ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ | ಬೊಳುವಾರಿನಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು : ಪುತ್ತೂರು: ಶಿಕ್ಷಣ ಪದ್ಧತಿಯಿಂದ ದೇಶದ ಚಿತ್ರಣ ಬದಲು ಮಾಡಲು ಸಾಧ್ಯವಿದ್ದು, ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ಕ್ಷೇತ್ರದಲ್ಲೇ ಅಭ್ಯಾಸ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಐದು ಸರ್ಕಾರಿ ಪದವಿ ಕಾಲೇಜು ಹೊಂದಿರುವ ಏಕೈಕ ವಿಧಾನ ಸಭಾಕ್ಷೇತ್ರ ಪುತ್ತೂರು. ಅದರಲ್ಲೂ ಒಂದು ಮಹಿಳಾ ಕಾಲೇಜು ಇರುವುದು ವಿಶೇಷವಾಗಿದೆ. ಇಲ್ಲಿರುವ ಪ್ರಾಥಮಿಕ ಶಾಲೆಯನ್ನು ಉಳಿಸುವ ಜತೆಗೆ, ಜಾಗದ ಕಾನೂನು ಹೋರಾಟ ಮಾಡಿಯೇ ಸಿದ್ದ ಎಂದು ಪುತ್ತೂರು ಶಾಸಕ ಸಂಜೀವ […]

ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ | ಬೊಳುವಾರಿನಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು Read More »

ಉದ್ಯೋಗದ ಜೊತೆ ಸ್ವ – ಉದ್ಯೋಗಕ್ಕೂ ಗಮನ ಕೊಡಿ |  ವಿಶ್ವಕರ್ಮ ಮಹಿಳಾ ಮಂಡಳಿಯ ವಾರ್ಷಿಕೋತ್ಸವದಲ್ಲಿ ಭಾರತಿ ಎಂ.ಎಲ್.

ಪುತ್ತೂರು: ಸಮಾಜದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನ ಪ್ರಾಶಸ್ತ್ಯ ಪಡೆದುಕೊಂಡಿದ್ದು, ಉದ್ಯೋಗದ ಜೊತೆಗೆ ಸ್ವ-ಉದ್ಯೋಗ ನಡೆಸುವತ್ತಲೂ ಗಮನ ಕೊಡಬೇಕು ಎಂದು ಅಳದಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಭಾರತಿ ಎಂ.ಎಲ್. ಹೇಳಿದರು. ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ  ನಡೆದ ವಿಶ್ವಕರ್ಮ ಮಹಿಳಾ ಮಂಡಳಿಯ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವದಲ್ಲಿ ಅವರು ಮುಖ್ಯಅತಿಥಿಯಾಗಿ ಮಾತನಾಡಿದರು. ಸ್ತ್ರೀಯರನ್ನು ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಶಿಕ್ಷಣವೇ ಇಂದು ಎಲ್ಲಾ ಕ್ಷೇತ್ರಗಳ ಅಡಿಪಾಯ. ಶಿಕ್ಷಣ ಪಡೆದವರು ಸ್ವತಂತ್ರವಾಗಿ ಜೀವನ ಕಟ್ಟಿಕೊಳ್ಳಲು ಸಾಧ್ಯ. ವ್ಯಕ್ತಿತ್ವ ವಿಕಸನವೂ ಆಗುತ್ತದೆ

ಉದ್ಯೋಗದ ಜೊತೆ ಸ್ವ – ಉದ್ಯೋಗಕ್ಕೂ ಗಮನ ಕೊಡಿ |  ವಿಶ್ವಕರ್ಮ ಮಹಿಳಾ ಮಂಡಳಿಯ ವಾರ್ಷಿಕೋತ್ಸವದಲ್ಲಿ ಭಾರತಿ ಎಂ.ಎಲ್. Read More »

ಅನನ್ಯತೆ ನಿಮ್ಮದೇ ಬ್ರಾಂಡ್ ಆಗಲಿ : ನಿಮ್ಮ ಹಾಗೆ ಜಗತ್ತಿನಲ್ಲಿ ಬೇರೆ ಯಾರೂ ಇರಲು ಸಾಧ್ಯವಿಲ್ಲ

ಏಷಿಯಾನೆಟ್ ಸುವರ್ಣಾ ವಾಹಿನಿಯ ಸ್ಟಾರ್ ಆಂಕರ್ ಭಾವನಾ ನಾಗಯ್ಯ ನಡೆಸಿಕೊಡುವ ಒಂದು ಮಿನಿ ಟಿವಿ ಶೋ ಅದ್ಭುತವಾಗಿ ಇರುತ್ತದೆ. ಅದರಲ್ಲಿ ಒಬ್ಬ ಸೆಲೆಬ್ರಿಟಿ ಸಾಧಕರನ್ನು ಕರೆದು ಕ್ಯಾಮೆರಾ ಮುಂದೆ ಕೂರಿಸಿ ಆಕೆ 60 ಸೆಕೆಂಡ್ ಅವಧಿಯಲ್ಲಿ 12-15 ಮೊನಚು ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಸೆಲೆಬ್ರಿಟಿ ಸಾಧಕರು ಒಂದೊಂದು ವಾಕ್ಯದಲ್ಲಿ ಚುಟುಕಾಗಿ ಉತ್ತರಿಸಬೇಕು. ಆ ಪ್ರಶ್ನೆಗಳನ್ನು ಮೊದಲಾಗಿ ಕೊಡದೇ ಸ್ಥಳದಲ್ಲಿಯೇ ಕೇಳುವ ಕಾರಣ ಕಾರ್ಯಕ್ರಮ ತುಂಬಾ ರೋಚಕ ಆಗಿರುತ್ತದೆ.ಈ ಬಾರಿ ಆ ಶೋಗೆ ಮುಖಾಮುಖಿ ಆದವರು ರಿಯಲ್ ಸ್ಟಾರ್

ಅನನ್ಯತೆ ನಿಮ್ಮದೇ ಬ್ರಾಂಡ್ ಆಗಲಿ : ನಿಮ್ಮ ಹಾಗೆ ಜಗತ್ತಿನಲ್ಲಿ ಬೇರೆ ಯಾರೂ ಇರಲು ಸಾಧ್ಯವಿಲ್ಲ Read More »

ಮಾ. 30: ಮೆಡಿಕಲ್ ಕಾಲೇಜು ಹೋರಾಟ ಸಮಿತಿ ವತಿಯಿಂದ ಶಾಂತಿಯುತ ಕಾಲ್ನಡಿಗೆ ಜಾಥಾ, ಸಮಾವೇಶ

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಜತೆಗೆ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಮಾ. 30ರಂದು ಹೋರಾಟ ಸಮಿತಿಯಿಂದ ಶಾಂತಿಯುತ ಕಾಲ್ನಡಿಗೆ ಜಾಥಾ ಹಾಗೂ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು 317 ಲಯನ್ ಜಿಲ್ಲೆಯ 8 ಪ್ರಾಂತ್ಯದ ಅಧ್ಯಕ್ಷೆ ಸಂಧ್ಯಾ ಸಚಿತ್ ರೈ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆಂದೋಲನಕ್ಕೆ 317 ಲಯನ್ ಜಿಲ್ಲೆಯ 7 ಮತ್ತು 8 ಪ್ರಾಂತ್ಯಗಳ ಒಟ್ಟು 12 ಲಯನ್ಸ್ ಕ್ಲಬ್ಬುಗಳು ಅಖಂಡ ಬೆಂಬಲ ಘೋಷಿಸಿದೆ. ಈಗಾಗಲೇ ಹೋರಾಟ ನಡೆಸುತ್ತಿರುವ

ಮಾ. 30: ಮೆಡಿಕಲ್ ಕಾಲೇಜು ಹೋರಾಟ ಸಮಿತಿ ವತಿಯಿಂದ ಶಾಂತಿಯುತ ಕಾಲ್ನಡಿಗೆ ಜಾಥಾ, ಸಮಾವೇಶ Read More »

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ

ಪುತ್ತೂರು: ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಚನಿಲ ತಿಮ್ಮಪ್ಪ ಶೆಟ್ಟಿ ಅವರಿಗೆ ರಾಜ್ಯ ಸರಕಾರ ಎಲ್ಲಾ ಸೌಲಭ್ಯಗಳೊಂದಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಆದೇಶಿಸಿದೆ. ರಾಜ್ಯ ಶಿಷ್ಟಾಚಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ – 2 ಅವರು ಆದೇಶ ಹೊರಡಿಸಿದ್ದಾರೆ. ಈ ಮೂಲಕ ಕರಾವಳಿ ಭಾಗದ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ರಾಜ್ಯ ಸರಕಾರ ನೀಡಿದಂತಾಗಿದೆ. ಸಂಪುಟ ದರ್ಜೆಯ ಸ್ಥಾನಮಾನವು ರಾಜ್ಯದ ಸಂಪುಟ ದರ್ಜೆಯ ಸಚಿವರಿಗೆ ಸರಿಸಮಾನವಾದ ಸ್ಥಾನಮಾನ. ಸಚಿವರುಗಳಿಗೆ ಸಿಗುವ ಎಲ್ಲಾ ಸೌಲಭ್ಯಗಳು, ಅಧಿಕಾರಗಳು

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ Read More »

ಶೂಟಿಂಗ್‌ ವೇಳೆ ಬಿದ್ದು ಗಾಯಗೊಂಡ ಅಮಿತಾಭ್‌ ಬಚ್ಚನ್‌

ಮುಂಬಯಿ : ಹಿರಿಯ ನಟ ಅಮಿತಾಭ್ ಬಚ್ಚನ್​ ಅವರು ಶೂಟಿಂಗ್ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಶೂಟಿಂಗ್ ವೇಳೆ ಬಿದ್ದ ಬಿರುಸಿಗೆ ಅಮಿತಾಭ್ ಬಚ್ಚನ್​ ಪಕ್ಕೆಲುಬು ಬಳಿ ಗಾಯವಾಗಿವಾಗಿದೆ.‘ಪ್ರಾಜೆಕ್ಟ್ ಕೆ’ ಚಿತ್ರದ ಶೂಟಿಂಗ್ ವೇಳೆ ಘಟನೆ ಸಂಭವಿಸಿದೆ.ಚಿತ್ರೀಕರಣ ಹೈದರಾಬಾದ್ ಬಳಿ ನಡೆಯುತ್ತಿತ್ತು, ಸದ್ಯ ಮುಂಬಯಿಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಮೇರುನಟರಾಗಿರುವ ಅಮಿತಾಭ್‌ ಬಚ್ಚನ್‌ ಎರಡು ಬಾರಿ ಕೋವಿಡ್‌ ಗೆದ್ದಿದ್ದರು. ದೇಹದ ಕೆಲವೊಂದು ಅಂಗಾಂಗಗಳು ವೈಫಲ್ಯವಾಗಿದ್ದವು ಎಂದು ಅಮಿತಾಭ್‌ ಹೇಳಿಕೊಂಡಿದ್ದರು. ಆಗ ಕೆಲವು ಅಂಗಾಂಗಗಳು ಕೆಲಸ

ಶೂಟಿಂಗ್‌ ವೇಳೆ ಬಿದ್ದು ಗಾಯಗೊಂಡ ಅಮಿತಾಭ್‌ ಬಚ್ಚನ್‌ Read More »

ಭ್ರಷ್ಟಾಚಾರ ಆರೋಪಿ ಶಾಸಕ ವಿರೂಪಾಕ್ಷಪ್ಪ ಜಾಮೀನಿಗೆ ಅರ್ಜಿ

ಬೆಂಗಳೂರು : ಲಂಚ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಶಾಸಕರ ಪುತ್ರ ಪ್ರಶಾಂತ್ ಮಾಡಾಳ್‌ 40 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಶಾಸಕರು ನಾಪತ್ತೆಯಾಗಿದ್ದಾರೆ. ಲೋಕಾಯುಕ್ತ ಪೊಲೀಸರು ಸೋಮವಾರ ವಿಚಾರಣೆಗೆ ಬರುವಂತೆ ಮಾಡಾಳ್ ವಿರೂಪಾಕ್ಷಪ್ಪಗೆ ನೋಟಿಸ್ ನೀಡಿದ್ದಾರೆ.ಸೋಮವಾರ ವಕೀಲರ ಮೂಲಕ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್‌ಗೆ

ಭ್ರಷ್ಟಾಚಾರ ಆರೋಪಿ ಶಾಸಕ ವಿರೂಪಾಕ್ಷಪ್ಪ ಜಾಮೀನಿಗೆ ಅರ್ಜಿ Read More »

ರಾಹುಲ್‌ ಗಾಂಧಿಯನ್ನು ಮತ್ತೆ ಟೀಕಿಸಿದ ನಳಿನ್

ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ಸನ್ನು ಟೀಕಿಸುವ ಭರದಲ್ಲಿ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕೊರೊನಾ ಲಸಿಕೆ ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂದು ವಿಪಕ್ಷ ನಾಯಕರು ಹೇಳಿಕೆ ನೀಡಿದ್ದರು. ಬಳಿಕ ಅವರೇ ರಹಸ್ಯವಾಗಿ ಹೋಗಿ ತೆಗೆದುಕೊಂಡರು ಎಂದು ನಳಿನ್‌ ಕುಮಾರ್ ಕಟೀಲ್ ಟಾಂಗ್ ಕೊಟ್ಟಿದ್ದಾರೆ.ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಡಿ, ಹಾಕಿಸಿಕೊಂಡರೆ ಮಕ್ಕಳಾಗುವುದಿಲ್ಲ ಎಂದು ಜನರಿಗೆ ಹೇಳಿದರು. ಅದು ಬಂಜೆತನಕ್ಕೆ ಕಾರಣವಾಗುತ್ತದೆ ಎಂದು ಪ್ರಚಾರ ಮಾಡಿದರು. ಆದರೆ ಅವರೇ ಅದನ್ನು

ರಾಹುಲ್‌ ಗಾಂಧಿಯನ್ನು ಮತ್ತೆ ಟೀಕಿಸಿದ ನಳಿನ್ Read More »

ಪುತ್ತೂರು ತಹಸೀಲ್ದಾರ್ ಜೆ. ಶಿವಶಂಕರ್ ಅಧಿಕಾರ ಸ್ವೀಕಾರ | ಶಾಸಕ ಸಂಜೀವ ಮಠಂದೂರು ಭೇಟಿಯಾದ ತಹಸೀಲ್ದಾರ್

ಪುತ್ತೂರು: ನಿಸರ್ಗಪ್ರಿಯ ಅವರ ವರ್ಗಾವಣೆ ಬಳಿಕ ತೆರವಾಗಿದ್ದ ಪುತ್ತೂರು ತಹಸೀಲ್ದಾರ್ ಹುದ್ದೆಗೆ ಭೀಮರಾಯನಗುಡಿ ಎಸ್.ಎಲ್.ಎ.ಒ. ಕಚೇರಿಯ ಕಂದಾಯ ಅಧಿಕಾರಿ ಜೆ. ಶಿವಶಂಕರ್ ಅವರು ಆಗಮಿಸಿದ್ದು, ಅಧಿಕಾರ ಸ್ವೀಕರಿಸಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಖಾಲಿ ಇರುವ ಹುದ್ದೆಗಳಿಗೆ ವರ್ಗಾವಣೆ ನಡೆಸಲಾಗಿದೆ. ಭೀಮರಾಯನಗುಡಿ ಎಸ್.ಎಲ್.ಎ.ಓ. ಕಚೇರಿಯ ತಹಸೀಲ್ದಾರ್ ಗ್ರೇಡ್-2 ಆಗಿದ್ದ ಜೆ. ಶಿವಶಂಕರ್ ಅವರನ್ನು ಪುತ್ತೂರು ಗ್ರೇಡ್-1 ತಹಸೀಲ್ದಾರ್ ಆಗಿ ನಿಯುಕ್ತಿಗೊಳಿಸಿ, ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಸೋಮವಾರ ತಹಸೀಲ್ದಾರ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ

ಪುತ್ತೂರು ತಹಸೀಲ್ದಾರ್ ಜೆ. ಶಿವಶಂಕರ್ ಅಧಿಕಾರ ಸ್ವೀಕಾರ | ಶಾಸಕ ಸಂಜೀವ ಮಠಂದೂರು ಭೇಟಿಯಾದ ತಹಸೀಲ್ದಾರ್ Read More »

ಹೆಲ್ಮೆಟ್ ಹಾಕಿದ್ದರೂ ತಲೆಗೇ ಬಲವಾದ ಪೆಟ್ಟು ಬಿದ್ದು ಮೃತ್ಯು | ಪೊಲೀಸ್ ಜೀಪ್ ಡಿಕ್ಕಿಯಾಗಿ ಮೃತಪಟ್ಟ ಬೈಕ್ ಸವಾರ ಲಕ್ಷ್ಮಣ್ ನಾಯ್ಕ್ ಅಂತಿಮ ದರ್ಶನ

ಪುತ್ತೂರು: ಎನ್.ಐ.ಎ. ತಂಡಕ್ಕೆ ಬೆಂಗಾವಲು ವಾಹನವಾಗಿ ಸಾಗುತ್ತಿದ್ದ ಪೊಲೀಸ್ ಜೀಪ್ ಡಿಕ್ಕಿಯಾಗಿ ಮೃತಪಟ್ಟ ಬೈಕ್ ಸವಾರ, ಆರ್ಲಪದವಿನ ಪಾಣಾಜೆ ಸಿಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್ ನಾಯ್ಕ್ (48) ಅವರ ಮೃತದೇಹದ ಅಂತಿಮ ದರ್ಶನ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ನಡೆಯಿತು. ಬಳಿಕ ಸ್ವಗೃಹ ಕೋಟೆಯಲ್ಲಿ ಅಂತಿಮ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಸೋಮವಾರ ಬೆಳಿಗ್ಗೆ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಆರ್ಲಪದವಿಗೆ ತರಲಾಯಿತು. ಪಾಣಾಜೆ, ನಿಡ್ಪಳ್ಳಿ, ಬೆಟ್ಟಂಪಾಡಿ ಗ್ರಾಮದ ನೂರಾರು

ಹೆಲ್ಮೆಟ್ ಹಾಕಿದ್ದರೂ ತಲೆಗೇ ಬಲವಾದ ಪೆಟ್ಟು ಬಿದ್ದು ಮೃತ್ಯು | ಪೊಲೀಸ್ ಜೀಪ್ ಡಿಕ್ಕಿಯಾಗಿ ಮೃತಪಟ್ಟ ಬೈಕ್ ಸವಾರ ಲಕ್ಷ್ಮಣ್ ನಾಯ್ಕ್ ಅಂತಿಮ ದರ್ಶನ Read More »

error: Content is protected !!
Scroll to Top