ನಾಳೆ (ಆ.20) : ಮೌನಕ್ರಾಂತಿ ಹರಿಕಾರ ಡಿ.ದೇವರಾಜ ಅರಸು 108ನೇ ಜನ್ಮ ದಿನಾಚರಣೆ

ಪುತ್ತೂರು: ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ, ಮೌನಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸುರವರ 108ನೇ ಜನ್ಮ ದಿನಾಚರಣೆ ಆ.20 ಭಾನುವಾರ ಬೆಳಿಗ್ಗೆ 10.30 ಕ್ಕೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸಹಾಯಕ ಆಯುಕ್ತ ಗಿರೀಶ್ ನಂದನ್ ಸಂಸ್ಮರಣಾ ಜ್ಯೋತಿ ಪ್ರಜ್ವಲನೆ ಮಾಡುವರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಜೆ.ಶಿವಶಂಕರ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, […]

ನಾಳೆ (ಆ.20) : ಮೌನಕ್ರಾಂತಿ ಹರಿಕಾರ ಡಿ.ದೇವರಾಜ ಅರಸು 108ನೇ ಜನ್ಮ ದಿನಾಚರಣೆ Read More »

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಪುತ್ತೂರು: ಕ್ರಿಯಾತ್ಮಕವಾಗಿ ಯೋಜನೆಗಳನ್ನು ರೂಪಿಸಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಬೆಳ್ಳಾರೆಯ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ. ವಿ ಸೂರ್ಯನಾರಾಯಣ  ಹೇಳಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ನಡೆದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ದೃಢತೆಯ ಕಡೆಗೆ ಗುರಿಯನ್ನು ಇಟ್ಟುಕೊಂಡು ನಡೆದಾಗ ನಮ್ಮ ವಿದ್ಯಾಸಂಸ್ಥೆ ನೀಡಿದ ಶಿಕ್ಷಣ ಸಾರ್ಥಕವಾಗುತ್ತದೆ. ಜೊತೆಗೆ ಮಾನವೀಯತೆಯನ್ನು ರೂಢಿಸಿಕೊಂಡು ಬಾಳಿದರೆ ಮಾತ್ರ ಗೌರವ ಸಿಗುತ್ತದೆ.

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ Read More »

ಆ.25 : ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ | ದಶಮಾನೋತ್ಸವ ಕಾರ್ಯಕ್ರಮ

ಪುತ್ತೂರು: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ದಶಮಾನೋತ್ಸವ ಕಾರ್ಯಕ್ರಮ ಆ.25ರಂದು 8.30ರಿಂದ ನಾಗರಾಜ ಭಟ್ ಸುಳ್ಯ ನೇತೃತ್ವದಲ್ಲಿ ನಡೆಯಲಿದೆ ಎಂದು ಪೂಜಾ ಸಮಿತಿಯ ಗೌರವಾಧ್ಯಕ್ಷೆ ಸರೋಜಿನಿ ವಿ. ನಾಗಪ್ಪಯ್ಯ ಹೇಳಿದರು. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 8.30ರಿಂದ ಸಂಕಲ್ಪ ವ್ರತಧಾರಣೆ, 11ಗಂಟೆಗೆ ದಶಮಾನೋತ್ಸವ ಸಭಾ ಕಾರ್ಯಕ್ರಮ, ಅಭಿನಂದನೆ, ಲಕ್ಷ್ಮೀ ಕಟಾಕ್ಷ ಅದೃಷ್ಟ ಚೀಟಿಯ ಡ್ರಾ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 3ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಯಕ್ಷಗಾನ ನಾಟ್ಯ ವೈಭವ,

ಆ.25 : ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ | ದಶಮಾನೋತ್ಸವ ಕಾರ್ಯಕ್ರಮ Read More »

ಜಲ್ಲಿ ಕ್ರಶರ್ ಸೊತ್ತು ಕಳವು ಆರೋಪಿಗಳ ಬಂಧನ | ಸೊತ್ತುಗಳು ವಶಕ್ಕೆ

ಬಂಟ್ವಾಳ : ಜಲ್ಲಿ ಕ್ರಶರ್ ಯಂತ್ರವೊಂದರ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಗ್ಗ ನಿವಾಸಿ ಸತೀಶ್ ಮತ್ತು ಬೆಳ್ತಂಗಡಿ ನಿವಾಸಿ ರೋಹಿತ್ ಬಂಧಿತ ಆರೋಪಿಗಳು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಿ.ಮೂಡ ಗ್ರಾಮದ ಪಲ್ಲಮಜಲುನ ವಿನಯ ಶೆಟ್ಟಿ ಎಂಬವರಿಗೆ ಸೇರಿದ ಕ್ರಶರ್ ಜಾಬ್ ಪ್ಲೇಟ್ ಒಂದು ವಾರಗಳ ಹಿಂದೆ ಕಳವಾಗಿತ್ತು. 450 ಕೆ.ಜಿ. ತೂಕದ 2.60 ಲಕ್ಷ ರೂ.

ಜಲ್ಲಿ ಕ್ರಶರ್ ಸೊತ್ತು ಕಳವು ಆರೋಪಿಗಳ ಬಂಧನ | ಸೊತ್ತುಗಳು ವಶಕ್ಕೆ Read More »

ಸವಣೂರು ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ

ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹಾಗೂ ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರ ಜಂಟಿ ಆಶ್ರಯದಲ್ಲಿ ಸವಣೂರು ವಲಯ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟವು ಶುಕ್ರವಾರ ಸರಸ್ವತಿ ಶಾಲಾ ಕ್ರೀಡಾಂಗಣದಲ್ಲಿ ಜರುಗಿತು. ನರಿಮೊಗರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹರಿಣಿ ನಿತ್ಯಾನಂದ ಪಂಜಳ ಪಂದ್ಯಾಟ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಸಂಚಾಲಕ ಅವಿನಾಶ್ ಕೊಡಂಕಿರಿ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ಆಡಳಿತಾಧಿಕಾರಿ ಶುಭಾ ಅವಿನಾಶ್, ನೋಡಲ್ ಅಧಿಕಾರಿ ಬಾಲಕೃಷ್ಣ ಸವಣೂರು ಮತ್ತು

ಸವಣೂರು ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ Read More »

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಅಂಚೆ ಸೇವೆಗಳ ಬಗ್ಗೆ ವಿಶೇಷ ಉಪನ್ಯಾಸ

ಪುತ್ತೂರು:  ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅಂಚೆ ಸೇವೆಗಳ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕಿಯಾಗಿ ಪುತ್ತೂರು ಅಂಚೆ ವಿಭಾಗದ ಮಾರ್ಕೆಟಿಂಗ್ ಕಾರ್ಯನಿರ್ವಾಹಕ ಗುರುಪ್ರಸಾದ್ ಕೆ ಎಸ್ ಮಾತನಾಡಿ, ಅಂಚೆ ಕಚೇರಿಯಲ್ಲಿ ಸಿಗುವ ಬ್ಯಾಂಕ್ ಸೇವೆಗಳು, ಅಂಚೆ ವಿಮೆ, ಆಕ್ಸಿಡೆಂಟ್ ಪರಿಹಾರ ವಿಮೆ, ವಿವಿಧ ಪೆನ್ಷನ್ ಫಂಡ್  ಹಾಗೂ ಅಂಚೆ ವಿಭಾಗದಲ್ಲಿ ಇರುವ ವಿವಿಧ ಉದ್ಯೋಗದ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು. ಪೋಸ್ಟಲ್ ಆರ್ಡರ್, ವಿವಿಧ

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಅಂಚೆ ಸೇವೆಗಳ ಬಗ್ಗೆ ವಿಶೇಷ ಉಪನ್ಯಾಸ Read More »

ಪುತ್ತಿಲ ಪರಿವಾರದಿಂದ ದೈವನರ್ತಕ ರಮೇಶ್ ಅಜಲರ ಮನೆಗೆ ಭೇಟಿ | ಸಹಾಯ ಧನ  ಹಸ್ತಾಂತರ

ಪುತ್ತೂರು: ದೈವ ನರ್ತನ ಸೇವೆಗೈಯುವ ಖ್ಯಾತ ಕುಟುಂಬವಾದ ಪೆರ್ಲಂಪಾಡಿಯ  ರಮೇಶ್ ಅಜಲರು ಕೆಲ ಸಮಯಗಳಿಂದ ಅನಾರೋಗ್ಯ ಪೀಡಿತರಾಗಿದ್ದು, ಅವರ ಮನೆಗೆ ಪುತ್ತಿಲ ಪರಿವಾರದವರು ಭೇಟಿ ನೀಡಿದರು. ಪುತ್ತಿಲ ಪರಿವಾರದ ವತಿಯಿಂದ  ರಮೇಶ್ ರ ಮನೆಗೆ ಭೇಟಿ ನೀಡಿ ಧನಸಹಾಯ ಮತ್ತು ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ನಗರಾಧ್ಯಕ್ಷ ಅನಿಲ್ ತೆಂಕಿಲ, ಉಪಾಧ್ಯಕ್ಷ ರಾಜ್ ಶೆಟ್ಟಿ , ಶನ್ಮಿತ್ ರೈ, ಕೊಳ್ತಿಗೆ ಗ್ರಾಮದ ಸತ್ಯಪ್ರಕಾಶ್ ಕುಂಟಿಕಾನ,  ಕಾರ್ಯದರ್ಶಿ

ಪುತ್ತಿಲ ಪರಿವಾರದಿಂದ ದೈವನರ್ತಕ ರಮೇಶ್ ಅಜಲರ ಮನೆಗೆ ಭೇಟಿ | ಸಹಾಯ ಧನ  ಹಸ್ತಾಂತರ Read More »

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ವತಿಯಿಂದ ತಿರಂಗಾ ಯಾತ್ರೆ

ಪುತ್ತೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಪುತ್ತೂರು ವತಿಯಿಂದ ತಿರಂಗಾ ಯಾತ್ರೆ ಶುಕ್ರವಾರ ನಡೆಯಿತು. ನಗರದ ಕಿಲ್ಲೇ ಮೈದಾನದ ಬಳಿ ಇರುವ ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಿರಂಗಾ ಯಾತ್ರೆಗೆ ಚಾಲನೆ ನೀಡಲಾಯಿತು. ಬಳಿಕ ತಿರಂಗಾ ಯಾತ್ರೆ ಕೋರ್ಟ್ ರಸ್ತೆಯಿಂದ ಸಾಗಿ ಟೌನ್ ಬ್ಯಾಂಕ್‍ಸಭಾಂಗಣದಲ್ಲಿ ಸಮಾಪನಗೊಂಡಿತು. ನೂರಾರು ಕಾರ್ಯಕರ್ತರು ರಾಷ್ಟ್ರಧ್ವಜದೊಂದಿಗೆ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ, ಮಾಜಿ ಶಾಸಕ ಸಂಜೀವ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ವತಿಯಿಂದ ತಿರಂಗಾ ಯಾತ್ರೆ Read More »

ವಿಟ್ಲ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕ ಸದಸ್ಯರ ತರಬೇತಿ ಕಾರ್ಯಕ್ರಮ

ವಿಟ್ಲ: ವಿಟ್ಲ ತಾಲೂಕು ಮಟ್ಟದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರ ತರಬೇತಿ ಕಾರ್ಯಕ್ರಮ ವಿಟ್ಲ ಯೋಜನಾ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಅಖಿಲ ಕರ್ನಾಟಕ ಜನ ಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ ವಿನ್ಸೆಂಟ್  ಪಾಯ್ಸ್ ಮಾತನಾಡಿ, ಆಕಸ್ಮಿಕವಾಗಿ ವಿಪತ್ತು ಬರುತ್ತದೆ. ಅಂತಹ ಸಂದರ್ಭದಲ್ಲಿ ಎಲ್ಲೋ ದೂರದಲ್ಲಿರುವ ಸಹಾಯಕರನ್ನು ಕರೆದು ಬರುವಾಗ ಅವಗಡದ ತೀವ್ರತೆ ಹೆಚ್ಚಾಗಿ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚು. ಆಗ ಆಪದ್ಬಾಂಧವರಾಗಿ ಸಹಾಯಕ್ಕೆ ಬರುವವರೇ ಧರ್ಮಸ್ಥಳ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಸದಸ್ಯರು.

ವಿಟ್ಲ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕ ಸದಸ್ಯರ ತರಬೇತಿ ಕಾರ್ಯಕ್ರಮ Read More »

ವಿದ್ಯಾರ್ಥಿನಿ ಸೌಜನ್ಯ ಕೊಲೆ | ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಗನ್ ಮ್ಯಾನ್ | ಸರಕಾರದಿಂದ ಎಸ್‍ಪಿಗೆ ಆದೇಶ

ಪುತ್ತೂರು: 11 ವರ್ಷಗಳ ಹಿಂದೆ ಕೊಲೆಯಾದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ನ್ಯಾಯಕ್ಕಾಗಿ ಹೋರಾಡುತ್ತಿರುವ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರ ರಕ್ಷಣೆಗಾಗಿ ರಾಜ್ಯ ಸರಕಾರ ಗನ್ ಮ್ಯಾನ್ ಒದಗಿಸಲು ಮುಂದಾಗಿದೆ. ಮಹೇಶ್ ಶೆಟ್ಟಿ ಜೀವಕ್ಕೆ ಅಪಾಯದ ಸಾಧ್ಯತೆಯಿದೆ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಸರಕಾರದ ಗಮನಕ್ಕೆ ತಂದ ಹಿನ್ನಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಆ.17 ರಂದು ಬೆಂಗಳೂರಿನಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿದ್ದ ವಸಂತ ಬಂಗೇರ ಮಹೇಶ್ ಶೆಟ್ಟಿ ಅವರಿಗೆ ಇಬ್ಬರು ಗನ್ ಮ್ಯಾನ್

ವಿದ್ಯಾರ್ಥಿನಿ ಸೌಜನ್ಯ ಕೊಲೆ | ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಗನ್ ಮ್ಯಾನ್ | ಸರಕಾರದಿಂದ ಎಸ್‍ಪಿಗೆ ಆದೇಶ Read More »

error: Content is protected !!
Scroll to Top