ಬನ್ನೂರು ಗ್ರಾಪಂ ಎರಡನೇ ಅವಧಿಗೆ ಅಧ್ಕ್ಷಕ್ಷರಾಗಿ ಸ್ಮಿತಾ ಎನ್., ಉಪಾಧ್ಯಕ್ಷರಾಗಿ ಶೀನಪ್ಪ ಕುಲಾಲ್ ಅವಿರೋಧವಾಗಿ ಆಯ್ಕೆ

ಪುತ್ತೂರು: ಬನ್ನೂರು, ಚಿಕ್ಕಮುಡ್ನೂರು, ಪಡ್ನೂರು ಗ್ರಾಮಗಳ ಬನ್ನೂರು ಗ್ರಾಮ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷರಾಗಿ ಸ್ಮಿತಾ ಎನ್. ಹಾಗೂ ಉಪಾಧ್ಯಕ್ಷರಾಗಿ ಶೀನಪ್ಪ ಕುಲಾಲ್ ಸೇಡಿಯಾಪು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆ ಆ.17ರಂದು ನಡೆಯಿತು. ಒಟ್ಟು 13 ಸ್ಥಾನಗಳನ್ನು ಹೊಂದಿರುವ ಪಂಚಾಯಿತಿಯಲ್ಲಿ ಎಲ್ಲಾ 13 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರನ್ನು ಹೊಂದಿದೆ. ಪ.ಪಂಗಡ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಸ್ಮಿತಾ ಎನ್. ಮಾತ್ರ ನಾಮಪತ್ರ ಸಲ್ಲಿಸಿದ್ದು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಶೀನಪ್ಪ ಕುಲಾಲ್ ಹಾಗೂ ಶ್ರೀನಿವಾಸ ಪೆರೋಡಿ […]

ಬನ್ನೂರು ಗ್ರಾಪಂ ಎರಡನೇ ಅವಧಿಗೆ ಅಧ್ಕ್ಷಕ್ಷರಾಗಿ ಸ್ಮಿತಾ ಎನ್., ಉಪಾಧ್ಯಕ್ಷರಾಗಿ ಶೀನಪ್ಪ ಕುಲಾಲ್ ಅವಿರೋಧವಾಗಿ ಆಯ್ಕೆ Read More »

ಮುಂಡೂರು ಗ್ರಾಪಂ ಅಧ್ಯಕ್ಷರಾಗಿ ಚಂದ್ರಶೇಖರ ಎನ್‍.ಎಸ್‍.ಡಿ., ಉಪಾಧ್ಯಕ್ಷರಾಗಿ ಯಶೋಧ ಆಯ್ಕೆ

ಪುತ್ತೂರು: ಮುಂಡೂರು ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಬಿಜೆಪಿ ಬೆಂಬಲಿತ ಚಂದ್ರಶೇಖರ್ ಎನ್.ಎಸ್‍.ಡಿ., ಉಪಾಧ್ಯಕ್ಷರಾಗಿ ಯಶೋಧ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚಂದ್ರಶೇಖರ್ ಎನ್.ಎಸ್‍.ಡಿ. ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಮಲೇಶ್ ಸರ್ವೆದೋಳಗುತ್ತು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಚಂದ್ರಶೇಖರ್ ಎನ್.ಎಸ್‍.ಡಿ. 12 ಮತಗಳನ್ನು ಪಡೆದು ಆಯ್ಕೆಯಾದರು.

ಮುಂಡೂರು ಗ್ರಾಪಂ ಅಧ್ಯಕ್ಷರಾಗಿ ಚಂದ್ರಶೇಖರ ಎನ್‍.ಎಸ್‍.ಡಿ., ಉಪಾಧ್ಯಕ್ಷರಾಗಿ ಯಶೋಧ ಆಯ್ಕೆ Read More »

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘಕ್ಕೆ ಮತ್ತೆ ಗರಿಗೆದರಿದ ಪ್ರಶಸ್ತಿ | ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ ನೀಡುವ ಪ್ರಶಸ್ತಿಗೆ ಭಾಜನ

ಪುತ್ತೂರು: ಉತ್ತಮ ಸಾಧನೆಗೈದ ಸಹಕಾರ ಸಂಘಗಳಿಗೆ ಜಿಲ್ಲಾ ಸಹಕಾರಿ ಬ್ಯಾಂಕ್‍ ನಿಂದ ನೀಡುವ ಪ್ರಶಸ್ತಿಗೆ ವಿಶೇಷ ಸಾಧನೆಗೈದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಭಾಜನವಾಗಿದೆ. ಪುತ್ತೂರಿನಲ್ಲಿ 2002 ರಲ್ಲಿ ಆರಂಭಗೊಂಡ ಬ್ಯಾಂಕ್‍ ಉತ್ತಮ ವ್ಯವಹಾರ ಮಾಡಿ ಬಳಿಕದ ದಿನಗಳಲ್ಲಿ ತನ್ನ ಶಾಖೆಯನ್ನು ವಿಸ್ತರಿಸಿ ಪುತ್ತೂರು ಎಸ್‍ ಎಂಟಿ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಪುತ್ತೂರು ಎಪಿಎಂಸಿ, ಕಾಣಿಯೂರು ಹಾಗೂ ಬೆಳ್ಳಾರೆಗಳಲ್ಲಿ ತನ್ನ ಶಾಖೆಗಳನ್ನು ತೆರೆದಿದೆ. ಒಟ್ಟು 9 ಶಾಖೆಗಳನ್ನು ಸಂಘ ಹೊಂದಿದೆ. ಸಂಘವು ಸುಮಾರು

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘಕ್ಕೆ ಮತ್ತೆ ಗರಿಗೆದರಿದ ಪ್ರಶಸ್ತಿ | ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ ನೀಡುವ ಪ್ರಶಸ್ತಿಗೆ ಭಾಜನ Read More »

ಆ.18 : ಬಿಜೆಪಿ ವತಿಯಿಂದ ತಿರಂಗಾ ಯಾತ್ರೆ : ಪೂರ್ವಭಾವಿ ಸಭೆ

ಪುತ್ತೂರು: ಪುತ್ತೂರಿನಲ್ಲಿ ಬಿಜೆಪಿ ವತಿಯಿಂದ ಆ.18 ರಂದು ನಡೆಯಲಿರುವ ತಿರಂಗಾ ಯಾತ್ರೆಯ ಪೂರ್ವಭಾವಿ ಸಭೆ ಗುರುವಾರ ಬಿಜೆಪಿ ಕಚೇರಿಯಲ್ಲಿ ನಡೆಯಿತು. ತಿರಂಗ ಯಾತ್ರೆ ಕಿಲ್ಲೇ ಮೈದಾನದ ಬಳಿಯಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದಿಂದ ಹೊರಟು ಪುತ್ತೂರು ಟೌನ್ ಬ್ಯಾಂಕ್‍ ನಲ್ಲಿ ನಡೆಯುವ ಸಭಾ ಕಾರ್ಯಕ್ರಮದೊಂದಿಗೆ ಸಮಾಪನಗೊಳ್ಳಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ಪಕ್ಷದ ಪ್ರಮುಖರಾದ ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ

ಆ.18 : ಬಿಜೆಪಿ ವತಿಯಿಂದ ತಿರಂಗಾ ಯಾತ್ರೆ : ಪೂರ್ವಭಾವಿ ಸಭೆ Read More »

ದೊಡ್ಡಪೇಟೆ ಠಾಣೆಯಲ್ಲಿ ಒಂದು ಗಂಟೆಗಳ ಕಾಲ ಪೊಲೀಸ್ ಇನ್ ಸ್ಪೆಕ್ಟರ್ ಹುದ್ದೆ ಅಲಂಕರಿಸಿದ 8 ರ ಪೋರ

ಶಿವಮೊಗ್ಗ: ದೊಡ್ಡಪೇಟೆ ಠಾಣೆಯಲ್ಲಿ ಒಂದು ಗಂಟೆಗಳ ಕಾಲ 8 ವರ್ಷದ ಬಾಲಕ PI ಹುದ್ದೆಯನ್ನು ಅಲಂಕರಿಸುವ ಮೂಲಕ ದೊಡ್ಡ ಪೇಟೆ ಪೊಲೀಸ್ ಠಾಣೆಯ ಅತೀ ಕಿರಿಯ ಪೊಲೀಸ್ ಅಧಿಕಾರಿ ಎಂಬ ಕೀರ್ತಿಗೆ ಅಜಾನ್ ಖಾನ್ ಪಾತ್ರರಾಗಿದ್ದಾನೆ. ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ 8 ವರ್ಷದ ಪೋರನಿಗೆ ಪೊಲೀಸ್ ಅಧಿಕಾರಿ ಆಗಬೇಕೆಂಬ ಆಸೆ ,ಆದರೆ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಆಜಾನ್ ಖಾನ್ ನ ತಂದೆ ಸ್ಥಳೀಯ ಪೊಲೀಸ್ ಅಧಿಕಾರಿಗೆ ತನ್ನ ಮಗನ ಆಸೆಯನ್ನು ತಿಳಿಯಪಡಿಸಿದ್ದು ತಂದೆಯ ಮನವಿಗೆ

ದೊಡ್ಡಪೇಟೆ ಠಾಣೆಯಲ್ಲಿ ಒಂದು ಗಂಟೆಗಳ ಕಾಲ ಪೊಲೀಸ್ ಇನ್ ಸ್ಪೆಕ್ಟರ್ ಹುದ್ದೆ ಅಲಂಕರಿಸಿದ 8 ರ ಪೋರ Read More »

ವಿದ್ಯಾಭಾರತಿ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟ : ದಕ್ಷಿಣ ಮಧ್ಯಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

ಪುತ್ತೂರು: ಮಂಗಳೂರಿನ ರೆಸಿಡೆನ್ಸಿಯಲ್ ಶಾಲೆಯಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 14ವರ್ಷ ವಯೋಮಾನದ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಗಳಿಸಿ ದಕ್ಷಿಣ ಮಧ್ಯಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ತಂಡವನ್ನು ರಿತೇಶ್.ಕೆ, ಪ್ರಣಾಮ್.ಎಂ, ಚಿನ್ಮಯಿ.ಸಿ.ಎಸ್, ಪ್ರೀತಮ್, ಮೋಶಿತ್.ಕೆ.ಜೆ, ಯಶ್ಮಿತ್.ಎಂ.ಡಿ, ತೃತೇಶ್.ಬಿ., ಅಶ್ವಿನ್, ಸ್ನೇಹಿತ್ ಕುಮಾರ್, ಜಿತಿನ್.ಕೆ, ನಿವೇದ್  ಮತ್ತು ಮನ್ವಂತ್ ಗೋಪಾಲ್ ಪ್ರತಿನಿಧಿಸಿದ್ದರು. ತಂಡವನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕರು, ಸಿಬ್ಬಂದು ವರ್ಗ ಅಭಿನಂದಿಸಿದೆ.

ವಿದ್ಯಾಭಾರತಿ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟ : ದಕ್ಷಿಣ ಮಧ್ಯಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ Read More »

ಕೊಡಗು ಜಿಲ್ಲಾಧಿಕಾರಿ ನಂಜುಂಡೇ ಗೌಡ ಮನೆಗೆ ಲೋಕಾಯುಕ್ತ ದಾಳಿ | ಅಪಾರ ಪ್ರಮಾಣದ ನಗದು, ಚಿನ್ನಾಭರಣ ಪತ್ತೆ

ಕೊಡಗು : ಕೊಡಗು ಅಪರ ಜಿಲ್ಲಾಧಿಕಾರಿ ನಂಜುಂಡೇ ಗೌಡ ಅವರ ಮನೆ ಮೇಲೆ ಲೋಕಯುಕ್ತ ದಾಳಿ ನಡೆದಿದೆ. ಕಾರ್ಯಪ್ಪ ವೃತ್ತದ ಬಳಿ ಇರುವ ಮನೆಗೆ ಇಂದು ಮುಂಜಾನೆ 4 ಗಂಟೆ ವೇಳೆಗೆ ಲೋಕಾಯುಕ್ತ ದಾಳಿ ನಡೆದಿದ್ದು, ಅಧಿಕಾರಿಗಳು ಚಿನ್ನಾಭರಣ, ಅಪಾರ ಪ್ರಮಾಣದ ನಗದು ಪತ್ತೆಹಚ್ಚಿದ್ದಾರೆ. ಲೋಕಾಯುಕ್ತ ಎಸ್ಪಿ. ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪವನ್ ಕುಮಾರ್, ಇನ್ ಸ್ಪೆಕ್ಟರ್ ಲೋಕೇಶ್ ಮತ್ತು ಸಿಬ್ಬಂದಿ ಪರಿಶೀಲನೆ ಕೈಗೊಂಡಿದ್ದಾರೆ. ಇದೇ ವೇಳೆ ಪಿರಿಯಾಪಟ್ಟಣದಲ್ಲಿರುವ ನಂಜುಂಡೇಗೌಡರ ಮಾವನ ಮನೆ ಹಾಗೂ ಮೈಸೂರಿನಲ್ಲಿರುವ

ಕೊಡಗು ಜಿಲ್ಲಾಧಿಕಾರಿ ನಂಜುಂಡೇ ಗೌಡ ಮನೆಗೆ ಲೋಕಾಯುಕ್ತ ದಾಳಿ | ಅಪಾರ ಪ್ರಮಾಣದ ನಗದು, ಚಿನ್ನಾಭರಣ ಪತ್ತೆ Read More »

ಕಾವು ಸಸ್ಪೆಟ್ಟಿ ಸೀರೆ ಹೊಳೆಯಲ್ಲಿ ಮಾಂಸದ ಮುದ್ದೆ ಪತ್ತೆ.

ಕಾವು : ಮಾಡ್ನೂರು ಗ್ರಾಮದ ಸಸ್ಪೆಟ್ಟಿ ದೇವರಕಟ್ಟೆ ಬಳಿ ಹರಿಯುವ ನೀರಿಗೆ ಗೋಣಿಯಲ್ಲಿ ಕಟ್ಟಿದ ಸ್ಥಿತಿಯಲ್ಲಿ ಮಾಂಸ ಮತ್ತು ಉಪಯೋಗಿಸಿದ ಬಟ್ಟಲು ಬಾಟ್ಲಿಗಳು ಕಂಡು ಬಂದಿದೆ. ವಿಪರೀತ ವಾಸನೆ ಬಂದು ಸಂಶಯಗೊಂಡು ನೋಡಿದಾಗ ಮಾಂಸ, ಎಲುಬುಗಳು ಕಂಡು ಬಂದಿದೆ. ಸೀರೆ ಹೊಳೆಯಲ್ಲಿ ಸಾಕಷ್ಟು ಮಹಿಳೆಯರು ಬಟ್ಟೆ ತೊಳೆಯುವುದು ಮಕ್ಕಳು ಸ್ನಾನ ಮಾಡುವುದೂ ಮಾಡುತ್ತಿದ್ದು ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಅರಿಯಡ್ಕ ಪಂಚಾಯಿತಿಗೂ, ಪೋಲೀಸರಿಗೂ ಮಾಹಿತಿ ನೀಡಲಾಗಿದೆ.

ಕಾವು ಸಸ್ಪೆಟ್ಟಿ ಸೀರೆ ಹೊಳೆಯಲ್ಲಿ ಮಾಂಸದ ಮುದ್ದೆ ಪತ್ತೆ. Read More »

ಅಂಬಿಕಾ ವಿದ್ಯಾಲಯದಲ್ಲಿ “ದೇಶ ವಿಭಜನೆಯ ಭಯಾನಕ ಸ್ಮರಣ ದಿನ”

ಪುತ್ತೂರು: ಸ್ವಾತಂತ್ರ್ಯ ನಮಗೆ ಸುಮ್ಮನೆ ದೊರೆತದ್ದಲ್ಲ. ಬದಲಿಗೆ ಅದು ಹಲವರ ರಕ್ತ ತರ್ಪಣ, ಬಲಿದಾನಗಳ ಪ್ರತಿಫಲ. ಹೀಗಾಗಿ ಅವರ ಸ್ಮರಣೆ ಶಿಕ್ಷಣದ ಜೊತೆ ಜೊತೆಯಲ್ಲಿ ಸಾಗಬೇಕು ಎಂದು ಅಂಬಿಕಾ ಶಿಕ್ಷಣ ಸಂಸ್ಥೆಯ ಉಪನ್ಯಾಸಕ, ವಾಗ್ಮಿ ಆದರ್ಶ ಗೋಖಲೆ ಹೇಳಿದರು. ಬಪ್ಪಳಿಗೆ ಅಂಬಿಕಾ ವಿದ್ಯಾಸಂಸ್ಥೆಯಲ್ಲಿ ನಡೆದ “ದೇಶ ವಿಭಜನೆಯ ಭಯಾನಕ ಸ್ಮರಣ ದಿನ” ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶವನ್ನು ವಿಭಜಿಸುವ ಎಷ್ಟೇ ಪ್ರಯತ್ನಗಳು ನಡೆದರೂ ಅದು ಸಾಧ್ಯವಾದದ್ದು ಮಾತ್ರ ಸ್ವಾತಂತ್ರ್ಯ ದೊರೆತ ನಂತರವೇ ಎನ್ನುವುದು

ಅಂಬಿಕಾ ವಿದ್ಯಾಲಯದಲ್ಲಿ “ದೇಶ ವಿಭಜನೆಯ ಭಯಾನಕ ಸ್ಮರಣ ದಿನ” Read More »

ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿಯ ಸ್ಥಿರಾಸ್ತಿ ಮಾರ್ಗಸೂಚಿ ಬೆಲೆ ಪರಿಷ್ಕರಣೆ

ಪುತ್ತೂರು: ಪುತ್ತೂರು ಉಪನೋಂದಣಾ ಕಚೇರಿ ವ್ಯಾಪ್ತಿಯ ಸ್ಥಿರಾಸ್ತಿ ಮಾರುಕಟ್ಟೆ ಮಾರ್ಗಸೂಚಿ ಬೆಲೆ ಪರಿಷ್ಕರಣೆ ಮಾಡಲಾಗಿದೆ. 2023-24ನೇ ಸಾಲಿಗೆ ಸಂಬಂಧಿಸಿ ಮಾರುಕಟ್ಟೆ ಮೌಲ್ಯ ಮಾಪನ ಉಪಸಮಿತಿ ಮಾರುಕಟ್ಟೆ ಮೌಲ್ಯ ಪರಿಷ್ಕರಿಸಿದೆ. ದರ ಪಟ್ಟಿನಲ್ಲಿ ಹೊಸ ಯೋಜನೆಯನ್ನು ಸೇರ್ಪಡೆ ಮಾಡಿ ಪರಿಷ್ಕೃತ ದರ ಪಟ್ಟಿಯ ಕರಡು ಪ್ರತಿಯನ್ನು ಸಾರ್ವಜನಿಕ ಅವಗಾಹನೆಗೆ ತರಲು ಪುತ್ತೂರು ವ್ಯಾಪ್ತಿಯ ತಾಲೂಕು ಕಚೇರಿ, ಉಪನೋಂದಣಾ ಕಚೇರಿ, ಪುತ್ತೂರು ನಗರಸಭೆ ಕಚೇರಿ ಹಾಗೂ ಕಡಬ ತಾಲೂಕು ಕಚೇರಿ, ಕಡಬ ಪಟ್ಟಣ ಪಂಚಾಯತ್‍ ನ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿಯ ಸ್ಥಿರಾಸ್ತಿ ಮಾರ್ಗಸೂಚಿ ಬೆಲೆ ಪರಿಷ್ಕರಣೆ Read More »

error: Content is protected !!
Scroll to Top