ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ವಂಶಸ್ಥೆ ಮಂಜುಶ್ರೀ ಕೆದಂಬಾಡಿ ಪಿಯುಸಿಯಲ್ಲಿ 591 ಅಂಕದೊಂದಿಗೆ ಜಿಲ್ಲೆಗೆ ಪ್ರಥಮ
ಸುಳ್ಯ: 2022-23ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ವಂಶಸ್ಥೆ ಮಂಜುಶ್ರೀ ಕೆದಂಬಾಡಿ 591 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮಂಜುಶ್ರೀ ಕೆದಂಬಾಡಿ ಸುಳ್ಯದ ಉಬೇರಡ್ಕದ ತೀರ್ಥರಾಮ ಕೆದಂಬಾಡಿ ಹಾಗೂ ಸಂಧ್ಯಾ ಕೆದಂಬಾಡಿ ದಂಪತಿ ಪುತ್ರಿ. ಕೆದಂಬಾಡಿ ರಾಮಯ್ಯ ಗೌಡರ ಐದನೇ ತಲೆಮಾರಿನ ಮಂಜುಶ್ರೀ ಆಗಿದ್ದು, ರಾಮಯ್ಯ ಗೌಡರು ಬ್ರಿಟಿಷರ ವಿರುದ್ಧ ನಾನಾ ತಂತ್ರಗಾರಿಕೆಯಿಂದ ಹೋರಾಡಿದ್ದರು. ಮಂಜುಶ್ರೀ ಸುಳ್ಯದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ […]










