ಮೋದಿ ನೇತೃತ್ವದ ಬಿಜೆಪಿ ಸರಕಾರದಿಂದ ಭ್ರಷ್ಟಾಚಾರ ಮುಕ್ತ ಆಡಳಿತ : ಶಾಸಕ ಮಠಂದೂರು | ನಿಡ್ಪಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ

ಪುತ್ತೂರು: ನಿಡ್ಪಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಭ್ರಷ್ಟಾಚಾರ ಮುಕ್ತ ಆಡಳಿತ ಮಾಡುತ್ತಿದೆ. ನಾಗರಿಕರ ಅರೋಗ್ಯಕ್ಕೆ ಮೊದಲ ಪ್ರಾಮುಖ್ಯತೆ ನೀಡುವುದರ ಜತೆಗೆ ಮೂಲಭೂತ ಸೌಕರ್ಯಗಳಾದ ಶಿಕ್ಷಣ, ರಸ್ತೆ ಅಭಿವೃದ್ಧಿ, ಹೀಗೆ ನೂರಾರು ಯೋಜನೆಗಳನ್ನು ಅನುಷ್ಠಾನ ಮಾಡಿದೆ. ಜಾಲಜೀವನ್ ಮಿಷನ್, ನರೇಗಾ ಸೇರಿದಂತೆ ಇನ್ನಿತರ ಯೋಜನೆಗಳಿಗೆ ಅನುದಾನ ನೀಡಿ ಅಂತರ್ಜಲ ಅಭಿವೃದ್ಧಿ, ಕಿಂಡಿ ಆನಣೆಕಟ್ಟು, […]

ಮೋದಿ ನೇತೃತ್ವದ ಬಿಜೆಪಿ ಸರಕಾರದಿಂದ ಭ್ರಷ್ಟಾಚಾರ ಮುಕ್ತ ಆಡಳಿತ : ಶಾಸಕ ಮಠಂದೂರು | ನಿಡ್ಪಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ Read More »

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 1,102.47 ಕೋಟಿ ರೂ. ಶಾಸಕರ ಅನುದಾನ : ಚನಿಲ ತಿಮ್ಮಪ್ಪ ಶೆಟ್ಟಿ

ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರು 2018ರಿಂದ 2023ರ ಅವಧಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 110247.34 ಕೋಟಿ ರೂ. ಅನುದಾನವನ್ನು ತರಿಸಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷದ ಕೊರೋನಾ ಕಾಲಘಟ್ಟ ಸಹಿತ ವಿರೋಧ ಪಕ್ಷದವರನ್ನು ಎದುರಿಸಿ ನಿರೀಕ್ಷೆಗೂ ಮೀರಿ ಅನುದಾನವನ್ನು ತರುವಲ್ಲಿ ಯಶಸ್ವಿಯಾಗುವುದರ ಜತೆಗೆ ಅಭೂತಪೂರ್ವ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು. 2018 ರಿಂದ

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 1,102.47 ಕೋಟಿ ರೂ. ಶಾಸಕರ ಅನುದಾನ : ಚನಿಲ ತಿಮ್ಮಪ್ಪ ಶೆಟ್ಟಿ Read More »

ಕಾಶ್ಮೀರದಲ್ಲಿ ಶಾರದಾ ಮೂರ್ತಿ ಪ್ರತಿಷ್ಠೆ | ಸುಬ್ರಹ್ಮಣ್ಯ ನಟ್ಟೋಜ ವಿವರಣೆಯಲ್ಲಿ ಕೇಳಿ

ಪುತ್ತೂರು: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಲವು ವರ್ಷಗಳ ಬಳಿಕ ಶಾರದಾ ಮೂರ್ತಿ ಪ್ರತಿಷ್ಠಾಪನೆಗೊಂಡಿದೆ. ಶೃಂಗೇರಿ ಶ್ರೀಗಳ ನೇತೃತ್ವದಲ್ಲಿ ಶಾರದಾ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ನಡೆಯಿತು. ಪಕ್ಕದಲ್ಲೇ ಇರುವ ಪಿ.ಓ.ಕೆ. ಬಳಿಯಲ್ಲೇ ಶ್ರೀ ಶಾರದಾ ದೇವಾಲಯ ನಿರ್ಮಾಣಗೊಂಡಿದೆ. ಒಟ್ಟು ಕಾರ್ಯಕ್ರಮ, ವ್ಯವಸ್ಥೆಗಳ ಬಗ್ಗೆ ಅಂಬಿಕಾ ಸಮೂಹ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅವರು ವಿವರಿಸಿದ್ದಾರೆ. ಅವರ ಮಾತುಗಳಲ್ಲೇ ಕೇಳಿ…

ಕಾಶ್ಮೀರದಲ್ಲಿ ಶಾರದಾ ಮೂರ್ತಿ ಪ್ರತಿಷ್ಠೆ | ಸುಬ್ರಹ್ಮಣ್ಯ ನಟ್ಟೋಜ ವಿವರಣೆಯಲ್ಲಿ ಕೇಳಿ Read More »

ರಾಜಭವನ ಚಲೋ ಹಮ್ಮಿಕೊಂಡಿದ್ದ ಕಾಂಗ್ರೆಸ್ ನಾಯಕರು ಪೊಲೀಸರ ವಶಕ್ಕೆ

ಬೆಂಗಳೂರು: ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿ ಆದೇಶ ಮಾಡಿದರೂ ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ‌ ಶಿಫಾರಸ್ಸು ಮಾಡಿಲ್ಲ ಎಂದು‌ ಆರೋಪಿಸಿ ರಾಜಭವನ ಚಲೋ ಹಮ್ಮಿಕೊಂಡಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಕೆಪಿಸಿಸಿ ಕಚೇರಿಯಿಂದ ರಾಜಭವನಕ್ಕೆ ತೆರಳಲು ಮುಂದಾದ ಕಾಂಗ್ರೆಸ್‌ ನಾಯಕರನ್ನು ಪೊಲೀಸರು ಮಾರ್ಗದ ಮಧ್ಯೆಯೇ ತಡೆದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಸೇರಿದಂತೆ ಹಲವಾರು ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ವಶಕ್ಕೆ ಪಡೆಯುವುದಕ್ಕೆ ಮುನ್ನ ಮಾತನಾಡಿದ ಮಾಜಿ ಸಿಎಂ

ರಾಜಭವನ ಚಲೋ ಹಮ್ಮಿಕೊಂಡಿದ್ದ ಕಾಂಗ್ರೆಸ್ ನಾಯಕರು ಪೊಲೀಸರ ವಶಕ್ಕೆ Read More »

ನೆಹರುನಗರ ಪಟ್ಲ ಪ್ಲಾನೇಟ್ ನಲ್ಲಿ “ಲೈಫ್ ಕೇರ್ ಕ್ಲಿನಿಕಲ್ ಲ್ಯಾಬೋರೇಟರಿ” ಶುಭಾರಂಭ

ಪುತ್ತೂರು: ನೂತನ ಸಂಸ್ಥೆ ಲೈಫ್ ಕೇರ್ ಕ್ಲಿನಿಕಲ್ ಲ್ಯಾಬೊರೇಟರಿ ನೆಹರೂನಗರದ ಪಟ್ಲ ಪ್ಲಾನೇಟ್ ನಲ್ಲಿ ಗುರುವಾರ ಶುಭಾರಂಭಗೊಂಡಿತು. ಪುತ್ತೂರು ನಗರಸಭೆ ಸದಸ್ಯೆ ಪ್ರೇಮ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ  ಪಟ್ಲ ಪ್ಲಾನೇಟ್ನ ಮಾಲಕ ಮಾಧವ, ಮಹಾಲಿಂಗೇಶ್ವರ ವುಡ್ ಆಂಡ್ ಫರ್ನಿಚರ್ ಮಾಲಕ ಹರೀಶ್ ಹಾಗೂ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕರಾದ ಪ್ರದೀಪ್, ಅವರ ತಾಯಿ ಕಮಲ, ಅಣ್ಣ ಪ್ರವೀಣ್, ಅತ್ತಿಗೆ ಅನುಷಾ, ಸಹೋದರಿಯರಾದ ತುಳಸಿ, ತುಷಾರ, ಸಹೋದರ ನವೀನ್ ಅತಿಥಿ ಗಣ್ಯರನ್ನು

ನೆಹರುನಗರ ಪಟ್ಲ ಪ್ಲಾನೇಟ್ ನಲ್ಲಿ “ಲೈಫ್ ಕೇರ್ ಕ್ಲಿನಿಕಲ್ ಲ್ಯಾಬೋರೇಟರಿ” ಶುಭಾರಂಭ Read More »

ಹಿರೇಬಂಡಾಡಿ ನಂದಿನಗರ ರಸ್ತೆ ಕಾಂಕ್ರಿಟೀಕರಣ ಹಾಗೂ ನೂತನ ರಸ್ತೆಗೆ ಶಿಲಾನ್ಯಾಸ

ಪುತ್ತೂರು: ಹಿರೇಬಂಡಾಡಿ ಗ್ರಾಮದ ನಂದಿನಗರ ರಸ್ತೆ ಕಾಂಕ್ರಿಟೀಕರಣ ಹಾಗೂ ನೂತನ ರಸ್ತೆಗೆ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ನಡೆಯಿತು.  5 ಲಕ್ಷ ರೂ. ಕಾಂಕ್ರಿಟೀಕರಣ ಹಾಗೂ 35 ಲಕ್ಷ ರೂ. ಅಮನುದಾನದಲ್ಲಿ ನೂತನ ರಸ್ತೆಗೆ ಶಾಸಕ ಸಂಜೀವ ಮಠಂದೂರು ತೆಂಗಿನಕಾಯಿ ಒಡೆಯುವ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹಾಗೆಯೇ ಈ ರಸ್ತೆಗೆ 35 ಲಕ್ಷ ರೂ. ಅನುದಾನ ಇಡಲಾಗಿದೆ. ಆದಷ್ಟು ಶೀಘ್ರ ರಸ್ತೆ ನಿರ್ಮಾಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ತೆರೆದುಕೊಳ್ಳಲಿ

ಹಿರೇಬಂಡಾಡಿ ನಂದಿನಗರ ರಸ್ತೆ ಕಾಂಕ್ರಿಟೀಕರಣ ಹಾಗೂ ನೂತನ ರಸ್ತೆಗೆ ಶಿಲಾನ್ಯಾಸ Read More »

ಉಪ್ಪಿನಂಗಡಿ: 10 ಲಕ್ಷ ರೂ. ನಗದು ದರೋಡೆ, ಪ್ರಕರಣ ಓರ್ವ ವಶ

ಉಪ್ಪಿನಂಗಡಿ : ಮಗಳ ಮದುವೆಗೆ ಚಿನ್ನವನ್ನು ಖರೀದಿಸಲೆಂದು ದ್ವಿಚಕ್ರ ವಾಹನದಲ್ಲಿ 10 ಲಕ್ಷ ರೂ. ನಗದು ಹಣ ಕೊಂಡೊಯ್ಯುತ್ತಿದ್ದ ವೇಳೆ ಇಳಂತಿಲ ಗ್ರಾಮದ ಪೆದಮಲೆ- ಸರಳಿಕಟ್ಟೆ ರಸ್ತೆಯ ರಿಫಾಯಿನಗರ ಎಂಬಲ್ಲಿ ಅಪರಿಚಿತ ಯುವಕನೋರ್ವ ಹಣವನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ಓರ್ವ ಆರೋಪಿಯನ್ನು ಒಂಬತ್ತು ಲಕ್ಷ ರೂ. ನಗದಿನೊಂದಿಗೆ ವಶಪಡಿಸಿಕೊಂಡಿದ್ದಾರೆ. ಇಳಂತಿಲ ಗ್ರಾಮದ ಕಾರ್ಯಪಾಡಿ ಮನೆ ನಿವಾಸಿ ಮಹಮ್ಮದ್ ಕೆ. (60) ಅವರು ತನ್ನ ಮಗಳ ಮದುವೆಗಾಗಿ ಚಿನ್ನಾಭರಣ ಖರೀದಿಸಲು ಸಂಗ್ರಹಿಸಿಟ್ಟ 10 ಲಕ್ಷ

ಉಪ್ಪಿನಂಗಡಿ: 10 ಲಕ್ಷ ರೂ. ನಗದು ದರೋಡೆ, ಪ್ರಕರಣ ಓರ್ವ ವಶ Read More »

ಮಂಗಳೂರು: 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು : ಸುಮಾರು 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊಣಾಜೆ ಪೊಲೀಸರು ಮಾರ್ಚ್ 23 ರಂದು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ತುಂಬೆ ವ್ಯಾಪ್ತಿಯ ತಲಪಾಡಿ ನಿವಾಸಿ ಅಬ್ದುಲ್ ಅಜೀಜ್ ಅಲಿಯಾಸ್ ಅಜೀಜ್ (45) ಎಂದು ಗುರುತಿಸಲಾಗಿದೆ.ಈತ ಕೇರಳ ಮತ್ತು ಕರ್ನಾಟಕದ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅಜೀಜ್ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಲ್ಕು, ಉಳ್ಳಾಲದಲ್ಲಿ ಮೂರು, ಬಂಟ್ವಾಳದಲ್ಲಿ ಒಂದು ಮತ್ತು ಹಾಸನದ ಅರೇಹಳ್ಳಿ ಮತ್ತು ಕೇರಳ ರಾಜ್ಯದ ಕುಟ್ಯಾಡಿಯಲ್ಲಿ ತಲಾ ಒಂದು

ಮಂಗಳೂರು: 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ವಿಧಾನಸಭಾ ಚುನಾವಣೆ ಹಿನ್ನಲೆ : ನಗರಸಭಾ ವ್ಯಾಪ್ತಿಯಲ್ಲಿ ಬ್ಯಾನರ್, ಬಂಟಿಂಗ್ಸ್ ತೆರವು ಕಾರ್ಯ

ಪುತ್ತೂರು: ಮುಂದಿನ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್, ಬಂಟಿಂಗ್ಸ್, ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಕಾರ್ಯ ಶುಕ್ರವಾರ  ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ನಡೆಯಿತು. ದ.ಕ.ಜಿಲ್ಲಾಧಿಕಾರಿಯವರು ಈ ಕುರಿತು ಹೊರಡಿಸಿದ ಆದೇಶದಂತೆ ತೆರವು ಕಾರ್ಯ ನಡೆಸಲಾಯಿತು. ಜಿಲ್ಲಾಧಿಕಾರಿಯವರ ಆದೇಶ ಬೆನ್ನಲ್ಲೇ ಪುತ್ತೂರು ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಅನಧಿಕೃತ ಬ್ಯಾನರ್‍, ಬಂಟಿಗ್ಸ್, ಗೋಡೆಬರಹಗಳನ್ನು ತೆರವುಳಿಸುವ ಕಾರ್ಯ ನಡೆಯಿತು.

ವಿಧಾನಸಭಾ ಚುನಾವಣೆ ಹಿನ್ನಲೆ : ನಗರಸಭಾ ವ್ಯಾಪ್ತಿಯಲ್ಲಿ ಬ್ಯಾನರ್, ಬಂಟಿಂಗ್ಸ್ ತೆರವು ಕಾರ್ಯ Read More »

ಮಾ.27 : ಮುರ ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡದ ಉದ್ಘಾಟನೆ | ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ

ಪುತ್ತೂರು: ತಾಲೂಕಿನ ಮುರ ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನ ಸೇವಾ ಸಂಘದ ವತಿಯಿಂದ ಕಾರ್ಯಾಚರಿಸುತ್ತಿರುವ ಮುರ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡದ ಉದ್ಘಾಟನಾ ಸಮಾರಂಭ ಮಾ.27 ಸೋಮವಾರ ಬೆಳಿಗ್ಗೆ 10.45 ಕ್ಕೆ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಬಾಬು ಗೌಡ ಕಲ್ಲೇಗ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು 40 ಲಕ್ಷ ರೂ. ಮೇಲಂತಸ್ತಿನ ಕಟ್ಟಡಕ್ಕೆ ವೆಚ್ಚ ತಗಲಿದ್ದು, ಕಾಮಗಾರಿ ಸಂಪೂರ್ಣಗೊಂಡಿದೆ. ಮೇಲಂತಸ್ತು 2800 ಚದರ ಅಡಿ ಹೊಂದಿದ್ದು, 450 ರಿಂದ 500

ಮಾ.27 : ಮುರ ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡದ ಉದ್ಘಾಟನೆ | ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ Read More »

error: Content is protected !!
Scroll to Top