ತೂರು ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ, ಹೊಟೇಲ್ ಶ್ರೀ ಲಕ್ಷ್ಮೀ ಮಾಲಕ, ಒಡಿಯೂರು ಸೊಸೈಟಿ ನಿರ್ದೇಶಕ ದೇವಪ್ಪ ನೋಂಡಾ ಎ.7 ರಂದು ಸ್ವಗೃಹದಲ್ಲಿ ನಿಧನರಾದರು. ದೇವಪ್ಪ ನೋಂಡಾ ಅವರ ಆರೋಗ್ಯದಲ್ಲಿ ಏರುಪೇರಾಗಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.

ದೇವಪ್ಪ ನೋಂಡಾ ನಿಧನ Read More »

ಪುಣ್ಚಪ್ಪಾಡಿ ಶಾಲೆಯಲ್ಲಿ ಬಣ್ಣದ ಬಣ್ಣ ಮಕ್ಕಳ ರಂಗ ಶಿಬಿರಕ್ಕೆ ಚಾಲನೆ | ಹೊಸತನದ ಹುಡುಕಾಟದ ಕಲಿಕೆಯೇ ಇಂದಿನ ಅಗತ್ಯ : ಕಲಾನಿಧಿ ಗೋಪಾಡ್ಕರ್

ಪುತ್ತೂರು: ಹೊಸತನದ ಹುಡುಕಾಟದ ಕಲಿಕೆಯೇ ಇಂದಿನ ಅಗತ್ಯ ಎಂದು ಕರ್ನಾಟಕದ ಹಿರಿಯ ಶೈಕ್ಷಣಿಕ ಚಿಂತಕ ಕಲಾ ನಿಧಿ ಗೋಪಾಡ್ಕರ್ ಮಂಗಳೂರು ಹೇಳಿದರು. ಅವರು ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ,  ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಂಯುಕ್ತ ಆಶ್ರಯದಲ್ಲಿ ಪುಣ್ಚಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  ಪುಣ್ಚಪ್ಫಾಡಿ ಇಲ್ಲಿ ನಡೆದ ಮೂರು ದಿನಗಳ ಮಕ್ಕಳರಂಗ ಶಿಬಿರ ಬಣ್ಣದ ಬಣ್ಣವನ್ನು ಉದ್ಘಾಟಿಸಿ ಮಾತನಾಡಿದರು. ಕಲಿಕೆ

ಪುಣ್ಚಪ್ಪಾಡಿ ಶಾಲೆಯಲ್ಲಿ ಬಣ್ಣದ ಬಣ್ಣ ಮಕ್ಕಳ ರಂಗ ಶಿಬಿರಕ್ಕೆ ಚಾಲನೆ | ಹೊಸತನದ ಹುಡುಕಾಟದ ಕಲಿಕೆಯೇ ಇಂದಿನ ಅಗತ್ಯ : ಕಲಾನಿಧಿ ಗೋಪಾಡ್ಕರ್ Read More »

error: Content is protected !!
Scroll to Top