ವಿದ್ಯಾರ್ಥಿ ದಿಶೆಯಿಂದಲೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು : ವಸಂತ ಕೋನಡ್ಕ | ಸಾಧನಾಭಿವಂದನಾ – ಅಭಿನಂದನಾ ಕಾರ್ಯಕ್ರಮ

ಪುತ್ತೂರು: ‘ನಮ್ಮಲ್ಲಿ ನಾವು ಪ್ರಮುಖವಾಗಿ ಐದು ಗುಣಗಳಾದ ಯೋಚನಾ ಸಾಮರ್ಥ್ಯ, ಯೋಜನಾ ಬದ್ಧತೆ, ಸಾಮಾನ್ಯಜ್ಞಾನ, ಸಮಯ ಪ್ರಜ್ಞೆ, ಸಮಾಜಮುಖಿ ಬದುಕು ಇವುಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕಾಗಿದೆ ಎಂದು ಬೆಂಗಳೂರಿನ ವಕೀಲ ವಸಂತ ಕೋನಡ್ಕ ಹೇಳಿದರು. ವಿವೇಕಾನAದ ಕನ್ನಡ ಮಾಧ್ಯಮ ಶಾಲೆಯಲ್ಲಿ 2022-23ನೇ ಸಾಲಿನ ಹತ್ತನೇ ತರಗತಿ ಮಕ್ಕಳ ಉತ್ತಮ ಫಲಿತಾಂಶಕ್ಕಾಗಿ ಆಯೋಜಿಸಲಾದ ಸಾಧನಾಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇನ್ನೊರ್ವ ಅತಿಥಿಯಾಗಿ ಪುತ್ತೂರು ಪಿ.ಎಸ್ ಪ್ರೊಜೆಕ್ಟ್ ಮಾಲಕ ಪ್ರತಾಪಸಿಂಹ ವರ್ವ ವಿದ್ಯಾರ್ಥಿಗಳಿಗೆ ನೀಡಿದ ಅಭಿನಂದನಾ ಪತ್ರ, ಸಸ್ಯದ ಕೊಡುಗೆ ಮಾಡಿದ […]

ವಿದ್ಯಾರ್ಥಿ ದಿಶೆಯಿಂದಲೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು : ವಸಂತ ಕೋನಡ್ಕ | ಸಾಧನಾಭಿವಂದನಾ – ಅಭಿನಂದನಾ ಕಾರ್ಯಕ್ರಮ Read More »

ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ | ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ನಿನ್ನೆ 5 ಸೆಂ.ಮೀ. ಮಳೆಯಾಗಿದ್ದು, ಕೊಳ್ಳೆಗಾಲ, ಕೊಟ್ಟಿಗೆಹಾರ, ಸರಗೂರು, ಅರಕಲಗೂಡು, ಮೂರ್ನಾಡು, ಬೀದರ್, ಟಿ.ನರಸೀಪುರ, ಕಳಸ, ಮೂಡಿಗೆಯ ಸೇರಿದಂತೆ ವಿವಿಧೆಡೆ ಸಾಧಾರಣ ಮಲೆಯಾಗಿದೆ. ಇಂದು ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದೆ.

ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ | ಹವಾಮಾನ ಇಲಾಖೆ ಮುನ್ಸೂಚನೆ Read More »

ಪರ್ಪುಂಜ ಶಾಲೆಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ

ಪುತ್ತೂರು: ಪುತ್ತೂರು ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ  ಮತ್ತು ಪರ್ಪುಂಜ ಸಮೃದ್ಧಿ ಜ್ಞಾನ ವಿಕಾಸ ಕೇಂದ್ರದ ಜಂಟಿ ಆಶ್ರಯದಲ್ಲಿ  ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ಪರ್ಪುಂಜ ಶಾಲೆಯಲ್ಲಿ ಆಚರಿಸಲಾಯಿತು. ಒಳಮೊಗ್ರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುಂಬ್ರ  ಜನಜಾಗೃತಿ ವೇದಿಕ ವಲಯ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ದೀಪ ಬೆಳಗಿಸಿ ಉದ್ಘಾಟಿಸಿದರು, ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ದಿವಾಕರ ಪೂಜಾರಿ ಪಾಲ್ಗೊಂಡು, ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು,ತಾಯಂದಿರು ಮಕ್ಕಳ

ಪರ್ಪುಂಜ ಶಾಲೆಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ Read More »

ವಿಶ್ವ ತಂಬಾಕು ದಿನಾಚರಣೆ

ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮೆತ್ತಡ್ಕ ವಲಯ ಒಕ್ಕೂಟದ ವತಿಯಿಂದ ವಿಶ್ವ ತಂಬಾಕು ದಿನಾಚರಣೆಯನ್ನು ಭಾನುವಾರ ಪುತ್ತೂರು ಯೋಜನಾ ಕಚೇರಿಯಲ್ಲಿ ಆಚರಿಸಲಾಯಿತು. ತಾಲೂಕು ಜನಜಾಗ್ರತಿ ಅಧ್ಯಕ್ಷ ಲೋಕೇಶ್ ಹೆಗೆ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಾಮೆತ್ತಡ್ಕ ಒಕ್ಕೂಟ ಅಧ್ಯಕ್ಷೆ ಅಹಲ್ಯ ವಹಿಸಿದ್ದರು.     ಅಖಿಲ ಕರ್ನಾಟಕ ಜನಜಾಗೃತಿ ಯೋಜನಾಧಿಕಾರಿ  ಗಣೇಶ್ ಆಚಾರ್ಯ ಸಂಪನ್ಮೂಲ ವ್ಯೆಕ್ತಿಯಾಗಿ ಮಾತನಾಡಿದರು. ತಾಲ್ಲೂಕು ಯೋಜನಾಧಿಕಾರಿ  ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಜನಜಾಗೃತಿ ಮಾಜಿ ಅಧ್ಯಕ್ಷ ಮಹಾಬಲ ರೈ, ವಲಯ ಜನಜಾಗೃತಿ ಅಧ್ಯಕ್ಷ ಸತೀಶ್ ನಾಯ್ಕ್ ಉಪಸ್ಥಿತರಿದ್ದರು.

ವಿಶ್ವ ತಂಬಾಕು ದಿನಾಚರಣೆ Read More »

ಶೈಕ್ಷಣಿಕ ಹಬ್‌ ಹಿರಿಮೆಗೆ ಮತ್ತೊಂದು ಗರಿಮೆ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್  | ಜೂನ್ 5: ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶೋತ್ಸವ

ಪುತ್ತೂರು: ಆಧುನಿಕತೆಯ ವೇಗಕ್ಕೆ ಸಂಸ್ಕಾರ ಪಾಠಗಳು ಮೂಲೆಗುಂಪಾಗುತ್ತಿವೆ ಎನ್ನುವ ಆತಂಕದ ನಡುವೆ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಭರವಸೆಯ ಸೆಲೆಯಾಗಿ ಟಿಸಿಲೊಡೆದಿದೆ. ಪುತ್ತೂರು – ಉಪ್ಪಿನಂಗಡಿ ಟ್ವಿನ್ ಸಿಟಿಯ ನಡುವಿನ ಬನ್ನೂರು ಪುತ್ತೂರು ಪೇಟೆಗೆ ಕೂಗಳತೆಯ ದೂರದಲ್ಲಿದೆ. ಇಲ್ಲಿನ ಅಲುಂಬುಡ ಪ್ರದೇಶದಲ್ಲಿ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ತಲೆಎತ್ತಿದೆ. ಪಟ್ಟಣದ್ದೇ ವಾತಾವರಣ ಆದರೆ ತೋಟದ ನಡುವೆ ಶಾಲೆ. ಹೇಗಿರಬಹುದು ನೀವೇ ಊಹಿಸಿ. ಕಣ್ಣು ಸುಸ್ತಾಗಿ ಹೊರ ನೋಡಿದರೆ ಹಚ್ಚ ಹಸುರಿನ ಪರಿಸರ ಕಣ್ಣಿಗೆ ಇಂಪು. ದಿನವಿಡೀ ಸ್ವಚ್ಛ

ಶೈಕ್ಷಣಿಕ ಹಬ್‌ ಹಿರಿಮೆಗೆ ಮತ್ತೊಂದು ಗರಿಮೆ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್  | ಜೂನ್ 5: ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶೋತ್ಸವ Read More »

ಹಿಂದೂಗಳ ಮೇಲೆ ದಬ್ಬಾಳಿಕೆ ನಡೆದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ : ಅರುಣ್ ಕುಮಾರ್ ಪುತ್ತಿಲ

ಸುಳ್ಯ: ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ, ದೌರ್ಜನ್ಯಗಳ ನಡೆದರೆ ಹಿಂದೂ ಸಮಾಜ ಅದಕ್ಕೆ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ ಎಂದು ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ. ಅವರು ಸುಳ್ಯದ ಜಾಲ್ಸೂರು ಗ್ರಾಮದ ಅಡ್ಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ವತಿಯಿಂದ ಲೋಕಕಲ್ಯಾಣಾರ್ಥವಾಗಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಖಾಕಿ ವ್ಯವಸ್ಥೆಯಡಿ ದೌರ್ಜನ್ಯ ಎಸಗಬೇಡಿ. ಧಾರ್ಮಿಕ ವ್ಯವಸ್ಥೆ

ಹಿಂದೂಗಳ ಮೇಲೆ ದಬ್ಬಾಳಿಕೆ ನಡೆದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ : ಅರುಣ್ ಕುಮಾರ್ ಪುತ್ತಿಲ Read More »

ನಾಳೆ (ಜೂ.5) : ಬೃಹತ್ ಬಟ್ಟೆಗಳ ಮೇಳ “ನ್ಯೂ ಚೆನ್ನೈ ಶಾಪಿಂಗ್” ಶುಭಾರಂಭ

ಪುತ್ತೂರು: ಬೃಹತ್ ಬಟ್ಟೆಗಳ ಮೇಳ “ನ್ಯೂ ಚೆನ್ನೈ ಶಾಪಿಂಗ್” ಜೂ.5 ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶುಭಾರಂಭಗೊಳ್ಳಲಿದೆ. ಈ ಮೇಳದಲ್ಲಿ ಕ್ಯಾಶುವಲ್ ಶರ್ಟ್ & ಫಾರ್ಮಲ್ ಶರ್ಟ್, ಲಾಂಗ್ ಫ್ರಾಕ್ & ಲಾಂಗ್ ಚೂಡಿದಾರ್, ಸೀರೆಗಳು ಹಾಗೂ ರೆಡಿಮೆಡ್ ಬಟ್ಟೆಗಳು ಲಭ್ಯವಿದ್ದು, ಮಕ್ಕಳಿಂದ ತೊಡಗಿ ದೊಡ್ಡವರ ವರೆಗೆ ಯಾವುದೇ ವಸ್ತುಗಳನ್ನು ತೆಗೆದುಕೊಂಡರೂ ಕೇವಲ 199 ರೂಪಾಯಿ ಮಾತ್ರ ಆಗಿರುತ್ತದೆ. ದಿ ಫ್ಯಾಮಿಲಿ ಶಾಪ್ ಧ್ಯೇಯ ವಾಕ್ಯದೊಂದಿಗೆ ಆರಂಭಗೊಳ್ಳುವ ಈ ಮೇಳದ ಸದುಪಯೋಗವನ್ನು ಗ್ರಾಹಕರ ಪಡೆದುಕೊಳ್ಳಬಹುದು

ನಾಳೆ (ಜೂ.5) : ಬೃಹತ್ ಬಟ್ಟೆಗಳ ಮೇಳ “ನ್ಯೂ ಚೆನ್ನೈ ಶಾಪಿಂಗ್” ಶುಭಾರಂಭ Read More »

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದ ಶಿಲಾನ್ಯಾಸದ ಆಮಂತ್ರಣ ಪತ್ರಿಕೆ ಅನಾವರಣ

ಕಾಣಿಯೂರು: ಶ್ರೀ ಕ್ಷೇತ್ರ ಬರೆಪ್ಪಾಡಿ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಜೂ.4 ರಂದು ನಡೆಯಿತು. ಜೂ 10ರಂದು  ಶ್ರೀ ಕ್ಷೇತ್ರದಲ್ಲಿ ಶಿ ಲಾನ್ಯಾಸ ಕಾರ್ಯಕ್ರಮದ ನಡೆಯಲಿದ್ದು,. ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದ ಶಿಲಾನ್ಯಾಸದ ಆಮಂತ್ರಣ ಪತ್ರಿಕೆ ಅನಾವರಣ Read More »

ಜೂ.10 : ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

ಪುತ್ತೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜೂ.10 ರಂದು ನಡೆಯಲಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದು, ಜೀರ್ಣೋದ್ಧಾರಗೊಳಿಸು ಸಂಕಲ್ಪವನ್ನು ಈಗಾಗಲೇ ಮಾಡಲಾಗಿದ್ದು., ಜೂ.10 ರಂದು ಬೆಳಿಗ್ಗೆ 6.58 ರ ಮುಹೂರ್ತದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಶಿಲಾನ್ಯಾಸಕ್ಕೆ ಚಾಲನೆ ನೀಡಲಾಗುವುದು. ಈ ದೇವಸ್ಥಾನವು ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕಾರಣಿಕ ತೀರ್ಥ ಕ್ಷೇತ್ರವಾಗಿದೆ.

ಜೂ.10 : ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ Read More »

ವಿದ್ಯುತ್ ದರ ಪ್ರತಿ ಯುನಿಟ್ ಗೆ 70 ಪೈಸೆ ಹೆಚ್ಚಳ | ಸರಕಾರದಿಂದ ಆದೇಶ | ನಷ್ಟ ಭರ್ತಿ ಮಾಡಲು ಗ್ರಾಹಕರ ಮೇಲೆ ಬರೆ

ಬೆಂಗಳೂರು: ಈಗಾಗಲೇ ಕಾಂಗ್ರೆಸ್ ಸರಕಾರ ಗೃಹಜ್ಯೋತಿ ಸ್ಕೀಂನಲ್ಲಿ ಎಲ್ಲರಿಗೂ 200 ಯುನಿಟ್ ತನಕ ುಚಿತ ವಿದ್ಯುತ್ ಘೋಷಣೆ ಮಾಡಿದ ಬೆನ್ನಲ್ಲೇ ಪ್ರತಿ ಯುನಿಟ್ ಗೆ 70 ಪೈಸೆಯಷ್ಟು ಹೆಚ್ಚಳ ಮಾಡಿ ನಷ್ಟ ಭರ್ತಿ ಮಾಡಲು ಗ್ರಾಹಕರಿಗೆ ಬರೆ ಹಾಕಲು ಮುಂದಾಗಿದೆ. ಜೂ.1 ರಿಂದಲೇ ಜ್ಯಾರಿಗೆ ಬರುವಂತೆ ಸರಕಾರ ಇದೀಗ ಆದೇಶ ಹೊರಡಿಸಿದೆ. ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ ಪ್ರತಿ ಯುನಿಟ್ ಗೆ 70 ಪೈಸೆ ಹೆಚ್ಚಳ ಮಾಡಿದ್ದು, ವಿದ್ಯುತ್ ಸರಬರಾಜು ಕಂಪೆನಿಗಳಿಗೆ ನಷ್ಟದ ಕಾರಣ ನೀಡಿ ಈ

ವಿದ್ಯುತ್ ದರ ಪ್ರತಿ ಯುನಿಟ್ ಗೆ 70 ಪೈಸೆ ಹೆಚ್ಚಳ | ಸರಕಾರದಿಂದ ಆದೇಶ | ನಷ್ಟ ಭರ್ತಿ ಮಾಡಲು ಗ್ರಾಹಕರ ಮೇಲೆ ಬರೆ Read More »

error: Content is protected !!
Scroll to Top