ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು : ಮಿಥುನ್​ ರೈ ವಿವಾದಾತ್ಮಕ ಹೇಳಿಕೆ

ಮಂಗಳೂರು : ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಟಿಕೆಟ್​ ಆಕಾಂಕ್ಷಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ ಮಿಥುನ್ ರೈ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುತ್ತಿಗೆಯಲ್ಲಿ ನಡೆದ ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮದಲ್ಲಿ ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ತಾಣಗಳಲ್ಲಿ ಮಿಥುನ್ ರೈ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ. ನಾನು ಸೌಹಾರ್ದಯುತ ಹೇಳಿಕೆ ನೀಡಿದ್ದೇನೆಕಾಂಗ್ರೆಸ್ ನಾಯಕ ಮಿಥುನ್​ ರೈ ತಮ್ಮ […]

ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು : ಮಿಥುನ್​ ರೈ ವಿವಾದಾತ್ಮಕ ಹೇಳಿಕೆ Read More »

ಮಾ.11 : ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಕಾವುನಲ್ಲಿ ಸ್ವಾಗತ | ಪುತ್ತೂರು ವೆಂಕಟ್ರಮಣ ದೇವಸ್ಥಾನದ ಬಳಿ ಸಮಾವೇಶ |

ಪುತ್ತೂರು: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಪುತ್ತೂರು ವಿಧಾನ ಸಭಾಕ್ಷೇತ್ರಕ್ಕೆ ಮಾ.11 ರಂದು ಸಾಯಂಕಾಲ 5 ಗಂಟೆಗೆ ಕಾವುನಲ್ಲಿ ಸ್ವಾಗತಿಸಿ, 5.30ಕ್ಕೆ ಪುತ್ತೂರು ವೆಂಕಟ್ರಮಣ ದೇವಸ್ಥಾನ ಸಮೀಪದಲ್ಲಿ ಸಮಾವೇಶ ನಡೆಯಲಿದೆ. ಚುನಾವಣೆಯ ದಿಕ್ಸೂಚಿಯಾಗಿ ಈ ಸಮಾವೇಶ ನಡೆಯಲಿದೆ ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ ಹೇಳಿದರು. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಸಭಾ ಚುನಾವಣೆಯ ದೃಷ್ಠಿಕೋನದಲ್ಲಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಿದೆ. ನಾಲ್ಕು ತಂಡಗಳಾಗಿ ರಾಜ್ಯದ 224

ಮಾ.11 : ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಕಾವುನಲ್ಲಿ ಸ್ವಾಗತ | ಪುತ್ತೂರು ವೆಂಕಟ್ರಮಣ ದೇವಸ್ಥಾನದ ಬಳಿ ಸಮಾವೇಶ | Read More »

ಅಮೃತ ನಗರೋತ್ಥಾನ ಯೋಜನೆಯಡಿ ರಸ್ತೆ ಅಭಿವೃದ್ಧಿ, ನೂತನ ಸೇತುವೆ, ದಾರಿದೀಪ ಅಳವಡಿಕೆಗೆ ಶಂಕುಸ್ಥಾಪನೆ | ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಅಮೃತ ನಗರೋತ್ಥಾನ ಯೋಜನೆಯಡಿ 4.7 ಕೋಟಿ ರೂ. ಹಾಗೂ 3 ಕೋಟಿ ರೂ. ಅನುದಾನದಲ್ಲಿ ಬೆದ್ರಾಳ ಬಳಿ ರಸ್ತೆ ಅಭಿವೃದ್ಧಿ, ಸೇತುವೆ ನಿರ್ಮಾಣ ಹಾಗೂ ರಸ್ತೆ ವಿಭಜಕ್ಕೆ ದಾರಿದೀಪ ಅಳವಡಿಕೆಗೆ ಶಂಕುಸ್ಥಾಪನೆ ಸಮಾರಂಭ ಬುಧವಾರ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಬಳಿ ನಡೆಯಿತು. ಶಾಸಕ ಸಂಜೀವ ಮಠಂದೂರು ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ಈಗಾಗಲೇ ನಗರರಸಭೆ ಜಲಸಿರಿ ಯೋಜನೆಯಡಿ 117 ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದೆ. 7.7 ಕೋಟಿ ರೂ. ವೆಚ್ಚದ ಕಾಮಗಾರಿಗೆ ಇಂದು ಶಿಲಾನ್ಯಾಸ ನೆರವೇರಿದೆ.

ಅಮೃತ ನಗರೋತ್ಥಾನ ಯೋಜನೆಯಡಿ ರಸ್ತೆ ಅಭಿವೃದ್ಧಿ, ನೂತನ ಸೇತುವೆ, ದಾರಿದೀಪ ಅಳವಡಿಕೆಗೆ ಶಂಕುಸ್ಥಾಪನೆ | ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಸಂಜೀವ ಮಠಂದೂರು Read More »

ದತ್ತಾತ್ರೇಯ ಬಾಬಾ ಬುಡನ್‌ ದರ್ಗಾದಲ್ಲಿ ಇಂದಿನಿಂದ ಉರುಸ್

ಆಚರಣೆಯಿಂದ ದೂರ ಉಳಿದ ಮುಸ್ಲಿಂ ಮುಖಂಡರು ಚಿಕ್ಕಮಗಳೂರು : ವಿವಾದಿತ ಇನಾಂ‌‌ ದತ್ತಾತ್ರೇಯ ಬಾಬಾ ಬುಡನ್‌ ದರ್ಗಾದಲ್ಲಿ ಇಂದಿನಿಂದ ಉರುಸ್ ಆರಂಭ. ಮೂರು ದಿನಗಳ ಕಾಲ ನಡೆಯಲಿರುವ ಉರುಸ್ ಆಚರಣೆಗೆ ಇದೀಗ ರಾಜ್ಯ ಸರ್ಕಾರ ರಚನೆ ಮಾಡಿದ್ದ ದತ್ತಪೀಠ ವ್ಯವಸ್ಥಾಪನ ಮಂಡಳಿ ನೇತೃತ್ವದಲ್ಲಿ ತೀವ್ರ ವಿರೋಧ ಕೇಳಿಬಂದಿದೆ. ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುವ ಉರುಸ್ ಆಚರಣೆಯಿಂದ ಮುಸ್ಲಿಂ ಸಮುದಾಯ ದೂರ ಉಳಿಯಲು ನಿರ್ಧರಿಸಿದ್ದಾರೆ. ಇನ್ನು ಜಿಲ್ಲಾಡಳಿತ ಕರೆದಿದ್ದ ಸಭೆಗೆ ಮುಸ್ಲಿಂ ಸಮುದಾಯದ ಮುಖಂಡರು ಗೈರಾಗಿದ್ದು, ರಾಜ್ಯ ಸರ್ಕಾರಕ್ಕೆ ವಿವಿಧ

ದತ್ತಾತ್ರೇಯ ಬಾಬಾ ಬುಡನ್‌ ದರ್ಗಾದಲ್ಲಿ ಇಂದಿನಿಂದ ಉರುಸ್ Read More »

ಕೋವಿಡ್‌ ನಂತರ ಹೃದಯ ಸ್ತಂಭನ ಶೇ.15 ಏರಿಕೆ

ಅಧ್ಯಯನ ವರದಿಯಲ್ಲಿದೆ ಕಳವಳಕಾರಿ ಮಾಹಿತಿ ದೆಹಲಿ : ಕಳೆದ ಕೆಲವು ತಿಂಗಳಿಂದ ಜನರು ಹೃದಯಾಘಾತದಿಂದ ಮೃತಪಟ್ಟ ಹಲವು ಪ್ರಕರಣಗಳು ವರದಿಯಾಗಿವೆ. ಆರೋಗ್ಯವಂತರಾಗಿರುವವರು, ಮೈದಾನದಲ್ಲಿ ಆಡುತ್ತಿರುವವರು, ತೀರಾ ಚಿಕ್ಕವಯಸ್ಸಿನವರು ಹೃದಯಾಘಾತದಿಂದ ಸಾವಿಗೀಡಾಗುತ್ತಿರುವ ಸುದ್ದಿಗಳು ಜನರನ್ನು ಕಳವಳಕ್ಕೀಡು ಮಾಡಿವೆ. ಕೋವಿಡ್‌ ಸೋಂಕಿಗೆ ಒಳಗಾಗಿ, ಚೇತರಿಸಿಕೊಂಡು ಆರೋಗ್ಯವಂತರಾಗಿದ್ದ ವ್ಯಕ್ತಿಗಳಲ್ಲಿ ಹೃದಯಸ್ತಂಭನದಿಂದ ಮರಣ ಸಂಭವಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಈ ರೀತಿ ಸಾವಿಗೀಡಾದವರಲ್ಲಿ ಶೇ.50ರಷ್ಟು ಮಂದಿ ಧೂಮಪಾನದ ಚಟ ಹೊಂದಿರಲಿಲ್ಲ. ಬಹುತೇಕ ಮಂದಿಗೆ ಹೃದಯ ಸಮಸ್ಯೆಯ ಕೌಟುಂಬಿಕ ಹಿನ್ನೆಲೆ ಇರಲಿಲ್ಲ

ಕೋವಿಡ್‌ ನಂತರ ಹೃದಯ ಸ್ತಂಭನ ಶೇ.15 ಏರಿಕೆ Read More »

ಮಾ.9 : ಕುದ್ಮಾರು ಅನ್ಯಾಡಿ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ

ಕುದ್ಮಾರು : ಕಡಬ ತಾಲೂಕಿನ ಕುದ್ಮಾರು ಗ್ರಾಮದ ಅನ್ಯಾಡಿ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ ಮಾ.9 ಗುರುವಾರ ಕುದ್ಮಾರು ದೈಪಿಲ ದ್ವಾರದ ಬಳಿ ಕಟ್ದತ್ತಾರು ಕಟ್ಟೆಯಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನೇಮೋತ್ಸವದ ಅಂಗವಾಗಿ ಬೆಳಿಗ್ಗೆ 8 ಕ್ಕೆ ಗಣಪತಿ ಹೋಮ, ಸಂಜೆ 6 ಕ್ಕೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ದೈವಸ್ಥಾನ ಅನ್ಯಾಡಿಯ ಗ್ರಾಮ ಚಾವಡಿಯಿಂದ ದೈವದ ಭಂಡಾರ ತೆಗೆಯುವುದು, 8.30 ಕ್ಕೆ ದೈವಕ್ಕೆ ಎಣ್ಣೆ ಬೂಳ್ಯ ನೀಡುವುದು

ಮಾ.9 : ಕುದ್ಮಾರು ಅನ್ಯಾಡಿ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ Read More »

ಕೊಳದ ತಳದಲ್ಲಿತ್ತು ಕೋಟಿಗಟ್ಟಲೆ ಮೌಲ್ಯದ ಚಿನ್ನದ ಬಿಸ್ಕತ್ತುಗಳು

ಕಳ್ಳ ಸಾಗಣೆದಾರರು ಬಚ್ಚಿಟ್ಟ ಚಿನ್ನ ಕೋಲ್ಕತ: ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಕಲ್ಯಾಣಿ ಬಾರ್ಡರ್‌ ಔಟ್‌ಪೋಸ್ಟ್‌ ಪ್ರದೇಶದಲ್ಲಿರುವ ಕೊಳದಿಂದ 2.57 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ಗಡಿ ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.ಖಚಿತ ಮಾಹಿತಿಯ ಆಧಾರದ ಮೇಲೆ ಚಿನ್ನ ಪತ್ತೆಹಚ್ಚಲು ಬಿಎಸ್‌ಎಫ್ ತಂಡ ಸೋಮವಾರ ಶೋಧ ಕಾರ್ಯಾಚರಣೆ ನಡೆಸಿದೆ. ಈ ಸಂದರ್ಭದಲ್ಲಿ ಕೊಳದ ತಳದಲ್ಲಿ ಬಚ್ಚಿಟ್ಟಿದ್ದ ಚಿನ್ನ ಪತ್ತೆಯಾಗಿದೆ.ಕಳ್ಳ ಸಾಗಣೆದಾರರು ಕೊಳದ ಹೊಂಡದಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದರು. ಕೆಲ ತಿಂಗಳ ಹಿಂದೆ ಪೊಲೀಸರು ಚಿನ್ನ ಕಳ್ಳ ಸಾಗಣೆದಾರನೊಬ್ಬನನ್ನು ಹಿಡಿದಿದ್ದರು.

ಕೊಳದ ತಳದಲ್ಲಿತ್ತು ಕೋಟಿಗಟ್ಟಲೆ ಮೌಲ್ಯದ ಚಿನ್ನದ ಬಿಸ್ಕತ್ತುಗಳು Read More »

ದಿಲ್ಲಿ ಮದ್ಯ ನೀತಿ ಹಗರಣ:ಕಾವಿತಾಗೆ ಸಮನ್ಸ್

ಬಂಧನ ಭೀತಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಪುತ್ರಿ ದೆಹಲಿ : ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಆರೋಪಗಳ ವಿಚಾರಣೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ವಿಧಾನ ಪರಿಷತ್ ಸದಸ್ಯೆ ಕೆ. ಕವಿತಾ ಅವರಿಗೆ ಜಾರಿ ನಿರ್ದೇಶನಾಲಯ ಮಾ.8 ರಂದು ಸಮನ್ಸ್ ಜಾರಿ ಮಾಡಿದೆ. ಭಾರತ್ ರಾಷ್ಟ್ರ ಸಮಿತಿ ಪಕ್ಷದ ಎಂಎಲ್‌ಸಿ 44 ವರ್ಷದ ಕವಿತಾ ಅವರನ್ನು ನಾಳೆ ರಾಷ್ಟ್ರ ರಾಜಧಾನಿ ದೆಹಲಿಯ ಫೆಡರಲ್ ಏಜೆನ್ಸಿಯ ಮುಂದೆ

ದಿಲ್ಲಿ ಮದ್ಯ ನೀತಿ ಹಗರಣ:ಕಾವಿತಾಗೆ ಸಮನ್ಸ್ Read More »

ವಿದೇಶದಲ್ಲಿ ಭಾರತದ ಬಗ್ಗೆ ಹಗುರವಾಗಿ ಮಾತನಾಡಿದ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ಪ್ರಹ್ಲಾದ್‌ ಜೋಶಿ

ಮೈಕ್‌ ಆಫ್‌ ಆರೋಪಕ್ಕೆ ತಿರುಗೇಟು ಹೊಸದಿಲ್ಲಿ : ರಾಹುಲ್‌ ಗಾಂಧಿಗೆ ದೇಶದ ಜನ ಮಾತನಾಡಲು ಎಷ್ಟು ಅವಕಾಶ ಕೊಟ್ಟಿದ್ದಾರೋ ಅಷ್ಟನ್ನು ಲೋಕಸಭೆಯಲ್ಲಿ ಸರಕಾರ ಕೂಡ ಕೊಟ್ಟಿದೆ ಎನ್ನುವ ಮೂಲಕ ವಿದೇಶಗಳಲ್ಲಿ ಭಾರತದ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್‌ ನಾಯಕನಿಗೆ ಬಿಜೆಪಿ ತಿರುಗೇಟು ನೀಡಿದೆ. ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರ ಮೈಕ್ ಆಫ್ ಮಾಡುವ ಮೂಲಕ ಧ್ವನಿಯನ್ನು ದಮನ ಮಾಡಲಾಗ್ತಿದೆ ಎಂದು ರಾಹುಲ್ ಗಾಂಧಿ ಲಂಡನ್‌ನಲ್ಲಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ,

ವಿದೇಶದಲ್ಲಿ ಭಾರತದ ಬಗ್ಗೆ ಹಗುರವಾಗಿ ಮಾತನಾಡಿದ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ಪ್ರಹ್ಲಾದ್‌ ಜೋಶಿ Read More »

ಇಂದು (ಮಾ.8) : ಕಾರ್ಜಾಲು ದೊಂಪದ ಬಲಿ ನೇಮೋತ್ಸವ ಆಮಂತ್ರಣ ಪತ್ರಿಕೆ ವಿತರಣೆ

ಪುತ್ತೂರು: ಕಾರ್ಜಾಲು ಶ್ರೀ ಧೂಮಾವತಿ ದೈವದ ವಾರ್ಷಿಕ ದೊಂಪದ ಬಲಿ ನೇಮೋತ್ಸವ ಮಾ.11 ರಂದು ನಡೆಯಲಿದ್ದು, ಇದರ ಅಂಗವಾಗಿ ಇಂದು ( ಮಾ.8 ) ಪುತ್ತೂರು ನಗರದಲ್ಲಿ ಆಮಂತ್ರಣ ಪತ್ರಿಕೆ ವಿತರಣೆ ನಡೆಯಲಿದೆ. ಸಂಜೆ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿಯಿಂದ ದರ್ಬೆ ವೃತ್ತದ ತನಕ ಆಮಂತ್ರಣ ಪತ್ರ ವಿತರಿಸಲಾಗುವುದು. ಶಾಸಕ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಕಲ್ಲೇಗ ರೂರಲ್ ಡೆವಲಪ್ ಮೆಂಟ್ ಚಾರಿಟೇಬಲ್‍ ಟ್ರಸ್ಟ್‍ನ ಅಧ್ಯಕ್ಷ ಸಂಜೀವ ಕಲ್ಲೇಗ ಚಾಲನೆ ನೀಡಲಿದ್ದಾರೆ ಎಂದು

ಇಂದು (ಮಾ.8) : ಕಾರ್ಜಾಲು ದೊಂಪದ ಬಲಿ ನೇಮೋತ್ಸವ ಆಮಂತ್ರಣ ಪತ್ರಿಕೆ ವಿತರಣೆ Read More »

error: Content is protected !!
Scroll to Top