ಬಿಟ್ಟಿ ಚಾಕರಿ ಮಾಡಲು ಸಿದ್ಧವಿಲ್ಲ | ಪ್ರತಿಭಟನೆಯಲ್ಲಿ ವಿವಿಧ ಬೇಡಿಕೆ ಮುಂದಿಟ್ಟ ಆಶಾ ಕಾರ್ಯಕರ್ತೆಯರು

ಪುತ್ತೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಪುತ್ತೂರು ತಾಲೂಕು ಸಮಿತಿ ಇಲ್ಲಿನ ಅಮರ್ ಜವಾನ್ ಸ್ಮಾರಕದ ಬಳಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿತು. ಆಶಾ ಕಾರ್ಯಕರ್ತೆಯರ ಸೇವೆಗಳಿಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹ ಧನವನ್ನು ಆರ್ ಸಿಎಚ್ ಪೋರ್ಟಲ್ ನಿಂದ ಕೈಬಿಡಬೇಕು, ಕನಿಷ್ಠ 15 ಸಾವಿರ ರೂ. ವೇತನ ನೀಡಬೇಕು ಮೊದಲಾದ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಗೆ ಮೊದಲು ನಗರದ […]

ಬಿಟ್ಟಿ ಚಾಕರಿ ಮಾಡಲು ಸಿದ್ಧವಿಲ್ಲ | ಪ್ರತಿಭಟನೆಯಲ್ಲಿ ವಿವಿಧ ಬೇಡಿಕೆ ಮುಂದಿಟ್ಟ ಆಶಾ ಕಾರ್ಯಕರ್ತೆಯರು Read More »

ವಿದ್ಯುತ್ ತಂತಿ ಸ್ಪರ್ಶಿಸಿದ ಅಲ್ಯೂಮಿನಿಯಂ ಏಣಿ: ಬಾಲಕೃಷ್ಣ ಶೆಟ್ಟಿ ಮೃತ್ಯು

ಬೆಳ್ತಂಗಡಿ: ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕರೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಧರ್ಮಸ್ಥಳ ಸಮೀಪದ ಮಲ್ಲರ್ಮಾಡಿ ಎಂಬಲ್ಲಿ ನಡೆದಿದೆ. ಮೃತರನ್ನು ಮಲ್ಲರ್ಮಾಡಿ ನಿವಾಸಿ ಬಾಲಕೃಷ್ಣ ಶೆಟ್ಟಿ (49 ವ) ಎಂದು ಗುರುತಿಸಲಾಗಿದೆ. ಸೊಪ್ಪು ತರಲೆಂದು ಶುಕ್ರವಾರ ಬೆಳಿಗ್ಗೆ ಸ್ಥಳೀಯ ನಿವಾಸಿ ಬೊಮ್ಮಣ್ಣ ಗೌಡ ಅವರ ತೋಟಕ್ಕೆ ಹೋಗಿದ್ದರು. ಈ ಸಂದರ್ಭ ಘಟನೆ ನಡೆದಿದೆ ಎಂದು ಹೇಳಲಾಗಿದೆ. ತೋಟದ ನಡುವಿನಲ್ಲಿ ಹಾದುಹೋಗಿದ್ದ ವಿದ್ಯುತ್ ಲೈನ್ ಗೆ ಅಲ್ಯೂಮಿನಿಯಂ ಏಣಿ ಸ್ಪರ್ಶಿಸಿತ್ತು. ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ ಬಾಲಕೃಷ್ಣ

ವಿದ್ಯುತ್ ತಂತಿ ಸ್ಪರ್ಶಿಸಿದ ಅಲ್ಯೂಮಿನಿಯಂ ಏಣಿ: ಬಾಲಕೃಷ್ಣ ಶೆಟ್ಟಿ ಮೃತ್ಯು Read More »

ಶ್ರೀ ಮಹಾಲಿಂಗೇಶ್ವರ ದೇವರ ಅಂಗಣದಲ್ಲಿ ತುಳಸಿ ಪೂಜೆ

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ. 24ರಂದು ಬೆಳಿಗ್ಗೆ ತುಳಸಿ ಪೂಜೆ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇ.ಮೂ. ವಸಂತ ಕೆದಿಲಾಯ ಪೂಜೆ ನೆರವೇರಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್‌ ಮುಳಿಯ, ಸದಸ್ಯರಾದ ಬಿ. ಐತ್ತಪ್ಪ ನಾಯ್ಕ, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ವೀಣಾ ಬಿ.ಕೆ, ಡಾ. ಸುಧಾ ಎಸ್. ರಾವ್, ರವೀಂದ್ರನಾಥ ರೈ ಬಳ್ಳಮಜಲು, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್‌, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಮಾಜಿ ಪುರಸಭೆ

ಶ್ರೀ ಮಹಾಲಿಂಗೇಶ್ವರ ದೇವರ ಅಂಗಣದಲ್ಲಿ ತುಳಸಿ ಪೂಜೆ Read More »

ಕಾವು: ನ. 25ರಂದು 12ನೇ ವರ್ಷದ ಸಾಮೂಹಿಕ ಗೋಪೂಜೆ, ಧಾರ್ಮಿಕ ಸಭೆ

ಕಾವು: ವಿಶ್ವ ಹಿಂದೂ ಪರಿಷತ್- ಬಜರಂಗದಳ ಕಾವು ಘಟಕ ಹಾಗೂ ಕಾವು ಗೋ ಪೂಜಾ ಸಮಿತಿ ಆಶ್ರಯದಲ್ಲಿ 12ನೇ ವರ್ಷದ ಸಾಮೂಹಿಕ ಗೋಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನ. 25ರಂದು ಸಂಜೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಸಂಜೆ 4.30ರಿಂದ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದ್ದು, ಸಂಜೆ 6.30ರಿಂದ ಸಾಮೂಹಿಕ ಗೋಪೂಜೆ ನಡೆಯಲಿದೆ. ಸಂಜೆ 7ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಕಾವು ಗೋಪೂಜಾ ಸಮಿತಿ ಅಧ್ಯಕ್ಷ ನಹುಷ ಭಟ್ ಪಳನೀರು ಅಧ್ಯಕ್ಷತೆ

ಕಾವು: ನ. 25ರಂದು 12ನೇ ವರ್ಷದ ಸಾಮೂಹಿಕ ಗೋಪೂಜೆ, ಧಾರ್ಮಿಕ ಸಭೆ Read More »

ಕೀಲೆ: ದಿ.ಶೂರಪ್ಪ ಗೌಡ ಸ್ಮರಣಾರ್ಥ ಪ್ರಯಾಣಿಕರ ತಂಗುದಾಣ ಉದ್ಘಾಟನೆ

ಕಾಣಿಯೂರು: ಇಡ್ಯಡ್ಕ ಕುಟುಂಬದ ಯಜಮಾನರಾಗಿದ್ದ ದಿ. ಶೂರಪ್ಪ ಗೌಡ ಅವರ ಸ್ಮರಣಾರ್ಥ ಕೀಲೆ ಎಂಬಲ್ಲಿ ನೂತನ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಲಾಯಿತು. ಇಡ್ಯಡ್ಕ ಕುಟುಂಬದ ಹಿರಿಯರಾದ ಶೀನಪ್ಪ ಗೌಡ ಅವರು ದೀಪ ಬೆಳಗಿಸಿ, ತಂಗುದಾಣವನ್ನು ಉದ್ಘಾಟಿಸಿದರು. ಸುಮಾರು 85 ಸಾವಿರ ರೂ. ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲಾಗಿದೆ. ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ದಿನೇಶ್ ಮೆದು, ನಿವೃತ್ತ  ಮುಖ್ಯಗುರು ಕೆ. ರಘುನಾಥ್ ರೈ ಅವರು ಶುಭ ಹಾರೈಸಿದರು. ಅರಣ್ಯ ಅಧಿಕಾರಿ ಯಶೋದರ ಕೆ., ಮನೋಹರ್, ಸುರೇಶ್ ರೈ ಸುದೀಮುಳ್ಳು, ಸಾಂತಪ್ಪ

ಕೀಲೆ: ದಿ.ಶೂರಪ್ಪ ಗೌಡ ಸ್ಮರಣಾರ್ಥ ಪ್ರಯಾಣಿಕರ ತಂಗುದಾಣ ಉದ್ಘಾಟನೆ Read More »

ಕಡಬ: ನ. 26ರಂದು ವಿಜ್ಞಾಪನ ಕರಪತ್ರ, ಗೌಡ ಸಮುದಾಯದ ಜನಸಂಖ್ಯಾ ಸಮೀಕ್ಷೆ, ದೇಣಿಗೆ ಸಂಗ್ರಹಕ್ಕೆ ಚಾಲನೆ

ಕಡಬ: ಇಲ್ಲಿನ ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ, ಸಮುದಾಯ ಭವನ ಶಿಲಾನ್ಯಾಸ, ಸ್ಪಂದನ ಸಮುದಾಯ ಸಹಕಾರ ಸಂಘದ ಉದ್ಘಾಟನೆಗೆ ಪೂರ್ವಭಾವಿಯಾಗಿ ವಿಜ್ಞಾಪನ ಕರಪತ್ರ ಮತ್ತು ಸಮುದಾಯದ ಜನಸಂಖ್ಯಾ ಸಮೀಕ್ಷೆ, ಭವನ ನಿರ್ಮಾಣ ಸಹಾಯಾರ್ಥ ದೇಣಿಗೆ ಸಂಗ್ರಹಕ್ಕೆ ನ. 26ರ ಭಾನುವಾರ ಬೆಳಿಗ್ಗೆ 11ಕ್ಕೆ ಒಕ್ಕಲಿಗ ಗೌಡ ಸೇವಾ ಸಂಘದ ಸಭಾಂಗಣದಲ್ಲಿ ಚಾಲನೆ ಸಿಗಲಿದೆ. ಶ್ರೀ ಆದಿಚುಂಚನಗಿರಿ ಕಾವೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಚಾಲನೆ ನೀಡಲಿದ್ದಾರೆ. ಡಿ. 26ರಂದು ಕಡಬ ಒಕ್ಕಲಿಗ ಗೌಡ

ಕಡಬ: ನ. 26ರಂದು ವಿಜ್ಞಾಪನ ಕರಪತ್ರ, ಗೌಡ ಸಮುದಾಯದ ಜನಸಂಖ್ಯಾ ಸಮೀಕ್ಷೆ, ದೇಣಿಗೆ ಸಂಗ್ರಹಕ್ಕೆ ಚಾಲನೆ Read More »

ಅಫ್ಘಾನಿನ ದೆಹಲಿ ರಾಯಭಾರ ಕಚೇರಿ ಶಾಶ್ವತ ಬಂದ್: ಗೊಂದಲದಿಂದ ಕೂಡಿದ ಹೇಳಿಕೆ!

ನವದೆಹಲಿ: ತಾಲಿಬಾನ್ ಆಡಳಿತವಿರುವ ಅಫಘಾನಿಸ್ತಾನವು ಭಾರತದಲ್ಲಿರುವ ರಾಯಭಾರ ಕಚೇರಿಯ ಕಾರ್ಯಾಚರಣೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದೆ. ಸೆಪ್ಟೆಂಬರ್‌ 30ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ರಾಯಭಾರ ಕಚೇರಿಯನ್ನು ಈಗ ಶಾಶ್ವತವಾಗಿ ಸ್ಥಗಿತಗೊಳಿಸಿದೆ. ಈ ನಡುವೆ ತಾಲಿಬಾನ್ ನೀಡಿರುವ ಆರೋಪಗಳು, ಅದರ ದ್ವಂದ್ವ ನಿಲುವನ್ನು ಸೂಚಿಸುವಂತಿದೆ. ಮೊದಲು “ಸಾಕಷ್ಟು ಸಿಬ್ಬಂದಿ ಕೊರತೆ ಇದೆ. ಅಲ್ಲದೇ, ರಾಯಭಾರ ಕಚೇರಿ ನಿರ್ವಹಣೆಗೆ ಸಾಕಷ್ಟು ದುಡ್ಡಿಲ್ಲ” ಎಂದು ಹೇಳಿತ್ತು. ಆದರೆ ಈಗ “ಭಾರತ ಸರ್ಕಾರದಿಂದ ಎದುರಾಗುತ್ತಿರುವ ಸವಾಲುಗಳಿಂದಾಗಿ ಸ್ಥಗಿತಗೊಳಿಸಲಾಗುತ್ತಿದೆ” ಎಂದು ಆರೋಪಿಸಿದೆ. ಇದು ಈಗ ಚರ್ಚೆಗೆ ಕಾರಣವಾಗಿದೆ. ಅಫಘಾನಿಸ್ತಾನವು

ಅಫ್ಘಾನಿನ ದೆಹಲಿ ರಾಯಭಾರ ಕಚೇರಿ ಶಾಶ್ವತ ಬಂದ್: ಗೊಂದಲದಿಂದ ಕೂಡಿದ ಹೇಳಿಕೆ! Read More »

ಆರ್ಲಪದವು: ದಾಸ್ತಾನಿರಿಸಿದ್ದ ಅಡಿಕೆ ಕಳ್ಳತನ!

ಪುತ್ತೂರು: ದಾಸ್ತಾನಿರಿಸಿದ್ದ ಸುಲಿದ ಅಡಿಕೆ ಕಳ್ಳತನವಾಗಿರುವ ಘಟನೆ ನ. 23ರಂದು ಬೆಳಕಿಗೆ ಬಂದಿದೆ. ಪಾಣಾಜೆ ಗ್ರಾಮದ ಅಬ್ದುಲ್ ಬುರುಹಾನ್ (47) ಎಂಬವರ ಗೊಡೌನ್ ನಿಂದ ಕಳ್ಳತನವಾಗಿದೆ. ಮನೆಯ ಗೋಡೌನ್’ನ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು, ಸುಲಿದ ಅಡಿಕೆಯನ್ನು ಕದ್ದೊಯ್ದಿದ್ದಾರೆ. ಸುಮಾರು 90 ಸಾವಿರ ರೂ. ಮೌಲ್ಯದ 02 ಕ್ವಿಂಟಾಲ್ 90 ಕೆಜಿ ಅಡಿಕೆ ಕಳ್ಳತನವಾಗಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್ಲಪದವು: ದಾಸ್ತಾನಿರಿಸಿದ್ದ ಅಡಿಕೆ ಕಳ್ಳತನ! Read More »

ವ್ಯಕ್ತಿತ್ವ ವಿಕಸನದ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸುವುದು ಅತ್ಯಗತ್ಯ: ಪ್ರತಿಭಾ ಶೋಭನಮ್’ನಲ್ಲಿ ಕನಿಷ್ಕ ಎಸ್ ಚಂದ್ರ

ಪುತ್ತೂರು: ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಮ್ಮೊಳಗಿನ ಶಕ್ತಿಯ ಅರಿವುಂಟಾಗುತ್ತದೆ. ಇದು ಹೊಸ ಅನುಭವಗಳನ್ನು ತೆರೆದಿಡಲು ಸಹಾಯವಾಗುತ್ತದೆ.  ಮುಂದಿನ ತಲೆಮಾರಿಗೆ ನಮ್ಮೊಳಗಿನ ಜ್ಞಾನವನ್ನು ಹಂಚಬೇಕು. ಕಾಲಕ್ಕೆ ತಕ್ಕುದಾದ ಬದಲಾವಣೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಾವು ಯಾವ ಕ್ಷೇತ್ರದಲ್ಲಿ ಮುನ್ನಡೆಯಬೇಕು ಎಂಬುದನ್ನು ನಿರ್ಧರಿಸುವುದು ಉತ್ತಮ ಎಂದು ಪುತ್ತೂರು ಪಿಡಬ್ಲ್ಯುಡಿ ಇಂಜಿನಿಯರ್ ಕನಿಷ್ಕ ಎಸ್ ಚಂದ್ರ ಹೇಳಿದರು. ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಪ್ರತಿಭಾ ಶೋಭನಮ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ

ವ್ಯಕ್ತಿತ್ವ ವಿಕಸನದ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸುವುದು ಅತ್ಯಗತ್ಯ: ಪ್ರತಿಭಾ ಶೋಭನಮ್’ನಲ್ಲಿ ಕನಿಷ್ಕ ಎಸ್ ಚಂದ್ರ Read More »

ಕೋವಿಡ್ ನಿಯಮ ಕೈಬಿಟ್ಟ ಚೀನಾದಲ್ಲಿ ಹೊಸ ಮಾದರಿ ಜ್ವರ ಪತ್ತೆ!!

ಬೀಜಿಂಗ್: ಚೀನಾದಲ್ಲಿ ಹಲವಾರು ಮಂದಿಗೆ, ಹೆಚ್ಚಾಗಿ ಮಕ್ಕಳಲ್ಲಿ ನಿಗೂಢ ನ್ಯುಮೋನಿಯಾ ಮಾದರಿಯ ಸಮಸ್ಯೆ ಉಂಟಾಗಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಚೀನಾದಿಂದ ಈ ಸಂದೇಹಾಸ್ಪದ ಆರೋಗ್ಯ ಸಮಸ್ಯೆಯ ಬಗ್ಗೆ ವರದಿಯನ್ನು ಕೇಳಿದೆ. ವರದಿಗಳ ಪ್ರಕಾರ ಚೀನಾದ ಆಸ್ಪತ್ರೆಗಳು ಶ್ವಾಸಕೋಶದ ಸೋಂಕು ಸಂಬಂಧಿ ಸಮಸ್ಯೆ ಎದುರಿಸುತಿರುವ ಮಕ್ಕಳಿಂದ ತುಂಬಿ ತುಳುಕುತ್ತಿದೆ. ನವೆಂಬರ್‌ 12ರಂದು ನ್ಯಾಷನಲ್‌ ಹೆಲ್ತ್‌ ಕಮಿಷನ್‌ ಅಧಿಕಾರಿಗಳು ಚೀನಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಆರೋಗ್ಯ ಸಮಸ್ಯೆಗೆ ದೇಶದಲ್ಲಿ ಕೋವಿಡ್‌ ನಿರ್ಬಂಧಗಳನ್ನು ಕೈಬಿಟ್ಟರುವುದೇ ಕಾರಣ

ಕೋವಿಡ್ ನಿಯಮ ಕೈಬಿಟ್ಟ ಚೀನಾದಲ್ಲಿ ಹೊಸ ಮಾದರಿ ಜ್ವರ ಪತ್ತೆ!! Read More »

error: Content is protected !!
Scroll to Top