ಹಿಜಾಬ್‌ ವಿರೋಧಿ ಪ್ರತಿಭಟನೆ ಬೆಂಬಲಿಸಿದ ನಟಿ ಬಂಧನ

ಓಸ್ಕರ್‌ ಪ್ರಶಸ್ತಿ ವಿಜೇತ ನಟಿ ಟೆಹ್ರಾನ್‌ : ಹಿಜಾಬ್‌ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿದ ಓಸ್ಕರ್‌ ಪ್ರಶಸ್ತಿ ವಿಜೇತ ನಟಿ ತರನೆಹ್‌ ಅಲಿದೋಸ್ತಿ ಅವರನ್ನು ಇರಾನ್‌ ಪೊಲೀಸರು ಬಂಧಿಸಿದ್ದಾರೆ. ಅಲಿದೋಸ್ತಿ ʼದ ಸೇಲ್ಸ್‌ಮ್ಯಾನ್‌ʼ ಚಿತ್ರಕ್ಕಾಗಿ ಓಸ್ಕರ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ ಮತ್ತು ಇರಾನ್‌ನ ಜನಪ್ರಿಯ ನಟಿ.ಇತ್ತೀಚೆಗೆ ಇರಾನ್‌ ಸರಕಾರ ಹಿಜಾಬ್‌ ವಿರೋಧಿ ಹೋರಾಟದಲ್ಲಿದ್ದ ಯುವಕನನ್ನು ಗಲ್ಲಿಗೇರಿಸಿದ್ದು, ಅವರನ್ನು ಬೆಂಬಲಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿರುವುದಕ್ಕೆ ನಟಿಯನ್ನು ಬಂಧಿಸಲಾಗಿದೆ.ಹಿಜಾಬ್‌ ಬೆಂಬಲಿಸಿದ ಅನೇಕ ಗಣ್ಯರಿಗೆ ಇರಾನ್‌ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ. ಅಲಿದೋಸ್ತಿ ತನ್ನ ಪೋಸ್ಟ್‌ […]

ಹಿಜಾಬ್‌ ವಿರೋಧಿ ಪ್ರತಿಭಟನೆ ಬೆಂಬಲಿಸಿದ ನಟಿ ಬಂಧನ Read More »

ಚೆಕ್‌ ಬೌನ್ಸ್‌ ಪ್ರಕರಣ : ಶಾಸಕರಿಗೆ 49.65 ಲಕ್ಷ ರೂ. ದಂಡ

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ 49.65 ಲಕ್ಷ ರೂ.ದಂಡ ವಿಧಿಸಿದೆ.ರಾಮಚಂದ್ರ ಜಿ. ಎಂಬವರಿಂದ ನಂಜೇಗೌಡ ಅವರು 40 ಲಕ್ಷ ರೂಪಾಯಿ ಸಾಲ ಪಡೆದು ಮರುಪಾವತಿಗೆ ಚೆಕ್ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆಗಿದ್ದರಿಂದ ಅವರನ್ನು ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದೆ. ದಂಡ ಪಾವತಿಸದಿದ್ದರೆ 6 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು 42ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.

ಚೆಕ್‌ ಬೌನ್ಸ್‌ ಪ್ರಕರಣ : ಶಾಸಕರಿಗೆ 49.65 ಲಕ್ಷ ರೂ. ದಂಡ Read More »

ಬಾಲಕಿಗೆ ಕಿರುಕುಳ: ಯುವಕನನ್ನು ಕಟ್ಟಿ ಹಾಕಿ ಹಲ್ಲೆ

ಮಂಗಳೂರು : ಬಾಲಕಿ ಜತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬನನ್ನು ಕಟ್ಟಿಹಾಕಿ ಥಳಿಸಿದ ಘಟನೆ ಮೂಲ್ಕಿಯಲ್ಲಿ ಶನಿವಾರ ಸಂಭವಿಸಿದೆ. ಯುವಕನೊಬ್ಬ ಡಿ.13ರಂದು ಬೈಕ್‌ನಲ್ಲಿ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದು ಕಿರುಕುಳ ನೀಡಲು ಯತ್ನಿಸಿದ್ದ. ಇದನ್ನು ಬಾಲಕಿಯ ತಂದೆಯ ಸ್ನೇಹಿತರಿಬ್ಬರು ಗಮನಿಸಿದ್ದರು. ಇದೇ ಯುವಕ ಶನಿವಾರ ಮತ್ತೆ ಬೈಕಿನಲ್ಲಿ ಆ ಜಾಗಕ್ಕೆ ಬಂದಿದ್ದ. ಇದನ್ನು ಗಮನಿಸಿದ ಬಾಲಕಿಯ ಕಡೆಯವರು ಯುವಕನನ್ನು ಹಿಡಿದು ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರ ವಶಕ್ಕೊಪ್ಪಿಸಿ ಪೋಕ್ಸೊ ಕೇಸು ದಾಖಲಿಸಿದ್ದಾರೆ. ಇದೇ ವೇಳೆ ಆರೋಪಿ ಕೂಡ ತನ್ನ

ಬಾಲಕಿಗೆ ಕಿರುಕುಳ: ಯುವಕನನ್ನು ಕಟ್ಟಿ ಹಾಕಿ ಹಲ್ಲೆ Read More »

ಸಿಂಪಥಿ ಮೀರಿದ ಎಂಪಥಿ…!

ನಮ್ಮನ್ನು ಎಲ್ಲ ಕಡೆಯೂ ಗೆಲ್ಲಿಸುವ ಮಹಾಮಂತ್ರ! ಒಂದು ಕಥೆಯಿಂದ ಆರಂಭ ಮಾಡುತ್ತೇನೆ.ಒಂದೂರಲ್ಲಿ ಒಂದು ನಾಯಿಗಳ ಪ್ರದರ್ಶನ ಮತ್ತು ಮಾರಾಟ ಮಾಡುವ ಕಾರ್ಯಕ್ರಮ ಏರ್ಪಾಡಾಗಿತ್ತು. ಬೇರೆ ಬೇರೆ ಜಾತಿಯ, ಬೇರೆ ಬೇರೆ ಬಣ್ಣದ ಚಂದವಾದ ನಾಯಿಗಳು. ಬೆಳಿಗ್ಗೆಯಿಂದ ಜನಸಾಗರ ಹರಿದು ಬಂದು ನಾಯಿಗಳನ್ನು ನೋಡುತ್ತ ತಮಗೆ ಇಷ್ಟವಾದ ನಾಯಿಗಳನ್ನು ಖರೀದಿ ಮಾಡುತ್ತಿತ್ತು.ಆದರೆ ಒಂದು ನಾಯಿ ಮೇಜಿನ ಕೆಳಗೆ ಧೂಳಲ್ಲಿ ಬಿದ್ದು ಒದ್ದಾಡುತ್ತಿತ್ತು. ಅದಕ್ಕೆ ಬೊಗಳಲು ಕೂಡ ತ್ರಾಣ ಇರಲಿಲ್ಲ. ಅದು ಯಾರಿಗೂ ಬೇಡವಾದ ನಾಯಿ ಆಗಿತ್ತು. ಯಾರೂ ಅದರ

ಸಿಂಪಥಿ ಮೀರಿದ ಎಂಪಥಿ…! Read More »

ಬೆಟ್ಟಂಪಾಡಿ: ಸಂಜೀವಿನಿ ಕಟ್ಟಡ, ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ

ಪುತ್ತೂರು: ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಕಟ್ಟಡ ಹಾಗೂ ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡಕ್ಕೆ ಶಾಸಕ ಸಂಜೀವ ಮಠಂದೂರು ಅವರು ಡಿ. 17ರಂದು ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭ ವಸತಿ ಯೋಜನೆ, ನರೇಗಾ ಯೋಜನೆ ಸೇರಿದಂತೆ ವಿವಿಧ ಯೋಜನೆಯ ಫಲಾನುಭವಿಗಳಿಗೆ ಚೆಕ್ ಹಾಗೂ ಸೌಲಭ್ಯ ವಿತರಿಸಲಾಯಿತು. ಬಳಿಕ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಗ್ರಾಮ ಪಂಚಾಯತ್ ಮಟ್ಟದಲ್ಲೇ ಜನರಿಗೆ ಸೌಲಭ್ಯ ನೀಡುವ ಕೆಲಸ ಆಗುತ್ತಿದೆ. ಅದರಲ್ಲೂ ಮಹಿಳೆಯರ ಕೆಲಸಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಜೊತೆಗೆ, ಉದ್ಯೋಗ

ಬೆಟ್ಟಂಪಾಡಿ: ಸಂಜೀವಿನಿ ಕಟ್ಟಡ, ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ Read More »

ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸದನದಲ್ಲಿ ಪ್ರಸ್ತಾಪ | ಬನ್ನೂರು ಗ್ರಾಮದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಸಂದರ್ಭ ಆಶಾ ಕಾರ್ಯಕರ್ತೆಯರಿಗೆ ಶಾಸಕರ ಭರವಸೆ

ಪುತ್ತೂರು: ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಿಲಾನ್ಯಾಸಕ್ಕೆ ತೆರಳಿದ ಶಾಸಕರನ್ನು ಭೇಟಿಯಾದ ಆಶಾ ಕಾರ್ಯಕರ್ತೆಯರು, ತಮ್ಮ ಬೇಡಿಕೆಗಳ ಬಗ್ಗೆ ಗಮನ ಸೆಳೆದರು. ಸ್ಪಂದಿಸಿದ ಶಾಸಕ ಸಂಜೀವ ಮಠಂದೂರು ಅವರು, ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಡಿ. 19ರಿಂದ 30ರವರೆಗೆ ಬೆಳಗಾವಿಯಲ್ಲಿ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು. ವೈದ್ಯಕೀಯ ಸೌಲಭ್ಯ, ಸೂಕ್ತ ವೇತನ ಸೇರಿದಂತೆ ಸರಕಾರಿ ನೌಕರರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಆಶಾ ಕಾರ್ಯಕರ್ತೆಯರಿಗೂ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದರು.

ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸದನದಲ್ಲಿ ಪ್ರಸ್ತಾಪ | ಬನ್ನೂರು ಗ್ರಾಮದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಸಂದರ್ಭ ಆಶಾ ಕಾರ್ಯಕರ್ತೆಯರಿಗೆ ಶಾಸಕರ ಭರವಸೆ Read More »

ಚಿಕ್ಕಮುಡ್ನೂರು ಗ್ರಾಮದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ವಿವಿಧ ಕಾಮಗಾರಿಗಳಿಗೆ ಶಾಸಕ ಸಂಜೀವ ಮಠಂದೂರು ಅವರು ಡಿ. 17ರಂದು ಶಿಲಾನ್ಯಾಸ ನೆರವೇರಿಸಿದರು. 15 ಲಕ್ಷ ರೂ. ವೆಚ್ಚದಲ್ಲಿ ಊರಾಮಾಲು ರಸ್ತೆ, 10 ಲಕ್ಷ ರೂ. ವೆಚ್ಚದಲ್ಲಿ ಪಳಸಾಡ್ಕ ಏಕ ರಸ್ತೆ, 30 ಲಕ್ಷ ರೂ. ವೆಚ್ಚದಲ್ಲಿ ಚಿಕ್ಕಮುಡ್ನೂರು ಪುಲುವಾರು ದೇವಸ್ಥಾನ ರಸ್ತೆ ಹಾಗೂ ಬೀರಿಗ ಬೀರಿನಹಿತ್ಲು ಸಂಪರ್ಕ ರಸ್ತೆ, 10 ಲಕ್ಷ ರೂ. ವೆಚ್ಚದಲ್ಲಿ ದಾರಂದಕುಕ್ಕು ಪ.ಪಂಗಡ ಕಾಲನಿ ರಸ್ತೆ ಹಾಗೂ ಕುಂಜೂರು ದೇವಸ್ಥಾನ ರಸ್ತೆಗೆ ಅನುದಾನ ನೀಡಿದ್ದು, ಕಾಮಗಾರಿಗೆ ಶಿಲಾನ್ಯಾಸ

ಚಿಕ್ಕಮುಡ್ನೂರು ಗ್ರಾಮದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ Read More »

ವಿಟ್ಲ: ನಾಳೆ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದಿಂದ ಶ್ರೀ ಸತ್ಯನಾರಾಯಣ ಪೂಜೆ, ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಸನ್ಮಾನ

ಪುತ್ತೂರು: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ, ಶಾಂತಿನಗರ ವಿಟ್ಲ ಇದರ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಸಭಾ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಡಿ.18ರಂದು ವಿಟ್ಲ ಶಾಂತಿನಗರ ಅಕ್ಷಯ ಶ್ರೀಮತಿ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ನಡೆಯಲಿದೆ. ಇದೇ ಸಂದರ್ಭ ಕುಳ, ಇಡ್ಕಿದು, ನೆಟ್ಲಮುಡ್ನೂರು, ಕೆದಿಲ, ಪುಣಚ, ಬಿಳಿಯೂರು, ಪೆರ್ನೆ, ವಿಟ್ಲಮುಡ್ನೂರು ಒಕ್ಕಲಿಗ ಸ್ವಸಹಾಯ ಸಂಘದ ಒಕ್ಕೂಟಗಳ ಪದಗ್ರಹಣ ನಡೆಯಲಿದೆ. ಬೆಳಿಗ್ಗೆ 7ಕ್ಕೆ ಗಣಪತಿ ಹೋಮ, 8ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, 10-30ಕ್ಕೆ

ವಿಟ್ಲ: ನಾಳೆ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದಿಂದ ಶ್ರೀ ಸತ್ಯನಾರಾಯಣ ಪೂಜೆ, ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಸನ್ಮಾನ Read More »

ಗ್ರಾಮೀಣ ಭಾಗ ರಾಜ್ಯ ರಾಜಧಾನಿಗೆ ನೇರ ಸಂಪರ್ಕ | ಪಾಣಾಜೆಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಸ್ಲೀಪರ್ ಕೋಚಿಗೆ ಚಾಲನೆ ನೀಡಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಗಡಿಭಾಗವಾದ ಪಾಣಾಜೆ – ಬೆಟ್ಟಂಪಾಡಿ ಜನರು ರಾಜ್ಯ ರಾಜಧಾನಿಯನ್ನು ಸುಲಭವಾಗಿ ಸಂಪರ್ಕ‍ ಸಾಧಿಸುವಂತಾಗಬೇಕು ಎಂಬ ದೃಷ್ಟಿಯಿಂದ ಪಾಣಾಜೆಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಸ್ಲೀಪರ್ ಕೋಚ್ ಬಸ್ ಆರಂಭವಾಗಿದೆ. ಪಾಣಾಜೆ ಪರಿಸರದ ಜನರ ಬೇಡಿಕೆಗೆ ಮನ್ನಣೆ ದೊರೆತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಪಾಣಾಜೆಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಸ್ಲೀಪರ್ ಬಸ್ ಸೇವೆಗೆ ಡಿ. 16ರಂದು ರಾತ್ರಿ ಪಾಣಾಜೆಯಲ್ಲಿ ತೆಂಗಿನಕಾಯಿ ಒಡೆದು ಚಾಲನೆ ನೀಡಿ, ಮಾತನಾಡಿದರು. ಪಾಣಾಜೆ ಭಾಗದ ಜನರು ಬೆಂಗಳೂರಿಗೆ ತೆರಳುಬೇಕು ಎಂದರೆ, ಪುತ್ತೂರಿನಿಂದ ಬಸ್ ಹಿಡಿಯಬೇಕಿತ್ತು.

ಗ್ರಾಮೀಣ ಭಾಗ ರಾಜ್ಯ ರಾಜಧಾನಿಗೆ ನೇರ ಸಂಪರ್ಕ | ಪಾಣಾಜೆಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಸ್ಲೀಪರ್ ಕೋಚಿಗೆ ಚಾಲನೆ ನೀಡಿ ಶಾಸಕ ಸಂಜೀವ ಮಠಂದೂರು Read More »

ಪಠ್ಯೇತರ ಚಟುವಟಿಕೆ, ಶಾಶ್ವತಿ ವಾರ್ತಾ ಪತ್ರಿಕೆ ಉದ್ಘಾಟನೆ

ಪುತ್ತೂರು: ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಶಾಶ್ವತಿ ವಾರ್ತಾ ಪತ್ರಿಕೆ ಬಿಡುಗಡೆ ಸಮಾರಂಭ ಡಿ. 17ರಂದು ಬೆಳಿಗ್ಗೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರಗಿತು. ಶಾಸಕರೂ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು. ನಿವೃತ್ತ ಪ್ರಾಧ್ಯಾಪಕಿ ವತ್ಸಲಾ ರಾಜ್ಞಿ ಮುಖ್ಯ ಅತಿಥಿಯಾಗಿದ್ದರು. ಕಾಲೇಜು ಪ್ರಾಂಶುಪಾಲ ಡಾ. ಶ್ರೀಧರ್ ಗೌಡ ಪಿ. ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಂಘ ಸಂಚಾಲಕ ಪ್ರೊ. ಶಾಂತರಾಮ ಎ.,

ಪಠ್ಯೇತರ ಚಟುವಟಿಕೆ, ಶಾಶ್ವತಿ ವಾರ್ತಾ ಪತ್ರಿಕೆ ಉದ್ಘಾಟನೆ Read More »

error: Content is protected !!
Scroll to Top