ಕಮಲ ನಿಧನ

ಪುತ್ತೂರು: ಬೆಟ್ಟಂಪಾಡಿಯ ಕುದುರೆಕುಮೇರು ನಿವಾಸಿ ನಾರಾಯಣ ಆಚಾರ್ಯರ ಪತ್ನಿ ಕಮಲ (70 ವ.) ಅಲ್ಪಕಾಲದ ಅಸೌಖ್ಯದಿಂದ ಮಾ. 9ರಂದು ಸ್ವಗೃಹದಲ್ಲಿ ನಿಧನರಾದರು. ಪತಿ, 2 ಗಂಡು, 3 ಹೆಣ್ಣು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕಮಲ ನಿಧನ Read More »

ಮಾ. 12: ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತುಪೌಳಿಗೆ ಶಿಲಾನ್ಯಾಸ

ಪುತ್ತೂರು: ಕಾರಣಿಕ ಕ್ಷೇತ್ರ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತುಪೌಳಿಗೆ ಮಾ. 12ರಂದು ಬೆಳಿಗ್ಗೆ 10.45ಕ್ಕೆ ಶಿಲಾನ್ಯಾಸ ನೆರವೇರಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆದು, ದೇವಸ್ಥಾನದ ಹೊರ ಸುತ್ತುಪೌಳಿಗೆ ಶಿಲಾನ್ಯಾಸ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಮಾ. 12: ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತುಪೌಳಿಗೆ ಶಿಲಾನ್ಯಾಸ Read More »

ಪುತ್ತೂರಿನಲ್ಲಿ ಮೊದಲ ಬಾರಿಗೆ ಐಎಎಸ್ ಪರೀಕ್ಷಾ ತರಬೇತಿ | ಪ್ರೇರಣಾ ಸಂಸ್ಥೆಯ ವಿನೂತನ ಪ್ರಯತ್ನ

ಪುತ್ತೂರು: ಇದೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಐಎಎಸ್, ಐಪಿಎಸ್ ತರಬೇತಿ ಕಾರ್ಯಾಗಾರವನ್ನು ಪ್ರೇರಣಾ ಸಂಸ್ಥೆ ಹಮ್ಮಿಕೊಂಡಿದೆ. ಪುತ್ತೂರು ಸಹಿತ ಆಸುಪಾಸಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ರಾಜ್ಯ, ರಾಷ್ಟ್ರದ ಪ್ರತಿಷ್ಠಿತ ಸರಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸುವ ಉದ್ದೇಶದಿಂದ ಪ್ರೇರಣಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇದೀಗ ಐಎಎಸ್, ಐಪಿಎಸ್ ಪರೀಕ್ಷೆಗೆ ಪುತ್ತೂರಿನ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಹಿನ್ನೆಲೆಯಲ್ಲಿ ಇದೊಂದು ವಿನೂತನ ಪ್ರಯತ್ನ. ರಾಷ್ಟ್ರದ ಪ್ರತಿಷ್ಠಿತ ಐಎಎಸ್ ತರಬೇತಿ ಸಂಸ್ಥೆಯೊಂದಿಗೆ ಪ್ರೇರಣಾ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದ್ದು, ಪುತ್ತೂರಿನ ಪ್ರೇರಣಾ ಸಂಸ್ಥೆಯಲ್ಲಿ

ಪುತ್ತೂರಿನಲ್ಲಿ ಮೊದಲ ಬಾರಿಗೆ ಐಎಎಸ್ ಪರೀಕ್ಷಾ ತರಬೇತಿ | ಪ್ರೇರಣಾ ಸಂಸ್ಥೆಯ ವಿನೂತನ ಪ್ರಯತ್ನ Read More »

ಮಾ.15 : ಲಯನ್ಸ್ ಸೇವಾ ಮಂದಿರದಲ್ಲಿ ಕೃತಕ ಹೂಗಳ ಪ್ರದರ್ಶನ ಉದ್ಘಾಟನೆ

ಪುತ್ತೂರು : ರೋಹಿಣಿ ಹೊಲಿಗೆ ಅರ್ಟ್ಸ್ ಆಂಡ್ ಕ್ರಾಫ್ಟ್ ತರಬೇತಿ ಕೇಂದ್ರ ಹಾಗೂ ಲಯನ್ಸ್ ಕ್ಲಬ್ ಜಂಟಿ ಆಶ್ರಯದಲ್ಲಿ ಕೃತಕ ಹೂಗಳ ಪ್ರದರ್ಶನ ಮಾ.15 ರಿಂದ 17 ರ ತನಕ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ಶಾಸಕ ಸಂಜೀವ ಮಠಂದೂರು ಪ್ರದರ್ಶನವನ್ನು ಉದ್ಘಾಟಿಸಲಿದ್ದು, ಲಯನ್ಸ್ ಕ್ಲಬ್ ಅಧ್ಯಕ್ಷ ಕೇಶವ ನಾಯ್ಕ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್‍.ಆರ್‍., ಶಿಶು ಅಭಿವೃದ್ಧಿ

ಮಾ.15 : ಲಯನ್ಸ್ ಸೇವಾ ಮಂದಿರದಲ್ಲಿ ಕೃತಕ ಹೂಗಳ ಪ್ರದರ್ಶನ ಉದ್ಘಾಟನೆ Read More »

ಮಂಜಕ್ಕ ನಿಧನ

ಪುತ್ತೂರು: ಬೆಳಿಯೂರುಕಟ್ಟೆ ಸಾಜ ನಿವಾಸಿ ದಿ. ಮದನ ಪೂಜಾರಿ ಅವರ ಪತ್ನಿ ಮಂಜಕ್ಕ (97 ವ.) ಮಾರ್ಚ್ 9ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು 7 ಗಂಡು ಮಕ್ಕಳನ್ನು, 3 ಹೆಣ್ಣು ಮಕ್ಕಳನ್ನು, ಮೊಮ್ಮಕ್ಕಳನ್ನು, ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.

ಮಂಜಕ್ಕ ನಿಧನ Read More »

ಭಾರತೀಯ ವಾಯುಪಡೆ ಯುದ್ಧ ಘಟಕದ ಮೊದಲ ಗ್ರೂಪ್ ಕ್ಯಾಪ್ಟನ್ ಆಗಿ ಶಾಲಿಜಾ ಧಾಮಿ

ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಿಸಿದ ಮೊದಲ ಭಾರತೀಯ ಮಹಿಳಾ ಪೈಲಟ್ ದೆಹಲಿ: ಕ್ಯಾಪ್ಟನ್ ಶಾಲಿಜಾ ಧಾಮಿ ಅವರನ್ನು ಭಾರತೀಯ ವಾಯುಪಡೆಯು ಗ್ರೂಪ್ ಕ್ಯಾಪ್ಟನ್ ಆಗಿ ಪಶ್ಚಿಮ ವಲಯದಲ್ಲಿನ ಮುಂಚೂಣಿ ಯುದ್ಧ ಘಟಕದ ಕಮಾಂಡರ್‌ ಆಗಿ ನೇಮಕ ಮಾಡಲಾಗಿದೆ. ಆ ಮೂಲಕ ಐಎಎಫ್‌ನ ಯುದ್ಧ ಘಟಕವನ್ನು ಮುನ್ನಡೆಸಲಿರುವ ಮೊದಲ ಮಹಿಳೆ ಎನ್ನುವ ಹಿರಿಮೆಗೆ ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು ಪಾತ್ರರಾಗಿದ್ದಾರೆ. 2003ರಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿ ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು ಐಎಎಫ್ ಸೇರ್ಪಡೆಯಾಗಿದ್ದರು. ಇವರು

ಭಾರತೀಯ ವಾಯುಪಡೆ ಯುದ್ಧ ಘಟಕದ ಮೊದಲ ಗ್ರೂಪ್ ಕ್ಯಾಪ್ಟನ್ ಆಗಿ ಶಾಲಿಜಾ ಧಾಮಿ Read More »

ಕಂಪೆನಿಗಳಲ್ಲಿ ಉದ್ಯೋಗಾವಕಾಶ

ಪುತ್ತೂರು: ರಾಜ್ಯದ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗಾವಕಾಶ ಲಭ್ಯವಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಿವಿಲ್ ಡಿಪ್ಲೋಮಾ ಅಥವಾ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, 2 ಹುದ್ದೆಗಳು ಇವೆ. ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಹಿಳಾ ಅಭ್ಯರ್ಥಿಯಿಂದ ರಿಸೆಪ್ಷನಿಸ್ಟ್ ಹುದ್ದೆಗೂ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಸಕ್ತರು ಸಂಪರ್ಕಿಸಿ : ಪ್ರೇರಣಾ, ಮೊದಲ ಮಹಡಿ, ಪ್ರಭು ಬಿಲ್ಡಿಂಗ್, ಕೆನರಾ ಬಿಲ್ಡಿಂಗ್ ಸಮೀಪ, ಅರುಣಾ ಥಿಯೇಟರ್ ಎದುರು, ಏಳ್ಮುಡಿ – ಪುತ್ತೂರು 8904877721, 7204977721.

ಕಂಪೆನಿಗಳಲ್ಲಿ ಉದ್ಯೋಗಾವಕಾಶ Read More »

ಮಾಂಸಕ್ಕಾಗಿ ವಧಿಸಲು ತಂದವನನ್ನೇ ಕೊಂಬಿನಿಂದ ತಿವಿದು ಕೊಂದ ಕೋಣ

ಪೇಟೆಯಲ್ಲಿ ದಾಂಧಲೆ ಎಬ್ಬಿಸಿದ ಕೋಣನಿಂದ ಹಲವರಿಗೆ ಗಾಯ ಕಾಸರಗೋಡು : ವಧಿಸಲು ಒಯ್ಯುತ್ತಿದ್ದವನನ್ನು ಕೋಣ ಕೊಂಬಿನಿಂದ ತಿವಿದು ಕೊಂದಿರುವ ಘಟನೆಯೊಂದು ಕಾಸರಗೋಡು ಸಮೀಪದ ಮೊಗ್ರಾಲ್‌ ಪುತ್ತೂರು ಎಂಬಲ್ಲಿ ಸಂಭವಿಸಿದೆ. ಈ ಘಟನೆಯ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಅಗಿದೆ.ಲಾರಿಯಿಂದ ಇಳಿಸುತ್ತಿರುವಾಗ ರೊಚ್ಚಿಗೆದ್ದ ಕೋಣ ಹಗ್ಗ ಕಡಿದುಕೊಂಡು ಯುವಕನನ್ನು ಒಂದಷ್ಟು ದೂರ ಎಳೆದುಕೊಂಡು ಹೋಗಿ ಕೊಂಬಿನಿಂದ ತಿವಿದಿದೆ. ಗಂಭೀರವಾಗಿ ಗಾಯಗೊಂಡ ಯುವಕ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ. ಮೃತ ಯುವಕನನ್ನು ಮೂಲತಃ ಕರ್ನಾಟಕದ ಚಿತ್ರದುರ್ಗದ ಸಾದಿಕ್‌ (22) ಎಂದು ಗುರುತಿಸಲಾಗಿದೆ.

ಮಾಂಸಕ್ಕಾಗಿ ವಧಿಸಲು ತಂದವನನ್ನೇ ಕೊಂಬಿನಿಂದ ತಿವಿದು ಕೊಂದ ಕೋಣ Read More »

ಮರುಮದುವೆಯಾದ ಮುಸ್ಲಿಂ ದಂಪತಿ ವಿರುದ್ಧ ಫತ್ವಾ

ಕೇರಳದಲ್ಲೊಂದು ವಿಚಿತ್ರ ಪ್ರಕರಣ ತಿರುವನಂತಪುರಂ : ಕೇರಳದ ವಕೀಲರೊಬ್ಬರು ತನ್ನ ಪತ್ನಿಯನ್ನೇ ಮರು ವಿವಾಹವಾಗಿದ್ದಾರೆ. ಆದರೆ ಮುಸ್ಲಿಂ ಧರ್ಮ ಕ್ಕೆ ಸೇರಿದ ವಕೀಲರ ಈ ನಡೆ ಕಟ್ಟರ್‌ ಧರ್ಮಗುರುಗಳ ಕೆಂಗಣ್ಣಿಗೆ ಗುರಿಯಾಗಿದೆ. ಅವರೀಗ ವಕೀಲನಿಗೆ ಫತ್ವಾ ಹೊರಡಿಸಿದ್ದಾರೆ.ವಿಶೇಷ ವಿವಾಹ ಕಾಯ್ದೆಯಡಿ ಸಿನೆಮಾ ನಟರೂ ಆಗಿರುವ ಸಿ. ಶುಕುರ್ ಎಂಬವರು ತನ್ನ ಪತ್ನಿಯನ್ನೇ ಮರುವಿವಾಹವಾಗಿದ್ದರು. ಈಗ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಹೀಗಾಗಿ ಪೊಲೀಸರು ಅವರಿಗೆ ಭದ್ರತೆ ಒದಗಿಸಿದ್ದಾರೆ. ಶುಕುರ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೆಲವು ಸಂಘಟನೆಗಳಿಂದ

ಮರುಮದುವೆಯಾದ ಮುಸ್ಲಿಂ ದಂಪತಿ ವಿರುದ್ಧ ಫತ್ವಾ Read More »

ನಾಳೆ (ಮಾ.11) : ಬಲ್ನಾಡು ಉಜ್ರುಪಾದೆ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ನೇಮೋತ್ಸವ

ಪುತ್ತೂರು: ಬಲ್ನಾಡು ಗ್ರಾಮದ ಉಜ್ರುಪಾದೆ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಮಾ.11 ರಂದು ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಮೊಕ್ತೇಸರ ಕೆ. ಬಾಬು ಪೂಜಾರಿ ಬಲ್ನಾಡು ಹೇಳಿದರು. ಬೆಳಿಗ್ಗೆ ಸ್ಥಳ ಶುದ್ಧಿ, ಗಣಹೋಮ, ಕಲಶಾಭಿಷೇಕ, ರಾತ್ರಿ 7ಕ್ಕೆ ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ. ಉಜ್ರುಪಾದೆಯಲ್ಲಿ ಹಲವು ಶತಮಾತನಗಳಿಂದ ಆರಾಧಿಸಿಕೊಂಡು ಬರುತ್ತಿದ್ದ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ 2009 ಜುಲೈ 7,,೮ ರಂದು ನಡೆದಿದೆ. ಆ ಬಳಿಕ ಕ್ಷೇತ್ರದಲ್ಲಿ ಪ್ರತಿ

ನಾಳೆ (ಮಾ.11) : ಬಲ್ನಾಡು ಉಜ್ರುಪಾದೆ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ನೇಮೋತ್ಸವ Read More »

error: Content is protected !!
Scroll to Top