ತೋಟಕ್ಕೆ ನುಗ್ಗಿದ ಕಾಡಾನೆ : ಕೃಷಿ ಹಾನಿ !

ಬೆಳ್ತಂಗಡಿ: ಒಂಟಿಸಲಗವೊಂದು ಕೃಷಿ ಭೂಮಿಗೆ ನುಗ್ಗಿ ಕೃಷಿಗೆ ಹಾನಿಯುಂಟುಮಾಡಿದ ಘಟನೆ ಧರ್ಮಸ್ಥಳ ಗ್ರಾಮದ ಮುಳಿಕಾರಿನಲ್ಲಿ ನಡೆದಿದೆ. ಬುಧವಾರ ಬೆಳಗ್ಗಿನ ಜಾವ ಮುಳಿಕಾರು ನಿವಾಸಿ ಡೀಕಯ್ಯ ಮಲೆಕುಡಿಯ ಎಂಬವರ ತೋಟಕ್ಕೆ ನುಗ್ಗಿ ತೆಂಗಿನ ಮರವನ್ನು ನೆಲಕ್ಕುರುಳಿಸಿ ಪುಡಿಗೈದ ಕಾಡಾನೆ, ಅಡಿಕೆ, ಬಾಳೆ ಗಿಡಗಳಿಗೂ ಹಾನಿಯುಂಟುಮಾಡಿದೆ. ಕಳೆದ ಕೆಲದಿನಗಳಿಂದ ಕಾಡಾನೆಯೊಂದು ಇದೇ ಪರಿಸರದ ಅರಣ್ಯದಲ್ಲಿ ತಿರುಗಾಟ ನಡೆಸುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮುಳಿಕಾರಿನ ಅರಣ್ಯದಲ್ಲಿಯೇ ತಿರುಗಾಡುತ್ತಿರುವ ಆನೆ ರಾತ್ರಿ ಮತ್ತೆ ಕೃಷಿ ಭೂಮಿಗೆ ಹಾನಿ ಮಾಡುವ ಅಪಾಯವಿದ್ದು ಸ್ಥಳೀಯರಲ್ಲಿ […]

ತೋಟಕ್ಕೆ ನುಗ್ಗಿದ ಕಾಡಾನೆ : ಕೃಷಿ ಹಾನಿ ! Read More »

ಮಾತೃವಂದನಾ ಕಾರ್ಯಕ್ರಮದ ಅಂಗವಾಗಿ ನಡೆಯಿತು ಸಾಮೂಹಿಕ ಸೀಮಂತ | 40 ಮಂದಿ ಗರ್ಭಿಣಿಯರು ಭಾಗಿ

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮಾತೃವಂದನಾ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಸೀಮಂತ ಕಾರ್ಯಕ್ರಮ ನಡೆಯಿತು. ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಆರೋಗ್ಯ ಮತ್ತು  ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಘಟಕ ಹಾಗೂ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 40 ಮಂದಿ ಗರ್ಭಿಣಿಯರಿಗೆ ಸೀಮಂತ ನಡೆಯಿತು. ಪುತ್ತೂರು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಆಶಾ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಜಗದೀಶ್‍, ಡಾ.ಸ್ಮಿತಾರಾಣಿ, ಡಾ.ಅರ್ಚನಾ ಮಾಹಿತಿ ನೀಡಿದರು. ಐಸಿಟಿಸಿ

ಮಾತೃವಂದನಾ ಕಾರ್ಯಕ್ರಮದ ಅಂಗವಾಗಿ ನಡೆಯಿತು ಸಾಮೂಹಿಕ ಸೀಮಂತ | 40 ಮಂದಿ ಗರ್ಭಿಣಿಯರು ಭಾಗಿ Read More »

ಜ.20: ಸೂರ್ಯಗಾಯತ್ರಿ ಸಂಗೀತ ಕಾರ್ಯಕ್ರಮ | ಪ್ರಥಮ ಬಾರಿಗೆ ಪುತ್ತೂರಿನಲ್ಲಿ

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ, ಖ್ಯಾತ ಗಾಯಕಿ ಸೂರ್ಯಗಾಯತ್ರಿ ಹಾಗೂ ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜ. 20 ರಂದು ನಡೆಯಲಿದೆ. ಸಂಸ್ಥೆಯ ದಶಾಂಬಿಕೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮ ಸಂಜೆ 5.30ರಿಂದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಶಂಕರ ಸಭಾಭವನದಲ್ಲಿ ಜರುಗಲಿದೆ. ಖ್ಯಾತ ಗಾಯಕಿಯಾಗಿರುವ ಸೂರ್ಯಗಾಯತ್ರಿ ಪುತ್ತೂರಿಗೆ ಪ್ರಥಮ ಬಾರಿಗೆ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಜ.20: ಸೂರ್ಯಗಾಯತ್ರಿ ಸಂಗೀತ ಕಾರ್ಯಕ್ರಮ | ಪ್ರಥಮ ಬಾರಿಗೆ ಪುತ್ತೂರಿನಲ್ಲಿ Read More »

ಅಂದ್ರಟ್ಟ ಸೇತುವೆಗೆ ಎರಡನೇ ಬಾರಿಗೆ ಶಿಲಾನ್ಯಾಸ ನೆರವೇರಿಸಿರುವುದು ಎಷ್ಟು ಸರಿ: ಶಾಸಕರಿಗೆ ಶಕ್ತಿ ಕೇಂದ್ರ ಅಧ್ಯಕ್ಷರ ಪ್ರಶ್ನೆ | ಶಿಷ್ಟಾಚಾರ ಉಲ್ಲಂಘನೆಯ ಹಿಂದಿನ ಕಾರಣ ತಿಳಿಸಲು ಪತ್ರಿಕಾಗೋಷ್ಠಿಯಲ್ಲಿ ಆಗ್ರಹ

ಪುತ್ತೂರು:  ಚಿಕ್ಕಮುಡ್ನೂರು, ಶಾಂತಿಗೋಡು ಮತ್ತು ನರಿಮೊಗರು ಗ್ರಾಮದ ಅಂದ್ರಟ್ಟದ ಸಂಪರ್ಕ ಸೇತುವೆಗೆ 2023ರ ಮಾರ್ಚ್ 19ರಂದು ಆಗಿನ ಶಾಸಕ ಸಂಜೀವ ಮಠಂದೂರು ಅವರು ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ ಅದೇ ಕಾಮಗಾರಿಗೆ ಈಗಿನ ಶಾಸಕ ಅಶೋಕ್ ಕುಮಾರ್ ರೈ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಅದೂ ಶಿಷ್ಟಾಚಾರವನ್ನು ಉಲ್ಲಂಘಿಸಿ. ಆದ್ದರಿಂದ ಈ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವಂತೆ ಶಾಂತಿಗೋಡು ಶಕ್ತಿ ಕೇಂದ್ರದ ಅಧ್ಯಕ್ಷ ಶ್ಯಾಂ ಭಟ್ ಆಗ್ರಹಿಸಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ

ಅಂದ್ರಟ್ಟ ಸೇತುವೆಗೆ ಎರಡನೇ ಬಾರಿಗೆ ಶಿಲಾನ್ಯಾಸ ನೆರವೇರಿಸಿರುವುದು ಎಷ್ಟು ಸರಿ: ಶಾಸಕರಿಗೆ ಶಕ್ತಿ ಕೇಂದ್ರ ಅಧ್ಯಕ್ಷರ ಪ್ರಶ್ನೆ | ಶಿಷ್ಟಾಚಾರ ಉಲ್ಲಂಘನೆಯ ಹಿಂದಿನ ಕಾರಣ ತಿಳಿಸಲು ಪತ್ರಿಕಾಗೋಷ್ಠಿಯಲ್ಲಿ ಆಗ್ರಹ Read More »

ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ ಲಾಲ್ ಬಾಗ್!

ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಜ. 18ರಿಂದ 28ರವರೆಗೆ ಬೆಂಗಳೂರಿನ ಲಾಲ್‍ ಭಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ‘ವಿಶ್ವಗುರು ಬಸವಣ್ಣ’ ಅವರ ಹೂವಿನ ಪ್ರತಿಕೃತಿ ಕಣ್ಮನ ಸೆಳೆಯಲಿದೆ. ವಚನ ಸಾಹಿತ್ಯವನ್ನು ಪುಷ್ಪಗಳಲ್ಲಿ ಅರಳಿಸಲು ತೋಟಗಾರಿಕೆ ಇಲಾಖೆ ಸಿದ್ದತೆ ನಡೆಸುತ್ತಿದೆ ಎಂದು ಲಾಲ್ಬಾಗ್ನ ಜಂಟಿ ನಿರ್ದೇಶಕ ಎಂ. ಜಗದೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು ವೆಚ್ಚ 2.75 ಕೋಟಿ ರೂ. ಆಗುತ್ತಿದ್ದು, ಪುಷ್ಪ ಪ್ರದರ್ಶನದ ವೆಚ್ಚ, ಪ್ರವೇಶ ಶುಲ್ಕವನ್ನು ಇನ್ನೂ

ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ ಲಾಲ್ ಬಾಗ್! Read More »

ಸುಳ್ಯ ಸಹಕಾರಿ ಬ್ಯಾಂಕ್‍ ಅಧ್ಯಕ್ಷರಾಗಿ ವಿಕ್ರಂ ಎ.ವಿ.ಅಡ್ಪಂಗಾಯ, ಉಪಾಧ್ಯಕ್ಷರಾಗಿ ಚಂದ್ರಶೇಖರ ಆಯ್ಕೆ

ಸುಳ್ಯ: ಸುಳ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿ ವಿಕ್ರಂ ಎ.ವಿ.ಅಡ್ಪಂಗಾಯ, ಉಪಾಧ್ಯಕ್ಷರಾಗಿ ನ್ಯಾಯವಾದಿ ಚಂದ್ರಶೇಖರ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಚುನಾವಣೆಯಲ್ಲಿ ಬ್ಯಾಂಕ್‍ ನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ನಿರ್ದೇಶಕರು, ಚುನಾವಣಾ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಸುಳ್ಯ ಸಹಕಾರಿ ಬ್ಯಾಂಕ್‍ ಅಧ್ಯಕ್ಷರಾಗಿ ವಿಕ್ರಂ ಎ.ವಿ.ಅಡ್ಪಂಗಾಯ, ಉಪಾಧ್ಯಕ್ಷರಾಗಿ ಚಂದ್ರಶೇಖರ ಆಯ್ಕೆ Read More »

ಸುಚನಾ ಸೇಠ್ ಪೊಲೀಸ್ ಕಸ್ಟಡಿಗೆ! | ಮಗುವಿನ ಪೋಸ್ಟ್ ಮಾರ್ಟಂ ವರದಿಯ ಮಾಹಿತಿ ನೀಡಿರುವ ವೈದ್ಯರು

ಸ್ಟಾರ್ಟ್ ಅಪ್ ಕಂಪೆನಿಯ ಮಹಿಳಾ ಸಿಇಒ ಸುಚನಾ ಸೇಠ್ ತನ್ನ ನಾಲ್ಕು ವರ್ಷದ ಮುದ್ದಾದ ಮಗು ಚಿನ್ಮಯ್ ನನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನೊಂದೆಡೆ ಮಗುವಿನ ಮರಣೋತ್ತರ ಪರೀಕ್ಷೆ ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆಸಿದ್ದು, ಬೆಂಗಳೂರಿಗೆ ಬುಧವಾರ ಕಳುಹಿಸಲಾಗುತ್ತಿದೆ. ಗೋವಾದ ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ಮಗುವನ್ನು ಕೊಂದು ಸೂಟ್ ಕೇಸ್ ನಲ್ಲಿ ಹಾಕಿ ಬೆಂಗಳೂರಿಗೆ ಟ್ಯಾಕ್ಸಿಯಲ್ಲಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದ ಸುಚನಾ ಸೇಠ್ ಳನ್ನು ನಿನ್ನೆ ಚಿತ್ರದುರ್ಗದ ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದರು.

ಸುಚನಾ ಸೇಠ್ ಪೊಲೀಸ್ ಕಸ್ಟಡಿಗೆ! | ಮಗುವಿನ ಪೋಸ್ಟ್ ಮಾರ್ಟಂ ವರದಿಯ ಮಾಹಿತಿ ನೀಡಿರುವ ವೈದ್ಯರು Read More »

ಬಳ್ಪ ‘ಸಂಸದರ ಆದರ್ಶ ಗ್ರಾಮ’ ಕಾರ್ಯಕ್ರಮಕ್ಕೆ ಚಾಲನೆ

ಬಳ್ಪ: ಬಳ್ಪ-ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಹಾಗೂ ಗ್ರಾಮ ಉತ್ಸವ ಸಮಿತಿ ವತಿಯಿಂದ ಸಂಸದರ ಆದರ್ಶ ಗ್ರಾಮದ ಗ್ರಾಮೋತ್ಸವ-2024 ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ನೀಡಲಾಯಿತು. ಸಂಸದ ನಳಿನ ಕುಮಾರ್ ಕಟೀಲ್ ಅವರು ಅಡಕೆ ಟ್ರಾಲಿಗೆ ಚಾಲನೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಆಶಯವಾಗಿ ಬಳ್ಪ ಗ್ರಾಮವನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಅಭಿವೃದ್ಧಿಪಡಿಸಿದ್ದು, ರಾಜ್ಯದಲ್ಲಿ ಅತೀ ಹೆಚ್ಚುನ ಅನುದಾನ ಬಳಕೆಯ ಗ್ರಾಮವಾಗಿ ಬಳ್ಪ ಗ್ರಾಮ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾರ್ಯಕ್ರಮದಲ್ಲಿ ಬಾಲಕೃಷ್ಣ

ಬಳ್ಪ ‘ಸಂಸದರ ಆದರ್ಶ ಗ್ರಾಮ’ ಕಾರ್ಯಕ್ರಮಕ್ಕೆ ಚಾಲನೆ Read More »

ಜ. 12ರಂದು ವಿವೇಕಾನಂದ ಜಯಂತಿ ಆಚರಣೆ, ಬೊಂಬೆಯಾಟ | ಜ. 13ರಿಂದ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಪ್ತಾಹ ಸರಣಿ ವಿಚಾರ ಸಂಕಿರಣ

ಪುತ್ತೂರು: ನೆಹರುನಗರ ವಿವೇಕಾನಂದ ಕಾಲೇಜಿನ ಆವರಣದ ವಿವೇಕಾನಂದ ಬಯಲು ಮಂದಿರದಲ್ಲಿ ಜನವರಿ 12ರಂದು ವಿವೇಕಾನಂದ ಜಯಂತಿ ನಡೆಯಲಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ಶ್ರೀ ರಾಮ ಪ್ರಾಣ ಪ್ರತಿಷ್ಠಾ ಸಪ್ತಾಹ ವಿಚಾರ ಸಂಕಿರಣ ಜ. 13ರಿಂದ 22ರವರೆಗೆ ನಡೆಯಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ತಿಳಿಸಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬ ಪರಿಕಲ್ಪನೆಯಲ್ಲಿ ವಿವೇಕಾನಂದ ಜಯಂತಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು

ಜ. 12ರಂದು ವಿವೇಕಾನಂದ ಜಯಂತಿ ಆಚರಣೆ, ಬೊಂಬೆಯಾಟ | ಜ. 13ರಿಂದ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಪ್ತಾಹ ಸರಣಿ ವಿಚಾರ ಸಂಕಿರಣ Read More »

ಅಕ್ರಮ ಮರಳು ಸಾಗಾಟ: ಆರೋಪಿ ಬಂಧನ!

ವಿಟ್ಲ : ಅಕ್ರಮ ಮರಳು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ನರಿಂಗಾನ ಗ್ರಾಮದ ಕೆದಂಬಾಡಿ ಜಂಕ್ಷನ್ ನಲ್ಲಿ ಬಂಧಿಸಿದ್ದಾರೆ. ಬಂಟ್ವಾಳ ನರಿಂಗಾನ ನಿವಾಸಿ, ಸಿದ್ದೀಕ್ ಕೆ.ಎಂ. ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಯಾವುದೇ ದಾಖಲೆ ಪತ್ರ ಇಲ್ಲದಿದ್ದುದರಿಂದ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಜ.8 ರಂದು ರಾತ್ರಿ ವಿಟ್ಲ ಠಾಣಾ ಎ.ಎಸ್.ಐ ಜಯರಾಮ ಹಾಗೂ ಸಿಬ್ಬಂದಿಗಳಾದ ಪುನೀತ್, ಹೇಮರಾಜ್, ಅಶೋಕ್ ರವರು ಬಂಟ್ವಾಳ ತಾಲೂಕು

ಅಕ್ರಮ ಮರಳು ಸಾಗಾಟ: ಆರೋಪಿ ಬಂಧನ! Read More »

error: Content is protected !!
Scroll to Top