ಐಇಡಿ ಸ್ಫೋಟ: ಸಿ.ಆರ್.ಪಿ.ಎಫ್. ಯೋಧ ರಾಜೇಶ್ ಕುಮಾರ್ ಸಾವು, ಅಧಿಕಾರಿಗೆ ಗಾಯ

ರಾಂಚಿ: ಜಾರ್ಖಂಡ್’ನಲ್ಲಿ ಮಾವೋವಾದಿಗಳು ಸುಧಾರಿತ ಸ್ಫೋಟಕ ಸಾಧನದಿಂದ ಸ್ಫೋಟ ನಡೆಸಿದ್ದು, ಘಟನೆಯಲ್ಲಿ ಓರ್ವ ಸಿಆರ್ ಪಿಎಫ್ ಯೋಧ ಸಾವನ್ನಪ್ಪಿದ್ದಾರೆ. ಪಶ್ಚಿಮ ಸಿಂಗ್ಬುಮ್ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಯುತ್ತಿದ್ದಾಗ ಪೊದೆಯೊಂದರಲ್ಲಿ ಇಟ್ಟಿದ್ದ ಐಇಡಿಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದಾಗ ನಡೆದಿದೆ. ಸ್ಫೋಟದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ ಘಟಕದ ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಇಬ್ಬರನ್ನೂ ವಿಮಾನದಲ್ಲಿ ರಾಂಚಿಗೆ ಕರೆದೊಯ್ಯಲಾಗಿದೆ. ಆದರೆ ಕಾನ್‌ಸ್ಟೆಬಲ್ ರಾಜೇಶ್ ಕುಮಾರ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಐಇಡಿ ಸ್ಫೋಟ: ಸಿ.ಆರ್.ಪಿ.ಎಫ್. ಯೋಧ ರಾಜೇಶ್ ಕುಮಾರ್ ಸಾವು, ಅಧಿಕಾರಿಗೆ ಗಾಯ Read More »

ಕರಾವಳಿಯಲ್ಲಿ ಭಾರಿ ಮಳೆಯ ಸೂಚನೆ | ಮೀನುಗಾರರಿಗೆ ಸೂಚನೆ ನೀಡಿದ ಐಎಂಡಿ!!

ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯಲ್ಲಿ ಮಳೆ ಅಬ್ಬರಿಸಿದ್ದರೆ, ಒಳನಾಡಿನಲ್ಲಿ ಪ್ರತ್ಯೇಕ ಕಡೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಐಎಂಡಿ (ಭಾರತೀಯ ಹವಾಮಾನ ಇಲಾಖೆ) ಏಳು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಬಳ್ಳಾಪುರ, ಬೆಳಗಾವಿ, ಬೀದರ್, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ಇದೆ. ಹೀಗಾಗಿ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯ ಒಂದೆರಡು ಕಡೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ

ಕರಾವಳಿಯಲ್ಲಿ ಭಾರಿ ಮಳೆಯ ಸೂಚನೆ | ಮೀನುಗಾರರಿಗೆ ಸೂಚನೆ ನೀಡಿದ ಐಎಂಡಿ!! Read More »

`ಕಾವೇರಿ’ದ ಪ್ರತಿಭಟನೆಗೆ  44 ವಿಮಾನ ಹಾರಾಟ ರದ್ದು | ಪ್ರಯಾಣಿಕರಂತೆ ಬಂದು ಪ್ರತಿಭಟಿಸಲು ಯತ್ನಿಸಿದವರ ಬಂಧನ

ಬೆಂಗಳೂರು: ಕಾವೇರಿ ಪ್ರತಿಭಟನೆಯ ಕಾರಣ ಇಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ, ಬೆಂಗಳೂರಿಗೆ ಆಗಮಿಸುವ ಮತ್ತು ನಿರ್ಗಮಿಸುವ ಹಲವು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ವಿವಿಧ ರಾಜ್ಯಗಳಿಂದ ಆಗಮಿಸಬೇಕಿದ್ದ 44 ವಿಮಾನಗಳು ರದ್ದುಗೊಂಡಿವೆ. ದೆಹಲಿ, ಮುಂಬೈ, ಕೋಲ್ಕತ್ತಾ, ಮಂಗಳೂರು ಸೇರಿದಂತೆ ಹಲವು ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ. ಬೆಂಗಳೂರಿಗೆ ಆಗಮಿಸಬೇಕಿದ್ದ 22 ಹಾಗೂ ಬೆಂಗಳೂರಿನಿಂದ ನಿರ್ಗಮಿಸಬೇಕಿದ್ದ 22 ವಿಮಾನಗಳನ್ನು ನಿಲ್ಲಿಸಲಾಗಿದೆ. ಪ್ರಯಾಣಿಕರಿಲ್ಲದ ಕಾರಣ 44 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನತ್ತ ಪ್ರಯಾಣಿಕರು ಮುಖ ಮಾಡಲಿಲ್ಲ. ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ

`ಕಾವೇರಿ’ದ ಪ್ರತಿಭಟನೆಗೆ  44 ವಿಮಾನ ಹಾರಾಟ ರದ್ದು | ಪ್ರಯಾಣಿಕರಂತೆ ಬಂದು ಪ್ರತಿಭಟಿಸಲು ಯತ್ನಿಸಿದವರ ಬಂಧನ Read More »

ಆರ್ಕೆಸ್ಟ್ರಾದ ಆಸೆ ತೋರಿಸಿ ವಿವಾಹಿತ ಮಹಿಳೆಯ ಬ್ಲ್ಯಾಕ್ ಮೇಲ್, ಬಲಾತ್ಕಾರ, ಜೀವ ಬೆದರಿಕೆ | ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಬಂಧನ | ಪ್ರಕರಣದ ಫುಲ್ ಡೀಟೈಲ್ ಇಲ್ಲಿದೆ

ಕಾರವಾರ: ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ, ವಿವಾಹಿತ ಮಹಿಳೆಯನ್ನು ಬ್ಲ್ಯಾಕ್ ಮೇಲ್ ಮಾಡಿ, ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ದೇವಾಲಯ ಹಿತರಕ್ಷಣಾ ವೇದಿಕೆಯ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಎಂಬಾತನನ್ನು ಕಾರವಾರ ಪೋಲಿಸರು ಬಂಧಿಸಿದ್ದಾರೆ. ವಿವಾಹಿತ ಮಹಿಳೆಯ ಜೊತೆ ಸಲುಗೆ ಬೆಳೆಸಿ, ಆಕೆಗೆ ಆರ್ಕೆಸ್ಟ್ರಾದಲ್ಲಿ ಹಾಡುವ ಅವಕಾಶ ನೀಡುವುದಾಗಿ ನಂಬಿಸಿ, ಅತ್ಯಾಚಾರ ಮಾಡಿದ್ದ. ಮಾತ್ರವಲ್ಲ, ವಿವಾಹಿತ ಮಹಿಳೆಯರ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ

ಆರ್ಕೆಸ್ಟ್ರಾದ ಆಸೆ ತೋರಿಸಿ ವಿವಾಹಿತ ಮಹಿಳೆಯ ಬ್ಲ್ಯಾಕ್ ಮೇಲ್, ಬಲಾತ್ಕಾರ, ಜೀವ ಬೆದರಿಕೆ | ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಬಂಧನ | ಪ್ರಕರಣದ ಫುಲ್ ಡೀಟೈಲ್ ಇಲ್ಲಿದೆ Read More »

ಸುಜ್ಞಾನನಿಧಿ ಶಿಷ್ಯವೇತನ, ಮಾಸಾಶನ ವಿತರಣೆ, ಮಲ್ಲಿಗೆ ಕೃಷಿ ಕುರಿತು ಮಾಹಿತಿ

ಪೆರ್ನೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ಪೆರ್ನೆ ವಲಯದ ಕೆದಿಲ ಬಿ ಕಾರ್ಯಕ್ಷೇತ್ರದಲ್ಲಿ ಸುಜ್ಞಾನನಿಧಿ ಶಿಷ್ಯವೇತನ ಹಾಗೂ ಮಾಸಾಶನ ಸೌಲಭ್ಯಗಳ ವಿತರಣೆ ಮತ್ತು ‘ಮಧುರ’ ಜ್ಞಾನವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮದಡಿ ಸ್ವ ಉದ್ಯೋಗಕ್ಕೆ ಪೂರಕವಾಗಿ ಮಲ್ಲಿಗೆ ಕೃಷಿ ಬಗ್ಗೆ ಮಾಹಿತಿ ಮತ್ತು ಸಸಿ ವಿತರಣೆ ಕಾರ್ಯಕ್ರಮ ನಡೆಯಿತು. ಕೆದಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ವಾಲ್ತಾಜೆ ಕಾರ್ಯಕ್ರಮ ಉದ್ಘಾಟಿಸಿದರು. ಯೋಜನಾಧಿಕಾರಿ ಚೆನ್ನಪ್ಪ ಗೌಡ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸುಜ್ಞಾನನಿಧಿ ಶಿಷ್ಯವೇತನ, ಮಾಸಾಶನ ವಿತರಣೆ, ಮಲ್ಲಿಗೆ ಕೃಷಿ ಕುರಿತು ಮಾಹಿತಿ Read More »

ಸುಳ್ಯ ವೃತ್ತ ನಿರೀಕ್ಷಕರಾಗಿ ಮೋಹನ್ ಕೊಠಾರಿ ಅಧಿಕಾರ ಸ್ವೀಕಾರ

ಸುಳ್ಯ: ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ಮೋಹನ್ ಕೊಠಾರಿ ಅಧಿಕಾರ ಸ್ವೀಕರಿಸಿದ್ದಾರೆ. ಈಗಾಗಲೇ ಸುಳ್ಯ ಠಾಣೆಯಿಂದ ವರ್ಗಾವಣೆಯಾಗಿರುವ ನವೀನ್ ಚಂದ್ರ ಜೋಗಿ ಅವರು ಮೋಹನ್ ಕೊಠಾರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಮಂಗಳೂರಿನವರಾದ ಕೊಠಾರಿ ಅವರು, ಮಂಗಳೂರಿನಲ್ಲಿ ಇನ್ ಸ್ಪೆಕ್ಟರ್ ಆಗಿದ್ದು, ಇದೀಗ ಸುಳ್ಯ ವೃತ್ತ ನಿರೀಕ್ಷಕರಾಗಿ ನೇಮಕಗೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ನವೀನ್ ಚಂದ್ರ ಜೋಗಿ ರಾಜ್ಯ ಪೊಲೀಸ್ ಗುಪ್ತಚರ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.

ಸುಳ್ಯ ವೃತ್ತ ನಿರೀಕ್ಷಕರಾಗಿ ಮೋಹನ್ ಕೊಠಾರಿ ಅಧಿಕಾರ ಸ್ವೀಕಾರ Read More »

ಅ. 22: ವಿಜಯ ಸಾಮ್ರಾಟ್ ವತಿಯಿಂದ ಪಿಲಿಗೊಬ್ಬು-2023, ಫುಡ್ ಫೆಸ್ಟ್  | ಪುತ್ತೂರು ದೇವಳದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

 ಪುತ್ತೂರು: ಅ.22 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಪುತ್ತೂರು ವಿಜಯ ಸಾಮ್ರಾಟ್ ವತಿಯಿಂದ ನಡೆಯಲಿರುವ “ಪುತ್ತೂರುದ ಪಿಲಿಗೊಬ್ಬು-2023” ರ ಆಮಂತ್ರಣ ಪತ್ರಿಕೆ ಬಿಡುಗಡೆ ಗುರುವಾರ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಡಾ.ನರಸಿಂಹ ಕಾನಾವು ಜಂಟಿಯಾಗಿ ಆಮಂತ್ರಣ ಪತ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಈ ಹುಲಿವೇಷ ಕುಣಿತ, ಹಾಗೆಯೇ ಫುಡ್

ಅ. 22: ವಿಜಯ ಸಾಮ್ರಾಟ್ ವತಿಯಿಂದ ಪಿಲಿಗೊಬ್ಬು-2023, ಫುಡ್ ಫೆಸ್ಟ್  | ಪುತ್ತೂರು ದೇವಳದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಕಡಬದಲ್ಲಿ ಆನೆ ದಾಳಿ: ಗಾಯಾಳು ಚೋಮ ಆಸ್ಪತ್ರೆಗೆ

ಕಡಬ: ಕಡಬ ತಾಲೂಕಿನ ಮರ್ಧಾಳ ಸಮೀಪದ ನೆಲ್ಯಡ್ಕ ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದೆ. ಚೋಮ ಎಂಬವರು ಕಾಡಾನೆ ದಾಳಿಯಿಂದ ಗಾಯಗೊಂಡವರು. ಗಾಯಗೊಂಡ ಚೋಮ ಅವರು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಪರಿಸರದಲ್ಲಿ ಮತ್ತೆ ಜನರಲ್ಲಿ ಆತಂಕ ಶುರುವಾಗಿದೆ.

ಕಡಬದಲ್ಲಿ ಆನೆ ದಾಳಿ: ಗಾಯಾಳು ಚೋಮ ಆಸ್ಪತ್ರೆಗೆ Read More »

ತಾಲೂಕಿನಾದ್ಯಂತ ಸಂಭ್ರಮದ ಈದ್ ಮಿಲಾದ್ ಆಚರಣೆ | ಮಸ್ಲಿಂ ಯುವಜನ ಪರಿಷತ್ ವತಿಯಿಂದ ಬೃಹತ್ ವಾಹನ ರ್ಯಾಲಿ, ಸಮಾವೇಶ

ಪುತ್ತೂರು: ಪುತ್ತೂರು ತಾಲೂಕಿನಾದ್ಯಂತ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಗುರುವಾರ ಮುಸ್ಲಿಂ ಬಾಂಧವರು ಆಚರಿಸಿದರು. ಬೆಳಿಗ್ಗೆ ಮುಸ್ಲಿಂ ಬಾಂಧವರು ಪ್ರಾರ್ಥನಾ ಮಂದಿರಗಳಿಗೆ ತೆರಳಿ ಪರಸ್ಪರ ಶುಭಾಶಯ ಕೋರಿದರು. ಈದ್ ಮಿಲಾದ್ ಅಂಗವಾಗಿ ತಾ ದ.ಕ. ಜಿಲ್ಲಾ ಯುವಜನ ಪರಿಷತ್ ಪುತ್ತೂರು ತಾಲೂಕು ಹಾಗೂ ಈದ್ ಮಿಲಾದ್ ಸಮಿತಿ ವತಿಯಿಂದ 31ನೇ ವರ್ಷದ ಬೃಹತ್ ಮಿಲಾದ್ ಸಮಾವೇಶ ಹಾಗೂ ಬುರ್ಧಾ ಮಜ್ಲಿಸ್ ಗುರುವಾರ ನಗರದ ಕಿಲ್ಲೆ ಮೈದಾನದಲ್ಲಿ ಹಮ್ಮಿಕೊಂಡಿತು. ಸಂಜೆ ಕಬಕ ವೃತ್ತದಲ್ಲಿ ರ್ಯಾಲಿಗೆ ಕಬಕ ಟೈಲರ್ ಇಸ್ಮಾಯಿಲ್

ತಾಲೂಕಿನಾದ್ಯಂತ ಸಂಭ್ರಮದ ಈದ್ ಮಿಲಾದ್ ಆಚರಣೆ | ಮಸ್ಲಿಂ ಯುವಜನ ಪರಿಷತ್ ವತಿಯಿಂದ ಬೃಹತ್ ವಾಹನ ರ್ಯಾಲಿ, ಸಮಾವೇಶ Read More »

ಪ್ರಸಿದ್ಧ ವರ್ಣಚಿತ್ರ ಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರಿಗೆ ಈ ಬಾರಿಯ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ | ಮುಖ್ಯಮಂತ್ರಿಯಿಂದಲೂ ಪ್ರಶಸ್ತಿ ಪಡೆದಿದ್ದ ಮೂಲತಃ ಪುತ್ತೂರಿನ ಕಲಾವಿದ

ಪುತ್ತೂರು: ಇಲ್ಲಿನ ಪರ್ಲಡ್ಲದಲ್ಲಿರುವ ಡಾ. ಶಿವರಾಮ ಕಾರಂತ ಬಾಲವನದಲ್ಲಿ ಅ. 10ರಂದು ನಡೆಯಲಿರುವ ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಈ ಬಾರಿ ಬೆಂಗಳೂರಿನ ಪ್ರಸಿದ್ಧ ವರ್ಣ ಚಿತ್ರಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರನ್ನು ಡಾ.ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ. ಕೋಟ ಶಿವರಾಮ ಕಾರಂತರ ಬಾಲವನ ಸಮಿತಿ ಮತ್ತು ಪುತ್ತೂರು ಸಹಾಯಕ ಆಯುಕ್ತರ ಕಾರ್ಯಾಲಯ, ಪುತ್ತೂರು ಉಪವಿಭಾಗ ಮತ್ತೂರು

ಪ್ರಸಿದ್ಧ ವರ್ಣಚಿತ್ರ ಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರಿಗೆ ಈ ಬಾರಿಯ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ | ಮುಖ್ಯಮಂತ್ರಿಯಿಂದಲೂ ಪ್ರಶಸ್ತಿ ಪಡೆದಿದ್ದ ಮೂಲತಃ ಪುತ್ತೂರಿನ ಕಲಾವಿದ Read More »

error: Content is protected !!
Scroll to Top