ಪಿಸ್ತೂಲ್ ತೋರಿಸಿ ಬೆದರಿಸಿದವರಿಂದ ಬುದ್ಧಿವಾದ ಬೇಕಿಲ್ಲ!! | ಶಾಸಕ ಅಶೋಕ್ ರೈ ಹೇಳಿಕೆಗೆ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ತಿರುಗೇಟು
ಪುತ್ತೂರು: ಬಿಜೆಪಿ ಸರಕಾರವಿದ್ದಾಗ ಹಿಂದೂ ಕಾರ್ಯಕರ್ತರ ಮೇಲೆ ಹಾಕಿದ್ದ ಪ್ರಕರಣಗಳ ಆಧಾರದಲ್ಲಿ ಗಡಿಪಾರು ಆದೇಶ ಮಾಡಲಾಗಿದೆ ಎಂಬ ಶಾಸಕ ಅಶೋಕ್ ಕುಮಾರ್ ರೈ ಅವರ ಹೇಳಿಕೆಗೆ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ತಿರುಗೇಟು ನೀಡಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿರುವ ವ್ಯಕ್ತಿಗಳು ಇಂದು ಬಿಜೆಪಿಗೆ ಬುದ್ಧಿವಾದ ಹೇಳುತ್ತಿದ್ದಾರೆ. ಅಂತಹವರಿಂದ ಬಿಜೆಪಿಗೆ ಬುದ್ಧಿವಾದ ಬೇಕಿಲ್ಲ. ಮೊದಲು ಅಂತಹ ವ್ಯಕ್ತಿಗಳನ್ನೇ ಗಡಿಪಾರು ಮಾಡಬೇಕು ಎಂದು ಸಾಜ ರಾಧಾಕೃಷ್ಣ ಆಳ್ವ ಆಗ್ರಹಿಸಿದರು. […]










