2024ರಲ್ಲೂ ರಾಹುಲ್‌ ಗಾಂಧಿಯೇ ಪ್ರತಿಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ

ಹಿರಿಯ ನಾಯಕ ಕಮಲನಾಥ್‌ ಘೋಷಣೆ ಹೊಸದಿಲ್ಲಿ : 2024ರ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಹೇಳಿದ್ದಾರೆ. ದೇಶಾದ್ಯಂತ ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆಯನ್ನು ಮುನ್ನಡೆಸಿದ್ದಕ್ಕಾಗಿ ಕಮಲನಾಥ್ ರಾಹುಲ್ ಗಾಂಧಿಯನ್ನು ಶ್ಲಾಘಿಸಿದ್ದಾರೆ. ರಾಹುಲ್ ಗಾಂಧಿ ಅಧಿಕಾರಕ್ಕಾಗಿ ರಾಜಕೀಯ ಮಾಡುತ್ತಿಲ್ಲ, ಅವರು ದೇಶದ ಸಾಮಾನ್ಯ ಜನರಿಗಾಗಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ, ರಾಹುಲ್ ಗಾಂಧಿ ಕೇವಲ ಪ್ರತಿಪಕ್ಷಗಳ ಮುಖವಾಗಿರುವುದಿಲ್ಲ. […]

2024ರಲ್ಲೂ ರಾಹುಲ್‌ ಗಾಂಧಿಯೇ ಪ್ರತಿಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ Read More »

ರಿಷಭ್‌ ಪಂತ್‌ ಚಿಕಿತ್ಸೆ ಹೊಣೆ ಬಿಸಿಸಿಯದ್ದು

ತಲೆಗೆ ಗಾಯ, ಕಾಲು, ಬೆನ್ನುಮೂಳೆ ಮುರಿತ ಮುಂಬಯಿ : ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಸ್ಥಿತಿಯ ಬಗ್ಗೆ ಊಹಾಪೋಹಗಳು ಹರಿದಾಡುತ್ತಿರುವಂತೆಯೇ ಪಂತ್ ಆರೋಗ್ಯ ಕುರಿತು ಬಿಸಿಸಿಐ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ರಿಷಬ್ ಪಂತ್ ಉತ್ತರಖಂಡದ ರೂರ್ಕಿ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಸದ್ಯ ಪಂತ್ ಆರೋಗ್ಯ ಸ್ಥಿರವಾಗಿದೆ. ಗಾಯದ ಪ್ರಮಾಣ ಹೆಚ್ಚಿದೆ. ಇದೀಗ ರಿಷಬ್ ಪಂತ್ ಅವರನ್ನು ಡೆಹ್ರಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪಂತ್ ಕುಟುಂಬದ

ರಿಷಭ್‌ ಪಂತ್‌ ಚಿಕಿತ್ಸೆ ಹೊಣೆ ಬಿಸಿಸಿಯದ್ದು Read More »

ಕುಂಬ್ಲಾಡಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶ, ಮಾಚಿಲ ಶ್ರೀ ಉಳ್ಳಾಕ್ಲು ಶ್ರೀ ಉಳ್ಳಾಲ್ತಿ ಪ್ರತಿಷ್ಠೆ, ನೇಮೋತ್ಸವ

ಪುತ್ತೂರು: ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಮಣ್ಯ ದೇವಸ್ಥಾನದಲ್ಲಿಡಿ. 31ರಿಂದ ಜ. 7ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮಾಚಿಲ ಶ್ರೀ ಉಳ್ಳಾಕ್ಲು ಹಾಗೂ ಶ್ರೀ ಉಳ್ಳಾಲ್ತಿ ಪ್ರತಿಷ್ಠೆ ಮತ್ತು ನೇಮೋತ್ಸವ ನಡೆಯಲಿದೆ. 31ರಂದು ಬೆಳಿಗ್ಗೆ 8ಕ್ಕೆ ಅರುವಗುತ್ತು ಮನೆಯಿಂದ ದೇವರ ಆಭರಣ ತರುವುದು, 8:30ಕ್ಕೆ ನಾಲ್ಕಂಬ ಕ್ಷೇತ್ರದಲ್ಲಿ ಪ್ರಾರ್ಥನೆ, ಹೊರಕಾಣಿಕೆ ತರಲಾಗುವುದು. 9ಕ್ಕೆ ದೇವಾಲಯದಲ್ಲಿ ತೋರಣ ಮುಹೂರ್ತ, 12ಕ್ಕೆ ಮಹಾಪೂಜೆ, ಸಂಜೆ 5ಕ್ಕೆ ತಂತ್ರಿ ಪರಿವಾರದವರ ಆಗಮನ, ಸ್ವಾಗತ. ರಾತ್ರಿ 7ಕ್ಕೆ ಪ್ರಾಸಾದ ಪರಿಗ್ರಹ, ಪುಣ್ಯಾಹ, ಅಂಕುರಾರ್ಪಣೆ, ವಾಸ್ತು

ಕುಂಬ್ಲಾಡಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶ, ಮಾಚಿಲ ಶ್ರೀ ಉಳ್ಳಾಕ್ಲು ಶ್ರೀ ಉಳ್ಳಾಲ್ತಿ ಪ್ರತಿಷ್ಠೆ, ನೇಮೋತ್ಸವ Read More »

ಜ. 1: ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ನ ನೂತನ ಕಟ್ಟಡ, ನೂತನ ಕಚೇರಿ ಉದ್ಘಾಟನೆ

ಪುತ್ತೂರು: ಯುವ ಒಕ್ಕಲಿಗ ಗೌಡ ಸೇವಾ ಸಂಘ ಪ್ರಾಯೋಜಕತ್ವದ ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಪುತ್ತೂರು ಇದರ ಸ್ವಂತ ಕಟ್ಟಡದಲ್ಲಿ ನೂತನ ಕಚೇರಿಯ ಉದ್ಘಾಟನಾ ಸಮಾರಂಭ ಹಾಗೂ ಸಭಾ ಕಾರ್ಯಕ್ರಮ ಜ. 1ರಂದು ಬೆಳಿಗ್ಗೆ 9 ಗಂಟೆಗೆ ನೆಲ್ಲಿಕಟ್ಟೆ ಒಕ್ಕಲಿಗ ಸೌಧದಲ್ಲಿ ನಡೆಯಲಿದೆ. ಮಂಗಳೂರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಕಚೇರಿ ಉದ್ಘಾಟಿಸಿ, ಆಶೀರ್ಚನ ನೀಡುವರು. ಪುತ್ತೂರು ಒಕ್ಕಲಿಗ ಸ್ವ-ಸಹಾಯ ಸಂಘದ ಅಧ್ಯಕ್ಷ ಡಿ.ವಿ. ಮನೋಹರ ಅಧ್ಯಕ್ಷತೆ ವಹಿಸುವರು. ಶಾಸಕ ಸಂಜೀವ

ಜ. 1: ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ನ ನೂತನ ಕಟ್ಟಡ, ನೂತನ ಕಚೇರಿ ಉದ್ಘಾಟನೆ Read More »

ಎನನ್ ಬದ್ಕಾಯ ಮಗ… | ಶಾಸಕ ಮಠಂದೂರಿಗೆ ಕೃತಜ್ಞತೆ ಸಲ್ಲಿಸಿದ್ದ ಮಹಿಳೆ | ವೈರಲ್ ಆಗಿದ್ದ ಫೊಟೋದ ಅಸಲಿ ಕಥೆ ಇಲ್ಲಿದೆ ನೋಡಿ

ಪುತ್ತೂರು: “ಎನನ್ ಬದ್ಕಾಯ ಮಗ…” ತನ್ನ ಅನಾರೋಗ್ಯದ ಸಮಯದಲ್ಲಿ ನೆರವಾದ ಶಾಸಕ ಸಂಜೀವ ಮಠಂದೂರು ಅವರಿಗೆ ಮಹಿಳೆಯೊಬ್ಬರು ಕೃತಜ್ಞತೆ ಸಲ್ಲಿಸಿದ್ದ ಭಾವುಕ ಕ್ಷಣವಿದು. ಕೆಲ ದಿನಗಳ ಹಿಂದೆ ಪುರಭವನದಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ಮಠಂದೂರು ಅವರು ಹೊರಬರುತ್ತಿದ್ದಂತೆ, ಮಹಿಳೆಯೊಬ್ಬರು ಶಾಸಕರ ಕೈಹಿಡಿದು ತನ್ನ ಒಡಲಿನ ಮಾತುಗಳನ್ನು ಹೊರಗೆಡವಿದ ಬಗೆ ಇದು. ಕಳೆದ ಕೆಲ ದಿನಗಳಿಂದ ಬೇರೆ ಬೇರೆ ಸಾಲುಗಳನ್ನು ಹೊದ್ದುಕೊಂಡು, ಶಾಸಕರ ಫೊಟೋವೊಂದು ವೈರಲ್ ಆಗಿತ್ತು. ಹೆಚ್ಚಿನ ಮಂದಿ ತಮ್ಮ ಸಂದೇಹವನ್ನು ತೋಡಿಕೊಂಡಿದ್ದರೂ ಕೂಡ. ಮಹಿಳೆಯ ಕಣ್ಣಲ್ಲಿ ಕೃತಜ್ಞತಾ

ಎನನ್ ಬದ್ಕಾಯ ಮಗ… | ಶಾಸಕ ಮಠಂದೂರಿಗೆ ಕೃತಜ್ಞತೆ ಸಲ್ಲಿಸಿದ್ದ ಮಹಿಳೆ | ವೈರಲ್ ಆಗಿದ್ದ ಫೊಟೋದ ಅಸಲಿ ಕಥೆ ಇಲ್ಲಿದೆ ನೋಡಿ Read More »

ನಾಳೆಯಿಂದ ವೀರಮಂಗಲ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ

ಪುತ್ತೂರು: ವೀರಮಂಗಲ ಶಾಲಾ ವಾರ್ಷಿಕೋತ್ಸವ ಡಿ. 31 ರಂದು ಶಾಲಾ ಆವರಣದಲ್ಲಿ  ನಡೆಯಲಿದೆ.  60 ವರ್ಷಗಳನ್ನು  ಪೂರೈಸಿದ  ಗ್ರಾಮೀಣ ಪ್ರದೇಶದ  ಕುಮಾರನದಿಯ ತಟದಲ್ಲಿರುವ ಈ  ಶಾಲೆಯಲ್ಲಿ 155 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮಾದರಿ ಶಾಲೆಯಾಗಿ ಮೂಡಿಬಂದಿದೆ. ಶಾಸಕ ಸಂಜೀವ ಮಠಂದೂರು ಅವರು ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಶಾಂತಿಗೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಅಧ್ಯಕ್ಷತೆ ವಹಿಸುವರು.ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ್, ವೀರಮಂಗಲ ದೇವಸ್ಥಾನದ ಆಡಳಿತ ಮೊಕ್ತೇಸರ ಶಿವರಾಮ ಭಟ್ ಬಾವ, ವೀರಮಂಗಲ ಜುಮ್ಮಾ ಮಸೀದಿ ಅಧ್ಯಕ್ಷ ರಝಾಕ್ ವಿ.ಎಸ್. ಅತಿಥಿಗಳಾಗಿರುವರು. ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಾದ ಯಜ್ಣ ಇವರಿಗೆ ಗೌರವಾರ್ಪಣೆ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಂದ ವೈವಿಧ್ಯಮಯ ನೃತ್ಯ, ಭಾರತೀಯ ಸಂಸ್ಕೃತಿ ಬಿಂಭಿಸುವ ಏಕ್ ಭಾರತ್ ಶ್ರೇಷ್ಠ ಭಾರತ್ ಸಂಸ್ಕೃತಿಗಳ ಅನಾವರಣಗೊಳ್ಳಲಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ. ಬೆಳಗ್ಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಶಾಂತಿಗೋಡು ಗ್ರಾಮ ಪಂಚಾಯತ್  ಉಪಾಧ್ಯಕ್ಷ ಸುಧಾಕರ ಕುಲಾಲ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಎಸ್ ಡಿ ಎಂ ಸಿ ಅಧ್ಯಕ್ಷೆ  ಅನುಪಮ  ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾ.ಪಂ ಸದಸ್ಯ ಬಾಬು ಶೆಟ್ಟಿ ಬಹುಮಾನ  ವಿತರಣೆ  ಮಾಡಲಿದ್ದಾರೆ. ಗ್ರಾಮ  ಪಂಚಾಯಿತಿ  ಸದಸ್ಯರಾದ ಪದ್ಮಾವತಿ,  ವಸಂತಿ,  ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಸಮನ್ವಯಾಧಿಕಾರಿ ನವೀನ್ ವೇಗಸ್,  ಸಿ.ಆರ್.ಪಿ ಪರಮೇಶ್ವರಿ, ಶಾಲಾ ಮುಖ್ಯಗುರು  ತಾರಾನಾಥ ಸವಣೂರು, ಎಸ್ ಡಿ ಎಂ ಸಿ ಅಧ್ಯಕ್ಷೆಅನುಪಮ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಾಬಲ ರೈ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಆನಂದ ಗೌಡ ಗುತ್ತು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ. ಶಾಸಕರಾದಿಯಾಗಿ ಕೊಡುಗೆಗಳ

ನಾಳೆಯಿಂದ ವೀರಮಂಗಲ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ Read More »

ವಿಕಲಚೇತನರ ಬಸ್ ಪಾಸ್ ಮಾನ್ಯತೆ ಮುಂದುವರಿಕೆ

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ 2022ನೇ ಸಾಲಿನಲ್ಲಿ ವಿತರಿಸಿರುವ ವಿಕಲಚೇತನರ ಬಸ್ ಪಾಸುಗಳನ್ನು 2023ರ ಫೆ. 28ರವರೆಗೆ ಮಾನ್ಯ ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ವಿಕಲಚೇತನರ ಪಾಸುದಾರರ ನವೀಕರಣ ಅಥವಾ ಹೊಸ ಪಾಸು ಪಡೆಯುವ ಫಲಾನುಭವಿಗಳು ಅರ್ಜಿಯನ್ನು ಸೇವಾಸಿಂಧು ಪೋರ್ಟಲ್ ಮೂಲಕವೇ ಸಲ್ಲಿಸುವುದು ಕಡ್ಡಾಯ. ಅರ್ಜಿ ಸಲ್ಲಿಸುವಾಗ ವಿಕಲಚೇತನರು ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸ್‍ ಪೋರ್ಟ್ ಸೈಜಿನ ಫೊಟೋ, ಯಡಿಐಪಿ ಗುರುತಿನ ಚೀಟಿಯನ್ನು ಆನ್ ಲೈನಿನಲ್ಲಿ ಅಪ್ಲೋಡ್ ಮಾಡಬೇಕು. ಹೊಸದಾಗಿ

ವಿಕಲಚೇತನರ ಬಸ್ ಪಾಸ್ ಮಾನ್ಯತೆ ಮುಂದುವರಿಕೆ Read More »

ಜ. 1ರಿಂದ 10ರವರೆಗೆ ಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನ

ಪುತ್ತೂರು: ಸಾಮಾಜಿಕ, ಶೈಕ್ಷಣಿಕ ಪ್ರಗತಿಗಾಗಿ ಕೆಲಸ ನಿರ್ವಹಿಸುತ್ತಿರುವ ಸುನ್ನಿ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ಇದರ ಸದಸ್ಯತ್ವ ಅಭಿಯಾನ 2023ರ ಜನವರಿ 1ರಿಂದ 10ರವರೆಗೆ ರಾಜ್ಯಾದ್ಯಂತ ನಡೆಯಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಹೇಳಿದರು. ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಸ್ಸೆಸ್ಸೆಫ್, ಲಕ್ಷಾಂತರ ವಿದ್ಯಾರ್ಥಿಗಳನ್ನು ನಾಡಿಗೆ ಪರಿಚಯಿಸಿದೆ. ಹಾದಿ ತಪ್ಪುತ್ತಿರುವ ವಿದ್ಯಾರ್ಥಿ ಸಮೂಹಕ್ಕೆ ಧಾರ್ಮಿಕತೆ, ನೈತಿಕತೆ ಹಾಗೂ ಆಧ್ಯಾತ್ಮಿಕತೆಯನ್ನು ತುಂಬಿ, ಸಮಾಜದ ಸತ್ರ್ಪಜೆಗಳನ್ನಾಗಿ ಮಾಡಲು

ಜ. 1ರಿಂದ 10ರವರೆಗೆ ಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನ Read More »

ರಕ್ತದಾನ, ನೇತ್ರದಾನ, ಉಚಿತ ಮಧುಮೇಹ, ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ | ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ ಆಹಾರ ಸಾಮಗ್ರಿ ವಿತರಣೆ

ಪುತ್ತೂರು: ವಿಷನ್ ಸಹಾಯ ನಿಧಿ ಸೇವಾ ಟ್ರಸ್ಟ್ ದಾನಿಗಳಿಂದ ಸಂಗ್ರಹಿಸಿದ ಹಣದಿಂದ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಆಯ್ದ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ನೇತ್ರದಾನ ಶಿಬಿರ, ಉಚಿತ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಡಿ. 30ರಂದು ಅನುರಾಗ ವಠಾರದಲ್ಲಿ ನಡೆಯಿತು. ಆಹಾರ ಸಾಮಾಗ್ರಿ ವಿತರಿಸಿ ಮಾತನಾಡಿದ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶರತ್ ಕುಮಾರ್ ಮಾತನಾಡಿ, ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯಬೇಕು ಎಂದು ಹಿರಿಯರು ತಿಳಿಸಿಕೊಟ್ಟಿದ್ದಾರೆ. ಜನರ

ರಕ್ತದಾನ, ನೇತ್ರದಾನ, ಉಚಿತ ಮಧುಮೇಹ, ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ | ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ ಆಹಾರ ಸಾಮಗ್ರಿ ವಿತರಣೆ Read More »

ಜ. 7ರಂದು ತುಳುವೆರೆ ಮೇಳೊ 2023, ತುಳುಕೂಟೊದ ಸ್ವರ್ಣ ಮಹೋತ್ಸವ

ಪುತ್ತೂರು: ತುಳುಕೂಟೊ ಪುತ್ತೂರು ಇದರ ಸ್ವರ್ಣ ಮಹೋತ್ಸವದ ಉದ್ಘಾಟನೆ ಹಾಗೂ ಪುತ್ತೂರು ತಾಲೂಕು ತುಳುವೆರೆ ಮೇಳೊ 2023 ಜ. 7ರಂದು ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಲಿದೆ ಎಂದು ತುಳುವೆರೆ ಮೇಳೊ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸುವರು. ಪುತ್ತೂರು ತಾಲೂಕು ತುಳುವೆರೆ ಮೇಳೊ ಸಮಿತಿ ಗೌರವಾಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಅಧ್ಯಕ್ಷತೆ ವಹಿಸುವರು. ಸಹಾಯಕ

ಜ. 7ರಂದು ತುಳುವೆರೆ ಮೇಳೊ 2023, ತುಳುಕೂಟೊದ ಸ್ವರ್ಣ ಮಹೋತ್ಸವ Read More »

error: Content is protected !!
Scroll to Top