ಗ್ರಾಪಂ ಉಪ ಚುನಾವಣೆ | ಆರ್ಯಾಪು ಗ್ರಾಪಂನಿಂದ ಪುತ್ತಿಲ ಪರಿವಾರ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯರಿಗೆ ಗೆಲುವು

ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಪಂನ ವಾರ್ಡ್ -2 ನಡೆದ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ 499 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ವಾರ್ಡ್ -2 ರ ಹಿಂದುಳಿದ ವರ್ಗ “ಎ” ಮೀಸಲು ಕ್ಷೇತ್ರದ ಬಿಜೆಪಿ ಬೆಂಬಲಿತ ಸದಸ್ಯ ರುಕ್ಮಯ್ಯ ಮೂಲ್ಯರ ನಿಧನದಿಂದ ತೆರವಾದ ಸ್ಥಾನಕ್ಕೆ ಜು.23 ರಂದು ಉಪ ಚುನಾವಣೆ ನಡೆದಿತ್ತು. ಒಟ್ಟು 1237 ಮತಗಳ ಪೈಕಿ 999 ಮತ ಚಲಾವಣೆಯಾಗಿತ್ತು. ಈ ಪೈಕಿ ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ 499 ಮತ, […]

ಗ್ರಾಪಂ ಉಪ ಚುನಾವಣೆ | ಆರ್ಯಾಪು ಗ್ರಾಪಂನಿಂದ ಪುತ್ತಿಲ ಪರಿವಾರ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯರಿಗೆ ಗೆಲುವು Read More »

ದೆಹಲಿ ಸೇರಿದಂತೆ ಉತ್ತರಭಾರತ ಜಲಾವೃತ | ನೀರಿನಲ್ಲಿ ತೇಲುತ್ತಿರುವ 200 ಕ್ಕೂ ಅಧಿಕ ಕಾರುಗಳು

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತ ಮಳೆಯಿಂದ ಜಲಾವೃತವಾಗಿದ್ದು, ಪ್ರವಾಹದ ನೀರಿನಲ್ಲಿ 200 ಹೆಚ್ಚು ಕಾರುಗಳು ಮುಳುಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ಹಿಂಡೋನ್ ನಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ ಸಮೀಪದ ಮನೆಯ ಜನರನ್ನು ಸ್ಥಳಾಂತರಿಸಲಾಗಿದೆ. ಪೀಡಿತ ಪ್ರದೇಶದಲ್ಲಿ ನೋಯ್ಡಾ ಸೆಕ್ಟರ್ 63 ರಲ್ಲಿ ಇಕೋಟೆಕ್  ಮತ್ತು ಚಿರ್ಜಾಸಿ ಸೇರಿವೆ. ಇಂದು ಮುಂಜಾನೆ ನೋಯ್ಡಾ ಮತ್ತು ದೆಹಲಿ ಪ್ರದೇಶದ ಇತರ ಭಾಗಗಳಲ್ಲಿ ಸಾಧಾರಣ

ದೆಹಲಿ ಸೇರಿದಂತೆ ಉತ್ತರಭಾರತ ಜಲಾವೃತ | ನೀರಿನಲ್ಲಿ ತೇಲುತ್ತಿರುವ 200 ಕ್ಕೂ ಅಧಿಕ ಕಾರುಗಳು Read More »

ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ | ಬೈಕ್ ಸವಾರ ಮೃತ್ಯು

ನೆಲ್ಯಾಡಿ: ಬೈಕೊಂದು ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ನೆಲ್ಯಾಡಿ ಮೊರಂಕಳ ನಿವಾಸಿ ಬೈಕ್ ಸವಾರ ಇಕ್ಬಾಲ್ ಮೃತಪಟ್ಟ ಯುವಕ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಣ್ಣಂಪಾಡಿ ಬಳಿ ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಹೋಗುತ್ತಿದ್ದ ವೇಳೆ ರಸ್ತೆ ಬದಿ ಕೆಟ್ಟು ನಿಂತಿದ್ದ ಪಾರ್ಸೆಲ್ ಲಾರಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಮೃತದೇಹವನ್ನು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ ಎಂದು ತಿಳಿದು ಬಂದಿದೆ.

ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ | ಬೈಕ್ ಸವಾರ ಮೃತ್ಯು Read More »

ಭಾರೀ ಮಳೆ ಹಿನ್ನಲೆ | ನಾಳೆ (ಜು.26) ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಪುತ್ತೂರು: ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಭಾರೀ ಮಳೆಯ ಹಿನ್ನಲೆಯಲ್ಲಿ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೂಂಜಾಗ್ರತಾ ಕ್ರಮವಾಗಿ ತಾಲೂಕು ನೋಡೆಲ್ ಅಧಿಕಾರಿಗಳು ಸ್ಥಳದಲ್ಲಿರುವಂತೆ ಸೂಚನೆ ನೀಡಲಾಗಿದೆ.

ಭಾರೀ ಮಳೆ ಹಿನ್ನಲೆ | ನಾಳೆ (ಜು.26) ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಸೌಜನ್ಯ ಕೊಲೆ ಮರು ತನಿಖೆಗೆ ಆಗ್ರಹ | ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸಂಘದ ವತಿಯಿಂದ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಧರ್ಮಸ್ಥಳ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ನಡೆದು 11 ವರ್ಷಗಳಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ರಾವ್ ಬಿಡುಗಡೆಯಾಗಿದೆ. ಇಂತಹಾ ಹೀನ ಬರ್ಬರ ಕೃತ್ಯವನ್ನು ಸರಿಯಾಗಿ ತನಿಖೆ ಮಾಡಿ ನಿಜವಾದ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗಿದ್ದು, ಇದು ಇಡೀ ಸಮಾಜಕ್ಕೆ ಆಘಾತ ಉಂಟು ಮಾಡಿದೆ ಎಂದು ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಎಚ್. ಪದ್ಮಗೌಡ, ಅಧ್ಯಕ್ಷ ಕುಶಾಲಪ್ಪ ಗೌಡ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರು ಮಂಗಳವಾರ ಗೌಡರ ಯಾನೆ ಒಕ್ಕಲಿಗರ

ಸೌಜನ್ಯ ಕೊಲೆ ಮರು ತನಿಖೆಗೆ ಆಗ್ರಹ | ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸಂಘದ ವತಿಯಿಂದ ಪತ್ರಿಕಾಗೋಷ್ಠಿ Read More »

ನಾಳೆಯಿಂದ (ಜು.26): ಪ್ರತಿಷ್ಠಿತ ಎಂ.ಸಂಜೀವ ಶೆಟ್ಟಿ ಸಿಲ್ಕ್ಸ್ & ರೆಡಿಮೇಡ್ಸ್ ನಲ್ಲಿ ಆಷಾಢ ಬಿಗ್ಗೆಸ್ಟ್ ಸೇಲ್

ಪುತ್ತೂರು: ಪ್ರತಿಷ್ಠಿತ ಬಟ್ಟೆ ಮಳಿಗೆ ಎಂ.ಸಂಜೀವ ಶೆಟ್ಟಿ ಸಿಲ್ಸ್ಕ್ & ರೆಡಿಮೇಡ್ಸ್ ನಲ್ಲಿ ವರ್ಪಪ್ರತಿ ಆಯೋಜಿಸುವ ಆಷಾಢ (ಆಟಿ) ಬಿಗ್ಗೆಸ್ಟ್ ಸೇಲ್ ನಾಳೆಯಿಂದ (ಜು.26) ಆರಂಭಗೊಳ್ಳಲಿದೆ. ಈ ಆಷಾಢ ಸೇಲ್‍ನಲ್ಲಿ ಪ್ರಖ್ಯಾತ ಮಿಲ್‍ಗಳಿಂದ ನೇರವಾಗಿ ಖರೀದಿಸಿದ ಹೊಸ ಹೊಸ ಡಿಸೈನ್ ಸೀರೆಗಳು ಹಾಗೂ ಸಿದ್ಧ ಉಡುಪುಗಳ ಹೊಸ ಹೊಸ ಕಲೆಕ್ಷನ್ಸ್ ಪ್ರತಿದಿನವೂ ಅತೀ ಕಡಿಮೆ ದರದಲ್ಲಿ ಲಭ್ಯವಿದೆ. ಆಷಾಢ ಬಿಗ್ಗೆಸ್ಟ್ ಸೇಲ್ ಕೆಲವೇ ದಿನಗಳು ಮಾತ್ರ ಇರಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ನಾಳೆಯಿಂದ (ಜು.26): ಪ್ರತಿಷ್ಠಿತ ಎಂ.ಸಂಜೀವ ಶೆಟ್ಟಿ ಸಿಲ್ಕ್ಸ್ & ರೆಡಿಮೇಡ್ಸ್ ನಲ್ಲಿ ಆಷಾಢ ಬಿಗ್ಗೆಸ್ಟ್ ಸೇಲ್ Read More »

ಪಡುಮಲೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಗೆ ಆಯ್ಕೆ

ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದಲ್ಲಿ ಆ.25 ರಂದು ನಡೆಯಲಿರುವ ಶ್ರೀ ವರ ಮಹಾಲಕ್ಷ್ಮೀ ವೃತ ಪೂಜಾ ಸಮಿತಿಯ ಸಭೆ ನಡೆಯಿತು.ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು, ವ್ಯವಸ್ಥಾಪನ ಸಮಿತಿ ಸದಸ್ಯ ಪ್ರಭಾಕರ ಗೌಡ ಕೋಡಿಯಡ್ಕ, ಧ.ಗ್ರಾ. ಯೋಜನೆಯ ಬಡಗನ್ನೂರು ಎ ಒಕ್ಕೂಟದ ಅಧ್ಯಕ್ಷ ಸುಬ್ಬಯ್ಯ ರೈ ಉಪಸ್ಥಿತರಿದ್ದರು.ನೂತನ ಸಮಿತಿ ರಚನೆ : ಈ ಸಂದರ್ಭದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯ ನೂತನ

ಪಡುಮಲೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಗೆ ಆಯ್ಕೆ Read More »

ವಿಧಿಯ ಕ್ರೂರ ಲೀಲೆಗೆ ಸಿಕ್ಕಿ ಬಲಿಯಾದ ಬಜರಂಗದಳ ಸಕ್ರಿಯ ಕಾರ್ಯಕರ್ತರ ನೆನಪಿನಲ್ಲಿ ಬೃಹತ್ ರಕ್ತದಾನ ಶಿಬಿರ | 270 ಮಂದಿಯಿಂದ ರಕ್ತದಾನ

ಬಂಟ್ವಾಳ: ವಿಧಿಯ ಕ್ರೂರ ಲೀಲೆಗೆ ಸಿಲುಕಿ ಬಲಿಯಾದ ಬಜರಂಗದಳ ಕಾರ್ಯಕರ್ತರಾದ  ವಿಜಯ್ ಪುಣ್ಕೆದಡಿ, ಸುರೇಶ್ ಮೇಗಿನಮನೆ ಹಾಗೂ ನಿತಿನ್ ಪೂಜಾರಿ ನೆಲ್ಯಪಲ್ಕೆ ಅವರ ಸವಿನೆನಪಿಗಾಗಿ ಬಂಟ್ವಾಳ ಸರಪಾಡಿ ಪ್ರಖಂಡ ಬೃಹತ್ ರಕ್ತದ಻ನ ಶಿಬಿರ ಆಯೋಜಿಸುವ ಮೂಲಕ ಅಗಲಿದ ಕಾರ್ಯಕರ್ತರನ್ನು ನೆನಪಿಸುವ ಕಾರ್ಯ ಮಂಗಳವಾರ ನಡೆಯಿತು. ಶಿಬಿರದಲ್ಲಿ ಸುಮಾರು 270 ಜನ ರಕ್ತದಾನಿಗಳು ರಕ್ತದಾನ ನೀಡಿ ಅಗಲಿದ ಕಾರ್ಯಕರ್ತರನ್ನು ಮತ್ತೊಮ್ಮೆ ನೆನೆಪಿಸಿಕೊಳ್ಳುವ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ವಿಶ್ವ ಹಿಂದೂ

ವಿಧಿಯ ಕ್ರೂರ ಲೀಲೆಗೆ ಸಿಕ್ಕಿ ಬಲಿಯಾದ ಬಜರಂಗದಳ ಸಕ್ರಿಯ ಕಾರ್ಯಕರ್ತರ ನೆನಪಿನಲ್ಲಿ ಬೃಹತ್ ರಕ್ತದಾನ ಶಿಬಿರ | 270 ಮಂದಿಯಿಂದ ರಕ್ತದಾನ Read More »

ಜು.29 : ದರ್ಬೆ ಪ್ರಶಾಂತ್ ಮಹಲ್ ನಲ್ಲಿ “ಆಟಿಡೊಂಜಿ ದಿನ” | ಆಟಿದ ಅಟಿಲ್ ನ ಬಂಜಾರ ವನಸ್ ನಲ್ಲಿ 49 ಬಗೆಯ ಖಾದ್ಯ

ಪುತ್ತೂರು: ಆಟಿಡೊಂಜಿ ದಿನ ಕಾರ್ಯಕ್ರಮ ಜು.29 ರಂದು ಪುತ್ತೂರಿನ ದರ್ಬೆಯಲ್ಲಿರುವ ಪ್ರಶಾಂತ್ ಮಹಲ್ ನ ಸನ್ನಿಧಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ತನಕ ಸವಣೂರು ಸೀತಾರಾಮ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ ಅಂಗವಾಗಿ ತುಳು ಜನಪದ ಸಾಂಸ್ಕೃತಿಕ ಲೇಸ್, ಆಟಿದ ಗೊಬ್ಬುಲು, ಛಾವಡಿದ ಲೇಸ್ ಮುಂತಾದ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿವೆ. ವಿಶೇಷವಾಗಿ ತುಳುವೆರ್ನ ಆಟಿದ ಅಟಿಲ್ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 49 ಬಗೆಯ ಬಂಜಾರ ವನಸ್ ಕೇವಲ 349 ರೂಪಾಯಿಗೆ

ಜು.29 : ದರ್ಬೆ ಪ್ರಶಾಂತ್ ಮಹಲ್ ನಲ್ಲಿ “ಆಟಿಡೊಂಜಿ ದಿನ” | ಆಟಿದ ಅಟಿಲ್ ನ ಬಂಜಾರ ವನಸ್ ನಲ್ಲಿ 49 ಬಗೆಯ ಖಾದ್ಯ Read More »

ಬಿಎಂಎಸ್ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದಿಂದ ಸಂಸ್ಥಾಪನಾ ದಿನಾಚರಣೆ

ಪುತ್ತೂರು: ಪುತ್ತೂರು ಬಿ.ಎಂ.ಎಸ್ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಭಾರತೀಯ ಮಜ್ದೂರ್ ಸಂಘದ ಸ್ಥಾಪನಾ ದಿನಾಚರಣೆಯನ್ನು ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ನಡೆಯಿತು. ಧ್ವಜಾರೋಹಣ ಹಾಗೂ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದರಾಜೇಶ್ ಕೆ ಮರಿಲ್, ಮಾಜಿ ಗೌರವಾಧ್ಯಕ್ಷ ದೇವಪ್ಪ ಗೌಡ, ಮಾಜಿ ಜಿಲ್ಲಾ ಉಪಾಧ್ಯಕ್ಷರಾದ ಮೋಹನ್ ಹೆಗ್ಡೆ , ಹುಸೇನ್, ಸುರೇಶ ಸುಧಾಕರ್ ನಾಯಕ್, ಸತೀಶ್ ಪ್ರಭು ಮಣಿಯ, ಪಾರ್ಕಿನ ಘಟಕದ ಅಧ್ಯಕ್ಷರುಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ಬಿಎಂಎಸ್ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದಿಂದ ಸಂಸ್ಥಾಪನಾ ದಿನಾಚರಣೆ Read More »

error: Content is protected !!
Scroll to Top