ಜು.16 ರ ವರಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ

ಬೆಂಗಳೂರು : ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 16ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ರಾಮನಗರ, ತುಮಕೂರು, ವಿಜಯಪುರದಲ್ಲಿ […]

ಜು.16 ರ ವರಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ Read More »

ಸರಕಾರದ ಉಚಿತ ಯೋಜನೆಯ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಪ್ರತಿಭಟನೆ

ಪುತ್ತೂರು: ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟ, ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ, ಕರ್ನಾಟಕ ವಿದ್ಯುತ್ ಕಂಬ  ಅಳವಡಿಸುವವರ ಸಂಘದ ವತಿಯಿಂದ ಸರಕಾರಿ ಬಸ್‍ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಿಂದಾಗಿ ಟೂರಿಸ್ಟ್ ವಾಹನ ಚಾಲಕ-ಮಾಲಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಪ್ರತಿಭಟನೆ ಸೋಮವಾರ ಆಡಳಿತ ಸೌಧದ ಬಳಿ ಇರುವ ಅಮರ್ ಜವಾನ್ ಸ್ಮಾರದ ಬಳಿ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಕರ್ನಾಟಕ ಕಾರ್ಮಿಕ ಒಕ್ಕೂಟಗಳ ಅಧ್ಯಕ್ಷ ಬಿ.ಪುರಂದರ ಭಟ್ ಮಾತನಾಡಿ, ಸರಕಾರದ ಉಚಿತ ಯೋಜನೆಯಿಂದ ಕಾರ್ಮಿಕರು, ಖಾಸಗಿ ವಾಹನ ಚಾಲಕ-ಮಾಲಕರು ಬೀದಿಗೆ

ಸರಕಾರದ ಉಚಿತ ಯೋಜನೆಯ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಪ್ರತಿಭಟನೆ Read More »

ಜೈನಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಅಗತ್ಯವಿಲ್ಲ : ಜಿ.ಪರಮೇಶ್ವರ್ ಹೇಳಿಕೆ

ಹುಬ್ಬಳ್ಳಿ : ಜೈನಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಅಗತ್ಯವಿಲ್ಲ ಗೃಹ ಇಲಾಖೆ ಸಮರ್ಥವಾಗಿದೆ. ನಮ್ಮ ಇಲಾಖೆಯ ತನಿಖೆ ಮುಗಿದ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಆಗಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಯಾರೂ ರಾಜಕೀಯ ತಾರತಮ್ಯ ಮಾಡುವುದಿಲ್ಲ ಎಂದು ತಿಳಿಸಿದರು. ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಮುಂದಿನ ದಿನದಲ್ಲಿ ಇಂತಹ ಕೃತ್ಯ

ಜೈನಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಅಗತ್ಯವಿಲ್ಲ : ಜಿ.ಪರಮೇಶ್ವರ್ ಹೇಳಿಕೆ Read More »

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನ ನೂತನ ರಥಕ್ಕೆ ದಡೆ ಮುಹೂರ್ತ

ಬೆಳ್ಳಾರೆ :  ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನೂತನ ಬ್ರಹ್ಮರಥ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿದ್ದು ಜು.10 ರಂದು  ದಡೆ ಮೂಹರ್ತ ನಡೆಯಿತು. ದೇವಸ್ಥಾನದ   ಪ್ರಧಾನ ಅರ್ಚಕರಾದ ಶ್ರೀನಿವಾಸ ಹೆಬ್ಬಾರ್ ಪೂಜೆ ಕಾರ್ಯಕ್ರಮ ನೆರೆವೇರಿಸಿದರು.  ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ  ಪದ್ಮನಾಭ ಶೆಟ್ಟಿ, ಸದಸ್ಯರಾದ  ವೆಂಕಟಕೃಷ್ಣ ರಾವ್ ,ನಾರಾಯಣ ಕೊಂಡೆಪ್ಪಾಡಿ,ಹಾಗೂ.ಕಾಷ್ಟಾ ಶಿಲ್ಪಿಗಳಾದ ಹರೀಶ್ ಆಚಾರ್ಯ ಬೊಲಿಯಾರು,ಸಂತೋಷ್ ಆಚಾರ್ಯ, ಬಾಲಕೃಷ್ಣ ಆಚಾರ್ಯ, ಮತ್ತು  ಭೋಜರಾಜ್ ಶೆಟ್ಟಿ ಕಲ್ಕಂಪಾಡಿಗುತ್ತು,ದೇವದಾಸ್ ಶೆಟ್ಟಿ,  ದೇವರಮಾರ್,ಪ್ರೀತಮ್ ರೈ ಪೆರುವಾಜೆ,ಸುಧಾನಂದ ಪೆರುವಾಜೆ, ಗಣೇಶ್ ಪೂಜಾರಿ 

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನ ನೂತನ ರಥಕ್ಕೆ ದಡೆ ಮುಹೂರ್ತ Read More »

ಮಂಗಳವಾರದಿಂದ ರಾಜ್ಯಾದ್ಯಂತ ಹಗಲಿರುಳು ತೆರೆಯಲಿರುವ ಮದ್ಯದಂಗಡಿ | ಮೊದಲು ಜ್ಯಾರಿಗೊಳಿಸಿದ ಏಕೈಕ ರಾಜ್ಯ ಹರಿಯಾಣ

ಹರಿಯಾಣ: ಹರಿಯಾಣದ ಉಪಮುಖ್ಯಮಂತ್ರಿ ದುಶ್ಯಂತ್ ಚೌತಾಲಾ ಅವರು ಮಂಗಳವಾರದಿಂದ ರಾಜ್ಯದಾದ್ಯಂತ ಎಲ್ಲಾ ರೆಸ್ಟೋರೆಂಟ್‌ಗಳಿಗೆ ಹಗಲಿರುಳು ತೆರೆದಿರಲು ಅನುಮತಿ ನೀಡಿದ್ದಾರೆ. ಈ ನಿರ್ಧಾರ ತೆಗೆದುಕೊಂಡ ಉತ್ತರ ಭಾರತದ ಏಕೈಕ ರಾಜ್ಯ ಹರಿಯಾಣವಾಗಿದೆ. ಸರ್ಕಾರದ ಈ ನಿರ್ಧಾರದಿಂದ ಗುರುಗ್ರಾಮ್‌ನ ರೆಸ್ಟೋರೆಂಟ್ ಮಾಲೀಕರು ತುಂಬಾ ಸಂತೋಷಗೊಂಡಿದ್ದಾರೆ ಮತ್ತು ಸ್ಥಳೀಯ ನಿವಾಸಿಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳ (ಎಂಎನ್‌ಸಿ) ಉದ್ಯೋಗಿಗಳಿಗೆ ತಡರಾತ್ರಿಯವರೆಗೆ ಆಹಾರವನ್ನು ಒದಗಿಸುವ ಮೂಲಕ ಹಣ ಸಂಪಾದಿಸಲು ಸಾಧ್ಯವಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಹಗಲಿರುಳು ಮಾರಾಟ ಮಾಡಲು ಕೆಲವು ಕಡೆ ನಿಷೇದ ಮಾಡಲಾಗಿರುತ್ತದೆ.

ಮಂಗಳವಾರದಿಂದ ರಾಜ್ಯಾದ್ಯಂತ ಹಗಲಿರುಳು ತೆರೆಯಲಿರುವ ಮದ್ಯದಂಗಡಿ | ಮೊದಲು ಜ್ಯಾರಿಗೊಳಿಸಿದ ಏಕೈಕ ರಾಜ್ಯ ಹರಿಯಾಣ Read More »

ಕರ್ಕಿಸ್ಥಾನದಲ್ಲಿ ನಡೆದ ಏಷ್ಯಾ ಚೆಸ್ ಚಾಂಪಿಯನ್ ಶಿಪ್‍ | ಆದ್ಯಾ ಗೌಡ ಮೂರನೇ ಸ್ಥಾನ

ಪುತ್ತೂರು: ಕಳೆದ ಒಂದು ವಾರದಿಂದ ಕರ್ಕಿಸ್ಥಾನ್‍ ನಲ್ಲಿ ನಡೆದ ಏಷ್ಯಾ ಮಟ್ಟದ 10 ವರ್ಷದೊಳಗಿನ ಚೆಸ್ ಸ್ಪರ್ಧೆಯಲ್ಲಿ ಆದ್ಯಾ ಗೌಡ ಮೂರನೇ ಸ್ಥಾನ ಗಳಿಸಿದ್ದು, ವುಮೆನ್ ವುಮೆನ್  ಕ್ಯಾಂಡಿಡೇಟ್ ಮಾಸ್ಟರ್ ಗ್ರೇಡ್ ಲಭಿಸಿದೆ. ಇತ್ತೀಚೆಗೆ ಇಂಡಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿ ಕರ್ಕಿಸ್ಥಾನದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಅವರು ಬೆಂಗಳೂರಿನ ಕೇಂಬ್ರಿಡ್ಜ್‍ ಇಂಗ್ಲೀಷ್ ಸ್ಕೂಲ್‍ನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅರವಿಂದ ಹಾಗೂ ಡಾ.ರಮ್ಯಾ ದಂಪತಿ ಪುತ್ರಿಯಾಗಿದ್ದಾರೆ. ಜಿನ್ನಪ್ಪ ಗೌಡ ಮಳುವೇಲು ಹಾಗೂ

ಕರ್ಕಿಸ್ಥಾನದಲ್ಲಿ ನಡೆದ ಏಷ್ಯಾ ಚೆಸ್ ಚಾಂಪಿಯನ್ ಶಿಪ್‍ | ಆದ್ಯಾ ಗೌಡ ಮೂರನೇ ಸ್ಥಾನ Read More »

ಗ್ರಾಪಂ ಉಪಚುನಾವಣೆ | ನಿಡ್ಪಳ್ಳಿ ಗ್ರಾಪಂಗೆ ಪುತ್ತಿಲ ಪರಿವಾರದ ಅಭ್ಯರ್ಥಿಯಾಗಿ ಜಗನ್ನಾಥ ರೈ ಕೊಳೆಂಬೆತ್ತಿಮಾರು ನಾಮಪತ್ರ ಸಲ್ಲಿಕೆ

ನಿಡ್ಪಳ್ಳಿ : ನಿಡ್ಪಳ್ಳಿ ಗ್ರಾಮ ಪಂಚಾಯತ್ ನ ಉಪಚುನಾವಣೆಗೆ ಪುತ್ತಿಲ ಪರಿವಾರದಿಂದ ಅಭ್ಯರ್ಥಿಯಾಗಿ ನಾಮಪತ್ರ ಜಗನ್ನಾಥ್ ರೈ ಕೊಳೆಂಬೆತ್ತಿಮಾರು ನಾಮಪತ್ರ ಸಲ್ಲಿಸಿದರು. ಸೋಮವಾರ ಪುತ್ತಿಲ ಪರಿವಾರದ ಮುಖಂಡರೊಂದಿಗೆ ತೆರಳಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತಾ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ, ಪ್ರಮುಖರಾದ ಸುಧೀರ್ ರೈ ನೇಸರ ಕಂಪ, ನಗರ ಅಧ್ಯಕ್ಷ ಅನಿಲ್ ತೆಂಕಿಲ, ಕುಮಾರ್

ಗ್ರಾಪಂ ಉಪಚುನಾವಣೆ | ನಿಡ್ಪಳ್ಳಿ ಗ್ರಾಪಂಗೆ ಪುತ್ತಿಲ ಪರಿವಾರದ ಅಭ್ಯರ್ಥಿಯಾಗಿ ಜಗನ್ನಾಥ ರೈ ಕೊಳೆಂಬೆತ್ತಿಮಾರು ನಾಮಪತ್ರ ಸಲ್ಲಿಕೆ Read More »

ಉದ್ಯಮ ಯಶಸ್ವಿಯಾಗಬೇಕಾದರೆ ಆಡಳಿತ –ಸಿಬ್ಬಂದಿ ವರ್ಗ ಗಾಡಿಯ ನಾಲ್ಕು ಚಕ್ರದಂತಿರಬೇಕು : ಹರೀಶ್ ಕುಮಾರ್ | ಸುಳ್ಯ ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ 22ನೇ ಶಾಖೆ ಶುಭಾರಂಭ

ಮುಂಡಾಜೆ : ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 22ನೇ ಶಾಖೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೋಮಂತಡ್ಕ ಡಿಸೋಜಾ ಕಾಂಪ್ಲೆಕ್ಸ್ ಒಂದನೇ ಮಹಡಿಯಲ್ಲಿ ಭಾನುವಾರ ಶುಭಾರಂಭಗೊಂಡಿತು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಉದ್ಯಮ ಯಶಸ್ವಿಯಾಗಬೇಕಾದರೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಒಂದೇ ಗಾಡಿಯ ನಾಲ್ಕು ಚಕ್ರದಂತೆ ಸಾಗಬೇಕು. ಹಾಗಾದರೆ ಯಶಸ್ವಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ವೆಂಕಟರಮಣ ಸೊಸೈಟಿ ಅನೇಕ ಸಾಮಾಜಿಕ ಅಭಿವೃದ್ಧಿ ಧ್ಯೇಯವನ್ನಿಟ್ಟುಕೊಂಡು ಗ್ರಾಹಕರ ವಿಶ್ವಾಸ ಪಡೆದು

ಉದ್ಯಮ ಯಶಸ್ವಿಯಾಗಬೇಕಾದರೆ ಆಡಳಿತ –ಸಿಬ್ಬಂದಿ ವರ್ಗ ಗಾಡಿಯ ನಾಲ್ಕು ಚಕ್ರದಂತಿರಬೇಕು : ಹರೀಶ್ ಕುಮಾರ್ | ಸುಳ್ಯ ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ 22ನೇ ಶಾಖೆ ಶುಭಾರಂಭ Read More »

ಜೈನಮುನಿಗಳ ಹತ್ಯೆ ತಲೆತಗ್ಗಿಸುವಂತಹ ಕೃತ್ಯ| ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು : ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಬೆಳಗಾವಿ ಜಿಲ್ಲೆಯ ನಂದಿ ಪರ್ವತ ಆಶ್ರಮದ ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆಯ ಸುದ್ದಿ ತೀವ್ರ ಆಘಾತವುಂಟುಮಾಡಿದ್ದು, ಅಹಿಂಸೆಯೇ ಪರಮಧರ್ಮ ಎಂದು ಬೋಧಿಸಿದ ಜೈನ ಮುನಿಗಳ ಈ ರೀತಿಯ ಹತ್ಯೆ ರಾಜ್ಯವೇ ತಲೆ ತಗ್ಗಿಸಿ ತಗ್ಗಿಸುವಂತಹ  ಕೃತ್ಯವಾಗಿದೆ  ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ. ದಿಗಂಬರ ಮುನಿ ಕಾಮಕುಮಾರ ನಂದಿ ಮಹಾರಾಜ ಶಾಂತಿಪ್ರಿಯರಾಗಿದ್ದರು. ಧರ್ಮಕ್ಕಾಗಿ ಸರ್ವಸ್ವ ತ್ಯಾಗ ಮಾಡಿದವರು. ಸಲ್ಲೇಖನ ಅಥವಾ ಸಮಾಧಿ ಸ್ಥಿತಿಯ ಮೂಲಕ ಅವರು ಪ್ರಾಣ

ಜೈನಮುನಿಗಳ ಹತ್ಯೆ ತಲೆತಗ್ಗಿಸುವಂತಹ ಕೃತ್ಯ| ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು : ಅರುಣ್ ಕುಮಾರ್ ಪುತ್ತಿಲ Read More »

ಒಕ್ಕೆತ್ತೂರು ಕೊಡಂಗೆಯಲ್ಲಿ ಜರಿಯುವ ಹಂತದಲ್ಲಿರುವ ಗುಡ್ಡ | ಕುಟುಂಬ ಸ್ಥಳಾಂತರ| ಪುತ್ತಿಲ ಪರವಾರ ಭೇಟಿ

ಪುತ್ತೂರು: ಬಾರಿ ಮಳೆಗೆ ಒಕ್ಕೆತ್ತೂರು ಕೊಡಂಗೆ ಸುರೇಶ್ ಎಂಬವರ ಮನೆ ಹಿಂಬದಿಯ ಗುಡ್ಡೆ ಜರಿಯುವ ಹಂತದಲ್ಲಿದ್ದು, ಅವರ ಕುಟುಂಬವನ್ನು ಸ್ಥಳಾಂತರಿಸಲಾಯಿತು. ಈ ಕುರಿತು ಪುತ್ತಿಲ ಪರಿವಾರದವರು ಭೇಟಿ ನೀಡಿ ಸರ್ಕಾರ ತಕ್ಷಣ ಈ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳ ಜೊತೆ ಮಾತನಾಡಿ ಅವರ ಕುಟುಂಬವನ್ನು ವಿಟ್ಲದ ಪ್ರವಾಸಿ ಬಂಗಲೆಗೆ ಸ್ಥಳಾಂತರಿಸಲಾಯಿತು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ವತಿಯಿಂದ ಆ ಕುಟುಂಬಕ್ಕೆ ಧನಸಹಾಯ ನೀಡಲಾಯಿತು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ವಿಟ್ಲದ ಪ್ರಮುಖರಾದ ರಘುರಾಮ ರೈ,

ಒಕ್ಕೆತ್ತೂರು ಕೊಡಂಗೆಯಲ್ಲಿ ಜರಿಯುವ ಹಂತದಲ್ಲಿರುವ ಗುಡ್ಡ | ಕುಟುಂಬ ಸ್ಥಳಾಂತರ| ಪುತ್ತಿಲ ಪರವಾರ ಭೇಟಿ Read More »

error: Content is protected !!
Scroll to Top