ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ | ಮನೆ ಮನೆಗೆ ಆಮಂತ್ರಣ

ಪುತ್ತೂರು: ಪುತ್ತೂರಿನಲ್ಲಿ ನಡೆಯಲಿರುವ ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವದ ಆಮಂತ್ರಣ ಪತ್ರವನ್ನು ಗೌಡ ಸಮುದಾಯದ ಕುಂಬ್ರ ವಲಯದ ಮನೆಮನೆಗೆ ತಲುಪಿಸಲಾಯಿತು. ಸತೀಶ್ ಪಾಂಬಾರು, ಲೊಕೇಶ್ ಚಾಕೋಟೆ, ವೆಂಕಟ್ರಮಣ ಗೌಡ ಕೈಕುಳಿ, ಶ್ರೀಧರ ಗೌಡ ಅಂಗಡಿಹಿತ್ಲು, ಜಯರಾಮ ಗೌಡ ದೊಡ್ಡಮನೆ, ವಿದ್ಯಾಧರ ಪರ್ಲ, ಗಣೇಶ್ ಅಮೆಚೋಡು, ಪುಷ್ಪಾವತಿ ಪಾಲ್ತಾಡಿ ಉಪಸ್ಥಿತರಿದ್ದರು.

ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ | ಮನೆ ಮನೆಗೆ ಆಮಂತ್ರಣ Read More »

ಜ. ೨೨: ಭೈರವೈಕ್ಯ ಡಾ| ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ಜಯಂತ್ಯೋತ್ಸವ | ಆಲಂಕಾರಿನಲ್ಲಿ ವಲಯ ಮಟ್ಟದ ಪೂರ್ವಸಿದ್ಧತಾ ಸಭೆ

ಪುತ್ತೂರು: ಪುತ್ತೂರಿನಲ್ಲಿ ಜ. ೨೨ರಂದು ನಡೆಯಲಿರುವ ಭೈರವೈಕ್ಯ ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ಜಯಂತ್ಯೋತ್ಸವ ಹಿನ್ನೆಲೆಯಲ್ಲಿ ಆಲಂಕಾರಿನಲ್ಲಿ ಸೋಮವಾರ ವಲಯವಾರು ಪೂರ್ವಸಿದ್ಧತಾ ಸಭೆ ನಡೆಯಿತು. ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚು ಜನ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು. ಇದಕ್ಕಾಗಿ ಸಮುದಾಯದ ಪ್ರತಿ ಮನೆಗೂ ಆಮಂತ್ರಣ ಪತ್ರವನ್ನು ತಲುಪಿಸಬೇಕು ಮತ್ತು ಪ್ರತಿಯೊಬ್ಬರೂ ಸಭೆಯಲ್ಲಿ ಭಾಗವಹಿಸಬೇಕು. ಕಾರ್ಯಕ್ರಮದಲ್ಲಿ ಅದ್ದೂರಿ ಮೆರವಣಿಗೆಯನ್ನು ಆಯೋಜಿಸಿದ್ದು, ಇದರಲ್ಲೂ ಎಲ್ಲರೂ ಪಾಲ್ಗೊಳ್ಳಬೇಕು ಎಂದು ತಿಳಿಸಲಾಯಿತು. ಸಭೆಯಲ್ಲಿ ರಾಮಣ್ಣ ದೋಳ, ಚಕ್ರಪಾಣಿ ಬಾಕಿಲ, ರಾಮಣ್ಣ

ಜ. ೨೨: ಭೈರವೈಕ್ಯ ಡಾ| ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ಜಯಂತ್ಯೋತ್ಸವ | ಆಲಂಕಾರಿನಲ್ಲಿ ವಲಯ ಮಟ್ಟದ ಪೂರ್ವಸಿದ್ಧತಾ ಸಭೆ Read More »

ಜ. 22ಕ್ಕೆ ಭೈರವೈಕ್ಯ ಡಾ| ಶ್ರೀ ಬಾಲಗಂಗಾಧರನಾಥ ಶ್ರೀಗಳ ಜಯಂತ್ಯೋತ್ಸವ| ಗೌಡ ಸಮುದಾಯ ಭವನದಲ್ಲಿ ಪೂರ್ವಸಿದ್ಧತಾ ಸಭೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಜ.೨೨ ರಂದು ನಡೆಯಲಿರುವ ಭೈರವೈಕ್ಯ ಡಾ| ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಜಯಂತ್ಯೋತ್ಸವದ ಪೂರ್ವ ಸಿದ್ದತೆ ಹಿನ್ನೆಲೆಯಲ್ಲಿ ಸೋಮವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ತುರ್ತು ಸಭೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಿದ್ಧತೆಗಳ ಬಗ್ಗೆ ಪರಿಶೀಲಿಸಿದರು. ಮುಂದೆ ಆಗಬೇಕಾಗಿರುವ ಸಿದ್ಧತೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಜಂಯತ್ಯೋತ್ಸವ ಸಮಿತಿ ಸಂಚಾಲಕ ದಿನೇಶ್ ಮೆದು, ಒಕ್ಕಲಿಗ

ಜ. 22ಕ್ಕೆ ಭೈರವೈಕ್ಯ ಡಾ| ಶ್ರೀ ಬಾಲಗಂಗಾಧರನಾಥ ಶ್ರೀಗಳ ಜಯಂತ್ಯೋತ್ಸವ| ಗೌಡ ಸಮುದಾಯ ಭವನದಲ್ಲಿ ಪೂರ್ವಸಿದ್ಧತಾ ಸಭೆ Read More »

ರಾಜ್ಯ ಗೃಹ ಸಚಿವರ ವಜಾಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ರೈತ ಸಂಘ

ಪುತ್ತೂರು: ಅಡಕೆ ಬಗ್ಗೆ ಗೊಂದಲಕಾರಿ ಹೇಳಿಕೆ ನೀಡಿದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ತಕ್ಷಣವೇ ಮಂತ್ರಿ ಪದವಿಯಿಂದ ಕೈಬಿಡುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವತಿಯಿಂದ ಪುತ್ತೂರು ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಗೃಹ ಸಚಿವ ಅರಜ ಜ್ಞಾನೇಂದ್ರ ಅವರು ಅಧಿವೇಶನದಲ್ಲಿ ಅಡಕೆ ಬೆಳೆಗೆ ಪ್ರೋತ್ಸಾಹ ನೀಡಬಾರದು. ಅಡಕೆ ಬೆಳೆಯುವುದನ್ನು ನಿಲ್ಲಿಸಬೇಕು ಎಂಬ ಹೇಳಿಕೆ ನೀಡಿ ಅಡಕೆ ಬೆಳಗಾರರಿಗೆ ದೊಡ್ಡ ಅಘಾತ ನೀಡಿದ್ದಾರೆ. ಅವರ

ರಾಜ್ಯ ಗೃಹ ಸಚಿವರ ವಜಾಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ರೈತ ಸಂಘ Read More »

ಗೃಹ ಸಚಿವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಪುತ್ತೂರು: ಅಡಕೆ ಬಗ್ಗೆ ರಾಜ್ಯ ಗೃಹ ಸಚಿವರ ಹೇಳಿಕೆಯನ್ನು ಖಂಡಿಸಿ ಸೋಮವಾರ ಅಮರ್ ಜವಾನ್ ಜ್ಯೋತಿ ಸಮೀಪ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಾಂಗ್ರೆಸ್ ಕಿಸಾನ್ ಘಟಕ ಪ್ರತಿಭಟನೆ ನಡೆಸಿತು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಜಿಲ್ಲೆಯ ಆರ್ಥಿಕ ಅಭಿವೃದ್ಧಿಯಲ್ಲಿ ಅಡಕೆಯ ಪಾತ್ರ ಮಹತ್ವದ್ದು. ಅಡಕೆಗೆ ಭವಿಷ್ಯವಿಲ್ಲ ಎಂದು ಗೃಹ ಸಚಿವರ ನೀಡಿರುವ ಹೇಳಿಕೆಯು ಖಂಡನೀಯವಾಗಿದೆ. ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಡಕೆ ಮಾತ್ರವಲ್ಲ ಯಾವುದಕ್ಕೂ ಭವಿಷ್ಯವಿಲ್ಲ ಎಂದಾಗಿದೆ. ಅಡಕೆಗೆ ಬಂದಿರುವ

ಗೃಹ ಸಚಿವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ Read More »

ಕಟ್ಟತ್ತಾರಿನಲ್ಲಿ ಸಂಪರ್ಕ ರಸ್ತೆಯಿಲ್ಲದೇ ಸಮಸ್ಯೆ | ರಸ್ತೆ ನಿರ್ಮಿಸಲು ರೈತ ಸಂಘ ಆಗ್ರಹ

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಪಳ್ಳತ್ತೂರು – ಬಂಟಕಲ್ಲು- ಬಾರೆಕೊಚ್ಚಿ- ಕಟ್ಟತ್ತಾರು ಕಾಲನಿಗೆ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ರೈತ ಸಂಘ ಹಸಿರು ಸೇನೆ (ವಾಸುದೇವ ಬಣ) ಹಾಗೂ ಸ್ಥಳೀಯ ನಿವಾಸಿಗಳು ಪುತ್ತೂರು ತಹಶೀಲ್ದಾರ್‌ಗೆ ಮನವಿ ನೀಡಿದ್ದಾರೆ. ಈ ಭಾಗದಲ್ಲಿ ಸುಮಾರು ೩೦ ಮನೆಗಳಿಗೆ ಸಂಪರ್ಕ ರಸ್ತೆಯಿಲ್ಲ. ಹಲವು ದಶಕಗಳಿಂದ ಇವರು ವಾಸಿಸುತ್ತಿದ್ದರೂ ಅನಾರೋಗ್ಯದಂತಹ ತುರ್ತು ಸಂದರ್ಭದಲ್ಲಿ ರೋಗಿಯನ್ನು ಹೊತ್ತುಕೊಂಡೇ ಸಾಗಬೇಕಾದ ಸ್ಥಿತಿ ಇದೆ. ಅಗತ್ಯ ಸಾಮಾಗ್ರಿಗಳನ್ನು ಕೊಂಡೊಯ್ಯಲೂ ಸಮಸ್ಯೆ ಇದೆ. ಸುಮಾರು ಅರ್ಧದಷ್ಟು ರಸ್ತೆಯನ್ನು ರೈತ

ಕಟ್ಟತ್ತಾರಿನಲ್ಲಿ ಸಂಪರ್ಕ ರಸ್ತೆಯಿಲ್ಲದೇ ಸಮಸ್ಯೆ | ರಸ್ತೆ ನಿರ್ಮಿಸಲು ರೈತ ಸಂಘ ಆಗ್ರಹ Read More »

ದಲಿತ ಕುಟುಂಬಕ್ಕೆ ದಾರಿ ನೀಡದೆ ದೌರ್ಜನ್ಯ ಆರೋಪ | ಪುತ್ತೂರಿನಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಧರಣಿ

ಪುತ್ತೂರು: ದಲಿತ ಕುಟುಂಬಕ್ಕೆ ತೆರಳುವ ರಸ್ತೆಯನ್ನು ಬಂದ್ ಮಾಡಿದ್ದು, ತಕ್ಷಣವೇ ದಾರಿ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪುತ್ತೂರು ತಾಲೂಕು ಆಡಳಿತ ಸೌಧ ಮುಂಬಾಗದಲ್ಲಿ ಧರಣಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಅಂಬೇಡ್ಕರ್ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪಿ. ಸುಂದರ್ ಪಾಟಾಜೆ, ಕೆಮ್ಮಿಂಜೆ ಗ್ರಾಮದ ಕುದ್ಕೋಳಿ ಎಂಬಲ್ಲಿ ನಾಲ್ಕು ದಲಿತ ಕುಟುಂಬಗಳ ಮನೆಗೆ ತೆರಳುವ ರಸ್ತೆಯನ್ನು ಖಾಸಗಿ ವ್ಯಕ್ತಿಯೋರ್ವರು ಬಂದ್ ಮಾಡಿದ್ದಾರೆ. ಅವರು ಈ ಪ್ರದೇಶದಲ್ಲಿನ ೪ ದಲಿತ

ದಲಿತ ಕುಟುಂಬಕ್ಕೆ ದಾರಿ ನೀಡದೆ ದೌರ್ಜನ್ಯ ಆರೋಪ | ಪುತ್ತೂರಿನಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಧರಣಿ Read More »

ಮಕ್ಕಳಿಗೆ ಸಂಸ್ಕಾರ ಕಲಿಸಿದಾಗ ಧರ್ಮ ಜಾಗೃತಿ | ಅಜಲಾಡಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ

ಪುತ್ತೂರು: ಋಷಿ ಮುನಿಗಳ ಸಾವಿರಾರು ವರ್ಷಗಳ ತಪಸ್ಸಿನ ಫಲವೇ ಹಿಂದೂ ಧರ್ಮ. ಇಂತಹ ಧರ್ಮವನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯಬೇಕಾದರೆ, ಮಕ್ಕಳಲ್ಲಿ ಸಂಸ್ಕಾರವನ್ನು ಕಲಿಸಬೇಕು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಹೇಳಿದರು.ಮುಂಡೂರು ಉದಯಗಿರಿ ಅಜಲಾಡಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಅಂಗವಾಗಿ ರವಿವಾರ ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ನಮ್ಮ ಹಿರಿಯರಿಗೆ ಗೌರವ ನೀಡುವಂತಹ ಸಂಸ್ಕಾರವನ್ನು ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಆಗಬೇಕಿದೆ. ದೈವಸ್ಥಾನ, ದೇವಸ್ಥಾನ, ಮಂದಿರಗಳಲ್ಲಿ ಇಂತಹ ಸಂಸ್ಕಾರವನ್ನು

ಮಕ್ಕಳಿಗೆ ಸಂಸ್ಕಾರ ಕಲಿಸಿದಾಗ ಧರ್ಮ ಜಾಗೃತಿ | ಅಜಲಾಡಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ Read More »

ಬೆಟ್ಟಂಪಾಡಿಯಲ್ಲಿ ಬೂತ್ ವಿಜಯ ಅಭಿಯಾನ

ಪುತ್ತೂರು: ಬೆಟ್ಟಂಪಾಡಿ ಗ್ರಾಮದಲ್ಲಿ ಬೂತ್ ವಿಜಯ ಅಭಿಯಾನದ ಅಂಗವಾಗಿ ಶಂಕರ್ ಅವರ ಮನೆಯಲ್ಲಿ ಸೋಮವಾರ ಬಿಜೆಪಿ ಧ್ವಜವನ್ನು ಹಸ್ತಾಂತರಿಸಿ, ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಜಗನ್ನಾಥ ರೈ ಕೊಮ್ಮಂಡ, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಬೆಟ್ಟಂಪಾಡಿಯಲ್ಲಿ ಬೂತ್ ವಿಜಯ ಅಭಿಯಾನ Read More »

ಅರಸು ಕಂಬಳದಲ್ಲಿ ಭವತಿ ಭಿಕ್ಷಾಂದೇಹಿ

ಪುತ್ತೂರು: ಟರ್ಪಾಲ್ ಹೊದಿಕೆಯಲ್ಲಿ ವಾಸವಾಗಿರುವ ಕುಟುಂಬವೊಂದಕ್ಕೆ ನೆರವಾಗುವ ದೃಷ್ಟಿಯಿಂದ ಪುತ್ತೂರು ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಹಾಗೂ ನೊಂದವರ ಬಾಳಿಗೆ ಬೆಳಕು, ತುಳುನಾಡ ಪೊರ್ಲು ಗೊಂಬೆ ಬಳಗ ಕುಪ್ಪೆಪದವು ಆಶ್ರಯದಲ್ಲಿ ಮೂಲ್ಕಿಯ ಅರಸು ಕಂಬಳದಲ್ಲಿ ಭವತಿ ಭಿಕ್ಷಾಂದೇಹಿ ಕಾರ್ಯಕ್ರಮ ನಡೆಸಲಾಯಿತು. ನಾವೂರು ಗ್ರಾಮದ ಮೈಂದಳ ಎಂಬಲ್ಲಿ ಕುಟುಂಬವೊಂದು ಟರ್ಪಾಲ್ ಹೊದಿಕೆಯಲ್ಲಿ ಜೀವನ ನಿರ್ವಹಿಸುತ್ತಿದೆ. ಇಬ್ಬರು ಪುಟ್ಟ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ತಮ್ಮ ಜೀವನವನ್ನು ನಿರ್ವಹಿಸಿಕೊಂಡು ಹೋಗಬೇಕಾದ ಜವಾಬ್ದಾರಿ ರೇವತಿ ಪೂಜಾರಿ ಅವರದ್ದು. ಒಂದೆಡೆ ಕಲಿಕೆಯ ತುಡಿತ, ಇನ್ನೊಂದೆಡೆ ಕುಳಿತುಕೊಳ್ಳಲು

ಅರಸು ಕಂಬಳದಲ್ಲಿ ಭವತಿ ಭಿಕ್ಷಾಂದೇಹಿ Read More »

error: Content is protected !!
Scroll to Top