ದ.ಕ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ | 957.39 ಕೋಟಿ ರೂ. ವೆಚ್ಚದ 2 ಯೋಜನೆಗಳಿಗೆ ಅನುಮೋದನೆ

ಮಂಗಳೂರು : ಕೇಂದ್ರ ಸರ್ಕಾರಕ್ಕೆ ಕರ್ನಾಟಕದಿಂದ ಸಲ್ಲಿಸಲಾಗಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಸ್ತಾವನೆಗಳಲ್ಲಿ ಪ್ರಥಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 957.39 ಕೋಟಿ ರೂ. ವೆಚ್ಚದ ಎರಡು ಬೃಹತ್ ಯೋಜನೆಗಳಿಗೆ ಅನುಮೋದನೆ ದೊರೆತಿದೆ ಎಂದು ದ.ಕ.ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ 28.490 ಕಿ.ಮೀ.ದ್ವಿಪಥ ಅಭಿವೃದ್ಧಿ  613.65 ಕೋಟಿ ರೂ. ವೆಚ್ಚದ ಯೋಜನೆ ಹಾಗೂ ರಾಷ್ಟ್ರೀಯ ಹೆದ್ದಾರಿ 73 ರ  ಚಾರ್ಮಡಿ ಘಾಟಿಯಲ್ಲಿ ಮಂಗಳೂರು-ಮೂಡಿಗೆರೆ-ತುಮಕೂರು ಸೆಕ್ಷನ್‌ನಲ್ಲಿ 11.20 ಕಿ.ಮೀ. ಅಭಿವೃದ್ದಿ 343.73  ಕೋಟಿ […]

ದ.ಕ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ | 957.39 ಕೋಟಿ ರೂ. ವೆಚ್ಚದ 2 ಯೋಜನೆಗಳಿಗೆ ಅನುಮೋದನೆ Read More »

ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 15ನೇ ಉಪ್ಪಿನಂಗಡಿ ಶಾಖೆ ಸ್ಥಳಾಂತರಗೊಂಡು ಶುಭಾರಂಭ

ಉಪ್ಪಿನಂಗಡಿ: ಸುಳ್ಯದಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ರಾಜ್ಯಾದ್ಯಂತ ಶಾಖೆಗಳನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 15ನೇ ಉಪ್ಪಿನಂಗಡಿ ಶಾಖೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಸರ್ವೆ ಕಾಂಪ್ಲೆಕ್ಸ್ ನಿಂದ ಎಚ್.ಎಂ ಆಡಿಟೋರಿಯಂ ಬಳಿಯ ಬಿ.ಎಂ ಆರ್ಕೇಡ್ ಗೆ ಸ್ಥಳಾಂತರಗೊಂಡ ಶಾಖೆಯನ್ನು ಕೆಎಸ್‌ಆ‌ರ್ ಟಿಸಿ ನಿವೃತ್ತ ಉದ್ಯೋಗಿ ಬೆಳ್ಯಪ್ಪ ಗೌಡ ಕಣಿಯ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ.ಸಿ. ಜಯರಾಮ ವಹಿಸಿದ್ದರು. ಅತಿಥಿಗಳಾಗಿ ಅಶ್ವಿನಿ ಇಲೆಕ್ಟ್ರಾನಿಕ್ಸ್ ಮಾಲಕ, ಉದ್ಯಮಿ ಪ್ರಕಾಶ್‌, ಬಿ.ಎಂ.

ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 15ನೇ ಉಪ್ಪಿನಂಗಡಿ ಶಾಖೆ ಸ್ಥಳಾಂತರಗೊಂಡು ಶುಭಾರಂಭ Read More »

ಕೌಡಿಚ್ಚಾರಿನಲ್ಲಿ ಕಾರು ಪಲ್ಟಿ !

ಪುತ್ತೂರು: ಮಡಿಕೇರಿಯಿಂದ ಕಾರ್ಕಳಕ್ಕೆ ಹೋಗುತ್ತಿದ್ದ ಕಾರೊಂದು ಕೌಡಿಚ್ಚಾರಿನ ಮಡ್ಯಂಗಲ ಬಳಿ ಪಲ್ಟಿಯಾಗಿದೆ. ಮಡಿಕೇರಿಯ ನಾಗೇಶ್ ಎಂಬವರು ತನ್ನ ಸ್ನೇಹಿತನನ್ನು ಕರೆತರಲು ಮಡಿಕೇರಿಯಿಂದ ಬೆಳಗ್ಗಿನ ಜಾವ ಕಾರ್ಕಳಕ್ಕೆ ತೆರಳುತ್ತಿದ್ದ ವೇಳೆ ಕೌಡಿಚ್ಚಾರಿನ ಬಳಿ ಎದುರಿನಿಂದ ರಾಂಗ್ ಸೈಡಲ್ಲಿ ಬರುತ್ತಿದ್ದ ವಾಹನವೊಂದರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾರು ಪಲ್ಟಿಯಾಗಿದೆ. ಕಾರನ್ನು ಸ್ವತಃ ನಾಗೇಶ್ ಅವರೇ ಚಲಾಯಿಸುತ್ತಿದ್ದು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

ಕೌಡಿಚ್ಚಾರಿನಲ್ಲಿ ಕಾರು ಪಲ್ಟಿ ! Read More »

ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಚತೆ | ಶಿಕ್ಷಣ ಸಚಿವರ ತವರಲ್ಲೇ ನಡೆಯಿತು ಘಟನೆ | ಪೋಷಕರಿಂದ ಪ್ರತಿಭಟನೆ | ತಿಂಗಳೊಂದರಲ್ಲೇ ನಡೆದ ಮೂರನೇ ಘಟನೆ

ಕೋಲಾರದ ಮುಳಬಾಗಿಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮಲದ ಗುಂಡಿ ಸ್ವಚ್ಛತೆ ಹಾಗೂ ಬೆಂಗಳೂರಿನ ಅಂದ್ರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ಸ್ವಚ್ಛತೆ ಪ್ರಕರಣದ ಬಳಿಕ ಇದೀಗ ಶಿವಮೊಗ್ಗದಲ್ಲೂ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆಯಲ್ಲೇ ಈ ಘಟನೆ ನಡೆದಿದ್ದು, ಭದ್ರಾವತಿಯ ನೇರಲೆಕೆರೆ ಶಾಲಾ ಮಕ್ಕಳು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಆಕ್ರೋಶಗೊಂಡ ಪೋಷಕರು ಪ್ರತಿಭಟನೆ

ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಚತೆ | ಶಿಕ್ಷಣ ಸಚಿವರ ತವರಲ್ಲೇ ನಡೆಯಿತು ಘಟನೆ | ಪೋಷಕರಿಂದ ಪ್ರತಿಭಟನೆ | ತಿಂಗಳೊಂದರಲ್ಲೇ ನಡೆದ ಮೂರನೇ ಘಟನೆ Read More »

ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದು ಮೃತ್ಯು !

ಸುಳ್ಯ: ಬೈಕೊಂದು  ರಸ್ತೆ ದಾಟುತ್ತಿದ್ದ ಪಾದಚಾರಿಯೋರ್ವರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಪಾದಚಾರಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ನಡೆದಿದೆ. ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ದೇವರಗುಂಡ ಪುರುಷೋತ್ತಮ ಗೌಡ (72) ಮೃತಪಟ್ಟ ಪಾದಚಾರಿ ಜಾಲ್ಸೂರಿನ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿ ರಸ್ತೆದಾಟುತ್ತಿದ್ದ ಸಂದರ್ಭದಲ್ಲಿ ಪುತ್ತೂರು ಕಡೆಯಿಂದ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ

ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದು ಮೃತ್ಯು ! Read More »

ರಸ್ತೆ ಕಾಮಗಾರಿ ವೇಳೆ ಲಾರಿ ಮೇಲೆ ಬಿದ್ದ ಮರ !

ಉಪ್ಪಿನಂಗಡಿ: ಪುತ್ತೂರು-ಉಪ್ಪಿನಂಗಡಿ ಹೆದ್ದಾರಿಯಲ್ಲಿ ಕಾಮಗಾರಿ ಹಿನ್ನಲೆಯಲ್ಲಿ ಹಿಟಾಚಿಯಲ್ಲಿ ಮಣ್ಣು ತೆಗೆಯುತ್ತಿದ್ದ ವೇಳೆ ಸಂಚರಿಸುತ್ತಿದ್ದ ಲಾರಿಯೊಂದರ ಮೇಲೆ ಮರ ಬಿದ್ದ ಘಟನೆ  ಬೇರಿಕೆಯಲ್ಲಿ ನಡೆದಿದೆ. ಘಟನೆಯಿಂದ ಯಾವುದೇ ಅವಘಡಗಳಾಗದಿದ್ದರೂ, ಲಾರಿಗೆ ಹಾನಿಯಾಗಿದೆ. ಈ ಪರಿಣಾಮ ಸುಮಾರು 5 ವಿದ್ಯುತ್‍ ಕಂಬಗಳು ಧರೆಗುರುಳಿದ್ದು, ಕೆಲಸಹೊತ್ತು ಸಂಚಾರಕ್ಕೆ ತಡೆ ಉಂಟಾಯಿತು. ಘಟನೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.

ರಸ್ತೆ ಕಾಮಗಾರಿ ವೇಳೆ ಲಾರಿ ಮೇಲೆ ಬಿದ್ದ ಮರ ! Read More »

ವಿಟ್ಲ ಅಂಬೇಡ್ಕರ್ ಭವನಕ್ಕೆ ಒಂದು ಕೋಟಿ ರೂ. ಅನುದಾನ | ಶಾಸಕರಿಗೆ ಭರವಸೆ ನೀಡಿದ ಸಚಿವ ಎಚ್ ಸಿ ಮಹದೇವಪ್ಪ

ವಿಟ್ಲ: ವಿಟ್ಲದಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ಭವನಕ್ಕೆ ಒಂದು ಕೋಟಿ ರೂ. ಅನುದಾನ ನೀಡುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಪುತ್ತೂರು ಶಾಸಕರಿಗೆ ಭರವಸೆ ನೀಡಿದ್ದಾರೆ. ಪುತ್ತೂರು ಶಾಸಕ ಅಶೋಕ್ ರೈ ಹಾಗೂ ದಲಿತ ಸಂಘಟನೆಗಳ ಪ್ರಮುಖರು ಬೆಂಗಳೂರು ಡಾಲರ್ಸ್ ಕಾಲನಿಯಲ್ಲಿರುವ ಸಚಿವರ ನಿವಾಸಕ್ಕೆ ಭೇಟಿ ನೀಡಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿಟ್ಲದಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ಭವನಕ್ಕೆ ಒಂದು ಕೋಟಿ ಅನುದಾನ ನೀಡುವುದಾಗಿ

ವಿಟ್ಲ ಅಂಬೇಡ್ಕರ್ ಭವನಕ್ಕೆ ಒಂದು ಕೋಟಿ ರೂ. ಅನುದಾನ | ಶಾಸಕರಿಗೆ ಭರವಸೆ ನೀಡಿದ ಸಚಿವ ಎಚ್ ಸಿ ಮಹದೇವಪ್ಪ Read More »

ಶಬರಿಮಲೆಯಿಂದ ವಾಪಾಸಾಗುತ್ತಿದ್ದಾಗ ಅಪಘಾತ | ಓರ್ವ ಮೃತ್ಯು

ಶಬರಿಮಲೆಗೆ ಕೊಡಗಿನಿಂದ ತೆರಳಿದ ತಂಡವೊಂದು ಮರಳಿ ಬರುವಾಗ ವಾಹನ ಮರಕ್ಕೆ ಡಿಕ್ಕಿಯಾದ ಅಪಘಾತಕ್ಕೀಡಾಗಿ ಓರ್ವ ಮೃತಪಟ್ಟ ಘಟನೆ ಕೇರಳದ ಅಂಗಮಾಲಿಯ ಪೇರಂಬೂರ್ ಬಳಿ ನಡೆದಿದೆ. ಕುಶಾಲನಗರ ಹಾರಂಗಿ ದೊಡ್ಡತ್ತೂರು ನಿವಾಸಿ ಕುಂಞರಾಮ ಎಂಬವರ ಪುತ್ರ ಆಟೋ ಚಂದ್ರ ಮೃತಪಟ್ಟವರು. ಕುಶಾಲನಗರದ ಲಿಂಗಂ ಹರೀಶ್, ಸಂತೋಷ್ ಗಾಯಗೊಂಡವರು. ಗಾಯಾಳುಗಳನ್ನು ಪೆರಂಬೂರಿನ ರಾಜಗಿರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಶಬರಿಮಲೆಯಿಂದ ವಾಪಾಸಾಗುತ್ತಿದ್ದಾಗ ಅಪಘಾತ | ಓರ್ವ ಮೃತ್ಯು Read More »

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ !

ಕಾಣಿಯೂರು: ರಿಕ್ಷಾ ಚಾಲಕರೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಣಿಯೂರಿನ ಎಲುವೆ ಎಂಬಲ್ಲಿ ನಡೆದಿದೆ.. ಕಾಣಿಯೂರು ಬೆದ್ರಾಜೆ ನಿವಾಸಿ ವಸಂತ (42) ಎಂಬವರ ಶವ ಪತ್ತೆಯಾಗಿದೆ. ಅವರ ರಿಕ್ಷಾ ಕಾಣಿಯೂರು ರಸ್ತೆಯ ಎಲುವೆ ಎಂಬಲ್ಲಿ ನಿಲ್ಲಿಸಿತ್ತು. ಅಲ್ಲೇ ಸಮೀಪದ ಕಾಡಿನಲ್ಲಿ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ! Read More »

ಸಹಕಾರ ಸಂಘದ ಚುನಾವಣೆಯಲ್ಲಿ ಸೋಲು | ಆತ್ಮಹತ್ಯೆಗೆ ಶರಣು !

ಧಾರವಾಡ: ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಥಿಸಿ ಸೋತ ಅಭ್ಯರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ಮುರುಘಾ ಮಠದ ಬಳಿ ನಡೆದಿದೆ. ವಿಶ್ವವಿದ್ಯಾನಿಲಯದ ಲೆಕ್ಕಪತ್ರ ವಿಭಾಗದ ಸೂಪರಿಂಟೆಂಡೆಂಟ್ ಚಂದ್ರಕಾತ್ ಸಾವಳಗಿ (55) ಆತ್ಮಹತ್ಯೆ ಮಾಡಿಕೊಂಡವರು. ಚುನಾವಣೆ ಫಲಿತಾಂಶ ಬಂದ ಮೇಲೆ ಮನೆಗೆ ವಾಪಸ್ ಆಗಿದ್ದ ಅವರು ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೂರ್ನಾಲ್ಕು ದಿನಗಳಿಂದ ಮನೆ ಬಾಗಿಲು ತೆರೆಯದ ಕಾರಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದಿ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ

ಸಹಕಾರ ಸಂಘದ ಚುನಾವಣೆಯಲ್ಲಿ ಸೋಲು | ಆತ್ಮಹತ್ಯೆಗೆ ಶರಣು ! Read More »

error: Content is protected !!
Scroll to Top