ಅಮರ್ ಅಕ್ಬರ್ ಅಂತೋನಿ ಕ್ರಿಕೆಟ್ ಪಂದ್ಯಾಟ | ವೈ.ಎಸ್.ವಿ. ವಾಮದಪದವು ವಿನ್ನರ್ಸ್

ಪುತ್ತೂರು: ೧೨ನೇ ವರ್ಷದ ಅಮರ್ ಅಕ್ಬರ್ ಅಂತೋನಿ ಸೌಹಾರ್ಧ ಕ್ರಿಕೆಟ್ ಪಂದ್ಯಾಟವು ಡಿ. ೨೦ರಿಂದ ೨೬ರತನಕ ೬ ದಿನಗಳ ಕಾಲ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಿತು. ಪಂದ್ಯಾಟದ ರೋಲಿಂಗ್ ಟ್ರೋಫಿಯನ್ನು ವೈ.ಎಸ್.ವಿ. ವಾಮದಪದವು ಪಡೆದುಕೊಳ್ಳುವ ಮೂಲಕ ವಿನ್ನರ್ಸ್ ಆಗಿ ಮೂಡಿಬಂದಿತು. ನಮೋ ಬ್ರದರ್ಸ್ ಬೋಳಂಗಡಿ ರನ್ನರ್ಸ್ ಆಗಿ ಗಮನ ಸೆಳೆಯಿತು.ಕಿಲ್ಲೆ ಕಪ್ ವಿನ್ನರ್ಸ್ ಆಗಿ ಫೈಟರ್ಸ್ ತೋಡಾರ್ ಪ್ರಥಮ, ಜಾನ್ ಜಿಗ್ಗರ್ ಸುಳ್ಯ ದ್ವಿತೀಯ ಸ್ಥಾನ ಗಳಿಸಿತು. ಗ್ರಾಮ ಕಪ್ನ ವಿನ್ನರ್ಸ್ ಆಗಿ ಎಮಿರೇಟ್ಸ್ ನೆಲ್ಯಾಡಿ ಪಡೆದುಕೊಂಡಿತು. […]

ಅಮರ್ ಅಕ್ಬರ್ ಅಂತೋನಿ ಕ್ರಿಕೆಟ್ ಪಂದ್ಯಾಟ | ವೈ.ಎಸ್.ವಿ. ವಾಮದಪದವು ವಿನ್ನರ್ಸ್ Read More »

ಆರಿಗೋ ನೇಮೋತ್ಸವದ ಆಮಂತ್ರಣ ಬಿಡುಗಡೆ

ಪುತ್ತೂರು: ಚಿಕ್ಕಮೂಡ್ನೂರು ಆರಿಗೋ ಶ್ರೀ ಬ್ರಹ್ಮ ಬೈದೆರ್ಗಳ ನೆಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಗೊನೆ ಮುಹೂರ್ತ ನಡೆಯಿತು.ಚಿಕ್ಕ ಮಾಡ್ನೂರು ಗ್ರಾಮದ ಮೂಡಾಯೂರು ಆರಿಗೋ ಪ್ರೇಮಂಡ ಗರೋಡಿಯಲ್ಲಿ ವರ್ಷಂಪ್ರತಿಯಂತೆ ಈ ಬಾರಿಯೂ ಜನವರಿ 1ರಿಂದ 5ರ ವರೆಗೆ ಶ್ರೀ ಬೈದೆರ್ಗಳ ನೇಮೋತ್ಸವ ನಡೆಯಲಿದೆ. ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಡಾ. ಎಂ. ಅಶೋಕ್ ಪಡಿವಾಲ್ ಮೂಡಯೂರುಗುತ್ತು ಕುಟುಂಬಸ್ಥರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಗೊನೆ ಮುಹೂರ್ತ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ನರೇಂದ್ರ ಪಡಿವಾಳ್ ಮೂಡಾಯೂರ್

ಆರಿಗೋ ನೇಮೋತ್ಸವದ ಆಮಂತ್ರಣ ಬಿಡುಗಡೆ Read More »

ಪುತ್ತೂರು ಭಾರತ್ ಸಿನೇಮಾಸ್ ವೇಳಾಪಟ್ಟಿ ಪ್ರಕಟ

ಪುತ್ತೂರು: ಜಿ.ಎಲ್. ಮಾಲಿನಲ್ಲಿ ಆರಂಭಗೊಂಡಿರುವ ಭಾರತ್ ಮಾಲ್ ಇದೀಗ ಮೂವಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಡಿ. 27ರಂದು ಹೊಸ ವೇಳಾಪಟ್ಟಿಯನ್ನು ನೀಡಿದ್ದು, ಬುಕ್ಕಿಂಗಿಗಾಗಿ 8050253030 ಸಂಪರ್ಕಿಸುಂತೆ ಪ್ರಕಟಣೆ ತಿಳಿಸಿದೆ. ಒಟ್ಟು 3 ಸ್ಕ್ರೀನಿನಲ್ಲಿ ಕಾಂತಾರ (ಕನ್ನಡ), ಅವತಾರ್: ದ ವೇ (ಇಂಗ್ಲೀಷ್), ವೇದಾ (ಕನ್ನಡ), ವಿಐಪಿ’ಸ್ ಲಾಸ್ಟ್ ಬೆಂಚ್ (ತುಳು) ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಪ್ರತಿ ಸ್ಕ್ರೀನಿನಲ್ಲಿ ಒಟ್ಟು 4 ಪ್ರದರ್ಶನಗಳು ನಡೆಯುತ್ತಿವೆ. ಸ್ಕ್ರೀನ್ 1ರಲ್ಲಿ ಬೆಳಿಗ್ಗೆ 10.30ರಿಂದ 1.09ರವರೆಗೆ ಕಾಂತಾರಾ ಕನ್ನಡ. ಮಧ್ಯಾಹ್ನ 1.30ರಿಂದ 4.51ರವರೆಗೆ ಹಾಗೂ

ಪುತ್ತೂರು ಭಾರತ್ ಸಿನೇಮಾಸ್ ವೇಳಾಪಟ್ಟಿ ಪ್ರಕಟ Read More »

ಕ್ಯಾಪ್ಕೋ ನೌಕರರ ಪ್ರೈಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

ಪುತ್ತೂರು: ಕ್ಯಾಂಪ್ಕೋ ಸಂಸ್ಥೆ ಮತ್ತು ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ಟ್ರಿ ಯೂನಿಯನ್ ಸಹಯೋಗದಲ್ಲಿ ಕ್ಯಾಂಪ್ಕೋ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ನೆಹರುನಗರ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆಯಿತು. ಪಂದ್ಯಾಟವನ್ನು ಪದ್ಮಪ್ರಸಾದ್ ಜೈನ್ ಉದ್ಘಾಟಿಸಿದರು. ಯೂನಿಯನ್ ಅಧ್ಯಕ್ಷ ತೀರ್ಥರಾಮ, ಮಹೇಶ್ ಪಿ., ಸುಭಾಗ್, ಮೋಹನ್ ಗೌಡ ಉಪಸ್ಥಿತರಿದ್ದರು. ವಿಜೇತ ತಂಡಗಳಿಗೆ ಸಂಸ್ಥೆಯ ಅಧಿಕಾರಿ ಕೇಶವ ಪ್ರಸನ್ನ ಮತ್ತು ರಮೇಶ್ ಗೌಡ ಬಹುಮಾನ ವಿತರಿಸಿದರು.ಫಲಿತಾಂಶ:ಪಂದ್ಯಾಟದ ಪ್ರಥಮ ಸ್ಥಾನವನ್ನು ಟರ್ಬೋ ಟೈಟಾನ್ಸ್ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಮೆಗಾ ಸ್ವಸ್ತಿಕ್ ಪಾಲಾಯಿತು. ಮ್ಯಾನ್ ಆಫ್

ಕ್ಯಾಪ್ಕೋ ನೌಕರರ ಪ್ರೈಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ Read More »

ಕೆಮ್ಮಾಯಿ ಜಾತ್ರೆ: ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು: ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರವನ್ನು ದೇವಾಲಯದ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು. ಫೆ. 3ರಿಂದ 4ರವರೆಗೆ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ನಡೆಯಲಿದೆ. ದೇವಾಲಯದ ಆಡಳಿತ ಮೊಕ್ತೇಸರರಾದ ಶ್ರೀಪತಿ ಬೈಪಾಡಿತಾಯ, ಶ್ರೀದರ ಬೈಪಾಡಿತ್ತಾಯ, ಸದಾಶಿವ ಹೊಳ್ಳ, ರಾಜ ಭಟ್ ಕೆಮ್ಮಾಯಿ, ರಾಧಾಕೃಷ್ಣ ಹೆಗಡೆ ಬಡಾವು, ಸೋಮಪ್ಪ ಗೌಡ ಬಡಾವು, ಚಂದ್ರಶೇಖರ ಎಸ್. ಮೂಡಯೂರು, ಹೇಮಚಂದ್ರ ಕೆಮ್ಮಾಯಿ, ಶ್ರೀಮತಿ ಕೆಮ್ಮಾಯಿ, ಗೀತಾ ಕೆಮ್ಮಾಯಿ, ಭಜನಾ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೆಮ್ಮಾಯಿ ಜಾತ್ರೆ: ಆಮಂತ್ರಣ ಪತ್ರ ಬಿಡುಗಡೆ Read More »

ಮಹಿಳೆಯರ ಆತ್ಮವಿಶ್ವಾಸ, ಕೌಶಲ್ಯ ಹೆಚ್ಚಿಸಲು ತರಬೇತಿ | ಸಾಂಘಿಕ ನಡೆ ಸಮೃದ್ಧಿಯ ಕಡೆ ತರಬೇತಿಯಲ್ಲಿ ಸುಕನ್ಯಾ

ಪುತ್ತೂರು: ಮಹಿಳೆಯರ ಆತ್ಮವಿಶ್ವಾಸ ಮತ್ತು ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ ವಿಶೇಷ ತರಬೇತಿಗಳನ್ನು ಆಯೋಜಿಸುತ್ತಿದೆ ಎಂದು ತಾ.ಪಂ. ಯೋಜನಾಧಿಕಾರಿ ಸುಕನ್ಯಾ ಹೇಳಿದರು.ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಂಘಿಕ ನಡೆ ಸಮೃದ್ಧಿಯ ಕಡೆ ಮುಖಾಮುಖಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. 1989ರಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು, ಪಂಚಾಯತ್ ರಾಜ್ ಸಂಸ್ಥೆಗಳನ್ನು ಪ್ರತಿನಿಧಿಸುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತಿಗಳ ಪ್ರತಿನಿಧಿಗಳ ಸಾಮರ್ಥ್ಯವನ್ನು

ಮಹಿಳೆಯರ ಆತ್ಮವಿಶ್ವಾಸ, ಕೌಶಲ್ಯ ಹೆಚ್ಚಿಸಲು ತರಬೇತಿ | ಸಾಂಘಿಕ ನಡೆ ಸಮೃದ್ಧಿಯ ಕಡೆ ತರಬೇತಿಯಲ್ಲಿ ಸುಕನ್ಯಾ Read More »

ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳ ಕಡೆಗಣನೆ ಆರೋಪ

ಪರ್ಯಾಯ ಸಾಹಿತ್ಯ ಸಮ್ಮೇಳನ ನಡೆಸಲು ಪ್ರಗತಿಪರ ಸಾಹಿತಿಗಳ ನಿರ್ಧಾರ ಬೆಂಗಳೂರು : ಮುಂದಿನ ಜನವರಿ 6 ರಿಂದ 8 ರವರೆಗೆ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳು ಮತ್ತು ಪ್ರಮುಖ ಅಧಿವೇಶನಗಳಲ್ಲಿ ಮುಸ್ಲಿಂ ಲೇಖಕರು ಮತ್ತು ಮಹಿಳಾ ಲೇಖಕರನ್ನು ನಿರ್ಲಕ್ಷಿಸಿರುವುದನ್ನು ಪ್ರತಿಭಟಿಸಿ ಜನವರಿ 8 ರಂದು ಬೆಂಗಳೂರಿನಲ್ಲಿ ಪರ್ಯಾಯ ಸಾಹಿತ್ಯ ಸಮ್ಮೇಳನ ಆಯೋಜಿಸಲು ಪ್ರಗತಿಪರ ಸಾಹಿತಿಗಳು ನಿರ್ಧರಿಸಿದ್ದಾರೆ.ಮುಸ್ಲಿಂ ಲೇಖಕರನ್ನು ಹೊರಗಿಡುವುದು ಮತ್ತು ಲಿಂಗ ತಾರತಮ್ಯ ಮಾಡುವುದು ಪ್ರಜಾಪ್ರಭುತ್ವ

ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳ ಕಡೆಗಣನೆ ಆರೋಪ Read More »

ಕುಕ್ಕರ್‌ ಸ್ಫೋಟ ಮಾದರಿಯಲ್ಲಿ ಹಾಸನದಲ್ಲಿ ಮಿಕ್ಸಿ ಸ್ಫೋಟ

ಕೊರಿಯರ್‌ನಲ್ಲಿ ಬಂದಿದ್ದ ಮಿಕ್ಸಿಯನ್ನು ಪರಿಶೀಲಿಸುವಾಗ ಬ್ಲಾಸ್ಟ್‌; ಓರ್ವನಿಗೆ ಗಾಯ ಹಾಸನ: ಮಂಗಳೂರಿನ ಕುಕ್ಕರ್​ ಸ್ಫೋಟ ಮಾದರಿಯಲ್ಲೇ ಹಾಸನದಲ್ಲಿ ಕೊರಿಯರ್ ಮೂಲಕ ಬಂದಿದ್ದ ಮಿಕ್ಸರ್​ ನಿಗೂಢವಾಗಿ ಸ್ಫೋಟಗೊಂಡಿರುವ ಘಟನೆ ನಿನ್ನೆ ರಾತ್ರಿ ಕೆ.ಆರ್.ಪುರಂ ಬಡಾವಣೆಯ ಡಿಟಿಡಿಸಿ‌ ಕೊರಿಯರ್ ಶಾಪ್​ನಲ್ಲಿ ನಡೆದಿದೆ. ಕೊರಿಯರ್​​ ಮೂಲಕ ಬಂದಿದ್ದ ಹೊಸ ಮಿಕ್ಸರ್​​ ಟೆಸ್ಟ್​ ಮಾಡುತ್ತಿರುವಾಗ ಸ್ಫೋಟಗೊಂಡಿದೆ. ಕೊರಿಯರ್ ಮಾಲೀಕ ಶಶಿಗೆ ಗಂಭೀರ ಗಾಯಗಳಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ.ಮಂಗಳೂರು ಬ್ಲಾಸ್ಟ್ ಕೇವಲ ರಾಜ್ಯ ಮಾತ್ರವಲ್ಲ ದೇಶದಲ್ಲಿ ಸುದ್ದಿಯಾಗಿದೆ.

ಕುಕ್ಕರ್‌ ಸ್ಫೋಟ ಮಾದರಿಯಲ್ಲಿ ಹಾಸನದಲ್ಲಿ ಮಿಕ್ಸಿ ಸ್ಫೋಟ Read More »

ಇಂದು ಶಬರಿಮಲೆ ಮಂಡಲ ಪೂಜೆ ಮುಕ್ತಾಯ

ಡಿ.30ರಿಂದ ಮಕರ ವಿಳಕ್ಕು ಯಾತ್ರೆ ಶುರು ಶಬರಿಮಲೆ: ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಂಡಲ ಪೂಜೆ ನಡೆಯಲಿದ್ದು, ವಾರ್ಷಿಕ ಸಂಪ್ರದಾಯದಂತೆ ಇನ್ನೆರಡು ದಿನ ದೇಗುಲಕ್ಕೆ ಬಾಗಿಲು ಹಾಕಲಾಗುತ್ತದೆ. ಡಿ. 30ರಂದು ದೇಗುಲದ ಬಾಗಿಲು ಮತ್ತೆ ತೆರೆಯಲಾಗುತ್ತದೆ. ಪಾರ್ಥಸಾರಥಿ ದೇಗುಲದಿಂದ ಚಿನ್ನದ ಆಭರಣಗಳನ್ನು ತರಲಾಗಿದ್ದು, ಅಯ್ಯಪ್ಪ ಸ್ವಾಮಿಗೆ ಇಂದು ಅಲಂಕಾರ ಮಾಡಲಾಗುತ್ತದೆ. ಅಪರಾಹ್ನ 12.30 ಗಂಟೆಯಿಂದ 1 ಗಂಟೆಯ ನಡುವೆ ಮಂಡಲ ಪೂಜೆ ನಡೆಯಲಿದೆ.ಇಂದು ರಾತ್ರಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಬಾಗಿಲು ಹಾಕಲಾಗುತ್ತದೆ. ದೇವಾಲಯದ ಬಾಗಿಲು

ಇಂದು ಶಬರಿಮಲೆ ಮಂಡಲ ಪೂಜೆ ಮುಕ್ತಾಯ Read More »

ನಟ ಸುಶಾಂತ್‌ ಸಿಂಗ್‌ ನಿಗೂಢ ಸಾವಿನ ಪ್ರಕರಣಕ್ಕೆ ತಿರುವು

ಆತ್ಮಹತ್ಯೆಯಲ್ಲ ಎಂದು ಶವ ಪರೀಕ್ಷೆ ಮಾಡಿದ ಸಿಬ್ಬಂದಿ ಹೇಳಿಕೆ ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆಯಿಂದ ಸಂಭವಿಸಿಲ್ಲ, ಅದು ಕೊಲೆ ಎಂದು ಶವ ಪರೀಕ್ಷೆ ಮಾಡಿದ್ದ ಶವಾಗಾರದ ಸಿಬ್ಬಂದಿ ಹೇಳುವುದರೊಂದಿಗೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.ಸುಶಾಂತ್ ಸಿಂಗ್ 2020ರ ಜೂನ್ 14 ರಂದು ಮುಂಬೈಯ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಕೊಲೆ ಮಾಡಲಾಗಿದೆ ಎಂಬ ವಾದಗಳು ಕೇಳಿಬಂದಿದ್ದವು. ಶವ ಪರೀಕ್ಷೆ ವರದಿಯಲ್ಲಿ ಆತ್ಮಹತ್ಯೆ ಎಂದು ಉಲ್ಲೇಖಿಸಲಾಗಿದ್ದರೂ, ಅದನ್ನು ಕೊಲೆ ಎಂದೇ

ನಟ ಸುಶಾಂತ್‌ ಸಿಂಗ್‌ ನಿಗೂಢ ಸಾವಿನ ಪ್ರಕರಣಕ್ಕೆ ತಿರುವು Read More »

error: Content is protected !!
Scroll to Top