ಹಿರಿಯ ನಾಟಿ ವೈದ್ಯೆ ಲಕ್ಷ್ಮೀ ಪೆರಿಯತ್ತೋಡಿ ನಿಧನ

ಪುತ್ತೂರು: ಹಿರಿಯ ನಾಟಿ ವೈದ್ಯೆ ಲಕ್ಷ್ಮೀ ಪೆರಿಯತ್ತೋಡಿ (95 ವರ್ಷ) ಅವರು ಸೆ. 10ರಂದು ತಮ್ಮ ಸ್ವ ಗೃಹದಲ್ಲಿ ನಿಧನ ಹೊಂದಿದರು. ಹಲವಾರು ಖಾಯಿಲೆಗಳಿಗೆ ನಾಟಿ ಚಿಕಿತ್ಸೆ ನೀಡುತ್ತಿದ್ದರು. ಮೃತರು ನಾಲ್ಕು ಹೆಣ್ಣು ಮಕ್ಕಳು, ನಾಲ್ಕು ಗಂಡು ಮಕ್ಕಳನ್ನು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಹಿರಿಯ ನಾಟಿ ವೈದ್ಯೆ ಲಕ್ಷ್ಮೀ ಪೆರಿಯತ್ತೋಡಿ ನಿಧನ Read More »

ಬಂಟ್ವಾಳ: ಯುವಕನಿಗೆ ತಂಡದಿಂದ ಹಲ್ಲೆ

ಬಂಟ್ವಾಳ: ಯುವಕನ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಬಂಟ್ಟಾಳದ ಮೈಂದಾಳ ಎಂಬಲ್ಲಿ ನಡೆದಿದೆ.. ಮೈಂದಾಳ ನಿವಾಸಿ ನಿಸಾರ್ ಎಂಬವರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಶನಿವಾರ ರಾತ್ರಿ 9.45ರ ಸುಮಾರಿಗೆ ನಿಸಾರ್ ಅಜ್ಜಿ ಮನೆಯಿಂದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಗುರಿಮಜಲು ಎಂಬಲ್ಲಿ ಆಟೋ ರಿಕ್ಷಾದ ಬಳಿ ನಿಂತಿದ್ದ 5 ಜನರ ಪೈಕಿ ಇಬ್ಬರು ನಿಸಾರ್ ಅವರನ್ನು ಅಡ್ಡ ಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಸಂದರ್ಭ ರಿಕ್ಷಾದ ಬಳಿ ತಲವಾರು

ಬಂಟ್ವಾಳ: ಯುವಕನಿಗೆ ತಂಡದಿಂದ ಹಲ್ಲೆ Read More »

ಭರವಸೆ ಬಳಿಕ ‘ಬೆಂಗಳೂರು ಬಂದ್’ ವಾಪಸ್ ಪಡೆದ ಖಾಸಗಿ ಸಾರಿಗೆ ಒಕ್ಕೂಟ | ಬಿಎಂಟಿಸಿ ಬಸ್’ನಲ್ಲಿ ಪ್ರಯಾಣಿಸಿದ ಅನಿಲ್ ಕುಂಬ್ಳೆ : ಫೊಟೋ ವೈರಲ್

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿದ್ದ ಖಾಸಗಿ ಸಾರಿಗೆ ಒಕ್ಕೂಟದವರು ಕರೆ ನೀಡಿರುವ ‘ಬೆಂಗಳೂರು ಬಂದ್’ ವಾಪಸ್ ಪಡೆಯಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, 32 ಬೇಡಿಕೆಗಳ ಪೈಕಿ 27 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ‘ಬೆಂಗಳೂರು ಬಂದ್’ ವಾಪಸ್ ಪಡೆದಿರುವುದಾಗಿ ಖಾಸಗಿ ಸಾರಿಗೆ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ, ವಕೀಲ ನಟರಾಜ್ ಶರ್ಮಾ,

ಭರವಸೆ ಬಳಿಕ ‘ಬೆಂಗಳೂರು ಬಂದ್’ ವಾಪಸ್ ಪಡೆದ ಖಾಸಗಿ ಸಾರಿಗೆ ಒಕ್ಕೂಟ | ಬಿಎಂಟಿಸಿ ಬಸ್’ನಲ್ಲಿ ಪ್ರಯಾಣಿಸಿದ ಅನಿಲ್ ಕುಂಬ್ಳೆ : ಫೊಟೋ ವೈರಲ್ Read More »

ಸುಪ್ರೀಂಕೋರ್ಟ್ ವಕೀಲೆಯ ಕೊಲೆ ಪ್ರಕರಣ: ಪತಿ ಬಂಧನ

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ವಕೀಲೆಯೋರ್ವರ ಕೊಲೆ ಆರೋಪದ ಮೇಲೆ ಆಕೆಯ ಪತಿಯನ್ನು ಬಂಧಿಸಲಾಗಿದೆ. ನೋಯ್ಡಾ ಬಂಗಲೆಯ ಸ್ನಾನ ಗೃಹದಲ್ಲಿ 61 ವರ್ಷದ ಸುಪ್ರೀಂ ಕೋರ್ಟ್ ವಕೀಲೆ ರೇಣು ಸಿನ್ಹಾ ಅವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಮಗ ವಿದೇಶದಲ್ಲಿ ವಾಸಿಸುತ್ತಿದ್ದು ರೇಣು ಸಿನ್ಹಾ ತನ್ನ ಪತಿಯೊಂದಿಗೆ ಬಂಗಲೆಯಲ್ಲಿ ವಾಸವಾಗಿದ್ದರು. ವಕೀಲೆಯ ಪತಿ ನಿತಿನ್ ನಾಥ್ ಸಿನ್ಹಾ ಅವರು ಬಂಗಲೆಯ ಸ್ಟೋರ್ ನಲ್ಲಿ 36 ಗಂಟೆಗಳಿಗೂ ಹೆಚ್ಚು ಕಾಲ ಅಡಗಿಕೊಂಡಿದ್ದ. ಪೊಲೀಸರು ಆತನ ಮೊಬೈಲ್ ಫೋನ್ ಅನ್ನು ಟ್ರ್ಯಾಕ್

ಸುಪ್ರೀಂಕೋರ್ಟ್ ವಕೀಲೆಯ ಕೊಲೆ ಪ್ರಕರಣ: ಪತಿ ಬಂಧನ Read More »

ಪುತ್ತೂರು ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಫುಟ್ಬಾಲ್ ಪಂದ್ಯಾಟ ಉದ್ಘಾಟನೆ

ಪುತ್ತೂರು: ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಫುಟ್ಬಾಲ್ ಪಂದ್ಯಾಟ ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಕಬಕ ಗ್ರಾಪಂ ಅಧ್ಯಕ್ಷೆ ಸುಶೀಲಾ ಪಂದ್ಯಾಟ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಪಿ. ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. ಕಬಕ ಗ್ರಾಪಂ ಉಪಾಧ್ಯಕ್ಷರು, ಸದಸ್ಯರು, ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಸಿ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಂ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ಸುರೇಖಾ ಸ್ವಾಗತಿಸಿದರು. ಶಿಕ್ಷಕಿ ಸುಮಿತ್ರಾ ವಂದಿಸಿದರು. ಶಿಕ್ಷಕಿ

ಪುತ್ತೂರು ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಫುಟ್ಬಾಲ್ ಪಂದ್ಯಾಟ ಉದ್ಘಾಟನೆ Read More »

ಬಿಜೆಪಿ- ಜೆಡಿಎಸ್ ಮೈತ್ರಿ ಇನ್ನೂ ನಿರ್ಧಾರವಾಗಿಲ್ಲ! | ಹೈಕಮಾಂಡ್ ನಿರ್ದೇಶನ ಅನುಸರಿಸಲಿದ್ದೇವೆ ಎಂದ ಸಿ.ಟಿ. ರವಿ

ಬೆಂಗಳೂರು: ಬಿಜೆಪಿ – ಜೆಡಿಎಸ್ ಮೈತ್ರಿ ಬಗ್ಗೆ ದೇವೇಗೌಡ ಹಾಗೂ ಅಮಿತ್ ಶಾ ಅವರ ನಡುವೆ ಮಾತುಕತೆ ನಡೆದಿದೆ ಎನ್ನಲಾದ ಬೆನ್ನಿಗೇ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತುಕತೆ ನಡೆಸಿಲ್ಲ ಎನ್ನುವ ಹೇಳಿಕೆ ನೀಡಿದ್ದರು. ಇದೀಗ ಮಾಜಿ ಸಚಿವ ಸಿ.ಟಿ. ರವಿ ಅವರು ಹೇಳಿಕೆ ನೀಡಿದ್ದು, ಮೈತ್ರಿ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2024ರ ಸಾರ್ವತ್ರಿಕ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ವಿಷಯದ ಬಗ್ಗೆ

ಬಿಜೆಪಿ- ಜೆಡಿಎಸ್ ಮೈತ್ರಿ ಇನ್ನೂ ನಿರ್ಧಾರವಾಗಿಲ್ಲ! | ಹೈಕಮಾಂಡ್ ನಿರ್ದೇಶನ ಅನುಸರಿಸಲಿದ್ದೇವೆ ಎಂದ ಸಿ.ಟಿ. ರವಿ Read More »

ಪುತ್ತೂರಿನಲ್ಲಿ ನಡೆಯಲಿದೆ ‘ನಂಬರ್ ಪ್ಲೇಟ್’ ಕನ್ನಡ ಸಿನಿಮಾ ಚಿತ್ರೀಕರಣ | ಶ್ರೀ ಮೇಘವರ್ಣ ಮೂವೀಸ್ ಫ್ರೆಂಡ್ಸ್ ಅರ್ಪಿಸುವ ಚಲನಚಿತ್ರಕ್ಕೆ ಅರುಣ್ ಕುಮಾರ್ ಪುತ್ತಿಲರಿಂದ ಮುಹೂರ್ತ

ಪುತ್ತೂರು: ಶ್ರೀ ಮೇಘವರ್ಣ ಮೂವೀಸ್ ಫ್ರೆಂಡ್ಸ್ ಅರ್ಪಿಸುವ ಚಲನಚಿತ್ರ “ನಂಬರ್ ಪ್ಲೇಟ್”ಗೆ ಇಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಲಾಗಿದ್ದು, ಸುಮಾರು ಒಂದು ತಿಂಗಳ ಕಾಲ ಪುತ್ತೂರಿನ ಆಸುಪಾಸಿನಲ್ಲಿ ಚಿತ್ರೀಕರಣ ನಡೆಯಲಿದ್ದು, ಬಳಿಕ ಬೆಂಗಳೂರು, ತುಮಕೂರುಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರಕತೆ ಸಂಭಾಷಣೆ ನಿರ್ದೇಶನ ಗಂಗರಾಜ್ ಪಿ.ಆರ್. ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರ ಒಂದು ಕಾಲ್ಪನಿಕ ಕಥೆಯ ಈ ಚಲನಚಿತ್ರದಲ್ಲಿ ಹಾರರ್, ಕಾಮಿಡಿ ಎಲ್ಲವೂ ಇದೆ. ಕುಟುಂಬ ಸಮೇತ ವೀಕ್ಷಿಸುವ ಚಿತ್ರ ಇದಾಗಿದೆ ಎಂದು

ಪುತ್ತೂರಿನಲ್ಲಿ ನಡೆಯಲಿದೆ ‘ನಂಬರ್ ಪ್ಲೇಟ್’ ಕನ್ನಡ ಸಿನಿಮಾ ಚಿತ್ರೀಕರಣ | ಶ್ರೀ ಮೇಘವರ್ಣ ಮೂವೀಸ್ ಫ್ರೆಂಡ್ಸ್ ಅರ್ಪಿಸುವ ಚಲನಚಿತ್ರಕ್ಕೆ ಅರುಣ್ ಕುಮಾರ್ ಪುತ್ತಿಲರಿಂದ ಮುಹೂರ್ತ Read More »

ಅಮ್ಮಾ ಹೆದರಬೇಡಿ… ದರೋಡೆಕೋರರ ಬಂಧನವಾಗಲಿದೆ | ಗುರುಪ್ರಸಾದ್ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಅಶೋಕ್ ಕುಮಾರ್ ರೈ | ಹಿಂಸೆ, ಅಪರಾಧವನ್ನು ಸಹಿಸುವ ಪ್ರಶ್ನೆಯೇ ಇಲ್ಲ

ಪುತ್ತೂರು: ಕಳೆದ ಕೆಲವು ದಿನಗಳ ಹಿಂದೆ ದರೋಡೆಗೊಳಗಾದ ಬಡಗನ್ನೂರು ಗ್ರಾಪಂ ಮಾಜಿ ಸದಸ್ಯ ಗುರುಪ್ರಸಾದ್ ರೈಯವರ ಮನೆಗೆ ಶಾಸಕರಾದ ಅಶೋಕ್ ರೈಯವರು ಸೆ. 10ರಂದು ಭೇಟಿ ನೀಡಿ ಮನೆಯವರಿಗೆ ಧೈರ್ಯ ತುಂಬಿದರು. ಕೃತ್ಯ ನಡೆದ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆದುಕೊಂಡ ಶಾಸಕರು, ಅಮ್ಮಾ ಹೆದರಬೇಡಿ ಈ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿ ದರೋಡೆ ಮಾಡಿದವರನ್ನು ಕಂಡು ಹಿಡಿಯಲಿದ್ದಾರೆ. ಯಾರೇ ಎಲ್ಲಿಂದ ಬಂದು ಈ ಕೃತ್ಯ ಮಾಡಿದರೂ ಹಿಡಿದೇ ಹಿಡಿಯುತ್ತಾರೆ. ನಮ್ಮ ಪೊಲೀಸ್ ಇಲಾಖೆ ಅದರಲ್ಲಿ ಸಮರ್ಥವಾಗಿದೆ. ಘಟನೆ

ಅಮ್ಮಾ ಹೆದರಬೇಡಿ… ದರೋಡೆಕೋರರ ಬಂಧನವಾಗಲಿದೆ | ಗುರುಪ್ರಸಾದ್ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಅಶೋಕ್ ಕುಮಾರ್ ರೈ | ಹಿಂಸೆ, ಅಪರಾಧವನ್ನು ಸಹಿಸುವ ಪ್ರಶ್ನೆಯೇ ಇಲ್ಲ Read More »

ಪರೀಕ್ಷೆಯಲ್ಲಿ ಫೇಲ್ : ದ್ವಿತೀಯ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ!!

ಮಂಗಳೂರು: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಕದ್ರಿ ಸಮೀಪ ಭಾನುವಾರ ರಾತ್ರಿ ನಡೆದಿದೆ. ಬಿಜೈಯ ಅಪಾರ್ಟ್ ಮೆಂಟಿನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ಪುತ್ರಿ ಆತ್ಮಹತ್ಯೆ ಮಾಡಿಕೊಂಡವರು. ನಗರದ ಕಾಲೇಜೊಂದರಲ್ಲಿ ಈಕೆ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ರಾತ್ರಿ ಕೆಲಸಕ್ಕೆಂದು ಹೊರಹೋದಾಗ ಘಟನೆ ನಡೆದಿದೆ. ಫ್ಯಾನಿಗೆ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ಕದ್ರಿ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರೀಕ್ಷೆಯಲ್ಲಿ ಫೇಲ್ : ದ್ವಿತೀಯ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ!! Read More »

3 ದಿನದಿಂದ 40 ಅಡಿ ಆಳದ ಬಾವಿಯಲ್ಲಿದ್ದ ಹೋರಿಯ ರಕ್ಷಣೆ | ಅಗ್ನಿಶಾಮಕ ದಳದಿಂದ ಯಶಸ್ವಿ ಕಾರ್ಯಾಚರಣೆ

ಸುಬ್ರಹ್ಮಣ್ಯ : ಕಳೆದ 3 ದಿನಗಳ ಹಿಂದೆ ಬಾವಿಗೆ ಬಿದ್ದಿದ್ದ ಹೋರಿಯನ್ನು ಅಗ್ನಿಶಾಮಕ ದಳ ರಕ್ಷಿಸಿದ ಘಟನೆ ಸುಬ್ರಹ್ಮಣ್ಯದ ದೇವರಗದ್ದೆ ಬಳಿ ನಡೆದಿದೆ. ದೇವರಗದ್ದೆ ನಿವಾಸಿ ವಿಠಲ ಶೆಟ್ಟಿ ಎಂಬವರ 40 ಅಡಿಯ ಬಾವಿಗೆ ಹೋರಿ ಬಿದ್ದಿತ್ತು. ಗಮನಕ್ಕೆ ಬಂದ ತಕ್ಷಣ ಸ್ಥಳೀಯರ ಸಹಾಯದಿಂದ ಮೇಲಕ್ಕೆತ್ತಲು ಪ್ರಯತ್ನ ನಡೆಸಲಾಗಿತ್ತು. ಆದರೆ ಪ್ರಯೋಜನವಾಗಿರಲಿಲ್ಲ. ಸೆ. 10ರಂದು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಹೋರಿಯನ್ನು ರಕ್ಷಿಸಿದ್ದಾರೆ. ಸಮಾಜ ಸೇವಕ ರವಿ ಕಕ್ಕೆಪದವು ಅವರು ಸುಬ್ರಹ್ಮಣ್ಯ ಪಿ.ಎಸ್.ಐ. ಅವರಿಗೆ ಮಾಹಿತಿ

3 ದಿನದಿಂದ 40 ಅಡಿ ಆಳದ ಬಾವಿಯಲ್ಲಿದ್ದ ಹೋರಿಯ ರಕ್ಷಣೆ | ಅಗ್ನಿಶಾಮಕ ದಳದಿಂದ ಯಶಸ್ವಿ ಕಾರ್ಯಾಚರಣೆ Read More »

error: Content is protected !!
Scroll to Top