ಕರಾವಳಿಯ ತಾಪಮಾನ ಏರಿಕೆಗೆ ಬಿಸಿಗಾಳಿ ಕಾರಣ

ಅರಬ್ಬೀ ಸಮುದ್ರದ ಆಂಟಿಸೈಕ್ಲೋನ್‌ನಿಂದ ನಾಲ್ಕು ದಿನ ಬೀಸಿದ ಬಿಸಿಗಾಳಿ ಮಂಗಳೂರು : ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾದ ಆಂಟಿಸೈಕ್ಲೋನ್‌ (Anticyclone) ಪರಿಣಾಮ ಕರಾವಳಿ ಪ್ರದೇಶದಲ್ಲಿ ನಾಲ್ಕು ದಿನ ಬಿಸಿಗಾಳಿ ಬೀಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶುಕ್ರವಾರದಿಂದ ಸೋಮವಾರದವರೆ ಬಿಸಿ ಗಾಳಿ ಬೀಸಿದೆ. ಈ ಬೇಸಿಗೆಯಲ್ಲಿ ಬಿಸಿಗಾಳಿ ಬೀಸಿರುವುದು ಇದೇ ಮೊದಲು. ಬಿಸಿಗಾಳಿಯಿಂದಾಗಿ ಶನಿವಾರ ಕೆಲವೆಡೆ 40 ಡಿಗ್ರಿ ಸೆಲ್ಸಿಯಸ್ ತಾಪಮಾನ​ ದಾಖಲಾಗಿತ್ತು. ಇದು ಸಾಮನ್ಯ ತಾಪಮಾನಕ್ಕಿಂತ 6 […]

ಕರಾವಳಿಯ ತಾಪಮಾನ ಏರಿಕೆಗೆ ಬಿಸಿಗಾಳಿ ಕಾರಣ Read More »

ಹೋಳಿಯ ಬಣ್ಣ ಸೋಕಬಾರದೆಂದು ಮಸೀದಿಗೆ ಟಾರ್ಪಾಲು ಹೊದಿಕೆ

ಇಡೀ ಮಸೀದಿಗೆ ಕಪ್ಪು ಪ್ಲಾಸ್ಟಿಕ್‌ ಕವರ್‌ ಲಖನೌ : ಜನರು ಹೋಳಿ ಆಡುವಾಗ ಬಣ್ಣ ಸೋಕುತ್ತದೆ ಎಂದು ಉತ್ತರ ಪ್ರದೇಶದ ಅಲಿಗಢದ ಮಸೀದಿಯೊಂದಕ್ಕೆ ಟಾರ್ಪಾಲು ಹೊದಿಕೆ ಹಾಕಿ ಮುಚ್ಚಿದ್ದಾರೆ. ಹೋಳಿ ದಿನದಂದು ಪೊಲೀಸ್ ಆಡಳಿತದ ಸೂಚನೆಯ ಮೇರೆಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅಲಿಗಢದ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿರುವ ಅಬ್ದುಲ್ ಕರೀಂ ಮಸೀದಿಯನ್ನು ಹೋಳಿ ಸಮಯದಲ್ಲಿ ಬಣ್ಣಗಳಿಂದ ಕಾಪಾಡಲು ಕಪ್ಪು ಟಾರ್ಪಲಿನ್​ನಿಂದ ಮುಚ್ಚಲಾಗಿದೆ.ವಿಶೇಷವೆಂದರೆ, ಕಳೆದ ಕೆಲವು ವರ್ಷಗಳಿಂದ ಹೋಳಿಯಂದು ಸೂಕ್ಷ್ಮ ಪ್ರದೇಶದಲ್ಲಿರುವ ಮಸೀದಿಯನ್ನು ರಾತ್ರಿಯಿಡೀ ಟಾರ್ಪಾಲಿನ್‌ನಿಂದ

ಹೋಳಿಯ ಬಣ್ಣ ಸೋಕಬಾರದೆಂದು ಮಸೀದಿಗೆ ಟಾರ್ಪಾಲು ಹೊದಿಕೆ Read More »

1.5 ಕೋ. ರೂ. ಆಸ್ತಿಯನ್ನು ಸರಕಾರಕ್ಕೆ ಕೊಟ್ಟ ವೃದ್ಧ

ಮಕ್ಕಳು ನೋಡಿಕೊಂಡಿಲ್ಲ ಎಂಬ ಸಿಟ್ಟಿನಲ್ಲಿ ದಾನ ಲಖನೌ : ಹಿರಿಯ ವ್ಯಕ್ತಿಯೊಬ್ಬರು ವೃದ್ಧಾಪ್ಯದಲ್ಲಿ ತನ್ನನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳ ಮೇಲಿನ ಸಿಟ್ಟಿನಲ್ಲಿ ಎಲ್ಲ 1.5 ಕೋ. ರೂ. ಆಸ್ತಿಯನ್ನು ಉತ್ತರ ಪ್ರದೇಶ ಸರಕಾರಕ್ಕೆ ಉಯಿಲು ಬರೆದುಕೊಟ್ಟಿದ್ದಾರೆ. ನಾಥು ಸಿಂಗ್ ಎಂಬ 85ರ ಹರೆಯದ ವೃದ್ಧ ತಮ್ಮ ಐವರು ಮಕ್ಕಳಲ್ಲಿ ಯಾರೂ ಕೊನೆಯ ಕಾಲದಲ್ಲಿ ನೋಡಿಕೊಳ್ಳಲು ಮುಂದೆ ಬಾರದಿದ್ದಾಗ 1.5 ಕೋಟಿ ಮೌಲ್ಯದ ಆಸ್ತಿಯನ್ನು ಉತ್ತರಪ್ರದೇಶದ ಸರ್ಕಾರಕ್ಕೆ ಬರೆದುಕೊಟ್ಟಿದ್ದಾರೆ. ಅಲ್ಲದೆ ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ.

1.5 ಕೋ. ರೂ. ಆಸ್ತಿಯನ್ನು ಸರಕಾರಕ್ಕೆ ಕೊಟ್ಟ ವೃದ್ಧ Read More »

ಸಿದ್ದರಾಮಯ್ಯ ಅವಧಿಯಲ್ಲಿ ಟೀ-ಬಿಸ್ಕತ್‌ ಹೆಸರಲ್ಲಿ 200 ಕೋ. ರೂ. ಲೂಟಿ

ದಾಖಲೆ ಸಹಿತ ಬಿಜೆಪಿ ಆರೋಪ ಬೆಂಗಳೂರು : ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೇವಲ ಕಾಫಿ, ತಿಂಡಿ, ಬಿಸ್ಕಿಟ್‌ಗಳ ಹೆಸರಿನಲ್ಲಿ 200 ಕೋಟಿ ರೂ.ಗೂ ಹೆಚ್ಚು ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಬರೀ ಕಾಫಿ, ಬಿಸ್ಕಿಟ್‌ಗೆ 200 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಎನ್.​ಆರ್. ರಮೇಶ್ ಗಂಭೀರ ಆರೋಪ ಮಾಡಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಎನ್.ಆರ್.ರಮೇಶ್ ದಾಖಲೆ ಸಮೇತ ಸಿದ್ದರಾಮಯ್ಯ ವಿರುದ್ಧ 200 ಕೋಟಿ ಹಗರಣದ ನಾಹಿತಿ

ಸಿದ್ದರಾಮಯ್ಯ ಅವಧಿಯಲ್ಲಿ ಟೀ-ಬಿಸ್ಕತ್‌ ಹೆಸರಲ್ಲಿ 200 ಕೋ. ರೂ. ಲೂಟಿ Read More »

ಮಂಗಳೂರು ಕುಕ್ಕರ್‌ ಸ್ಫೋಟದ ಉಗ್ರ ಆಸ್ಪತ್ರೆಯಿಂದ ಬಿಡುಗಡೆ

ಎರಡೂವರೆ ತಿಂಗಳು ಸರಕಾರಿ ಖರ್ಚಿನಲ್ಲಿ ಚಿಕಿತ್ಸೆ ಬೆಂಗಳೂರು : ಮಂಗಳೂರು ಆಟೋರಿಕ್ಷಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಉಗ್ರ ಮೊಹಮ್ಮದ್ ಶಾರಿಕ್ ಸೋಮವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅವನನ್ನು ವಶಕ್ಕೆ ತೆಗೆದುಕೊಂಡಿದೆ.ಕಳೆದ ನ.19 ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಕುಕ್ಕರ್‌ನಲ್ಲಿ ಬಾಂಬಿಟ್ಟುಕೊಂಡು ಸಾಗಿಸುತ್ತಿದ್ದಾಗ ಅದು ಸ್ಫೋಟಿಸಿ ಶಾರಿಕ್‌ ಜತೆ ರಿಕ್ಷಾ ಚಾಲಕ ಪುರುಷೋತ್ತಮ್ ಗಾಯಗೊಂಡಿದ್ದರು. 24 ವರ್ಷದ ತೀರ್ಥಹಳ್ಳಿ ಮೂಲದ ಆರೋಪಿ ಶಾರಿಕ್ ಗಂಭೀರ ಸ್ವರೂಪದ ಗಾಯವಾಗಿತ್ತು. ಮಂಗಳೂರಿನ

ಮಂಗಳೂರು ಕುಕ್ಕರ್‌ ಸ್ಫೋಟದ ಉಗ್ರ ಆಸ್ಪತ್ರೆಯಿಂದ ಬಿಡುಗಡೆ Read More »

ಧಿಂಗ್ ಎಕ್ಸ್‌ಪ್ರೆಸ್ ಖ್ಯಾತಿಯ ಹುಡುಗಿ ಓಡುತ್ತಲೇ ಇದ್ದಾಳೆ

ಹಿಮಾದಾಸ್- ಭಾರತದ ಹೆಮ್ಮೆಯ ಕ್ರೀಡಾಪಟು ನಾನು ನಿಮಗೆಲ್ಲ ಇಂದು ಒಬ್ಬ ಅದ್ಭುತವಾದ ಮಹಿಳಾ ಕ್ರೀಡಾಪಟುವನ್ನು ಪರಿಚಯ ಮಾಡಬೇಕು ಮತ್ತು ಜಗತ್ತಿನ ಎಲ್ಲ ಮಹಿಳೆಯರಿಗೆ ಅವರದ್ದೇ ದಿನದ ಶುಭಾಶಯ ಹೇಳಬೇಕು.ಮೀಟ್ ದಿಸ್ ಗ್ರೇಟ್ ಅಥ್ಲೆಟ್!ಮೊದಲ ಬಾರಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಓಡುವಾಗ ಅವಳ ಬಳಿ ಟ್ರಾಕ್ ಶೂ ಇರಲಿಲ್ಲ. ಅವಳ ಅಪ್ಪ ಪೇಟೆಗೆ ಹೋಗಿ 1,200 ರೂ. ಬೆಲೆಯ ಸ್ಪೈಕ್ ಇರುವ ಸಾಮಾನ್ಯ ಶೂ ತಂದುಕೊಟ್ಟಿದ್ದರು ಮತ್ತು ನನ್ನ ಹತ್ತಿರ ಇರೋದು ಇಷ್ಟೇ ದುಡ್ಡು ಎಂದು ಮಗಳಿಗೆ ಹೇಳಿದ್ದರು.ಆಗ ಅವಳು

ಧಿಂಗ್ ಎಕ್ಸ್‌ಪ್ರೆಸ್ ಖ್ಯಾತಿಯ ಹುಡುಗಿ ಓಡುತ್ತಲೇ ಇದ್ದಾಳೆ Read More »

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಅಭಿಯಾನ

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಅಭಿಯಾನ ಕಾರ್ಯಕ್ರಮವು ನಡೆಯಿತು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ. ರವೀಂದ್ರ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ  ಬನ್ನೂರು ಗ್ರಾಮ ಒನ್ ಕೇಂದ್ರದ ಅಶೋಕ್ ಮಾತನಾಡಿ,  ಆಯುಷ್ಮಾನ್ ಕಾರ್ಡ್ ಮಾಡುವ ವಿಧಾನ, ಅದರಿಂದಾಗುವ ಉಪಯೋಗಗಳೇನು ಎಂಬುದನ್ನು ವಿವರಿಸಿದ್ದಾರೆ. ಜೊತೆಗೆ ಬಡವರಿಗೆ ಆಧಾರ ಸ್ಥಂಭದಂತಿರುವ ಈ ಆಯುಷ್ಮಾನ್ ಭಾರತ್ ನ ಪ್ರಯೋಜನವನ್ನು ಪ್ರತಿಯೊಬ್ಬರೂ

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಅಭಿಯಾನ Read More »

ಅನಂತಾಡಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆಗೆ ಭಂಡಾರ ಆಗಮನ | ಮಂಗಳವಾರ ಮಧ್ಯಾಹ್ನ ಇತಿಹಾಸ ಪ್ರಸಿದ್ಧ ಮೆಚ್ಚಿಜಾತ್ರೆ

ಪುತ್ತೂರು: ಇತಿಹಾಸ ಪ್ರಸಿದ್ಧ ಅನಂತಾಡಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆಯ‌ ಹಿಂದಿನ‌ ದಿನವಾದ ಸೋಮವಾರ ರಾತ್ರಿ ದೈವಗಳ ಭಂಡಾರ ಆಗಮನವಾಯಿತು. ದೊಡ್ಡಮನೆಯಿಂದ ಸಂಪ್ರದಾಯದಂತೆ ಭಂಡಾರ ಹೊರಟು, ಚಿತ್ತರಿಗೆ ಬೂಡಿಗೆ ದೈವಗಳ ಭಂಡಾರ ಆಗಮನವಾಯಿತು. ಚಿತ್ತರಿಗೆ ಬೂಡಿನಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಪೂಜೆ ನೆರವೇರಿತು. ನಂತರ ದೈವಗಳ ಭಂಡಾರ ಬಂಟ್ರಿಂಜ ಮಾಡಕ್ಕೆ ತೆರಳಿತು. ಮಂಗಳವಾರ ಮಧ್ಯಾಹ್ನ ಶ್ರೀ ಉಳ್ಳಾಲ್ತಿ ದೈವದ ಮೆಚ್ಚಿ ಜಾತ್ರೆ ನಡೆಯಲಿದೆ.

ಅನಂತಾಡಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆಗೆ ಭಂಡಾರ ಆಗಮನ | ಮಂಗಳವಾರ ಮಧ್ಯಾಹ್ನ ಇತಿಹಾಸ ಪ್ರಸಿದ್ಧ ಮೆಚ್ಚಿಜಾತ್ರೆ Read More »

ಪಾಕಿಸ್ತಾನದ ಬಲೂಚಿಸ್ಥಾನ್‌ ಪ್ರಾಂತ್ಯದಲ್ಲಿ ಉಗ್ರರ ಆತ್ಮಾಹುತಿ ಬಾಂಬ್ ದಾಳಿ

9 ಭದ್ರತಾ ಅಧಿಕಾರಿಗಳ ದುರ್ಮರಣ ಪಾಕಿಸ್ತಾನ : ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಎರಡನೇ ಮಾರಣಾಂತಿಕ ದಾಳಿ ನಡೆದಿದ್ದು, 9 ಮಂದಿ ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. 13 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಿಂದ ಭದ್ರತಾ ಪಡೆ ಅಧಿಕಾರಿಗಳು ವಾಪಸ್ ತೆರಳುವ ವೇಳೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಕೃತ್ಯದ ಹೊಣೆಯನ್ನು ಯಾವುದೇ

ಪಾಕಿಸ್ತಾನದ ಬಲೂಚಿಸ್ಥಾನ್‌ ಪ್ರಾಂತ್ಯದಲ್ಲಿ ಉಗ್ರರ ಆತ್ಮಾಹುತಿ ಬಾಂಬ್ ದಾಳಿ Read More »

ಕುಕ್ಕರ್ ಬಾಂಬ್‍ ಸ್ಪೋಟ ಸಂತ್ರಸ್ತ | ಆಟೋ ರಿಕ್ಷಾ ಹಸ್ತಾಂತರ

ಪುತ್ತೂರು : ಮಂಗಳೂರಿನ ಕಂಕನಾಡಿ ಗರೋಡಿ ಬಳಿ ನ.19 ರಂದು ಆಟೋ ರಿಕ್ಷಾದಲ್ಲಿ ಬಾಂಬ್ ಸ್ಟೋಟ ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಗುಣಮುಖರಾದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಯವರಿಗೆ ನೂತನ ಆಟೋ ರಿಕ್ಷಾ ಮತ್ತು ಬಿಜೆಪಿ ವತಿಯಿಂದ ಲಕ್ಷ ರೂ. ಚೆಕ್ ಹಸ್ತಾಂತರಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‍ ಕುಮಾರ್‍ ಕಟೀಲ್ ಆಟೋರಿಕ್ಷಾ ಹಸ್ತಾಂತರಿಸಿ ಮಾತನಾಡಿ, ಬಾಂಬ್‍ ಸ್ಟೋಟದ ಮೂಲಕ ಭಾರತ ದೇಶವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಹುನ್ನಾರ ಬಯಲಾಗಿದ್ದು, ಎನ್‍ ಐಎ ಅಧಿಕಾರಿಗಳೇ ಬಹಿರಂಗಪಡಿಸಿದ್ದರು. ಕೃತ್ಯದ ಕುರಿತು

ಕುಕ್ಕರ್ ಬಾಂಬ್‍ ಸ್ಪೋಟ ಸಂತ್ರಸ್ತ | ಆಟೋ ರಿಕ್ಷಾ ಹಸ್ತಾಂತರ Read More »

error: Content is protected !!
Scroll to Top