ಹಾರಾಡಿ-ರೈಲ್ವೇ ನಿಲ್ದಾಣದ ರಸ್ತೆ ಪ್ರವೇಶಿಸುವಲ್ಲಿ ಬಾಯ್ದೆರೆದು ನಿಂತ ಚರಂಡಿ | ಅಪಾಯ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಿ!!!

ಪುತ್ತೂರು: ಬಹು ದಿನಗಳ ಬೇಡಿಕೆಯಾದ ಹಾರಾಡಿ-ರೈಲ್ವೇ ನಿಲ್ದಾಣ ರಸ್ತೆ ಇದೀಗ ಅಭಿವೃದ್ಧಿ ಕಂಡಿದೆ. ಆದರೆ ಮುಖ್ಯರಸ್ತೆಯಿಂದ ರೈಲ್ವೇ ರಸ್ತೆಯನ್ನು ಸಂಪರ್ಕಿಸುವ ಬಳಿಯೇ ಅಪಾಯವೊಂದು ಕಾದಿದೆ. ಪುತ್ತೂರಿನ ಬೊಳುವಾರು ಸಮೀಪ ಹಾರಾಡಿ ರೈಲ್ವೇ ಸೆತುವೆ ಬಳಿ  ಕೋಟಿ ರೂಪಾಯಿ ಅನುದಾನದಲ್ಲಿ ರಚಿಸಿದ ರೈಲು ನಿಲ್ದಾಣ ಸಂಪರ್ಕ ರಸ್ತೆ ಪ್ರವೇಶಿಸುವಲ್ಲಿ ಚರಂಡಿಯೊಂದು ಬಾಯ್ದೆರೆದು ನಿಂತಿದ್ದು, ಅಪಾಯದ ಸ್ಥಿತಿಯಲ್ಲಿದೆ. ಇದು ಲೋಕೋಪಯೋಗಿ ಇಲಾಖೆಯ ರಸ್ತೆಗೆ ಸಂಬಂದಿಸಿದ್ದೆಂದು ನಗರಸಭೆ ತಿಳಿಸಿದ್ದು, ತಕ್ಷಣ ಲೋಕೋಪಯೋಗಿ ಇಲಾಖೆ ಸರಿಪಡಿಸುವ ಮೂಲಕ ಸಂಭಾವ್ಯ ಅಪಘಾತ ವಾಗದಂತೆ ಸೂಕ್ತ […]

ಹಾರಾಡಿ-ರೈಲ್ವೇ ನಿಲ್ದಾಣದ ರಸ್ತೆ ಪ್ರವೇಶಿಸುವಲ್ಲಿ ಬಾಯ್ದೆರೆದು ನಿಂತ ಚರಂಡಿ | ಅಪಾಯ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಿ!!! Read More »

ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟು | ಅರ್ಜಿ ವಜಾಗೊಳಿಸಲು ಕೋರ್ಟ್ ನೀಡಿದೆ ಮಹತ್ವದ ಕಾರಣ

ಬೆಂಗಳೂರು: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಆರೋಪಿಗಳು ಸಲ್ಲಿಸಿದ ಜಾಮೀನು ಅರ್ಜಿಯನ್ನು ನಿರಾಕರಿಸಿ ಹೈಕೋರ್ಟ್‌ ಆದೇಶಿಸಿದೆ. ನ್ಯಾಯಮೂರ್ತಿ ಎಚ್.ಬಿ. ಪ್ರಭಾಕರ್ ಶಾಸ್ತ್ರಿ ಹಾಗೂ ನ್ಯಾಯಮೂರ್ತಿ ಅನಿಲ್ ಕೆ. ಕಟ್ಟಿ ಅವರಿದ್ದ ವಿಭಾಗೀಯ ಪೀಠವು, ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಸಂಚಿನಲ್ಲಿ ಆರೋಪಿಗಳಾದ ಕೆ. ಇಸ್ಮಾಯಿಲ್ ಶಫಿ, (ಆರೋಪಿ 9), ಕೆ.ಮೊಹಮ್ಮದ್ ಇಕ್ಬಾಲ್ (ಆರೋಪಿ 10) ಹಾಗೂ ಎಂ.ಶಾಹೀದ್ (ಆರೋಪಿ 11) ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ

ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟು | ಅರ್ಜಿ ವಜಾಗೊಳಿಸಲು ಕೋರ್ಟ್ ನೀಡಿದೆ ಮಹತ್ವದ ಕಾರಣ Read More »

ಕಾರು ಢಿಕ್ಕಿಯಾಗಿ ಬೈಕ್ ಸವಾರ ಶ್ರೀನಿವಾಸ ಉಡುಪ ದುರ್ಮರಣ

ಬಂಟ್ವಾಳ: ಬೈಕ್ ಗೆ ಕಾರು ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಾಮಾಜೆ ಕ್ರಾಸ್ ಬಳಿ ಇಂದು ನಡೆದಿದೆ. ವಾಮದಪದವು ಸಮೀಪದ ಪಾಂಗಲ್ಪಾಡಿ ನಿವಾಸಿ ಶ್ರೀನಿವಾಸ ಉಡುಪ (58) ಮೃತಪಟ್ಟ ವ್ಯಕ್ತಿ. ವಾಮದಪದವನಿಂದ ಬಿಸಿರೋಡಿಗೆ ಬರುತ್ತಿದ್ದ ವೇಳೆ ಹಿಂಬದಿಯಿಂದ ಬರುತ್ತಿದ್ದ ಕಾರು ಢಿಕ್ಕಿಯಾಗಿದೆ. ಶ್ರೀನಿವಾಸ ಅವರು ಬಂಟ್ವಾಳ ದಿಂದ ಬರುತ್ತಿದ್ದು, ಕಾಮಾಜೆ ಕ್ರಾಸ್ ಬಳಿ ತಿರುಗಿಸಿದ ವೇಳೆ ಹಿಂಬದಿಯಿಂದ ಕಾರು ಢಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಶ್ರೀನಿವಾಸ ಉಡುಪರನ್ನು ತುಂಬೆ ಖಾಸಗಿ

ಕಾರು ಢಿಕ್ಕಿಯಾಗಿ ಬೈಕ್ ಸವಾರ ಶ್ರೀನಿವಾಸ ಉಡುಪ ದುರ್ಮರಣ Read More »

ತೆಲಂಗಾಣ ರಾಜ್ಯದಲ್ಲಿ ನಡೆಯಲಿದೆ ‘ಸರಸ್ ಮೇಳ’ | ಆರ್ಯಾಪು ಗ್ರಾಪಂನ ಸಂಜೀವಿನಿ ಒಕ್ಕೂಟದ ಅಂಬಿಕಾ ರಮೇಶ್ ಪಾಲ್ಗೊಳ್ಳುವಿಕೆ

ಪುತ್ತೂರು: ತೆಲಂಗಾಣ ರಾಜ್ಯದ ಮಾರುಕಟ್ಟೆಯಲ್ಲಿ ನಡೆಯುವ ‘ಸರಸ್ ಮೇಳ’ ದಲ್ಲಿ ಪಾಲ್ಗೊಳ್ಳಲು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯಿತಿಯ ಸರೋವರ ಸಂಜೀವಿ ಒಕ್ಕೂಟ ಸ್ವಸಹಾಯ ಸಂಘದ ಸದಸ್ಯೆ ಅಂಬಿಕಾ ರಮೇಶ್ ತೆರಳಲಿದ್ದಾರೆ. ಹೈದರಾಬಾದಿನ ಎಚ್‍.ಎಂ.ಡಿ.ಎ. ಗ್ರೌಂಡ್ ಬಿಸೈಡ್ಸ್ ಪ್ರಸಾದ್ ಐಮ್ಯಾಕ್ಸ್ ಥಿಯೇಟರ್ ನಲ್ಲಿ 15 ದಿನಗಳ ಕಾಲ ಆಯೋಜಿಸಲಾಗಿರುವ ಸರಸ್ ಮೇಳಕ್ಕೆ ಅ.4 ರಂದು ತೆರಳಲಿದ್ದಾರೆ. ಅಂಬಿಕಾ ರಮೇಶ್ ಅವರು ಆರ್ಯಾಪು ಗ್ರಾಮ ಪಂಚಾಯಿತಿಯ ಸರೋವರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾಗಿದ್ದು, ಪ್ರಸ್ತುತ ಬಿ.ಸಿ.ಸಖಿ ಹಾಗೂ ಸಂಜೀವಿನಿ 5ನೇ

ತೆಲಂಗಾಣ ರಾಜ್ಯದಲ್ಲಿ ನಡೆಯಲಿದೆ ‘ಸರಸ್ ಮೇಳ’ | ಆರ್ಯಾಪು ಗ್ರಾಪಂನ ಸಂಜೀವಿನಿ ಒಕ್ಕೂಟದ ಅಂಬಿಕಾ ರಮೇಶ್ ಪಾಲ್ಗೊಳ್ಳುವಿಕೆ Read More »

ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಮೂವರು ವಿಜ್ಞಾನಿಗಳು ಆಯ್ಕೆ

ಸ್ಟಾಕ್‌ಹೋಂ: ಮೌಂಗಿ ಬವೆಂಡಿ, ಲೂಯಿಸ್ ಬ್ರೂಸ್ ಮತ್ತು ಅಲೆಕ್ಸಿ ಎಕಿಮೊವ್ ಅವರಿಗೆ ಸಣ್ಣ ಕ್ವಾಂಟಮ್ ಡಾಟ್‌ಗಳ (ಅರೆವಾಹಕ ನ್ಯಾನೊಕ್ರಿಸ್ಟಲ್) ಕೆಲಸಕ್ಕಾಗಿ ಈ ಸಾಲಿನ ಪ್ರತಿಷ್ಠಿತ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರಧಾನ ಕಾರ್ಯದರ್ಶಿ ಹ್ಯಾನ್ಸ್ ಎಲೆಗ್ರೆನ್ ಅವರು ಬುಧವಾರ ಸ್ಟಾಕ್‌ಹೋಮ್‌ನಲ್ಲಿ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಮೂವರು ಸಂಶೋಧಕರು ಬೋಸ್ಟನ್‌ನ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೌಂಗಿ ಬವೆಂಡಿ, ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದ ಲೂಯಿಸ್ ಬ್ರೂಸ್ ಮತ್ತು ಅಲೆಕ್ಸಿ ಎಕಿಮೊವ್ ನ್ಯೂಯಾರ್ಕ್‌ನ ನ್ಯಾನೊಕ್ರಿಸ್ಟಲ್ಸ್

ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಮೂವರು ವಿಜ್ಞಾನಿಗಳು ಆಯ್ಕೆ Read More »

ನವರಾತ್ರಿ ಪ್ರಯುಕ್ತ `ನ್ಯೂಸ್ ಪುತ್ತೂರು’ ಆಯೋಜಿಸುತ್ತಿದೆ `ಸರಸ್ವತಿ ಗೀತೆಗಳ ಸ್ಪರ್ಧೆ’

ವಿದ್ಯಾಧಿದೇವತೆ ಸರಸ್ವತಿ. ಮಾತು, ಬರಹ, ಪಾಂಡಿತ್ಯ ಇವಾವುದನ್ನೇ ಆರಂಭಿಸುವುದಿದ್ದರೂ ಸರಸ್ವತಿಗೆ ಅಗ್ರ ಪೂಜೆ. ಹಾಗಾಗಿ ತಾಯಿ ಸರಸ್ವತಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು, ವಾತ್ಸಲ್ಯ. ಇಂತಹ ಶಾರದಾ ಮಾತೆಯನ್ನು ಕೊಂಡಾಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ… ಈ ಹಿನ್ನೆಲೆಯಲ್ಲಿ ಜನಮನದ ಪ್ರತಿಧ್ವನಿಯಾಗಿರುವ `ನ್ಯೂಸ್ ಪುತ್ತೂರು’ ಈ ಬಾರಿಯ ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಸರಸ್ವತಿ ಗೀತೆಗಳ ಸ್ಪರ್ಧೆಯನ್ನು ಆಯೋಜಿಸಿದೆ. ಆಸಕ್ತರು ನಿಮ್ಮ ಮನೆಯಲ್ಲೇ ಇದ್ದುಕೊಂಡು, ನೀವೇ ಹಾಡಿದ ಸರಸ್ವತಿ ಗೀತೆಯ ವಿಡಿಯೋವನ್ನು ನಮಗೆ ಕಳುಹಿಸಿಕೊಡಿ. ನೀವು ಹಾಡಿರುವ ಗೀತೆಯನ್ನು ನುರಿತ

ನವರಾತ್ರಿ ಪ್ರಯುಕ್ತ `ನ್ಯೂಸ್ ಪುತ್ತೂರು’ ಆಯೋಜಿಸುತ್ತಿದೆ `ಸರಸ್ವತಿ ಗೀತೆಗಳ ಸ್ಪರ್ಧೆ’ Read More »

ರಾಗಿಗುಡ್ಡಕ್ಕೆ ಭೇಟಿ ನೀಡಲಿದೆ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದ ಬಿಜೆಪಿ ಸತ್ಯಶೋಧನಾ ತಂಡ!! ಸತ್ಯಶೋಧನಾ ತಂಡದಲ್ಲಿರುವ ಪ್ರಮುಖರು ಯಾರ್ಯಾರು?

ಬೆಂಗಳೂರು: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದಿರುವ ಗಲಭೆಯನ್ನು ಖಂಡಿಸಿರುವ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಅಕ್ಟೋಬರ್ 5ರಂದು ಬೆಳಿಗ್ಗೆ 11 ಗಂಟೆಗೆ ಬಿಜೆಪಿ ಸತ್ಯಶೋಧನಾ ತಂಡ ರಾಗಿಗುಡ್ಡಕ್ಕೆ ಭೇಟಿ ನೀಡಲಿದೆ ಎಂದು ತಿಳಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ, ಡಾ. ಸಿ.ಎನ್. ಅಶ್ವತ್ಥನಾರಾಯಣ್, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ

ರಾಗಿಗುಡ್ಡಕ್ಕೆ ಭೇಟಿ ನೀಡಲಿದೆ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದ ಬಿಜೆಪಿ ಸತ್ಯಶೋಧನಾ ತಂಡ!! ಸತ್ಯಶೋಧನಾ ತಂಡದಲ್ಲಿರುವ ಪ್ರಮುಖರು ಯಾರ್ಯಾರು? Read More »

ಕೊರಗ ಭಾಷೆಯಲ್ಲಿ ಮೂಡಿಬಂದ ಮದುವೆ ಆಮಂತ್ರಣ! | ಪ್ರಶಂಸೆಗೆ ಪಾತ್ರವಾದ ಆಹ್ವಾನ ಪತ್ರಿಕೆಯ ದೇಸಿ ಭಾಷೆ | ಹೀಗಿದೆ ನೋಡಿ ಆಮಂತ್ರಣ

ಮಂಗಳೂರು: ದೇಸಿ ಭಾಷೆಗಳಿಗೆ ಬೆಂಬಲ ಸಿಗುತ್ತಿಲ್ಲ ಎನ್ನುವ ಕೊರಗಿನ ನಡುವೆ, ಇಲ್ಲೊಂದು ಜೋಡಿ ತಮ್ಮ ಮದುವೆ ಆಮಂತ್ರಣವನ್ನು ತಮ್ಮ ಮಾತೃಭಾಷೆಯಾದ ಕೊರಗ ಭಾಷೆಯಲ್ಲಿ ಮುದ್ರಿಸಿ ಗಮನ ಸೆಳೆದಿದೆ. ಮಂಗಳೂರಿನ ಕೋಡಿಬೆಟ್ಟುವಿನ ಅಕ್ಷತಾ ಹಾಗೂ ಬಾರ್ಕೂರಿನ ಅಮಿತ್ ಕುಮಾರ್ ಅವರ ವಿವಾಹ ನವಂಬರ್ 19ರಂದು ನಡೆಯಲಿದ್ದು, ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೊರಗ ಭಾಷೆಯಲ್ಲೇ ಮುದ್ರಿಸಲಾಗಿದೆ. ಇದೀಗ ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಎಲ್ಲೆಡೆಯಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಅರುಣ್ ಜೋಳದ ಕೂಡ್ಲಿಗಿ ಎನ್ನುವವರು ತಮ್ಮ

ಕೊರಗ ಭಾಷೆಯಲ್ಲಿ ಮೂಡಿಬಂದ ಮದುವೆ ಆಮಂತ್ರಣ! | ಪ್ರಶಂಸೆಗೆ ಪಾತ್ರವಾದ ಆಹ್ವಾನ ಪತ್ರಿಕೆಯ ದೇಸಿ ಭಾಷೆ | ಹೀಗಿದೆ ನೋಡಿ ಆಮಂತ್ರಣ Read More »

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ

ಪುತ್ತೂರು: ಗ್ರಾಮೀಣ ಅಂಚೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯಾ ಸಮಿತಿಯಿಂದ ಪುತ್ತೂರು ವಿಭಾಗೀಯ ಕಚೇರಿ ಎದುರು ಬುಧವಾರ ಒಂದು ದಿನದ ಮುಷ್ಕರ ನಡೆಯಿತು. ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ವಿಭಾಗೀಯ ಕಾರ್ಯದರ್ಶಿ ಸುನಿಲ್ ದೇವಾಡಿಗ, ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ ಸುಮಾರು 750 ಮಂದಿ ಗ್ರಾಮೀಣ ಅಂಚೆ ನೌಕರರಿದ್ದಾರೆ. 7ನೇ ವೇತನ ಆಯೋಗದ ಶಿಫಾರಸ್ಸು ಇನ್ನೂ ಅನುಷ್ಠಾನ ಆಗಿಲ್ಲ ಎಂದರು. ಗ್ರಾಮೀಣ ಭಾಗದಲ್ಲಿ ಅಂಚೆ ಇಲಾಖೆಗೆ ಆದಾಯ ಮಾಡಿಕೊಡುವ ನೌಕರರನ್ನು

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ Read More »

ಶಿವಮೊಗ್ಗ ಗಲಭೆ ಪ್ರಕರಣವನ್ನು ಎನ್.ಐ.ಎ.ಗೆ ವಹಿಸಲು ವಿಹಿಂಪ, ಭಜರಂಗದಳ ಆಗ್ರಹ

ಪುತ್ತೂರು: ಕಳೆದ ಎರಡು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಮಿಲಾದ್ ಆಚರಣೆ ಸಂದರ್ಭ ಹಿಂದೂಗಳ ಟಾರ್ಗೆಟ್ ಮಾಡಿ ನಡೆಸಿದ ದಾಳಿಯನ್ನು ವಿಶ್ವ ಹಿಂದೂ ಪರಿಷತ್, ಬಜರಂಗದಳ ಖಂಡನೆ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಭಾಗಿಯಾದವರನ್ನು ತಕ್ಷಣ ಬಂಧಿಸಿ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದೆ. ಬಜರಂಗಳ ದಕ್ಷಿಣಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಿಲಾದ್ ಮೆರವಣಿಗೆ ವೇಳೆ ಅಳವಡಿಸಿದ ಬೃಹತ್ ಕಟೌಟ್ಗಳನ್ನು ಪೊಲೀಸರು ತೆಗೆಸಿದ್ದಾರೆ. ಇದನ್ನು ನೆಪವಾಗಿಟ್ಟುಕೊಂಡು ಜಾಥಾ ವೇಳೆ ತಲವಾರು ಹಿಡಿದ ಸುಮಾರು 400ಕ್ಕೂ ಅಧಿಕ ಮಂದಿ ಗ್ರಾಮವೊಂದರ

ಶಿವಮೊಗ್ಗ ಗಲಭೆ ಪ್ರಕರಣವನ್ನು ಎನ್.ಐ.ಎ.ಗೆ ವಹಿಸಲು ವಿಹಿಂಪ, ಭಜರಂಗದಳ ಆಗ್ರಹ Read More »

error: Content is protected !!
Scroll to Top