ಕಟ್ಟೆ ಇಲ್ಲದ ಬಾವಿಗೆ ಬಿದ್ದು ಬಾಲಕ ಮೃತ್ಯು ! | ಪಕ್ಕದ ಮನೆಗೆ ಆಡಲು ಹೊದಾಗ ನಡೆಯಿತು ಘಟನೆ

ಬೆಳ್ತಂಗಡಿ: ಪಕ್ಕದ ಮನೆಗೆ ಹೋದ ಬಾಲಕ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿಯ ಪಣಕಜೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಪಣಕಜೆ ಮೊಹಮ್ಮದ್ ಹನೀಫ್ ಎಂಬವರ ಪುತ್ರ ಮಹಮ್ಮದ್ ಅನಾಸ್‍ (7) ಮೃತಪಟ್ಟ ಬಾಲಕ. ಎರಡನೇ ತರಗತಿ ವಿದ್ಯಾರ್ಥಿಯಾಗಿರುವ ಅನಾಸ್ ಇಂದು ಪಕ್ಕದ ಮನೆಗೆ ಆಟವಾಡಲು ತೆರಳಿದ್ದ, ಅಲ್ಲಿರುವ ಕಟ್ಟೆ ಇಲ್ಲದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ. ಮನೆಯವರು ತಕ್ಷಣ ಮಗುವನ್ನು ಬಾವಿಯಿಂದ ಮೇಲೆತ್ತಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದಾಗಲೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. […]

ಕಟ್ಟೆ ಇಲ್ಲದ ಬಾವಿಗೆ ಬಿದ್ದು ಬಾಲಕ ಮೃತ್ಯು ! | ಪಕ್ಕದ ಮನೆಗೆ ಆಡಲು ಹೊದಾಗ ನಡೆಯಿತು ಘಟನೆ Read More »

ಜ.22 : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ

ಪುತ್ತೂರು: ಜ.22 ರಂದು ಆಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಅಂಗವಾಗಿ ಪುತ್ತೂರು ರಾಮಕ್ಷತ್ರೀಯ ಸಮಾಜ ಬಾಂಧವರಿಂದ ಪುತ್ತೂರು ಕೆಮ್ಮಿಂಜೆಯಲ್ಲಿರುವ ಶ್ರೀರಾಮ ಭಜನಾ ಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಈ ಕುರಿತು ಪೂರ್ವಭಾವಿ ಸಭೆ ಸೋಮವಾರ ಕೆಮ್ಮಿಂಜೆ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ಶ್ರೀ ರಾಮರಕ್ಷಾಸ್ತ್ರೋತ್ರ ವಿಷ್ಣು ಸಹಸ್ರನಾಮ, 11 ಗಂಟೆಯಿಂದ ಭಜನೆ ಭಜನೆ, ಮಧ್ಯಾಹ್ನ ಮಹಾಪೂಜೆ, ಬಳಿಕ ಅನ್ನಸಂತರ್ಪಣೆ ನಡೆಸುವ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಸುರೇಶ್ ಕೆಮ್ಮಿಂಜೆ,

ಜ.22 : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ Read More »

ರಾಮನ ಪ್ರತಿಷ್ಠೆಯಂದು ಹಳ್ಳಿ ಹಳ್ಳಿಗಳಲ್ಲಿ ಸಂಭ್ರಮ ಪಡಬೇಕು | ಕಥನ ಶ್ರೀರಾಮ ಕಥಾವೈಭವ ಕಾರ್ಯಕ್ರಮ ಉದ್ಘಾಟಿಸಿ ಡಾ.ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ರಾಮ ಪ್ರತಿಷ್ಠೆಯಂದು ಹಳ್ಳಿ ಹಳ್ಳಿಗಳಲ್ಲಿ ಸಂಭ್ರಮ ಪಡಬೇಕು. ರಾಮ ಪ್ರತಿಷ್ಠೆಯಿಂದ ಮನುಷ್ಯನ ಜತೆ ಜೀವ ಸಂಕುಲಕ್ಕೂ ಒಳಿತಾಗಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಅವರು ತೆಂಕಿಲದಲ್ಲಿ ಶ್ರೀರಾಮ ಕಥಾವೈಭವ ಸಾಂಸ್ಕೃತಿಕ ಸಮಿತಿ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವೈಭವದ ಅಯೋಧ್ಯೆಯ ಸಮಗ್ರ ಕಥನ ಶ್ರೀರಾಮ ಕಥಾವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು ಎಂ.ಆರ್. ಜಿ. ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ

ರಾಮನ ಪ್ರತಿಷ್ಠೆಯಂದು ಹಳ್ಳಿ ಹಳ್ಳಿಗಳಲ್ಲಿ ಸಂಭ್ರಮ ಪಡಬೇಕು | ಕಥನ ಶ್ರೀರಾಮ ಕಥಾವೈಭವ ಕಾರ್ಯಕ್ರಮ ಉದ್ಘಾಟಿಸಿ ಡಾ.ಕಲ್ಲಡ್ಕ ಪ್ರಭಾಕರ ಭಟ್ Read More »

ಬಸ್ಸಿನಿಂದ ಬಿದ್ದು ಮಹಿಳೆ ಮೃತ್ಯು !

ಸುರತ್ಕಲ್: ಬಸ್ ಚಾಲಕ ಬ್ರೇಕ್‍ ಹಾಕಿದ ಪರಿಣಾಮ ಬಸ್ಸಿನಿಂದ ಮಹಿಳೆ ಬಿದ್ದು ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಜೋಕಟ್ಟೆ ಕ್ರಾಸ್ ಬಳಿ ನಡೆದಿದೆ. ಈರಮ್ಮ (65) ಬಸ್ಸಿನಿಂದ ಬಿದ್ದು ಮೃತಪಟ್ಟ ಮಹಿಳೆ ಮಂಗಳೂರಿನಿಂದ ಖಾಸಗಿ ಬಸ್ಸಿನಲ್ಲಿ ಮುಂದಿನ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಸ್ಸಿನ ಚಾಲಕ ದಿಢೀರ್ ಬ್ರೇಕ್ ಹಾಕಿದ್ದಾನೆ. ಪರಿಣಾಮ ಬಸ್ಸಿನಿಂದ ಬಿದ್ದ ಮಹಿಳೆಯ ಮೇಲೆಯೇ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟರೆನ್ನಲಾಗಿದೆ. ಈ ಕುರಿತು ಮಂಗಳೂರು ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ಸಿನಿಂದ ಬಿದ್ದು ಮಹಿಳೆ ಮೃತ್ಯು ! Read More »

ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ 27ನೇ ವಾರ್ಷಿಕೋತ್ಸವ | ಅಶ್ವತ್ಥ ಮಹೋತ್ಸವ

ಪುತ್ತೂರು: ಕೆಮ್ಮಾಯಿ ಶ್ರೀ ವಿಷ್ಣು ಯವಕ ಮಂಡಲದ 27ನೇ ವರ್ಷದ ವಾರ್ಷಿಕೋತ್ಸವ, ಅಶ್ವತ್ಥ ಮಹೋತ್ಸವ ಹಾಗೂ ಶನೈಶ್ಚರ ಗ್ರಹವೃತ ಕಲ್ಪೋಕ್ತ ಪೂಜೆ ಸೋಮವಾರ ಬೆಳಿಗ್ಗೆಯಿಂದ ನಡೆಯುತ್ತಿದೆ. ವೈದಿಕರು ವೈದಿಕ ಕಾರ್ಯಕ್ರಮಗಳೊಂದಿಗೆ ಪೂಜಾ ವಿವಿಧಾನಗಳನ್ನು ನೆರವೇರಿಸಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ಮಂಡಳಿಗಳಿಂದ ಕುಣಿತ ಭಜನಾ ಕಾರ್ಯಕ್ರಮ ನೆರೆದಿದ್ದವರ ಕಣ್ಮನ ಸೆಳೆದವು.

ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ 27ನೇ ವಾರ್ಷಿಕೋತ್ಸವ | ಅಶ್ವತ್ಥ ಮಹೋತ್ಸವ Read More »

ಕ್ಯಾನ್ಸರ್ ಬಗ್ಗೆ ಭಯ ಬೇಡ : ಡಾ.ವೆಂಕಟ್ರಮಣ ಕಿಣಿ | ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ

ಪುತ್ತೂರು: ಮಂಗಳೂರು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಹಭಾಗಿತ್ವದಲ್ಲಿ ಕಾವು ನವೋದಯ ಒಕ್ಕೂಟದ ವತಿಯಿಂದ ಮಂಗಳೂರು ಎಂಐಒ ಆಸ್ಪತ್ರೆಯವರಿಂದ ಕ್ಯಾನ್ಸರ್ ಬಗ್ಗೆ ಜಾಗೃತಿ ಕಾರ್ಯಕ್ರಮ ಕಾವು ಸೊಸೈಟಿ ಸಭಾಂಗಣದಲ್ಲಿ ನಡೆಯಿತು. ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಚ್ಚುತ ಮೂಡತ್ತಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುಂದೆ ಬರಬಹುದಾದ ಅನಾರೋಗ್ಯದ ಬಗ್ಗೆ ಅರಿವು-ತಿಳುವಳಿಕೆ ಇರಬೇಕಾದದ್ದು ಅತೀ ಅಗತ್ಯ. ಅದಕ್ಕಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು

ಕ್ಯಾನ್ಸರ್ ಬಗ್ಗೆ ಭಯ ಬೇಡ : ಡಾ.ವೆಂಕಟ್ರಮಣ ಕಿಣಿ | ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ Read More »

ಪುಷ್ಪಾವತಿ ಬಿ.ಎಂ. ಡಿಸ್ಕಸ್ ಎಸೆತದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ನಡೆದ 42ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮದ ಕೇಕುಡೆ ನಿವಾಸಿ ಪುಷ್ಪಾವತಿ ಬಿ.ಎಂ. ಡಿಸ್ಕಸ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಫೆ.2 ರಿಂದ 4 ರವರೆಗೆ ತಮಿಳುನಾಡಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಹಿರಿಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಪುಷ್ಪಾವತಿ ಅವರು ಆನಂದ ಪೂಜಾರಿ ಅವರ ಪತ್ನಿಯಾಗಿದ್ದಾರೆ. ಅವರ ಪುತ್ರ ಹರ್ಷಿತ್ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ

ಪುಷ್ಪಾವತಿ ಬಿ.ಎಂ. ಡಿಸ್ಕಸ್ ಎಸೆತದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ Read More »

ಭಾರತದಲ್ಲಿ ಏಕೆ ಜಾತಿಗಣತಿ ಅಪಾಯಕಾರಿ – ಅಶ್ವಿನ್ ಎಲ್. ಶೆಟ್ಟಿ

ಭಾರತವು ಪ್ರಾಚೀನ ನಾಗರಿಕತೆಯ ತೊಟ್ಟಿಲುಗಳಲ್ಲಿ ಒಂದು ಎಂದೆಣಿಸಲ್ಪಟ್ಟಿರುವ ರಾಷ್ಟ್ರ. ಸನಾತನ ಸಂಸ್ಕೃತಿಯ ತಳಹದಿಯ ಮೇಲೆ ನೆಲೆ ನಿಂತ ಭಾರತ ಮುಂದಿನ ದಿನಗಳಲ್ಲಿ ಪ್ರಪಂಚದ  ಬೇರೆ ಬೇರೆ ಖಂಡಗಳಿಂದ ಬಂದ ಜನರಿಗೆ ಆಶ್ರಯವನ್ನು ನೀಡಿ ವಿವಿಧ ಧರ್ಮದ ಬೀಡಾಗಿದೆ. ಭಾರತವು ಇಂದು ಪ್ರತಿಯೊಂದು ವಿಷಯದಲ್ಲೂ ವಿವಿಧತೆಯಲ್ಲಿ ಏಕತೆಯನ್ನು ತೋರುವ ರಾಷ್ಟ್ರವಾಗಿದೆ. ನಮ್ಮ ದೇಶದಲ್ಲಿ ಇಂದು ಆಡಳಿತದ ಅನುಕೂಲಕ್ಕೋಸ್ಕರ 28 ರಾಜ್ಯಗಳು ಹಾಗೂ  8 ಕೇಂದ್ರಾಡಳಿತ ಪ್ರದೇಶಗಳನ್ನು ರೂಪಿಸಲಾಗಿದೆ. ಅದರಲ್ಲಿ ಬಿಹಾರವು ಭಾರತದ ಅತ್ಯಂತ ಹಿಂದುಳಿದ ರಾಜ್ಯವಾಗಿದ್ದು, ಶಿಕ್ಷಣ, ಉದ್ಯೋಗ,

ಭಾರತದಲ್ಲಿ ಏಕೆ ಜಾತಿಗಣತಿ ಅಪಾಯಕಾರಿ – ಅಶ್ವಿನ್ ಎಲ್. ಶೆಟ್ಟಿ Read More »

ಕಬಕ ವಿದ್ಯಾಪುರ ಅಂಗನವಾಡಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಪುತ್ತೂರು: ಸರಕಾರದಿಂದ ಬರುವ ಅನುದಾನವನ್ನು ಸಮಪ್ರಮಾಣದಲ್ಲಿ ಎಲ್ಲಾ ಗ್ರಾಮಗಳಿಗೂ ಹಂಚಿಕೆ ಮಾಡುವ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ಮಾಡಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಕಬಕ ವಿದ್ಯಾಪುರ ಅಂಗನವಾಡಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಶಿಥಿಲಾವಸ್ಥೆಯಲ್ಲಿದ್ದ ಈ ಅಂಗನವಾಡಿ ಕಟ್ಟಡಕ್ಕೆ ಅನುದಾನ ನೀಡುವಂತೆ ಸ್ಥಳೀಯರು ಮನವಿ ಮಾಡಿದ್ದರು. 13 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಟ್ಟಡದ ಕಾಮಗಾರಿ ಮೂರು ತಿಂಗಳೊಳಗೆ ಪೂರ್ಣವಾಗಲಿದೆ. ಕಾಮಗಾರಿಯ ಗುಣಮಟ್ಟದ ಕುರಿತು ಗ್ರಾಮಸ್ಥರು ಎಚ್ಚರವಹಿಸಬೇಕು

ಕಬಕ ವಿದ್ಯಾಪುರ ಅಂಗನವಾಡಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ Read More »

ರಾಜ್ಯದ ಜಿಲ್ಲೆಗಳಿಗೆ ಅಧ್ಯಕ್ಷರುಗಳನ್ನು ನೇಮಿಸಿದ ಬಿಜೆಪಿ | ದಕ್ಷಿಣ ಕನ್ನಡ ಸೇರಿದಂತೆ ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು?

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯದ ಜಿಲ್ಲಾ ಘಟಕಗಳಿಗೆ ಅಧ್ಯಕ್ಷರುಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಹಾಗೂ ಉಡುಪಿ ಜಿಲ್ಲಾಧ್ಯಕ್ಷರಾಗಿ ಕಿಶೋರ್ ಕುಂದಾಪುರ ಅವರನ್ನು ನೇಮಿಸಲಾಗಿದೆ. ಹೀಗೆ ಪ್ರತಿ ಜಿಲ್ಲೆಗಳಿಗೂ ಅಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ಪ್ರಕೋಷ್ಠಗಳ ರಾಜ್ಯ ಸಂಯೋಜಕರಾಗಿ ಎಸ್. ದತ್ತಾತ್ರಿ ಶಿವಮೊಗ್ಗ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಲೊಕೇಶ್ ಅಂಬೆಕಲ್ಲು ಬೆಂಗಳೂರು ಉತ್ತ,ರ, ರಾಜ್ಯ ಕಾರ್ಯಾಲಯ ಸಹ ಕಾರ್ಯದರ್ಶಿಯಾಗಿ ಬಿ.ಎಚ್. ವಿಶ್ವನಾಥ್ ದಾವಣಗೆರೆ

ರಾಜ್ಯದ ಜಿಲ್ಲೆಗಳಿಗೆ ಅಧ್ಯಕ್ಷರುಗಳನ್ನು ನೇಮಿಸಿದ ಬಿಜೆಪಿ | ದಕ್ಷಿಣ ಕನ್ನಡ ಸೇರಿದಂತೆ ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು? Read More »

error: Content is protected !!
Scroll to Top