ಪಕ್ಷ ವಿರೋಧಿ ಚಟುವಟಿಕೆ : 17 ಮಂದಿ ಕಾಂಗ್ರೆಸ್ ನಿಂದ ಉಚ್ಛಾಟನೆ

ನೆಲ್ಯಾಡಿ : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆರಿಬ್ಬರ ಸಹಿತ 17 ಮಂದಿಯನ್ನು ಕಾಂಗ್ರೆಸ್‍ ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ. ತಾಲೂಕು ಪಂಚಾಯಿತಿ ಸದಸ್ಯೆ ಉಷಾ ಅಂಚನ್, ಆಶಾ ಲಕ್ಷ್ಮಣ್ ಗುಂಡ್ಯ, ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಮಾಜಿ ಸದಸ್ಯ ಪ್ರವೀಣ್ ಕುಮಾರ್ ಕೆಡೆಂಜಿ, ಕುಟ್ರುಪ್ಪಾಡಿ ಗ್ರಾಪಂ ಮಾಜಿ ಸದಸ್ಯ ಸೇವಿಯರ್ ಬೇಬಿ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ದೇವಾಡಿಗ, ಎಪಿಎಂಸಿ […]

ಪಕ್ಷ ವಿರೋಧಿ ಚಟುವಟಿಕೆ : 17 ಮಂದಿ ಕಾಂಗ್ರೆಸ್ ನಿಂದ ಉಚ್ಛಾಟನೆ Read More »

ಕೆಲಸಕ್ಕೆಂದು ತೆರಳಿದ ಯುವತಿ ನಾಪತ್ತೆ

ವಿಟ್ಲ: ಕೆಲಸಕ್ಕೆಂದು ತೆರಳಿದ ವಿಟ್ಲದ ಯುವತಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣ ನಡೆದಿದೆ. ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ನಿವಾಸಿ ಬಾಲಕೃಷ್ಣ ಎಂಬವರ ಪುತ್ರಿ ಶ್ರೀದೇವಿ (23) ನಾಪತ್ತೆಯಾದವರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ವಲಯ ಸೇವಾ ಪ್ರತಿನಿಧಿಯಾಗಿರುವ ಶ್ರೀದೇವಿ ಜೂ.9 ರಂದು ಮನೆಯಿಂದ ಕೆಲಸಕ್ಕೆಂದು ತೆರಳಿದವರು ಸಂಜೆ ವರೆಗೂ ಬಾರದ ಹಿನ್ನಲೆಯಲ್ಲಿ ವಿಟ್ಲ ಪೇಟೆ, ಸಂಬಂಧಿಕರ ಮನೆ ಸಹಿತ ವಿವಿಧೆಡೆ ಹುಡುಕಾಟ ನಡೆಸಲಾಗಿತ್ತು. ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಎಲ್ಲೂ ಕಂಡುಬರದ ಹಿನ್ನಲೆಯಲ್ಲಿ ವಿಟ್ಲ ಠಾಣೆಗೆ

ಕೆಲಸಕ್ಕೆಂದು ತೆರಳಿದ ಯುವತಿ ನಾಪತ್ತೆ Read More »

ಎ ಪ್ಲಾಸ್ಟಿಕ್ ಅನೆಮಿಯ ಖಾಯಿಲೆಗೆ ತುತ್ತಾದ ಲಲಿತಾ ಪೂಜಾರಿ | ಚಿಕಿತ್ಸೆ ವೆಚ್ಚಕ್ಕೆ ಧನ ಸಹಾಯಕ್ಕಾಗಿ ವಿನಂತಿ

ಬೆಳ್ತಂಗಡಿ: ಲಲಿತಾ ಪೂಜಾರಿ ತೋಟತ್ತಾಡಿ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಧನಸಹಾಯ ಕೋರಿದ್ದಾರೆ. ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ನಿವಾಸಿಯಾಗಿರುವ ಲಲಿತಾ ಪೂಜಾರಿ  ಎ ಪ್ಲಾಸ್ಟಿಕ್ ಅನೆಮಿಯ ಖಾಯಿಲೆಗೆ ತುತ್ತಾಗಿದ್ದು, ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಅವರ ಚಿಕಿತ್ಸೆಗೆ ಲಕ್ಷಗಟ್ಟಲೆ ವೆಚ್ಚವಾಗಿದ್ದು, ಇನ್ನೂ 10 ಲಕ್ಷಕ್ಕಿಂತಲೂ ಅಧಿಕ ಖರ್ಚು ತಗಲಬಹುದು ಎಂದು ಅಂದಾಜಿಸಲಾಗಿದೆ. ಬಡ ಕುಟುಂಬದವರಾಗಿದ್ದ ಅವರು ಈಗಾಗಲೇ ಸಾಲದಿಂದ ನೊಂದಿದ್ದು, ಚಿಕಿತ್ಸೆ ಖರ್ಚು ಭರಿಸಲು ದಾನಿಗಳಿಂದ ಸಹಾಯ ನಿರೀಕ್ಷಿಸುತ್ತಿದ್ದಾರೆ. ತಮ್ಮಿಂದಾದ ಸಹಾಯ ನೀಡುವಂತೆ ದುರ್ಗಾವಾಹಿನಿ

ಎ ಪ್ಲಾಸ್ಟಿಕ್ ಅನೆಮಿಯ ಖಾಯಿಲೆಗೆ ತುತ್ತಾದ ಲಲಿತಾ ಪೂಜಾರಿ | ಚಿಕಿತ್ಸೆ ವೆಚ್ಚಕ್ಕೆ ಧನ ಸಹಾಯಕ್ಕಾಗಿ ವಿನಂತಿ Read More »

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಗುಂಡೂರಾವ್ ಜಿಲ್ಲೆಗೆ ಭೇಟಿ | ಪುತ್ತೂರು ಶಾಸಕರಿಂದ ಸ್ವಾಗತ

ಪುತ್ತೂರು: ದ.ಕ.ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಗುಂಡೂರಾವ್ ಅವರನ್ನು ಪುತ್ತೂರು  ಶಾಸಕ ಅಶೋಕ್ ಕುಮಾರ್ ರೈ ಹೂಗುಚ಼್ಛ ನೀಡಿ ಸ್ವಾಗತಿಸಿದರು. ಶಾಸಕರ ಜತೆ ಮಾಜಿ ಶಾಸಕ ಶಕುಂತಳಾ ಟಿ. ಶೆಟ್ಟಿ ಉಪಸ್ಥಿತರಿದ್ದರು. ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ಪ್ರಯಾಣ ಜಾರಿಗೆ ತರಲಾಗಿದ್ದು, ಈ ಕುರಿತು ಮಧ್ಯಾಹ್ನ 3 ಗಂಟೆಗೆ ಸಚಿವರು ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಯಲಿದ್ದಾರೆ.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಗುಂಡೂರಾವ್ ಜಿಲ್ಲೆಗೆ ಭೇಟಿ | ಪುತ್ತೂರು ಶಾಸಕರಿಂದ ಸ್ವಾಗತ Read More »

ಪುತ್ತೂರು: ಕೆಪಿಸಿಸಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ ಅವರಿಂದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ- ವಿವಿಧ ಬೇಡಿಕೆ ಸಲ್ಲಿಕೆ

ಕಾಣಿಯೂರು: ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀ ಬಿಲ್ಲವ ಸಂಘದ ಅಧ್ಯಕ್ಷರು, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು, ಕೆಪಿಸಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿರವರು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಗೂಡೂರಾವ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ದ. ಕ ಜಿಲ್ಲಾ ಉಸ್ತುವಾರಿ ಸಚಿವ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಆಗಿರುವ ದಿನೇಶ್ ಗುಂಡೂರಾವ್ ಅವರು ಮೊದಲ ಬಾರಿಗೆ ಭಾನುವಾರ ಮಂಗಳೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಭೇಟಿ ಮಾಡಿದ ಸತೀಶ್ ಕುಮಾರ್

ಪುತ್ತೂರು: ಕೆಪಿಸಿಸಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ ಅವರಿಂದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ- ವಿವಿಧ ಬೇಡಿಕೆ ಸಲ್ಲಿಕೆ Read More »

ಹೊಳೆಗೆ ಬಿದ್ದ ಕಾರು ಓರ್ವ ಮೃತ್ಯು. ಇನ್ನೋರ್ವನಿಗೆ ಗಂಭೀರ ಗಾಯ.

ನೆಲ್ಯಾಡಿ : ರಾಷ್ಟ್ರೀಯ ಹೆಚ್ಚಾರಿ 75ರ ಶಿರಾಡಿ ಅಡ್ಡ ಹೊಳೆ ಸೇತುವೆಯಿಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಪರಿಣಾಮ ಓರ್ವ ಮೃತಪಟ್ಟರೆ ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಮೃತಪಟ್ಟವರನ್ನು ತಮಿಳುನಾಡಿನ ಹೊಸೂರು ಮೂಲದ ಹರಿಪ್ರಸಾದ್ (50) ಎಂದು ಗುರುತಿಸಲಾಗಿದ್ದು, ಗೋಪಿ (48) ಎಂಬವರು ಗಾಯಗೊಂಡವರು.  ಕಾರು ಹೊಸೂರಿನಿಂದ ಮಂಗಳೂರು ಕಡೆಗೆ ಬರುತ್ತಿತ್ತು ಎನ್ನಲಾಗುತ್ತಿದೆ. ಗಾಯಾಳುವಿಗೆ ನೆಲ್ಯಾಡಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ

ಹೊಳೆಗೆ ಬಿದ್ದ ಕಾರು ಓರ್ವ ಮೃತ್ಯು. ಇನ್ನೋರ್ವನಿಗೆ ಗಂಭೀರ ಗಾಯ. Read More »

ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು

ನೆಲ್ಯಾಡಿ: ಮಾರುತಿ ಎರ್ಟಿಗಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಉರುಳಿ ಬಿದ್ದ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಅಡ್ಡಹೊಳೆ ಎಂಬಲ್ಲಿ ರಸ್ತೆ ಬದಿಯ ಹೊಳೆಗೆ ಕಾರು ಉರುಳಿ ಬಿದ್ದಿದೆ. ಗಾಯಾಳುವನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು Read More »

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಚಂಡೆ, ಮದ್ದಳೆ ಮತ್ತು ಭಾಗವತಿಕೆಯ ತರಬೇತಿ.ಉದ್ಘಾಟನೆ

ಪುತ್ತೂರು: ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಚಂಡೆ ವಾದನ ತರಬೇತಿ ಉದ್ಗಾಟನೆ ನಡೆಯಿತು. ತೆಂಕತಿಟ್ಟಿನ ಹೆಸರಾಂತ ಚಂಡೆ ವಾದಕ ದೇಲಂತಮಜಲು ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ತರಬೇತಿಯ ಪ್ರಯೋಜನವನ್ನು ಪಡೆದು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಎಸ್. ಡಿ.ಎಂ.ಸಿ ಸದಸ್ಯ ವಿಷ್ಣು ಕನ್ನಡಗುಳಿ,ಮಾಣಿಲ ಮಾತನಾಡಿ, ಅನೇಕ ಪ್ರಸಿದ್ಧ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರ ತವರೂರಾಗಿದೆ, ಮುಂದೆ ನಮ್ಮ ವಿದ್ಯಾರ್ಥಿಗಳೂ ಸಹ ಇಂತಹ ಕಲಾವಿದರಾಗಿ ರೂಪುಗೊಳ್ಳಲಿ ಎಂದರು. ಮುಖ್ಯಶಿಕ್ಷಕ ಭುವನೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಚಂಡೆ, ಮದ್ದಳೆ ಮತ್ತು ಭಾಗವತಿಕೆಯ ತರಬೇತಿ.ಉದ್ಘಾಟನೆ Read More »

ಸಿಡಿಲು ಬಡಿದು ಮನೆಗೆ ಹಾನಿ,

ಪತ್ತೂರು : ಇಂದು ಮಧ್ಯಾಹ್ನ ವೇಳೆ ಗುಡುಗು ಮಳೆಗೆ ಕಾವು ಮಾಡ್ನರು ಗ್ರಾಮದ ಪರನೀರು ಎಂಬಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಯಾದ ಘಟನೆ ನಡೆದಿದೆ. ಪರನೀರು ನಿವಾಸಿ ಈಶ್ವರ ಗೌಡ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್ ಮೀಟರ್ ಸುಟ್ಟುಹೋಗಿದೆ. ನೆಲಕ್ಕೆ ಹಾಕಲಾಗಿದ್ದ ಟೈಲ್ಸ್ ಪುಡಿಯಾಗಿದೆ. ಘಟನೆ ಸಂದರ್ಭ ಈಶ್ವರ ಗೌಡರು ಮಾತ್ರ ಮನೆಯಲ್ಲಿದ್ದರು ಎಂದು ತಿಳಿದು ಬಂದಿದೆ.

ಸಿಡಿಲು ಬಡಿದು ಮನೆಗೆ ಹಾನಿ, Read More »

ಯಂತ್ರಶ್ರೀ ನಾಟಿ ಯಂತ್ರದ ಚಾಲನಾ ತರಬೇತಿಗೆ ಚಾಲನೆ

ಸುಳ್ಯ : ಸುಳ್ಯ ಸಿಹೆಚ್ಎಸ್ ಸಿ ವಿಭಾಗ ವ್ಯಾಪ್ತಿಯ ಪುತ್ತೂರು ಉಪ್ಪಿನಂಗಡಿ ಪೆರಿಯಡ್ಕ ಕೊರಗಪ್ಪರವರ ಜಮೀನು ನಲ್ಲಿ  ಯಂತ್ರಶ್ರೀ ನಾಟಿ ಯಂತ್ರದ ಚಾಲನ ತರಬೇತಿ ಕಾರ್ಯಾಗಾರ ಶನಿವಾರ ನಡೆಯಿತು. ಕಾರ್ಯಾಗಾರವನ್ನು ರಾಧಮ್ಮ ಉದ್ಘಾಟಿಸಿದರು. ಕೇಂದ್ರ ಕಛೇರಿ ಕೃಷಿ ವಿಭಾಗದ ಯಂತ್ರಶ್ರೀ ಯೋಜನಾಧಿಕಾರಿ ಜಯನಂದ ಚಾಲಕರಿಗೆ ತರಬೇತಿಯನ್ನು ಉತ್ತಮ ರೀತಿಯಲ್ಲಿ ಪಡೆದುಕೊಂಡು ಸಿಹೆಚ್ಎಸ್ ಸಿ ಕೇಂದ್ರದಲ್ಲಿ ಉತ್ತಮ ಸೇವೆಯನ್ನು ನೀಡಿ ಎಂದು ತಿಳಿಸಿದರು. ನಾಟಿ ಯಂತ್ರದ ಚಾಲನೆ ಮತ್ತು ಅನುಪಾಲನೆ ಮಾಡುವ ಬಗ್ಗೆ ತಾಂತ್ರಿಕ ಅಭಿಯಂತರ ತೇಜಸ್ ಮತ್ತು

ಯಂತ್ರಶ್ರೀ ನಾಟಿ ಯಂತ್ರದ ಚಾಲನಾ ತರಬೇತಿಗೆ ಚಾಲನೆ Read More »

error: Content is protected !!
Scroll to Top