ಸುಳ್ಯದ ವಿವಾಹಿತೆ ಬೆಂಗಳೂರಿನಲ್ಲಿ ಆತ್ಮಹತ್ಯೆ

ಸುಳ್ಯ: ಉದ್ಯಮಿಯೊಬ್ಬರ ಸೊಸೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಡೈರಿ ರಿಚ್ ಐಸ್‍ ಕ್ರೀಂ ಉದ್ಯಮಿ ಕನಕಮಜಲಿನ ಗಿರಿಯಪ್ಪ ಗೌಡರ ಸೊಸೆ, ರಾಜೇಶ್ ಎಂಬವರ ಪತ್ನಿ ಐಶ್ವರ್ಯ (26) ಈ ಕೃತ್ಯ ಎಸಗಿದವರು. ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಸುಬ್ರಹ್ಮಣ್ಯ ಗೌಡ ಹಾಗೂ ಉಷಾ ದಂಪತಿ ಪುತ್ರಿಯಾಗಿರುವ ಐಶ್ವರ್ಯ ನಾಲ್ಕು ವರ್ಷಗಳ ಹಿಂದೆ ರಾಜೇಶ್‍ ಅವರನ್ನು ವಿವಾಹವಾಗಿದ್ದು, ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಪತಿ ರಾಜೇಶ್ ಐಸ್‍ ಕ್ರೀಂ ಪಾರ್ಲರ್ ನಡೆಸಿಕೊಂಡು ಬೆಂಗಳೂರಿನಲ್ಲೇ ವಾಸವಾಗಿದ್ದರು. ಅವರ ತಾಯಿಯೂ […]

ಸುಳ್ಯದ ವಿವಾಹಿತೆ ಬೆಂಗಳೂರಿನಲ್ಲಿ ಆತ್ಮಹತ್ಯೆ Read More »

ಹುಲಿ ವೇಷದ ತಂಡಗಳ ವಿಚಾರಕ್ಕೆ ಗಲಾಟೆ: ಮೂವರಿಗೆ ಚೂರಿ ಇರಿತ | ಮೆಲ್ಕಾರ್ ನಲ್ಲಿ ಘಟನೆ

ಬಂಟ್ವಾಳ: ಹುಲಿ ವೇಷದ ತಂಡಗಳ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಮೂವರಿಗೆ ಚೂರಿ ಇರಿತವಾದ ಘಟನೆ ಮೆಲ್ಕಾರಿನಲ್ಲಿ ನಡೆದಿದೆ. ಬೋಳಂಗಡಿ ನಿವಾಸಿಗಳಾದ ದೇವದಾಸ್, ಸಂದೀಪ್, ಶಂಕರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು. ಶೋಧನ್, ಯತೀಶ್, ಚೇತನ್, ಪ್ರಸನ್ನ, ಪ್ರದೀಪ್ ಮತ್ತು ಪ್ರಕಾಶ್ ತಂಡದವರು ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಮೆಲ್ಕಾರ್ ನಲ್ಲಿ ಎರಡು ತಂಡಗಳ ನಡುವೆ ಕೆಲ ದಿನಗಳ ಹಿಂದೆ ನಡೆದಿದ್ದ ಜಗಳ ನಡೆದಿತ್ತು. ನಿನ್ನೆ ತಂಡಗಳ ನಡುವೆ ಕಲಹ ಮುಂದುವರಿದು ಮೂವರ ಮೇಲೆ ಮತ್ತೊಂದು

ಹುಲಿ ವೇಷದ ತಂಡಗಳ ವಿಚಾರಕ್ಕೆ ಗಲಾಟೆ: ಮೂವರಿಗೆ ಚೂರಿ ಇರಿತ | ಮೆಲ್ಕಾರ್ ನಲ್ಲಿ ಘಟನೆ Read More »

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅಡ್ಡಿಯಾಗಿದ್ದ ನ್ಯಾಯಾಲಯದ ತಡೆಯಾಜ್ಞೆ ತೆರವು | ಪುತ್ತೂರಿಗೆ 131 ಶಿಕ್ಷಕರ ನೇಮಕ

ಪುತ್ತೂರು: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ತೆರವುಗೊಂಡಿದ್ದು, ಸರಕಾರ ದ.ಕ. ಜಿಲ್ಲೆಗೆ 546 ಶಿಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಈ ಪೈಕಿ ಪುತ್ತೂರಿಗೆ 131 ಶಿಕ್ಷಕರನ್ನು ನೇಮಿಸಲಾಗಿದೆ. ಪುತ್ತೂರು ಸೇರಿದಂತೆ  ದ ಕ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ ಶಿಕ್ಷಕರನ್ನು ನೇಮಕ ಮಾಡುವಂತಿರಲಿಲ್ಲ. ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇದ್ದ ಕಾರಣ ಕಳೆದ ಕೆಲವು ವರ್ಷಗಳಿಂದ ಅಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿತ್ತು. ಇದೀಗ ನ್ಯಾಯಾಲಯವು

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅಡ್ಡಿಯಾಗಿದ್ದ ನ್ಯಾಯಾಲಯದ ತಡೆಯಾಜ್ಞೆ ತೆರವು | ಪುತ್ತೂರಿಗೆ 131 ಶಿಕ್ಷಕರ ನೇಮಕ Read More »

ರಬ್ಬರ್ ಕಾರ್ಮಿಕರ ಬಾಕಿ ಬೋನಸ್ ಶೀಘ್ರ ಬಿಡುಗಡೆ | ಅರಣ್ಯ ಸಚಿವ ಖಂಡ್ರೆ ಭರವಸೆ

ಪುತ್ತೂರು: ರಬ್ಬರ್ ಕಾರ್ಮಿಕರಿಗೆ ನೀಡಲು ಬಾಕಿ ಇರುವ ಬೋನಸನ್ನು ಶೀಘ್ರ ನೀಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಪುತ್ತೂರು ಶಾಸಕ ಅಶೋಕ್ ರೈಯವರಿಗೆ ಭರವಸೆ ನೀಡಿದರು. ಕಾರ್ಮಿಕರ ಬೋನಸ್ ಬಾಕಿ ಇರುವ ಬಗ್ಗೆ ಕಾರ್ಮಿಕರು ಶಾಸಕರಿಗೆ ಮನವಿ ಮಾಡಿದ್ದರು. ಕಾರ್ಮಿಕರ ಸಮ್ಮುಖದಲ್ಲೇ ಸಚಿವರ ಜೊತೆ ಮಾತುಕತೆ ನಡೆಸಿದ್ದ ಶಾಸಕರು ಕಾರ್ಮಿಕರಿಗೆ ನೀಡಲು ಬಾಕಿ ಇರುವ ಬೋನಸ್ ನ್ನು ಅಗತ್ಯವಾಗಿ ನೀಡಬೇಕಾಗಿದೆ ಎಂದು ಸಚಿವರಲ್ಲಿ ವಿನಂತಿಸಿದ್ದರು. ಬೋನಸ್ ನೀಡಲು ಕೆಎಫ್‌ಡಿಸಿ ಮತ್ತು ಹಣಕಾಸು ಇಲಾಖೆಯ ಒಪ್ಪಿಗೆ ಸಿಗಲು ತಡವಾಗಿರುವ

ರಬ್ಬರ್ ಕಾರ್ಮಿಕರ ಬಾಕಿ ಬೋನಸ್ ಶೀಘ್ರ ಬಿಡುಗಡೆ | ಅರಣ್ಯ ಸಚಿವ ಖಂಡ್ರೆ ಭರವಸೆ Read More »

ಶೋಭಾಯಾತ್ರೆಯೊಂದಿಗೆ ಪುತ್ತೂರು ದಸರಾ ಉತ್ಸವ ಸಂಪನ್ನ

ಪುತ್ತೂರು: ಅ 15ರಂದು ಪುತ್ತೂರಿನ ಸಂಪ್ಯ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಆರಂಭಗೊಂಡ ಪುತ್ತೂರು ದಸರಾ ಉತ್ಸವ ಗುರುವಾರ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು. ಗುರುವಾರ ಸಂಜೆ ನಡೆದ ದಸರಾ ಮರವಣಿಗೆ ಜನಮನ ಸೂರೆಗೊಂಡಿತು. ನವದುರ್ಗೆ ಮತ್ತು ಶಾರದೆ ಹಾಗೂ ಮಹಾ ಗಣಪತಿ ವಿಗ್ರಹಗಳ ಮೆರವಣಿಗೆಗೆ ವಿಶ್ವಹಿಂದೂ ಪರಿಷತ್ ಮುಖಂಡರಾದ ಯು. ಪೂವಪ್ಪ ಚಾಲನೆ ನೀಡಿದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಕುಣಿತ ಭಜನಾ ಮೆರವಣಿಗೆಗೆ ಚಾಲನೆ ನೀಡಿದರು. ನವದುರ್ಗಾರಾಧನಾ ಸಮಿತಿಯ ಅಧ್ಯಕ್ಷರಾದ ಜಯಂತ ಶೆಟ್ಟಿ ಕಂಬಳದಡ್ಡ, ಸಂಚಾಲಕರಾದ

ಶೋಭಾಯಾತ್ರೆಯೊಂದಿಗೆ ಪುತ್ತೂರು ದಸರಾ ಉತ್ಸವ ಸಂಪನ್ನ Read More »

ನ.14 ರಿಂದ 22 : ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಗೋನವರಾತ್ರಿ ಉತ್ಸವ: ಪುತ್ತೂರಿಗೆ ಆಗಮಿಸಿದ ಗೋರಥ ಯಾತ್ರೆ

ಪುತ್ತೂರು: ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಮಹಾಯಜ್ಞ ಹಾಗೂ ಗೋನವರಾತ್ರಿ ಉತ್ಸವ ನ.14 ರಿಂದ ಆರಂಭಗೊಂಡು ನ.22ರಂದು ಸಂಪನ್ನಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಅಲ್ಲಿಂದ ಹೊರಟ ಗೋರಥ ಗುರುವಾರ ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ ಗೋರಥವನ್ನು ಸ್ವಾಗತಿಸಿದ ಬಳಿಕ, ಪುತ್ತೂರು ನಗರರ ಸಂಚಾರಕ್ಕೆ ತೆರಳಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗೋಪುರದ ಬಳಿ ಗೋಮಾತೆಗೆ ಆರತಿ ಬೆಳಗಲಾಯಿತು. ಬಳಿಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ.ಐತ್ತಪ್ಪ

ನ.14 ರಿಂದ 22 : ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಗೋನವರಾತ್ರಿ ಉತ್ಸವ: ಪುತ್ತೂರಿಗೆ ಆಗಮಿಸಿದ ಗೋರಥ ಯಾತ್ರೆ Read More »

ಕಾಂಗ್ರೆಸ್ ವತಿಯಿಂದ ದಿವಂಗತ ಶಕ್ತಿಸಿನ್ಹರಿಗೆ ಶ್ರದ್ದಾಂಜಲಿ

ಪುತ್ತೂರು: ನಗರ ಕಾಂಗ್ರೆಸ್ ವತಿಯಿಂದ ದಿವಂಗತ ಶಕ್ತಿಸಿನ್ಹ ರವರಿಗೆ ಶ್ರದ್ಧಾಂಜಲಿ ಸಭೆ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ, 2007 ರ ಪುರಸಭಾ ಚುನಾವಣೆಯಲ್ಲಿ ಬಹಳ ಒತ್ತಾಯದಿಂದ ಶಕ್ತಿಸಿನ್ಹ ರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದ್ದೆವು. ಆ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಶಕ್ತಿ ಸಿನ್ಹರವರು ಪುರಸಭಾ ಸದಸ್ಯರಾದರು. ಆ ಬಳಿಕ ಮೂರು ಬಾರಿ ಕೌನ್ಸಿಲರ್ ಆಗಿ ಆಯ್ಕೆಯಾಗಿ ನೆಲ್ಲಿಕಟ್ಟೆ ವಾರ್ಡ್ ನ್ನು ಸಾಕಷ್ಟು ಅಭಿವೃದ್ಧಿ ಪಡಿಸಿರುತ್ತಾರೆ, ಶಕ್ತಿ ಸಿನ್ಹರವರು ತನ್ನ

ಕಾಂಗ್ರೆಸ್ ವತಿಯಿಂದ ದಿವಂಗತ ಶಕ್ತಿಸಿನ್ಹರಿಗೆ ಶ್ರದ್ದಾಂಜಲಿ Read More »

ಕಾವೇರುತ್ತಿರುವ ಹುಲಿಉಗುರು ಪೆಂಡೆಂಟ್ ಧಾರಣೆ ಪ್ರಕರಣ | ವನ್ಯಜೀವಿ ಅಂಗಗಳ ಸಂಗ್ರಹ ಪ್ರಕರಣ ತನಿಖೆಗೆ ವಿಶೇಷ ತಂಡ ರಚನೆ

ಮಂಗಳೂರು: ಹುಲಿಉಗುರು ಪ್ರಕರಣ ದಿನದಿಂದ ದಿನಕ್ಕೆ ಕಾವೇರುತ್ತಿದ್ದಂತೆ ವನ್ಯಜೀವಿ ಹಾಗೂ ಅದರ ಅಂಗಗಳ ಸಂಗ್ರಹ ಪ್ರಕರಣದ ತನಿಖೆಗೆ ವನ್ಯಜೀವಿ ಸಂರಕ್ಷಣಾಧಿಕಾರಿಗಳನ್ನು ಒಳಗೊಂಡ ಮೂರು ಸದಸ್ಯರ ಸಮಿತಿಯನ್ನು ಅರಣ್ಯ ಇಲಾಖೆ ರಚಿಸಿ ಸೂಕ್ತ ಕ್ರಮಕ್ಕೆ ಇದೀಗ ಮುಂದಾಗಿದೆ. ಈ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಸೆಲೆಬ್ರಿಟಿಗಳು ಸೇರಿದಂತೆ ಮತ್ತಿತರರು ಹುಲಿಉಗುರು ಪೆಂಡೆಂಟ್  ಧರಿಸಿರುವುದು ಕಂಡು ಬಂದಿದ್ದು, ಇದು ಕಾನೂನು ಪ್ರಕಾರ ಅಪರಾಧವಾಗಿರುವುದರಿಂದ ಪ್ರಾಣಿಗಳ ವಧೆ ಮಾಡಿ ಅಂಗಾಂಗ ಸಂಗ್ರಹದಂತಹ ಪ್ರಕರಣವನ್ನು ತನಿಖೆಗೊಳಪಡಿಸಿ ಸೂಕ್ತ

ಕಾವೇರುತ್ತಿರುವ ಹುಲಿಉಗುರು ಪೆಂಡೆಂಟ್ ಧಾರಣೆ ಪ್ರಕರಣ | ವನ್ಯಜೀವಿ ಅಂಗಗಳ ಸಂಗ್ರಹ ಪ್ರಕರಣ ತನಿಖೆಗೆ ವಿಶೇಷ ತಂಡ ರಚನೆ Read More »

ಬೆಂಗಳೂರು ಕಂಬಳ-ನಮ್ಮ ಕಂಬಳ : ದ.ಕ.ಉಸ್ತುವಾರಿ ಸಚಿವರಿಗೆ ಆಹ್ವಾನ

ಬೆಂಗಳೂರು: ಬೆಂಗಳೂರು ಕಂಬಳ ಸಮಿತಿ ವತಿಯಿಂದ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ, ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಮಾಡಿ ಕಂಬಳ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಿ, ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಬೆಂಗಳೂರು ಕಂಬಳ-ನಮ್ಮ ಕಂಬಳ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ಶಾಸಕ, ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಕಾರ್ಯಾಧ್ಯಕ್ಷ ಗುರುಕಿರಣ್, ಉಪಾಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ,

ಬೆಂಗಳೂರು ಕಂಬಳ-ನಮ್ಮ ಕಂಬಳ : ದ.ಕ.ಉಸ್ತುವಾರಿ ಸಚಿವರಿಗೆ ಆಹ್ವಾನ Read More »

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಪುತ್ತೂರು: ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾವು ಸಮೀಪದ ಅಮ್ಚಿನಡ್ಕದಲ್ಲಿ ನಡೆದಿದೆ. ಆಯಿಷಾ ಎಂಬವರೇ ಈ ಕೃತ್ಯ ಎಸಗಿದವರು. ವಿವಾಹಿತೆಯಾಗಿದ್ದ ಆಯಿಷಾ ಮುಖಾರಿಮೂಲೆ ಜೈನುದ್ದೀನ್ ಎಂಬವರ ಪುತ್ರಿಯಾಗಿದ್ದಾರೆ. ಮೃತದೇಹ ಮನೆಯ ಬಾವಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ Read More »

error: Content is protected !!
Scroll to Top