ದ.ಕ. ಜಿಲ್ಲೆ ಪೂರ್ಣ ಬರಪೀಡಿತ: ಘೋಷಣೆಗೆ ರೈತ ಸಂಘ, ಹಸಿರುಸೇನೆ ಆಗ್ರಹ

ಪುತ್ತೂರು: ಮೂಡಬಿದಿರೆ ಹಾಗೂ ಮಂಗಳೂರು ತಾಲೂಕನ್ನು ಮಾತ್ರ ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನು ಕೈಬಿಟ್ಟಿರುವುದು ಜಿಲ್ಲೆಯ ರೈತರು ಹಾಗೂ ಸಮಸ್ತ ನಾಗರಿಕರಿಗೆ ಮಾಡಿದ ದ್ರೋಹ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಆರೋಪಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ, ದಕ್ಷಿಣ ಕನ್ನಡ, ಮಂಗಳೂರಿಗೆ ನೀರುಣಿಸುವ ನೇತ್ರಾವತಿಯನ್ನೇ ತಿರುಗಿಸಿ ಎತ್ತಿನಹೊಳೆ ಯೋಜನೆಯನ್ನು ಮಾಡಿ ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಬರಗಾಲ ಪ್ರದೇಶವನ್ನಾಗಿ ಮಾಡಲು ಸಂಚು […]

ದ.ಕ. ಜಿಲ್ಲೆ ಪೂರ್ಣ ಬರಪೀಡಿತ: ಘೋಷಣೆಗೆ ರೈತ ಸಂಘ, ಹಸಿರುಸೇನೆ ಆಗ್ರಹ Read More »

ಕುಡಿಯುವ ನೀರಿನ ಸಂಪರ್ಕ: ಗ್ರಾಪಂಗಳಿಗೆ ಶಾಸಕರ ಖಡಕ್ ಸೂಚನೆ | ಫೀಲ್ಡಿಗಿಳಿಯುವ ಎಚ್ಚರಿಕೆ ನೀಡಿದ ಶಾಸಕ ಅಶೋಕ್ ರೈ

ಪುತ್ತೂರು: ಗ್ರಾಮದಲ್ಲಾಗಲಿ, ನಗರದಲ್ಲಾಗಲಿ ವಾಸ್ತವ್ಯ ಇರುವ ಮನೆಗೆ ನೀರಿನ ಸಂಪರ್ಕ ನೀಡಲು ಮನೆಯವರಲ್ಲಿ ಯಾವುದೇ ದಾಖಲೆಗಳನ್ನು ಕೇಳಬೇಡಿ. ಕುಡಿಯುವ ನೀರು ಎಲ್ಲರಿಗೂ ದೊರೆಯುವಂತಾಗಬೇಕು. ದಾಖಲೆ ಇಲ್ಲ ಎಂದು ನೀರಿನ ಸಂಪರ್ಕ ಕೊಡದೆ ಇರಬಾರದು ಎಂದು ಪುತ್ತೂರು ಶಾಸಕ ಅಶೋಕ್ ರೈ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಪುತ್ತೂರು ಶಾಸಕರ ಭವನದಲ್ಲಿ ನಡೆದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಈ ಸೂಚನೆ ನೀಡಿದ್ದಾರೆ.ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿಯೋರ್ವರಿಗೆ ಗ್ರಾಪಂ ಕುಡಿಯುವ ನೀರಿನ ಸಂಪರ್ಕ

ಕುಡಿಯುವ ನೀರಿನ ಸಂಪರ್ಕ: ಗ್ರಾಪಂಗಳಿಗೆ ಶಾಸಕರ ಖಡಕ್ ಸೂಚನೆ | ಫೀಲ್ಡಿಗಿಳಿಯುವ ಎಚ್ಚರಿಕೆ ನೀಡಿದ ಶಾಸಕ ಅಶೋಕ್ ರೈ Read More »

ಮೂಡುಬಿದಿರೆ ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ, ಯುವ ನ್ಯಾಯವಾದಿ ನಿಧನ

ಮೂಡುಬಿದಿರೆ : ಮೂಡುಬಿದಿರೆ ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ, ಜಯಕಿರಣ ಪತ್ರಿಕೆಯ ತಾಲೂಕು ವರದಿಗಾರ ಹಾಗೂ ಯುವ ನ್ಯಾಯವಾದಿ ವೇಣುಗೋಪಾಲ (30) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಚ್ಚೇರಿಪೇಟೆಯ ಆನಂದ ಪೂಜಾರಿ ಅವರ ಪುತ್ರರಾಗಿರುವ ವೇಣುಗೋಪಾಲ ಅವಿವಾಹಿತರಾಗಿದ್ದಾರೆ. ಕ್ರಿಯಾಶೀಲ ಪತ್ರಕರ್ತರಾಗಿದ್ದ ಅವರು ಮೂಡುಬಿದಿರೆಯಲ್ಲಿ ಯುವ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದರು. ಪತ್ರಿಕಾ ಕ್ಷೇತ್ರ ಮಾತ್ರವಲ್ಲದೆ ಸಾಂಸ್ಕೃತಿಕ ಹಾಗೂ ಇತರ ಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದ ವೇಣುಗೋಪಾಲ ಅವರು, ಭಾನುವಾರ ಸಂಜೆ ತನ್ನ ಸಹೋದರಿಯ ಮನೆಗೆ ಹೋಗಿದ್ದರು. ಇಂದು ಬೆಳಿಗ್ಗೆ ಅವರಿಗೆ ಹೃದಯಾಘಾತ

ಮೂಡುಬಿದಿರೆ ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ, ಯುವ ನ್ಯಾಯವಾದಿ ನಿಧನ Read More »

ಗಾಜಾಪಟ್ಟಿ ವಶಕ್ಕೆ ಇಸ್ರೇಲ್ ಸೇನೆಗೆ ಆದೇಶ: ವರದಿ

ಟೆಲ್ ಅವೀವ್: ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಗಾಜಾಪಟ್ಟಿ ಮೇಲೆ ದಾಳಿ ಆರಂಭಿಸಿರುವ ಇಸ್ರೇಲ್ ಸೇನೆಗೆ ಇದೀಗ ಇಡೀ ಗಾಜಾಪಟ್ಟಿಯನ್ನೇ ವಶಕ್ಕೆ ಪಡೆಯುವಂತೆ ಆದೇಶ ನೀಡಲಾಗಿದೆ. ಈ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಭಾನುವಾರ ವರದಿ ಮಾಡಿದ್ದು, ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಮತ್ತು ಹಮಾಸ್ನ ಪ್ರಸ್ತುತ ನಾಯಕತ್ವವನ್ನು ನಾಶ ಮಾಡಲು ಹತ್ತಾರು ಸಾವಿರ ಸೈನಿಕರೊಂದಿಗೆ ಶೀಘ್ರದಲ್ಲೇ ಗಾಜಾ ಪಟ್ಟಿಯ ಮೇಲೆ ದಾಳಿ ಮಾಡಲು ಇಸ್ರೇಲಿ ಮಿಲಿಟರಿ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎನ್ನಲಾಗಿದೆ. ಅಂತೆಯೇ ಪ್ರಸ್ತುತ ಹಮಾಸ್ ಭಯೋತ್ಪಾದಕ ಗುಂಪಿನ ಉನ್ನತ

ಗಾಜಾಪಟ್ಟಿ ವಶಕ್ಕೆ ಇಸ್ರೇಲ್ ಸೇನೆಗೆ ಆದೇಶ: ವರದಿ Read More »

ನೀವು ಉತ್ತಮ ಭಾಷಣಗಾರರಾಗಬೇಕೇ? ಉತ್ತಮ ನಿರೂಪಕರಾಗಬೇಕೇ? | ಪ್ರೇರಣಾ ಸಂಸ್ಥೆ ನಿಮಗಾಗಿ ಹೊಸ ಅವಕಾಶವೊಂದನ್ನು ತೆರೆದಿಟ್ಟಿದೆ

ಪುತ್ತೂರು: ನೆರೆದಿರುವ ದೊಡ್ಡ ಸಭೆಯ ಮುಂದೆ ನಿಂತು ನಿರರ್ಗಳವಾಗಿ ಭಾಷಣ ಮಾಡಬೇಕು. ಅಂಜಿಕೆಯ ಸುಳಿವೇ ಇಲ್ಲದೇ ತುಂಬಿದ ಸಭೆ ಮೂಕವಿಸ್ಮಿತರಾಗುವಂತೆ ನಿರೂಪಣೆ (ಎಂ.ಸಿ.) ಮಾಡಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಇದನ್ನು ನಿಜ ಜೀವನದಲ್ಲಿ ಸಾಧ್ಯವಾಗಿಸುವುದು ಹೇಗೆ? ಕನಸುಗಳನ್ನೇನೋ ಸಹಜವಾಗಿ ಕಟ್ಟಿಕೊಂಡು ಬಿಡುತ್ತೇವೆ. ಆದರೆ ಇಂತಹ ಕನಸುಗಳನ್ನು ಸುಲಭವಾಗಿ ನನಸು ಮಾಡಬೇಕಾದರೆ ಸೂಕ್ತ ತರಬೇತಿ ಕೇಂದ್ರಗಳನ್ನೇ ಸಂಪರ್ಕಿಸಬೇಕು. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಭಾಷಣ ಹಾಗೂ ನಿರೂಪಣಾ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಪ್ರಯತ್ನಕ್ಕೆ ಪ್ರೇರಣಾ

ನೀವು ಉತ್ತಮ ಭಾಷಣಗಾರರಾಗಬೇಕೇ? ಉತ್ತಮ ನಿರೂಪಕರಾಗಬೇಕೇ? | ಪ್ರೇರಣಾ ಸಂಸ್ಥೆ ನಿಮಗಾಗಿ ಹೊಸ ಅವಕಾಶವೊಂದನ್ನು ತೆರೆದಿಟ್ಟಿದೆ Read More »

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ: ಭುವನ್ ರಾಮ್ ಗೆ ಚಿನ್ನದ ಪದಕ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿ ಭುವನ್ ರಾಮ್ ಜಗದೀಶ್ ಭಂಡಾರಿ ಅವರು ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಭಾರ ಎತ್ತುವ ಸ್ಪರ್ಧೆಯಲ್ಲ್ಲಿಚಿನ್ನದ ಪದಕ ಗಳಿಸಿದ್ದಾರೆ. ಮೈಸೂರಿನಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಕಾಲೇಜಿನ ಪ್ರಥಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಭುವನ್ರಾಮ್ 73 ಕೆಜಿ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ಇವರು ಪುತ್ತೂರಿನ ಜಗದೀಶ್ ಭಂಡಾರಿ ಹಾಗೂ ನಯನಾ ಭಂಡಾರಿ ಪುತ್ರ. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ: ಭುವನ್ ರಾಮ್ ಗೆ ಚಿನ್ನದ ಪದಕ Read More »

ಅಂತಾರಾಜ್ಯ ಅಥ್ಲೆಟಿಕ್ಸ್: ಕಡಬದ ಚರಿಷ್ಮ ರಾಷ್ಟ್ರಮಟ್ಟಕ್ಕೆ

ಪುತ್ತೂರು: ತೆಲಂಗಾಣದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತಾರಾಜ್ಯ ಜ್ಯೂನಿಯರ್ ವಿಭಾಗದ ಅಥ್ಲೆಟಿಕ್ಸ್ ನಲ್ಲಿ ಕಡಬದ ಚರಿಷ್ಮ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕಡಬ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಚರಿಷ್ಮ ಅವರು ಅಥ್ಲೆಟಿಕ್ಸ್ ನ ಯು16 ಬಾಲಕಿಯರ 2000 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕಡಬ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಆಡಳಿತ ಮಂಡಳಿ, ಸಿಬ್ಬಂದಿಗಳು ಚರಿಷ್ಮಾ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಂತಾರಾಜ್ಯ ಅಥ್ಲೆಟಿಕ್ಸ್: ಕಡಬದ ಚರಿಷ್ಮ ರಾಷ್ಟ್ರಮಟ್ಟಕ್ಕೆ Read More »

ಶ್ರೀ ಸತ್ಯನಾರಾಯಣ ಪೂಜೆ, ಯಕ್ಷಗಾನ ತಾಳಮದ್ದಲೆ

ಪುತ್ತೂರು: ಕಳುವಾಜೆ ಶ್ರೀ ವೆಂಕಟರಮಣ ಗೌಡರ ಮನೆಯಲ್ಲಿ ಶ್ರೀ  ಸತ್ಯನಾರಾಯಣ ದೇವರ ಪೂಜೆಯ ಪ್ರಯುಕ್ತ ಶ್ರೀ ಸತ್ಯನಾರಾಯಣ ವ್ರತಾಚರಣೆ ಯಕ್ಷಗಾನ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯಶ್ರೀ ಕುಲ್ಕುಂದ, ಚೆಂಡೆಯಲ್ಲಿ ಮುರಳೀಧರ ಕಲ್ಲೂರಾಯ ಕುಂಜೂರುಪಂಜ, ಮದ್ದಳೆಯಲ್ಲಿ ಮುರಳಿ ಹಳೆನೇರೆಂಕಿ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ವಿಷ್ಣು ಮತ್ತು ತುಂಗಧ್ವಜನಾಗಿ ರಾಧಾಕೃಷ್ಣ ಕಲ್ಚಾರ್, ಸಾಧುವೈಶ್ಯ ಮತ್ತು ಗೋವಳನಾಗಿ ಗುಡ್ಡಪ್ಪ ಬಲ್ಯ, ನಾರದ ಮತ್ತು ಚಂದ್ರಕೇತುವಾಗಿ ತಾರಾನಾಥ ಸವಣೂರು, ಜ್ವಾಲಮುಖ ಮತ್ತು ಲೀಲಾವತಿಯಾಗಿ ಪ್ರಸಾದ್ ಸವಣೂರು, ರಾಜಭಟ ಮತ್ತು ಕಲಾವತಿಯಾಗಿ ಶ್ರುತಿ

ಶ್ರೀ ಸತ್ಯನಾರಾಯಣ ಪೂಜೆ, ಯಕ್ಷಗಾನ ತಾಳಮದ್ದಲೆ Read More »

ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಮೆಷಿನ್ ಹಸ್ತಾಂತರ

ಪುತ್ತೂರು: ಸರಕಾರ ಕೆಲಸ ದೇವರ ಕೆಲಸ. ಈ ನಿಟ್ಟಿನಲ್ಲಿ ಸರಕಾರಿ ಕಚೇರಿ ಯಾವುದೇ ಇರಲಿ ಸಿಬ್ಬಂದಿಗಳ ಕೊರತೆ ಇದೆ ಎಂಬ ನೆಪ ಬಿಟ್ಟು ಇರುವ ಸಿಬ್ಬಂದಿಗಳನ್ನು ಹೆಚ್ಚು ಬಳಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಪುತ್ತೂರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ 9 ಲಕ್ಷ ರೂ. ವೆಚ್ಚದಲ್ಲಿ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಹಾಗೂ ಮಕ್ಕಳ ಚಿಕಿತ್ಸಾ ವಿಭಾಗಗಕ್ಕೆ ಮಲ್ಪಿ ಪ್ಯಾರಾ ಮಾನಿಟರ್, ಹೊರಪ್ರಾಂಗಣದ ನಿರೀಕ್ಷಣಾ ಕೊಠಡಿಗೆ ಟೆಲಿವಿಷನ್ ಕೊಡುಗೆಯಾಗಿ

ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಮೆಷಿನ್ ಹಸ್ತಾಂತರ Read More »

ತಸ್ಲೀಮ್ ಮೃತದೇಹ ಮೇಲೆತ್ತಿದ ಈಶ್ವರ್ ಮಲ್ಪೆ | ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ಮತ್ತೊಂದು ಸೇವಾ ಕಾರ್ಯ

ಪುತ್ತೂರು: ಡಾ. ಎಪಿಜೆ ಅಬ್ದುಲ್ ಕಲಾಂ ಮಿಸೈಲ್ ಮ್ಯಾನ್ ಪ್ರಶಸ್ತಿಯನ್ನು ಸ್ವೀಕರಿಸಿ ಇನ್ನೂ ಗಂಟೆ ಸರಿದಿರಲಿಲ್ಲ. ಅಷ್ಟರಲ್ಲೇ ಆಪದ್ಭಾಂಧವ ಈಶ್ವರ್ ಮಲ್ಪೆ ಅವರ ಮೊಬೈಲ್’ಗೆ ಕರೆ ಬಂದಾಗಿತ್ತು. ಪುತ್ತೂರು ತಾಲೂಕಿನ ಮಾಡಾವು ಸಮೀಪದ ಗೌರಿ ಹೊಳೆಯಲ್ಲಿ 17 ವರ್ಷದ ನವತರುಣ ತಸ್ಲೀಮ್ ಎಂಬ ಯುವಕ ನಾಪತ್ತೆಯಾಗಿದ್ದಾನೆ. ಗೆಳೆಯರ ಜೊತೆ ಈಜಲು ತೆರಳಿದ್ದು, ಇದುವರೆಗೆ ಮರಳಿ ಬಂದಿಲ್ಲ. ನೀರಿನ ಸೆಳೆತ ಹೆಚ್ಚಿರುವುದರಿಂದ ಅಪಾಯ ಸಂಭವಿಸಿರುವ ಸಾಧ್ಯತೆಯೇ ಅಧಿಕ. ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ ಎಂಬ ಸಂದೇಶ ಬಂದಾಗಿತ್ತು. ಬೆಂಗಳೂರಿನಲ್ಲಿ ಪ್ರಶಸ್ತಿ

ತಸ್ಲೀಮ್ ಮೃತದೇಹ ಮೇಲೆತ್ತಿದ ಈಶ್ವರ್ ಮಲ್ಪೆ | ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ಮತ್ತೊಂದು ಸೇವಾ ಕಾರ್ಯ Read More »

error: Content is protected !!
Scroll to Top