ಐವರ ಸಾಮೂಹಿಕ ಆತ್ಮಹತ್ಯೆಯ ಹಿಂದೆ ಬಡ್ಡಿ ದಂಧೆಯ ನೆರಳು!! | “ಇವರ ಕಾಟಕ್ಕೆ ನಮ್ಮ ಪ್ರಾಣ ಕೊಟ್ಟಿದ್ದೇವೆ”- ಡೆತ್ ನೋಟ್’ನಲ್ಲಿವೆ ಇನ್ನೂ ಹಲವು ವಿಚಾರಗಳು!!

ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ತುಮಕೂರಿನ ಸದಾಶಿವ ನಗರದಲ್ಲಿ ನಡೆದಿದ್ದು, ಇದೀಗ ಆತ್ಮಹತ್ಯೆಯ ಹಿಂದಿನ ಒಂದೊಂದೇ ಘಟನೆಗಳು ಹೊರಬರುತ್ತಿದೆ. ಅಲ್ಲದೇ, ಆತ್ಮಹತ್ಯೆಯ ಹಿಂದೆ ಬಡ್ಡಿ ದಂಧೆಯ ಕರಾಳತೆಯೂ ಇದೆ ಎಂಬ ಅನುಮಾನಗಳು ಮೂಡಿವೆ. ಗರೀಬ್ ಸಾಬ್, ಸುಮಯ್ಯ, ಹಾಜಿರಾ, ಮೊಹಮ್ಮದ್ ಸುಭಾನ್, ಮೊಹಮ್ಮದ್ ಮುನೀರ್ ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ. ಸಾವಿಗೂ ಮುನ್ನ ಗರೀಬ್ ಸಾಬ್ ಅವರು ತನ್ನ ದೊಡ್ಡಮ್ಮನಿಗೆ ಡೆತ್ ನೋಟ್ ಬರೆದಿದ್ದಾರೆ‌. ದೊಡ್ಡಮ್ಮನಿಗೆ ನಮಸ್ಕಾರಗಳು. ನಮಗೆ ಸಾಲ ಹೆಚ್ಚಾಗಿದೆ. […]

ಐವರ ಸಾಮೂಹಿಕ ಆತ್ಮಹತ್ಯೆಯ ಹಿಂದೆ ಬಡ್ಡಿ ದಂಧೆಯ ನೆರಳು!! | “ಇವರ ಕಾಟಕ್ಕೆ ನಮ್ಮ ಪ್ರಾಣ ಕೊಟ್ಟಿದ್ದೇವೆ”- ಡೆತ್ ನೋಟ್’ನಲ್ಲಿವೆ ಇನ್ನೂ ಹಲವು ವಿಚಾರಗಳು!! Read More »

ಮಂಗಳೂರಿನ ಈ ಸರ್ಕಲ್’ಗೆ ಕ್ಯಾ| ಪ್ರಾಂಜಲ್ ಹೆಸರು!

ಮಂಗಳೂರು: ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನಗೈದ ಕರುನಾಡಿನ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ಹೆದ್ದಾರಿ ಮತ್ತು ನಗರ ಸಂಪರ್ಕಿ ಸುವ ಕೊಟ್ಟಾರಚೌಕಿ ಜಂಕ್ಷನ್ ಸರ್ಕಲ್ ಗೆ ಇಡಲಾಗುವುದು ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ. ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ.‌ ಇದರ ಜೊತೆಗೆ ಮಂಗಳೂರಿನಲ್ಲಿ ಕಲಿತು, ಬೆಳೆದು ಅವಿನಾಭಾವ ಸಂಬಂಧ ಹೊಂದಿರುವ ಕ್ಯಾ. ಪ್ರಾಂಜಲ್ ಹೆಸರಿಡುವುದು ಸೂಕ್ತವಾಗಿದೆ. ಈ ಬಗ್ಗೆ ಮಂಗಳೂರು ಪಾಲಿಕೆ ಕ್ರಮ ಕೈಗೊಳ್ಳುವಂತೆ ಪತ್ರ

ಮಂಗಳೂರಿನ ಈ ಸರ್ಕಲ್’ಗೆ ಕ್ಯಾ| ಪ್ರಾಂಜಲ್ ಹೆಸರು! Read More »

ಬೆಂಗಳೂರು: ‘ರಾಜ – ಮಹಾರಾಜ’ ಜೋಡುಕರೆ ಕಂಬಳಕ್ಕೆ ಸಂಭ್ರಮದ ತೆರೆ | ಫಲಿತಾಂಶ, ಬಹುಮಾನದ ವಿವರ ಇಲ್ಲಿದೆ

ರಾಜಧಾನಿಯ ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ ಸಮಿತಿ ನೇತೃತ್ವದಲ್ಲಿ ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆದ ‘ರಾಜ – ಮಹಾರಾಜ’ ಜೋಡುಕರೆ ಕಂಬಳ ಕೂಟ ಸೋಮವಾರ ಮುಂಜಾನೆ ಹೊತ್ತಿಗೆ ವಿದ್ಯುಕ್ತವಾಗಿ ತೆರೆ ಕಂಡಿದೆ. ಕೂಟದಲ್ಲಿ ಒಟ್ಟು 159 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ 7 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 6 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 21 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 32 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 31 ಜೊತೆ ಹಾಗೂ ನೇಗಿಲು

ಬೆಂಗಳೂರು: ‘ರಾಜ – ಮಹಾರಾಜ’ ಜೋಡುಕರೆ ಕಂಬಳಕ್ಕೆ ಸಂಭ್ರಮದ ತೆರೆ | ಫಲಿತಾಂಶ, ಬಹುಮಾನದ ವಿವರ ಇಲ್ಲಿದೆ Read More »

ಯುವಕ-ಯುವತಿ ನಾಪತ್ತೆ ! ಹುಡುಕಿಕೊಡಲು ಹೆತ್ತವರಿಂದ ಮನವಿ

ಬಂಟ್ವಾಳ : ಒಂದೇ ವಠಾರದ ಯುವಕ ಮತ್ತು ಯುವತಿ ನಾಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಉದ್ದೊಟ್ಟು ಎಂಬಲ್ಲಿ ನಡೆದಿದೆ. ಸಜೀಪ ಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರಿ ಆಯಿಸತ್ ರಸ್ನಾ (18) ಹಾಗೂ ಹೈದರ್ ಎಂಬವರ ಪುತ್ರ ಮಹಮ್ಮದ್ ಸಿನಾನ್ (23) ಕಾಣೆಯಾದವರು. ಇಬ್ಬರೂ ಅಕ್ಕಪಕ್ಕದ ಮನೆಯವರು. ದೇರಳಕಟ್ಟೆಯ ನಡುಪದವು ಪಿ.ಎ.ಕಾಲೇಜಿನಲ್ಲಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಆಯಿಸತ್ ರಸ್ಮಾ ಒಂದು ವಾರಗಳ ಕಾಲ ರಜೆಯಿದ್ದ ಹಿನ್ನಲೆಯಲ್ಲಿ ಮನೆಯಲ್ಲಿದ್ದಳು.

ಯುವಕ-ಯುವತಿ ನಾಪತ್ತೆ ! ಹುಡುಕಿಕೊಡಲು ಹೆತ್ತವರಿಂದ ಮನವಿ Read More »

ಮನುಕುಲದ ಸಮೃದ್ಧಿಗೆ ಗೋವು ಅಗತ್ಯ | ಕಾವು ಸಾಮೂಹಿಕ ಗೋಪೂಜೆಯಲ್ಲಿ ಧಾರ್ಮಿಕ ಭಾಷಣ

ಪುತ್ತೂರು: ವಿಶ್ವ ಹಿಂದೂ ಪರಿಷತ್- ಬಜರಂಗದಳ ಹಾಗೂ ಕಾವು ಗೋಪೂಜಾ ಸಮಿತಿ ಸಂಯುಕ್ತ ಆಶ್ರಯದಲ್ಲಿ 12ನೇ ವರ್ಷದ ಸಾಮೂಹಿಕ ಗೋಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಅರ್ಚಕ ವೇದಮೂರ್ತಿ ಶಿವಪ್ರಸಾದ್ ಕಡಮಣ್ಣಾಯರ ಪೌರೋಹಿತ್ಯದಲ್ಲಿ ಗೋಪೂಜೆ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣ ಮಾಡಿದ ಪೂರ್ಣತ್ಮರಾಮ್ ಈಶ್ವರಮಂಗಲ, ಸನಾತನ ಹಿಂದೂ ಧರ್ಮದಲ್ಲಿ ಗೋವುಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದ್ದು, ಪಂಚಗವ್ಯವು ಮಾರಕ ಕ್ಯಾನ್ಸರ್ ನಂತಹ ಖಾಯಿಲೆಯನ್ನು ಗುಣಪಡಿಸುವ

ಮನುಕುಲದ ಸಮೃದ್ಧಿಗೆ ಗೋವು ಅಗತ್ಯ | ಕಾವು ಸಾಮೂಹಿಕ ಗೋಪೂಜೆಯಲ್ಲಿ ಧಾರ್ಮಿಕ ಭಾಷಣ Read More »

ಬಜತ್ತೂರಿನಲ್ಲಿ ಗ್ರಾಮ ಸಾಹಿತ್ಯ ಸಂಭ್ರಮ | ಮಕ್ಕಳು ಕನ್ನಡ ಸಾಹಿತ್ಯದ ಊರುಗೋಲು : ಗಂಗಾಧರ ಪಿ.ಎನ್.

ಪುತ್ತೂರು: ತಾಲೂಕಿನ ಗ್ರಾಮ ಗ್ರಾಮಗಳಲ್ಲಿ ಕನ್ನಡ ಸಾಹಿತ್ಯದ ಸಂಭ್ರಮ ನಡೆಸುವ ಮೂಲಕ ಮಕ್ಕಳಲ್ಲಿ ಸಾಹಿತ್ಯದ ಒಲವು-ಅರಿವು ಮೂಡಿಸುವ ಕೆಲಸ ಅತ್ಯಂತ ಶ್ಲಾಘನೀಯ. ಕನ್ನಡ ಸಾಹಿತ್ಯವನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಮಕ್ಕಳು ಸಾಹಿತ್ಯದ ಊರುಗೋಲುಗಳಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಕನ್ನಡ ಹೋರಾಟ ಎಂಬ ದಂಧೆಯನ್ನು ನಡೆಸುವ ಮಂದಿಗಳ ವಿರುದ್ಧ ಜಾಗೃತವಾಗಬೇಕಾಗಿದೆ ಎಂದು ಬಜತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್ ಪಿ.ಎನ್ ನೆಕ್ಕರಾಜೆ ಅಭಿಪ್ರಾಯಪಟ್ಟರು. ಬಜತ್ತೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಸಾಹಿತ್ಯದ ನಡೆ ಗ್ರಾಮದ ಕಡೆ

ಬಜತ್ತೂರಿನಲ್ಲಿ ಗ್ರಾಮ ಸಾಹಿತ್ಯ ಸಂಭ್ರಮ | ಮಕ್ಕಳು ಕನ್ನಡ ಸಾಹಿತ್ಯದ ಊರುಗೋಲು : ಗಂಗಾಧರ ಪಿ.ಎನ್. Read More »

ಅಡಕೆ ಕಳವಿಗೆ ಯತ್ನ | ತಡೆಯಲೆತ್ನಿಸಿದಾಗ ತಲವಾರಿನಿಂದ ಗಾಯಗೊಳಿಸಿದ ಕಳ್ಳರು

ಸವಣೂರು: ವಾಹನದಲ್ಲಿ ಆಗಮಿಸಿದ ಕಳ್ಳರ ಗ್ಯಾಂಗೊಂದು ಅಡಕೆ ಕಳವಿಗೆ ಯತ್ನಿಸಿದಾಗ ಮನೆಯಾತ ನೋಡಿದ್ದು, ಕಳ್ಳರನ್ನು ಹಿಡಿಯಲೆತ್ನಿಸಿದಾಗ ಕಳ್ಳರು ತಲವಾರಿನಿಂದ  ದಾಳಿ ನಡೆಸಿದ ಘಟನೆ ಶನಿವಾರ ಮುಂಜಾನೆ ಸವಣೂರಿನ ಫಾರ್ಮ್ಸ್ ಒಂದರಲ್ಲಿ ನಡೆದಿದೆ. ಕಡಬ ತಾಲೂಕಿನ ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ಸರ್ವೆ ಸಮೀಪದ ಪಣೆಮಜಲುನಲ್ಲಿರುವ ರಾಮಚಂದ್ರ ಎಡಪತ್ಯ ಮಾಲಕತ್ವದ ಎಡಪತ್ಯ ಫಾರ್ಮ್ಸ್ ನಲ್ಲಿ ಈ ಘಟನೆ ನಡೆದಿದೆ ಕಳ್ಳರ ತಂಡ ಕಾರು ಹಾಗೂ ಸ್ಕೂಟರ್‍ ನಲ್ಲಿ ಬಂದು ಅಡಿಕೆ ದೋಚುತ್ತಿದ್ದಾಗ ತೋಟದ ಮಾಲೀಕನ ಪುತ್ರನ ಕಣ್ಣಿಗೆ ಸಿಕ್ಕಿಬಿದ್ದಿದ್ದು ಕಳ್ಳತನ

ಅಡಕೆ ಕಳವಿಗೆ ಯತ್ನ | ತಡೆಯಲೆತ್ನಿಸಿದಾಗ ತಲವಾರಿನಿಂದ ಗಾಯಗೊಳಿಸಿದ ಕಳ್ಳರು Read More »

ಚಾಕು ತೋರಿಸಿ ದರೋಡೆಗೆ ಯತ್ನ!!

ವಿಟ್ಲ: ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನ ಲಪಟಾಯಿಸಲು ಯತ್ನಿಸಿದ ಘಟನೆ ಕುಳ ಗ್ರಾಮದ ನೀರಪಳಿಕೆಯಲ್ಲಿ ನಡೆದಿದೆ. ನೀರಪಳಿಕೆ ಮಹಮ್ಮದ್ ಕುಂಞ ಎಂಬವರ ಮನೆಯಲ್ಲಿ ಘಟನೆ ನಡೆದಿದ್ದು, ಮನೆಯವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾಗ ಮನೆಯಲ್ಲಿ ವೃದ್ಧ ಮಹಿಳೆ ಮಾತ್ರ ಇರುವ ಸಂದರ್ಭ ಮನೆಯ ಮುಖ್ಯ ದ್ವಾರದ ಮೂಲಕ ವ್ಯಕ್ತಿಯೋರ್ವ ಮುಖಕ್ಕೆ ಮಾಸ್ಕ್ ಹಾಕಿ ಒಳ ಪ್ರವೇಶಿಸಿ ಒಳಗಿನಿಂದ ಚಿಲಕ ಹಾಕಿ ಮಹಿಳೆಯ ಹತ್ತಿರ ಚಾಕುವಿನೊಂದಿಗೆ ಬಂದು, ಕಿವಿಯಲ್ಲಿ ಇರುವ ಚಿನ್ನ ಕೊಡುವಂತೆ ಕೇಳಿದ್ದಾನೆ. ಬೆದರಿದ ಮಹಿಳೆ ಹಿಂದಿನ

ಚಾಕು ತೋರಿಸಿ ದರೋಡೆಗೆ ಯತ್ನ!! Read More »

ಕಂಬಳ ವೀಕ್ಷಿಸಿ ವಾಪಾಸಾಗುತ್ತಿದ್ದ ವೇಳೆ ಅಪಘಾತ : ಇಬ್ಬರು ಮೃತ್ಯು

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳ ವೀಕ್ಷಿಸಿ ಊರಿಗೆ ವಾಪಾಸಾಗುತ್ತಿದ್ದಾಗ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಾಯಗೊಂಡ ಘಟನೆ ರಾಜ್ಯ ಹೆದ್ದಾರಿ 33 ಕೊತ್ತಗೆರೆ ಹೋಬಳಿ ಚಿಗಣಿ ಪಾಳ್ಯ ಗ್ರಾಮದ ಬಳಿ ನಡೆದಿದೆ. ಮೃತಪಟ್ಟವರನ್ನು ಬಜಪೆ ಮೂಲದ ಕಿಶಾನ್‍ ಶೆಟ್ಟಿ (20) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಭಟ್ಟರ ತೋಟ ಗ್ರಾಮದ ಫಿಲೀಪ್‍ ನೇರಿ ಲೋಬೋ (32) ಎಂದು ಗುರುತಿಸಲಾಗಿದೆ. ನಿತೀಶ್‍ ಭಂಡಾರಿ, ಪ್ರೀತಿ ಲೋಬೋ, ಹರೀಶ್ ಗಂಭಿರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಕಂಬಳ ವೀಕ್ಷಿಸಿ ವಾಪಾಸಾಗುತ್ತಿದ್ದ ವೇಳೆ ಅಪಘಾತ : ಇಬ್ಬರು ಮೃತ್ಯು Read More »

ಕಾಲೇಜು ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ !!

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ಕೀಟನಾಶಕ ಸೇವಿಸಿ ಮೃತಪಟ್ಟ ಘಟನೆ ನಡೆದಿದೆ. ಸಂಪ್ಯ ಬೈಲಾಡಿ ನಿವಾಸಿ ಮಂಜಪ್ಪ ಗೌಡರ ಪುತ್ರಿ, ಪುತ್ತೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿ ನಿಶಾ (17) ಮೃತಪಟ್ಟ ಯುವತಿ. ಕಳೆದ ಎರಡು ವಾರಗಳ ಹಿಂದೆ ಬಿಹಾರದಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಕ್ರೀಡಾಕೂಟ ನಿಶಾ ರನ್ನಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ರನ್ನಿಂಗ್ ರೇಸ್ ನಲ್ಲಿ ಬಹುಮಾನ ಸಿಗದಿದ್ದಕ್ಕೆ ಬೇಸರಗೊಂಡಿದ್ದ ನಿಶಾ ಬಳಿಕ ಖಿನ್ನತೆಗೊಳಗಾಗಿ ತೋಟಕ್ಕೆ ಸಿಂಪಡಿಸುವ ಕೀಟನಾಶವನ್ನ ಸೇವಿಸಿದ್ದರು. ತೀವ್ರ ವಾಂತಿ ಬಂದ ಕಾರಣಕ್ಕೆ ಮನೆಯವರು ವಿಚಾರಿಸಿದಾಗ ಕೀಟನಾಶಕ ಸೇವಿಸಿದ

ಕಾಲೇಜು ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ !! Read More »

error: Content is protected !!
Scroll to Top