ಭಾರತದಲ್ಲಿ ಹೆಚ್ಚುತ್ತಿರುವ ಕೊರೋನಾ

ಕೋವಿಡ್‌ 19 : ಭಾರತದಲ್ಲಿ 1,805 ಪ್ರಕರಣಗಳು ಪತ್ತೆ, ಸಕ್ರಿಯ ಪ್ರಕರಣ ಸಂಖ್ಯೆ 10,300ಕ್ಕೆ ಏರಿಕೆ ದೆಹಲಿ: ಭಾರತದಲ್ಲಿ ಮಹಾಮಾರಿ ಕೊರೋನಾ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,805 ಹೊಸ ಪ್ರಕರಣಗಳು ಪತ್ತೆಯಾಗಿವೆ.ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,47,05,952ಕ್ಕೆ ಏರಿಕೆಯಾಗಿದೆ. ಅಲ್ಲದೇ, ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,30,837ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10,300ಕ್ಕೆ ತಲುಪಿದೆ. ಈ ನಡುವೆ […]

ಭಾರತದಲ್ಲಿ ಹೆಚ್ಚುತ್ತಿರುವ ಕೊರೋನಾ Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಮಧ್ಯಭಾಗದ ಕಟ್ಟೆ ಪುನರ್ ನಿರ್ಮಾಣಕ್ಕೆ ಚಾಲನೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಮಧ್ಯಭಾಗದಲ್ಲಿರುವ,  ಕೆರೆ ಆಯನ ನಡೆಯುವ ಶ್ರೀ ದೇವರ ಕಟ್ಟೆಯನ್ನು ಶಿಲಾಮಯ ಕಟ್ಟೆಯಾಗಿ ರೂಪುಗೊಳಿಸುವ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು ಸ್ಥಳಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿ, ಜಾತ್ರೋತ್ಸವ ಸಂದರ್ಭ ಶ್ರೀ ಮಹಾಲಿಂಗೇಶ್ವರ  ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ದೇವಸ್ಥಾನದ ಪುಷ್ಕರಣಿಯ ಮಧ್ಯಭಾಗದಲ್ಲಿರುವ , ದೇವರು ಕುಳಿತುಕೊಳ್ಳುವ, ಕೆರೆ ಆಯನ  ಮಾಡುವ ಕಟ್ಟೆಯನ್ನು ಶಿಲಾಮಯ ಕಟ್ಟೆಯನ್ನಾಗಿ  ನಿರ್ಮಾಣ ಮಾಡಿ ಅಲ್ಲಿರುವ ವರುಣನ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಮಧ್ಯಭಾಗದ ಕಟ್ಟೆ ಪುನರ್ ನಿರ್ಮಾಣಕ್ಕೆ ಚಾಲನೆ Read More »

ಸರಕಾರಿ ಆಸ್ಪತ್ರೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆಯಿಲ್ಲ : ಶಾಸಕ ಮಠಂದೂರು | ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನವೀಕೃತ ಡಯಾಲಿಸಿಸ್ ಘಟಕ, ಪ್ರಯೋಗ ಶಾಲಾ ಉಪಕರಣ ಉದ್ಘಾಟನೆ

ಪುತ್ತೂರು: ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನವೀಕೃತ ಡಯಾಲಿಸೀಸ್ ಘಟಕ ಮತ್ತು ಪ್ರಯೋಗ ಶಾಲಾ ಉಪಕರಣಗಳ ಉಧ್ಘಾಟನೆ ಸೋಮವಾರ ಬೆಳಿಗ್ಗೆ ನಡೆಯಿತು. ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಸರಕಾರಿ ಆಸ್ಪತ್ರೆಗಳು ಯಾವುದೇ ಖಾಸಾಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಶಾಸಕರ ಪ್ರದೇಶಾಭಿವೃಧ್ಧಿ ಯೋಜನೆಯ ಅನುದಾನದ ಮೂಲಕ ಒದಗಿಸಲಾಗಿದೆ. ರೋಟರಿ ಸಂಸ್ಥೆಯ ಕೊಡುಗೆಯೂ ಇಲ್ಲಿ ಸ್ಮರಣೀಯ . ಜನೌಷಧಿ ಕೇಂದ್ರದ ಮೂಲಕ ಕಡಿಮೆ ವೆಚ್ಚದಲ್ಲಿ ಔಷಧಿಗಳನ್ನು ನೀಡುವ ಕೆಲಸ ಕಾರ್ಯಗಳು

ಸರಕಾರಿ ಆಸ್ಪತ್ರೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆಯಿಲ್ಲ : ಶಾಸಕ ಮಠಂದೂರು | ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನವೀಕೃತ ಡಯಾಲಿಸಿಸ್ ಘಟಕ, ಪ್ರಯೋಗ ಶಾಲಾ ಉಪಕರಣ ಉದ್ಘಾಟನೆ Read More »

ಸಿ.ಟಿ.ರವಿ ಅವರಿಗೆ ಮತಿಭ್ರಮಣೆಯಾಗಿದೆ, ನಿಮ್ಹಾನ್ಸ್‌ಗೆ ಸೇರಿಸಿ : ಡಿಕೆಶಿ

ಡಿ.ಕೆ.ಬ್ರದರ್ಸ್‌ ಹೇಳಿಕೆಗೆ ತಿರುಗೇಟು ಬೆಂಗಳೂರು : ಸೋಲುವ ಭೀತಿಯಿಂದಾಗಿ ಸಿ.ಟಿ.ರವಿ ಅವರಿಗೆ ಮತಿಭ್ರಮಣೆಯಾಗಿದೆ. ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದು, ಕೂಡಲೇ ಅವರಿಗೆ ನಿಮ್ಹಾನ್ಸ್‌ ಅಥವಾ ಬೇರೆ ಯಾವುದಾದರೂ ಮಾನಸಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.ಶಾಲಾ ಮಕ್ಕಳನ್ನು ಗುರಿಯಾಗಿಸಿಕೊಂಡು ಕುಕ್ಕರ್‌ನಲ್ಲಿ ಬಾಂಬ್‌ ಇಡುವ ಕೆಲಸವನ್ನು ಡಿ.ಕೆ.ಬ್ರದರ್ಸ್‌ ಮಾಡಿದ್ದರು ಎಂಬ ಸಿ.ಟಿ.ರವಿ ಅವರ ವಿವಾದಾತ್ಮಕ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ರವಿ ಹೇಳಿಕೆ ಬಗ್ಗೆ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆಯೂ ಪರಿಶೀಲಿಸುವುದಾಗಿ ತಿಳಿಸಿದರು. ಮುಖ್ಯಮಂತ್ರಿಗಳು,

ಸಿ.ಟಿ.ರವಿ ಅವರಿಗೆ ಮತಿಭ್ರಮಣೆಯಾಗಿದೆ, ನಿಮ್ಹಾನ್ಸ್‌ಗೆ ಸೇರಿಸಿ : ಡಿಕೆಶಿ Read More »

ಸಾವರ್ಕರ್‌ ಅವರನ್ನು ಅವಮಾನಿಸಬೇಡಿ ಎಂದು ರಾಹುಲ್‌ಗೆ ಉದ್ಧವ್‌ ಎಚ್ಚರಿಕೆ

ಮೈತ್ರಿಯಲ್ಲಿ ಬಿರುಕು ಉಂಟಾದೀತು ಎಂದು ತಾಕೀತು ಮುಂಬಯಿ : ಸಾವರ್ಕರ್‌ ಅವರನ್ನು ಅವಮಾನಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಅವರ ಮಿತ್ರ ಪಕ್ಷವೇ ತಿರುಗಿ ಬಿದ್ದಿದೆ. ಸಾವರ್ಕರ್ ನಮ್ಮ ದೇವರು ಅವರನ್ನು ಅವಮಾನಿಸಿದರೆ ನಾವು ಸಹಿಸುವುದಿಲ್ಲ ಎಂದು ಮಹಾರಾಷ್ಟ್ರದಲ್ಲಿ ಕಾಂಗ್ರ್‌ನ ಮಿತ್ರ ಪಕ್ಷವಾಗಿರುವ ಶಿವಸೇನೆ (ಉದ್ಧವ್‌ ಬಣ) ಮುಖಂಡ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಅವರು, ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಒಟ್ಟಾಗಿ ಹೋರಾಡಬೇಕಿದೆ, ಸಾವರ್ಕರ್ ಅವರು

ಸಾವರ್ಕರ್‌ ಅವರನ್ನು ಅವಮಾನಿಸಬೇಡಿ ಎಂದು ರಾಹುಲ್‌ಗೆ ಉದ್ಧವ್‌ ಎಚ್ಚರಿಕೆ Read More »

ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿರುವ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಜಾತಿ ವ್ಯವಸ್ಥೆ ಇರುವವರೆಗೆ ಮೀಸಲಾತಿ ಬೇಕು ಎಂದು ಪ್ರತಿಪಾದನೆ ಬೆಂಗಳೂರು : ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾದಡಿಯಲ್ಲಿದ್ದ ಮುಸ್ಲಿಮರ ಶೇ.4 ಮೀಸಲಾತಿಯನ್ನು ರದ್ದುಗೊಳಿಸಿರುವ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿ ಮುಸ್ಲಿಂಮರ ಮೀಸಲಾತಿ ರದ್ದುಗೊಳಿಸಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತರನ್ನು ಒಲೈಸಿಕೊಳ್ಳುವ ಪ್ರಯತ್ನದಲ್ಲಿ ಒಬಿಸಿ ಕೋಟಾದಡಿಯಲ್ಲಿ ಶೇಕಡಾ 4 ರಷ್ಟು ಮೀಸಲಾತಿ ಪಡೆಯುತ್ತಿದ್ದ ಮುಸ್ಲಿಮರ ಮೀಸಲಾತಿ ರದ್ದುಗೊಳಿದ್ದಾರೆ. ಅದನ್ನು

ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿರುವ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ Read More »

ಸಂಸದರಾಗಿ ಸೇವೆ ಸಲ್ಲಿಸಿದ್ದ ಜನಪ್ರಿಯ ನಟ ಇನೊಸೆಂಟ್‌ ನಿಧನ

ಕೊಚ್ಚಿ : ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಹಾಗೂ ಮಾಜಿ ಸಂಸದ ಇನೊಸೆಂಟ್ ಭಾನುವಾರ ತಡರಾತ್ರಿ ಕೊಚ್ಚಿಯ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಇನೊಸೆಂಟ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.ಭಾನುವಾರ ರಾತ್ರಿ ಇನೊಸೆಂಟ್ ಅವರ ಅರೋಗ್ಯ ಪರಿಸ್ಥಿತಿ ತೀವ್ರ ರೀತಿಯಲ್ಲಿ ಹದಗೆಟ್ಟ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ಚಿಕಿತ್ಸೆ ಪಡೆಯುತ್ತಿದ್ದ ಲೇಕ್‌ಶೋರ್ ಆಸ್ಪತ್ರೆಯು ಹೇಳಿಕೆಯಲ್ಲಿ ತಿಳಿಸಿದೆ. ಸುಮಾರು 500ಕ್ಕೂ ಹೆಚ್ಚು ಮಲಯಾಳಂ ಚಿತ್ರಗಳಲ್ಲಿ ಹಾಸ್ಯ ನಟನಾಗಿ ನಟಿಸಿರುವ ಇನೊಸೆಂಟ್, ಎಡಪಕ್ಷಗಳ ಬೆಂಬಲದೊಂದಿಗೆ ಸ್ವತಂತ್ರ

ಸಂಸದರಾಗಿ ಸೇವೆ ಸಲ್ಲಿಸಿದ್ದ ಜನಪ್ರಿಯ ನಟ ಇನೊಸೆಂಟ್‌ ನಿಧನ Read More »

ಕಗ್ಗದ ಸಂದೇಶ- ಇಂದಿಗಿಂದಿನ ಬದುಕು ಉಚಿತ…

ಮರಣದಿಂಮುಂದೇನು? ಪ್ರೇತವೋ? ಭೂತವೋ?|ಪರಲೋಕವೋ? ಪುನರ್ಜನ್ಮವೋ? ಅದೇನೋ?||ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ|ಧರೆಯ ಬಾಳ್ಗ್ಗದರಿನೇಂ–ಮಂಕುತಿಮ್ಮ||ಮರಣದ ನಂತರ ಆತ್ಮ ಈ ದೇಹವನ್ನು ಬಿಟ್ಟು ಎಲ್ಲಿಗೆ ಹೋಗುತ್ತದೆ ಎನ್ನುವುದು ಇದುವರೆಗೆ ಯಾರಿಗೂ ಖಚಿತವಾಗಿ ತಿಳಿದಿಲ್ಲ. ಜಗತ್ತಿನ ವಾಸನೆಗೆ ಅಂಟಿಕೊಂಡು ಭೂತವಾಗುತ್ತದೋ ಅಥವಾ ಪ್ರೇತವಾಗಿ ಇಲ್ಲಿಯೇ ಸುತ್ತುತ್ತಿರುತ್ತದೋ? ಪರಲೋಕವನ್ನು ಸೇರುತ್ತದೋ ಇಲ್ಲಾ ಮತ್ತೆ ಇದೇ ಭೂಮಿಯಲ್ಲಿ ಇನ್ನೊಂದು ಜನ್ಮವನ್ನು ಹೊಂದುತ್ತದೋ ಎನ್ನುವುದು ಯಾರಿಗೂ ಗೊತ್ತಿಲ್ಲ. ಮರಣದ ನಂತರ‌ ಹಿಂತಿರುಗಿ ಬಂದವರು ಇಲ್ಲ. ಬಂದು ಆ ಬಗ್ಗೆ ಮಾಹಿತಿಯ ವರದಿಯನ್ನು ನೀಡಿದವರು ಇಲ್ಲ. ಈ ಎಲ್ಲ

ಕಗ್ಗದ ಸಂದೇಶ- ಇಂದಿಗಿಂದಿನ ಬದುಕು ಉಚಿತ… Read More »

ಎಸೆಸೆಲ್ಸಿ ಪರೀಕ್ಷೆ – ಫಿನಿಷಿಂಗ್ ಟಚಸ್

ವಿಜ್ಞಾನದಲ್ಲಿ ಖುಷಿ ಕೊಡುವ ಅಪ್ಲಿಕೇಶನ್ ಪ್ರಶ್ನೆಗಳು ವಿಜ್ಞಾನದ ಪ್ರಶ್ನೆ ಪತ್ರಿಕೆಯಲ್ಲಿ ನಾಲ್ಕು ವಿಧವಾದ ಪ್ರಶ್ನೆಗಳು ಇರುತ್ತವೆ. Knowledge based, Understanding based, Skill based and Application based.ಅದರಲ್ಲಿ 12-14 ಅಂಕದ ಪ್ರಶ್ನೆಗಳು ಅಪ್ಲಿಕೇಶನ್ ಅಂದರೆ ಅನ್ವಯ ಆಧಾರಿತ ಪ್ರಶ್ನೆಗಳು ಆಗಿರುತ್ತವೆ. ಈ ಪ್ರಶ್ನೆಗಳು ನೀವೆಲ್ಲ ತಿಳಿದುಕೊಂಡ ಹಾಗೆಪಠ್ಯಪುಸ್ತಕದ ಹೊರಗಿನ ಪ್ರಶ್ನೆಗಳು ಅಲ್ಲ. ಪಠ್ಯಪುಸ್ತಕದ ಜ್ಞಾನವನ್ನು ನಿಮ್ಮ ಜೀವನಕ್ಕೆ ಅನ್ವಯ ಮಾಡಿಕೊಂಡ ಪ್ರಶ್ನೆಗಳು ಇವು. ಖಂಡಿತವಾಗಿ ಇವು ಕಠಿಣ ಪ್ರಶ್ನೆಗಳು ಅಲ್ಲ. ಸ್ವಲ್ಪ ಹೊತ್ತು ಯೋಚನೆ ಮಾಡಿದರೆ

ಎಸೆಸೆಲ್ಸಿ ಪರೀಕ್ಷೆ – ಫಿನಿಷಿಂಗ್ ಟಚಸ್ Read More »

ಹದಿಹರೆಯದ ವಿದ್ಯಾರ್ಥಿಗಳಿಗೆ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ

ಪುತ್ತೂರು: ಸ್ವಾಮಿ ವಿವೇಕಾನಂದ ಯೂಥ್ ಮೂಮೆನ್ಟ್  ಮತ್ತು  ಪ್ರಗತಿ  ಪಾರಾ ಮೆಡಿಕಲ್ ಕಾಲೇಜು  ವತಿಯಿಂದ ಹದಿ ಹರೆಯದ ವಿದ್ಯಾರ್ಥಿಗಳಿಗೆ ಏಡ್ಸ್ ಬಗ್ಗೆ ಜಾಗೃತಿ ಕಾರ್ಯಕ್ರಮ ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆಯಿತು. ಪ್ರೋಗ್ರಾಮಿಂಗ್ ಅಧಿಕಾರಿ  ರವಿ ರೈ ಮಾಹಿತಿ ನೀಡಿ, ಏಡ್ಸ್ ರೋಗ ನಿರ್ಮೂಲನೆಗೆ ಸರಕಾರ ಕೈಗೊಂಡಿರುವ ಕಾರ್ಯಕ್ರಮಗಳು,  ರೊಗ ಪತ್ತೆಯಾದರೆ ವ್ಯಕ್ತಿ ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು, ಏಡ್ಸ್ ರೋಗಿಗೆ ಆತ್ಮಸ್ಥೈರ್ಯವನ್ನು ಹೆಚ್ಚುಮಾಡುವ ಕೆಲಸ ಮಾಡಬೇಕು ಎಂದರು. ಕ್ಷೇತ್ರ ಸಂಯೋಜಕಿ ಚೈತ್ರ ಸಹಕರಿಸಿದರು. ಕಾಲೇಜಿನ ಉಪನ್ಯಾಸಕಿ ಮನಸಾ

ಹದಿಹರೆಯದ ವಿದ್ಯಾರ್ಥಿಗಳಿಗೆ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ Read More »

error: Content is protected !!
Scroll to Top