ಸ್ನಾನಕ್ಕೆ ತೆರಳಿದ ಸಹೋದರಿಯರು ಬಳ್ಪ‌ ಹೊಳೆ ಪಾಲು | ಹಂಸಿತಾ, ಅವಂತಿಕಾ ಮೃತದೇಹ ಪತ್ತೆ

ಸುಳ್ಯ: ಬಳ್ಪ ಸಮೀಪದ ಕೇನ್ಯ ಕಣ್ಕಲ್ ಬಳಿಯ ಹೊಳೆಯಲ್ಲಿ ಮುಳುಗಿ ಸಹೋದರಿಯರಿಬ್ಬರು ನೀರು ಪಾಲಾದ ಘಟನೆ ಸೋಮವಾರ ನಡೆದಿದೆ. ಹಂಸಿತಾ ( 15 ) ಮತ್ತು ಅವಂತಿಕಾ ( 11 ) ಇಬ್ಬರ ಮೃತದೇಹವೂ ಪತ್ತೆಯಾಗಿದೆ. ಸೋಮವಾರ ಸಂಜೆ ದುರ್ಘಟನೆ ಸಂಭವಿಸಿದೆ. ಮೂಲತಃ ಕಣ್ಕಲ್ ನವರಾಗಿದ್ದು, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರು ಇವರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಕಾರ್ಯಾಚರಣೆ ಆರಂಭಿಸಿದರು. ರಾತ್ರಿ ವೇಳೆಗೆ ಇಬ್ಬರ ಮೃತದೇಹವೂ ಪತ್ತೆಯಾಗಿದೆ. ಸ್ಥಳೀಯರು […]

ಸ್ನಾನಕ್ಕೆ ತೆರಳಿದ ಸಹೋದರಿಯರು ಬಳ್ಪ‌ ಹೊಳೆ ಪಾಲು | ಹಂಸಿತಾ, ಅವಂತಿಕಾ ಮೃತದೇಹ ಪತ್ತೆ Read More »

ಪ್ರಸಿದ್ಧ ಶತ್ರು ನಿಗ್ರಹ ಕ್ಷೇತ್ರ ಶ್ರೀ ತಲೆಬೈಲು ನರಸಿಂಹ ಕ್ಷೇತ್ರಕ್ಕೆ ದಿವ್ಯಪ್ರಭಾ ಚಿಲ್ತಡ್ಕ ಭೇಟಿ

ಪುತ್ತೂರು: ಶ್ರೀ ತಲೆಬೈಲು ನರಸಿಂಹ ದೇವರ  ಮಠಕ್ಕೆ ಪುತ್ತೂರು ತಾಲೂಕು ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿನ ಅರ್ಚಕರು ಪ್ರಾರ್ಥನೆ ನೆರವೇರಿಸಿ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು

ಪ್ರಸಿದ್ಧ ಶತ್ರು ನಿಗ್ರಹ ಕ್ಷೇತ್ರ ಶ್ರೀ ತಲೆಬೈಲು ನರಸಿಂಹ ಕ್ಷೇತ್ರಕ್ಕೆ ದಿವ್ಯಪ್ರಭಾ ಚಿಲ್ತಡ್ಕ ಭೇಟಿ Read More »

ಪ್ರಸಿದ್ಧ ಶತ್ರು ನಿಗ್ರಹ ಕ್ಷೇತ್ರ ಶ್ರೀ ತಲೆಬೈಲು ನರಸಿಂಹ ಕ್ಷೇತ್ರಕ್ಕೆ ರಾಧಾಕೃಷ್ಣ ಬೋರ್ಕರ್ ಭೇಟಿ

ಪುತ್ತೂರು: ಶ್ರೀ ತಲೆಬೈಲು ನರಸಿಂಹ ದೇವರ  ಮಠಕ್ಕೆ ಪುತ್ತೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಬಿಜೆಪಿ ಪ್ರಶಿಕ್ಷಣ_ಪ್ರಕೋಷ್ಟದ ರಾಧಾಕೃಷ್ಣ ಬೋರ್ಕರ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿನ ಅರ್ಚಕರು ಬಿಜೆಪಿ ಗೆಲುವಿಗೆ ಪ್ರಾರ್ಥನೆ ನೆರವೇರಿಸಿ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು

ಪ್ರಸಿದ್ಧ ಶತ್ರು ನಿಗ್ರಹ ಕ್ಷೇತ್ರ ಶ್ರೀ ತಲೆಬೈಲು ನರಸಿಂಹ ಕ್ಷೇತ್ರಕ್ಕೆ ರಾಧಾಕೃಷ್ಣ ಬೋರ್ಕರ್ ಭೇಟಿ Read More »

ಆಶಾ ತಿಮ್ಮಪ್ಪ ಪರವಾಗಿ ಉಪ್ಪಿನಂಗಡಿಯಲ್ಲಿ ಮತಯಾಚಿಸಿದ ಕೋಟಾ, ಕುಂಟಾರು ರವೀಶ ತಂತ್ರಿ

ಪುತ್ತೂರು: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಪರವಾಗಿ ಉಪ್ಪಿನಂಗಡಿಯಲ್ಲಿ ಬೃಹತ್ ರೋಡ್ ಶೋ ಸೋಮವಾರ ಬೆಳಿಗ್ಗೆ ಜರಗಿತು. ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಪುತ್ತೂರಿನಲ್ಲಿ ಸಮರ್ಥ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕೆ ಇಳಿಸಲಾಗಿದೆ. ಅಪಪ್ರಚಾರಗಳು ಏನೇ ನಡೆದರೂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಆಶಾ ತಿಮ್ಮಪ್ಪ ಅವರು ಕಾರ್ಯವೈಖರಿ ಮೆಚ್ಚುವಂತಹದ್ದೇ ಆಗಿತ್ತು. ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಿದ್ದಲ್ಲದೇ, ಸಂಘಟನಾತ್ಮಕವಾಗಿಯೂ ಗುರುತಿಸಿಕೊಂಡವರು. ಕಳೆದ ಮೂರುವರೆ ವರ್ಷದಲ್ಲಿ ಬಿಜೆಪಿ ಸರಕಾರದ ಅಭಿವೃದ್ಧಿ ಪರ ಆಡಳಿತ, ಹಿಂದುತ್ವದ ಪರವಾಗಿ ಸರಕಾರ ಕೈಗೊಂಡ

ಆಶಾ ತಿಮ್ಮಪ್ಪ ಪರವಾಗಿ ಉಪ್ಪಿನಂಗಡಿಯಲ್ಲಿ ಮತಯಾಚಿಸಿದ ಕೋಟಾ, ಕುಂಟಾರು ರವೀಶ ತಂತ್ರಿ Read More »

ಪುತ್ತೂರು ಪೇಟೆಯಲ್ಲಿ ಸಾಗಿದ ಕಾಂಗ್ರೆಸ್ ರೋಡ್ ಶೋ

ಪುತ್ತೂರು: ನಟಿ ರಮ್ಯಾ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ರೋಡ್ ಶೋ ಬೊಳುವಾರಿನಿಂದ ದರ್ಬೆ ವೃತ್ತದವರೆಗೆ ಸೋಮವಾರ ಸಂಜೆ ನಡೆಯಿತು. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ರೋಡ್ ಶೋ ನಡೆದ ಸ್ವಲ್ಪ ಹೊತ್ತಿನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ರೋಡ್ ಶೋ ನಡೆಯಿತು. ಚಿತ್ರನಟಿ ರಮ್ಯಾ ಆಗಮಿಸುತ್ತಾರೆ ಎಂದು ಹೇಳಲಾಗಿತ್ತಾದರೂ, ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಕಲ್ಲಡ್ಕ ಗೊಂಬೆ ಬಳಗ, ಕೋಲು ನಡಿಗೆಯ ಜೊತೆ ಕಾಂಗ್ರೆಸ್ ಕಾರ್ಯಕರ್ತರು ಹೆಜ್ಜೆ ಹಾಕಿದರೆ, ಹಿಂಬದಿಯಲ್ಲಿ ಅಶೋಕ್ ಕುಮಾರ್

ಪುತ್ತೂರು ಪೇಟೆಯಲ್ಲಿ ಸಾಗಿದ ಕಾಂಗ್ರೆಸ್ ರೋಡ್ ಶೋ Read More »

ಪುತ್ತೂರು: ಕೇಸರಿ ರಂಗಿನ ನಡುವೆ ಪುತ್ತಿಲ ರೋಡ್ ಶೋ

ಪುತ್ತೂರು: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅರುಣ್ ಕುಮಾರ್ ಪುತ್ತಿಲ ಅವರು ಸೋಮವಾರ ಸಂಜೆ ಪುತ್ತೂರು ಪೇಟೆಯಲ್ಲಿ ರೋಡ್ ಶೋ ನಡೆಸಿದರು. ಬೊಳುವಾರಿನಿಂದ ಆರಂಭಗೊಂಡ ರೋಡ್ ಶೋ ಪುತ್ತೂರು ಪೇಟೆಯಾಗಿ ಸಾಗಿ ದರ್ಬೆಯಲ್ಲಿ ಸಮಾಪನಗೊಂಡಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ರೋಡ್ ಶೋಗೆ ಹೊಸ ಮೆರುಗು ತಂದರು. ಬಹಿರಂಗ ಪ್ರಚಾರದ ಕೊನೆ ದಿನವಾದ ಸೋಮವಾರ ಸಂಜೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಜೊತೆ ರೋಡ್ ಶೋ ನಡೆಯಿತು.

ಪುತ್ತೂರು: ಕೇಸರಿ ರಂಗಿನ ನಡುವೆ ಪುತ್ತಿಲ ರೋಡ್ ಶೋ Read More »

ವಿದ್ಯಾರಶ್ಮಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ಫಲಿತಾಂಶ

ಪುತ್ತೂರು: ಮಾರ್ಚ್ ನಲ್ಲಿ ಜರಗಿದ 10ನೆ ತರಗತಿಯ ಪರೀಕ್ಷೆಗೆ ವಿದ್ಯಾರಶ್ಮಿ ವಿದ್ಯಾಲಯದ 32 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲರೂ ತೇರ್ಗಡೆಯಾಗುವ ಮೂಲಕ ಶೇಕಡಾ 100 ಫಲಿತಾಂಶ ದಾಖಲಾಗಿದೆ. ಈ ಬಾರಿಯ ಫಲಿತಾಂಶ ಸೇರಿದಂತೆ ಒಟ್ಟು 16 ಬಾರಿ ವಿದ್ಯಾರಶ್ಮಿ ವಿದ್ಯಾಲಯ ಶೇ. 100 ಫಲಿತಾಂಶ ದಾಖಲಿಸಿದೆ. ಒಟ್ಟು ವಿದ್ಯಾರ್ಥಿಗಳ ಪೈಕಿ 5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತೃಷಾ ಡಿ. ಸಾಲಿಯಾನ್ – 607 (ದಿನೇಶ್ ಕುಮಾರ್ ಡಿ. ಮತ್ತು ಮಮತಾ ಡಿ., ಬೆಳ್ಳಾರೆ ಇವರ ಪುತ್ರಿ), ಸನಾ

ವಿದ್ಯಾರಶ್ಮಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ಫಲಿತಾಂಶ Read More »

ದಲಿತ ನಿಂದನೆ : ಹತ್ತು ದಿನ ಕಳೆದರೂ ಆರೋಪಿ ಬಂಧನವಾಗಿಲ್ಲ : ದ.ಕ.ಜಿಲ್ಲಾ ದಲಿತ ಸೇವಾ ಸಮಿತಿ ಆರೋಪ

ಪುತ್ತೂರು: ನೆಕ್ಕಿಲಾಡಿ ಗ್ರಾಮದ ಅಲಿಮಾರ್ ನಿವಾಸಿ ಲೀಲಾ ಆದಿದ್ರಾವಿಡ ಅವರ ಕುಟುಂಬಕ್ಕೆ ವಂಚನೆ ಆಗಿರುವ ಹಾಗೂ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ನಡೆಸಿರುವವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಾಗಿ 10 ದಿನ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ದ.ಕ. ಜಿಲ್ಲಾ ದಲಿತ ಸೇವಾ ಸಮಿತಿ ಆರೋಪಿಸಿದೆ.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಮಾತನಾಡಿ, ಬಡ ಕುಟುಂಬದ ಪ. ಜಾತಿಗೆ ಸೇರಿದ

ದಲಿತ ನಿಂದನೆ : ಹತ್ತು ದಿನ ಕಳೆದರೂ ಆರೋಪಿ ಬಂಧನವಾಗಿಲ್ಲ : ದ.ಕ.ಜಿಲ್ಲಾ ದಲಿತ ಸೇವಾ ಸಮಿತಿ ಆರೋಪ Read More »

ಎಸ್‍ ಎಸ್‍ ಎಲ್‍ಸಿ ಫಲಿತಾಂಶ : ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶ್ರಾವ್ಯ ಕೆ. ಯವರಿಗೆ ಶೇ.97 ಅಂಕ

ಪುತ್ತೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶ್ರಾವ್ಯ ಕೆ.ಎಚ್. 608 ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹುದೇರಿ ಕುಶಾಲಪ್ಪ ಗೌಡ ಮತ್ತು ಸುಜಿತಾ ದಂಪತಿ ಸುಪುತ್ರಿಯಾಗಿದ್ದಾರೆ. ರಾಷ್ಟ್ರಮಟ್ಟದ ಯೋಗಪಟುವಾಗಿದ್ದು, ರಾಷ್ಟ್ರಮಟ್ಟದ ವಕ್ರಾಸನದಲ್ಲಿ ಒಂದು ಗಂಟೆ 10 ನಿಮಿಷ 39 ಸಕೆಂಡ್  ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲೆ ಮಾಡಿದ್ದಾರೆ.

ಎಸ್‍ ಎಸ್‍ ಎಲ್‍ಸಿ ಫಲಿತಾಂಶ : ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶ್ರಾವ್ಯ ಕೆ. ಯವರಿಗೆ ಶೇ.97 ಅಂಕ Read More »

ಮೇ 12 : ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಪುನಃ ಪ್ರತಿಷ್ಠಾಪನೆ

ಪುತ್ತೂರು: ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನೆ ಮೇ 12 ಶುಕ್ರವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಎನ್‍.ಕೆ.ಜಗನ್ನಿವಾಸ ರಾವ್ ತಿಳಿಸಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾವಿರ ವರ್ಷಗಳ ಇತಿಹಾಸ ಇರುವ ಪುತ್ತೂರು ಸೀಮೆಗೊಳಪಟ್ಟ ಈ ತೊಟ್ಟಿಲಕಯಕ್ಕೆ ಸಾಕ್ಷಿ ಎಂಬಂತೆ ಶ್ರೀ ದಂಡನಾಯಕ ಉಳ್ಳಾಲ್ತಿಯ ನೇಮನಡಾವಳಿಯಲ್ಲಿ ದರ್ಶನ ಪಾತ್ರಿಯ ಮೂಲಕ “ನಾನು ತೊಟ್ಟಿಲಕಯದಿಂದ ಅವಿರ್ಭಸಿದ್ದೇನೆ” ಎಂಬ ಮಾತನ್ನು ಉಚ್ಚರಿಸುವುದು ೈತಿಹಾಸಿಕ ವಿಷಯಕ್ಕೆ ಹಿಡಿದ

ಮೇ 12 : ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಪುನಃ ಪ್ರತಿಷ್ಠಾಪನೆ Read More »

error: Content is protected !!
Scroll to Top