ಅನಿವಾಸಿ ಭಾರತೀಯರಿಗೆ ಜೀವನ ಭದ್ರತೆಯ ಜೊತೆಗೆ ಮತದಾನದ ಅವಕಾಶವನ್ನೂ ಕಲ್ಪಿಸಿ | ಅಧಿವೇಶನದಲ್ಲಿ ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಅನಿವಾಸಿ ಭಾರತೀಯರ ಜೀವನ ಭದ್ರತೆಯ ಜೊತೆಗೆ ಅವರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲು ಹೊಸ ನಿಯಮವನ್ನು ರೂಪಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ವಿಧಾನಸಭಾ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ. ಅಧಿವೇಶನದಲ್ಲಿ ಅನಿವಾಸಿ ಭಾರತೀಯರ ಪರ ಮಾತನಾಡಿದ ಅವರು, ದೇಶದಲ್ಲಿ ಸುಮಾರು 140 ಕೋಟಿ ಜನಸಂಖ್ಯೆ ಇದ್ದು ಇದರಲ್ಲಿ 7 ಶೇ. ಮಂದಿ ಪಾಸ್‌ಪೋರ್ಟ್ ಹೊಂದಿದ್ದಾರೆ. 1.03 ಕೋಟಿ ಮಂದಿ ವಿವಿಧ ದೇಶದಲ್ಲಿ ಉದ್ಯೋಗ ನಿಮಿತ್ತ ತೆರಳಿದ್ದು ಅಲ್ಲಿ ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ […]

ಅನಿವಾಸಿ ಭಾರತೀಯರಿಗೆ ಜೀವನ ಭದ್ರತೆಯ ಜೊತೆಗೆ ಮತದಾನದ ಅವಕಾಶವನ್ನೂ ಕಲ್ಪಿಸಿ | ಅಧಿವೇಶನದಲ್ಲಿ ಶಾಸಕ ಅಶೋಕ್ ರೈ ಮನವಿ Read More »

ಬೈಕ್-ಟಿಪ್ಪರ್ ಅಪಘಾತ | ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಸಫ್ವಾನ್ ಮೃತ್ಯು

ಪುತ್ತೂರು: ಬೈಕ್ ಹಾಗೂ ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮುಕ್ವೆ ನಿವಾಸಿ ಸಫ್ವಾನ್ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ. ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಸಫ್ವಾನ್ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್-ಟಿಪ್ಪರ್ ಅಪಘಾತ | ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಸಫ್ವಾನ್ ಮೃತ್ಯು Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ದನ ಕಳ್ಳತನ | ತನಿಖೆ ನಡೆಸುವುದರ ಜತೆಗೆ ಭದ್ರತಾ ವ್ಯವಸ್ಥೆ ಸರಿಪಡಿಸುವಂತೆ ವಿಹಿಂಪ, ಬಜರಂಗದಳದಿಂದ ಮನವಿ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಾಲಯದ  ವಠಾರದಿಂದ ದನ ಕಳ್ಳತನ ಬಗ್ಗೆ ತನಿಖೆ ನಡೆಸಿ,ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ಮನವಿ ಸಲ್ಲಿಸಲಾಯಿತು. ಪುತ್ತೂರು ಸೀಮಾಧಿಪತಿ ಶ್ರೀ ಮಹಾಲಿಂಗೇಶ್ವರ ದೇವರ ದೇವಮಾರು ಗದ್ದೆ ಹಾಗೂ ವಠಾರದಲ್ಲಿ ಈ ಹಿಂದಿನ ಒಂದು ವಾರದಿಂದ ಗೋ ಕಳ್ಳತನದ ಮಾಹಿತಿ ನಮ್ಮ ಸಂಘಟನೆಗೆ ಬಂದಿದ್ದು ದೇವಳದ ಭದ್ರತಾ ಸಿಬ್ಬಂದಿಗಳಿಗೆ ಮಾಹಿತಿ ಇದ್ದರೂ ಯಾವುದೇ ದೂರು ದಾಖಲಿಸದೆ ಇರುವುದರಿಂದ ಮುಂದಿನ ದಿನಗಳಲ್ಲಿ ಇಂತಹ ಗೋಕಳ್ಳತನ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ದನ ಕಳ್ಳತನ | ತನಿಖೆ ನಡೆಸುವುದರ ಜತೆಗೆ ಭದ್ರತಾ ವ್ಯವಸ್ಥೆ ಸರಿಪಡಿಸುವಂತೆ ವಿಹಿಂಪ, ಬಜರಂಗದಳದಿಂದ ಮನವಿ Read More »

ಬೈಕ್-ಟಿಪ್ಪರ್ ಅಪಘಾತ | ಬೈಕ್ ಸವಾರನಿಗೆ ಗಂಭೀರ ಗಾಯ

ಪುತ್ತೂರು: ಬೈಕ್ ಹಾಗೂ ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ನಡೆದಿದೆ.  ಮುಕ್ವೆ ನಿವಾಸಿ ಸಫ್ವಾನ್ ಗಂಭೀರ ಗಾಯಗೊಂಡವರು. ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಅಪಘಾತದಿಂದ ರಸ್ತೆ ಬದಿ ನಿಲ್ಲಿಸಲಾಗಿದ್ದ ಇನ್ನೊಂದು ದ್ವಿಚಕ್ರ ವಾಹನಕ್ಕೂ ಹಾನಿಯಾಗಿದೆ ಎನ್ನಲಾಗಿದೆ.

ಬೈಕ್-ಟಿಪ್ಪರ್ ಅಪಘಾತ | ಬೈಕ್ ಸವಾರನಿಗೆ ಗಂಭೀರ ಗಾಯ Read More »

ವಿದೇಶದಿಂದ ಊರಿಗೆ ಬಂದಿದ್ದ ಯುವಕ ಅನಾರೋಗ್ಯದಿಂದ ಮೃತ್ಯು !

ವಿಟ್ಲ: ವಿದೇಶದಿಂದ ಮೂರು ದಿನಗಳ ಹಿಂದೆ ಬಂದಿದ್ದ ಯುವಕ ಅನಾರೋಗ್ಯದಿಂದ ಮೃತಪಟ್ಟ ಘಟನೆ ವಿಟ್ಲ ಬಳಿಯ ಕೇಪು ಎಂಬಲ್ಲಿ ನಡೆದಿದೆ. ಕೇಪು ಗ್ರಾಮದ ಅಡ್ಯನಡ್ಕ ನಿವಾಸಿ ಅಶ್ರಫ್ (38) ಮೃತಪಟ್ಟ ಯುವಕ. ಅಬ್ದುಲ್ ರಹಿಮಾನ್ ಎಂಬವರ ಪುತ್ರರಾಗಿರುವ ಅಶ್ರಫ್‍ ಹಲವು ವರ್ಷಗಳಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಅನಾರೋಗ್ಯದ ಹಿನ್ನಲೆಯಲ್ಲಿ ಊರಿಗೆ ಬಂದಿದ್ದ ಅವರು ಕೇರಳದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು, ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ತಾಯಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ವಿದೇಶದಿಂದ ಊರಿಗೆ ಬಂದಿದ್ದ ಯುವಕ ಅನಾರೋಗ್ಯದಿಂದ ಮೃತ್ಯು ! Read More »

ವೀರಮಂಗಲ ಕುಮಾರಧಾರ ನದಿಯಲ್ಲಿ ಮರಳು ದಂಧೆ | ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರು ಅವಬೃತ ಸ್ನಾನಕ್ಕೆ ತೆರಳುವ ವೀರಮಂಗಲ ಕುಮಾರಧಾರ ನದಿಯಲ್ಲಿ ಅವ್ಯಾಹತವಾಗಿ ಮರಳು ತೆಗೆದು ರಾಶಿ ಹಾಕಲಾಗಿದ್ದು, ಇದೀಗ ಸ್ಥಳೀಯ ಜನರ ವಿರೋಧಕ್ಕೆ ಕಾರಣವಾಗಿದೆ. ಶ್ರೀ ಮಹಾಲಿಂಗೇಶ್ವರ ದೇವರು ಜಳಕ ಮಾಡುವ ಸ್ಥಳದಿಂದಲೇ ಮರಳುಗಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ನದಿಯ ಎರಡೂ ಬದಿಗಳಲ್ಲಿ ಲೋಡುಗಟ್ಟಲೆ ಮರಳು ರಾಶಿ ಹಾಕಲಾಗಿದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮರಳು ರಾಶಿ ಹಾಕಿದರೂ ಸಂಬಂಧ ಪಟ್ಟ ಅಧಿಕಾರಿಗಳು ಇನ್ನೂ ಗಮನಹರಿಸದಿರುವುದು ದುರಾದೃಷ್ಟ. ಈ ಕುರಿತು ಭೂವಿಜ್ಞಾನ ಮತ್ತು ಗಣಿ ಇಲಾಖೆಯ

ವೀರಮಂಗಲ ಕುಮಾರಧಾರ ನದಿಯಲ್ಲಿ ಮರಳು ದಂಧೆ | ಎಚ್ಚೆತ್ತುಕೊಳ್ಳದ ಅಧಿಕಾರಿಗಳು Read More »

ಶಾಲೆ ಹೊರತು ಬೇರೆ ಯಾವುದೇ ಕಟ್ಟಡ ನಿರ್ಮಿಸಬಾರದು | 159 ವರ್ಷಗಳ ಇತಿಹಾಸ ಹೊಂದಿರುವ ನೆಲ್ಲಿಕಟ್ಟೆ ಶಾಲಾ ಎಸ್‍.ಡಿ.ಎಂ.ಸಿ, ಪೋಷಕರಿಂದ ಆಗ್ರಹ

ಪುತ್ತೂರು: ಸುಮಾರು 159 ವರ್ಷಗಳ ಇತಿಹಾಸವಿರುವ ನೆಲ್ಲಿಕಟ್ಟೆ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾ ಕಟ್ಟಡವಲ್ಲದೆ ಬೇರೆ ಯಾವುದೇ ಕಟ್ಟಡ ನಿರ್ಮಿಸಬಾರದು ಎಂದು ಶಾಲಾ ಎಸ್‍. ಡಿ.ಎಂ.ಸಿ, ಮಕ್ಕಳ ಪೋಷಕರು ಹಾಗೂ ಸ್ಥಳೀಯರು ಬುಧವಾರ ಸಭೆ ಸೇರಿ ಆಗ್ರಹಿಸಿದರು. ಈ ಶಾಲಾ ಆವರಣದಲ್ಲಿ ಬೇರೆ ಸರಕಾರಿ ಕಟ್ಟಡ ನಿರ್ಮಾಣಕ್ಕೆ ಹುನ್ನಾರ ನಡೆಯುತ್ತಿದ್ದು, ಈ ನೆಪವಿಟ್ಟುಕೊಂಡು ರಾತ್ರಿ ಶಾಲಾ ಆವರಣದಲ್ಲಿ ತಡರಾತ್ರಿ ವರೆಗೂ ಬೇರೆ ಬೇರೆ ಚಟುವಟಿಕೆಗಳು ನಡೆಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವುದರ ಜತೆಗೆ ಶಾಲಾ ಕಟ್ಟಡ ಹೊರತುಪಡಿಸಿ

ಶಾಲೆ ಹೊರತು ಬೇರೆ ಯಾವುದೇ ಕಟ್ಟಡ ನಿರ್ಮಿಸಬಾರದು | 159 ವರ್ಷಗಳ ಇತಿಹಾಸ ಹೊಂದಿರುವ ನೆಲ್ಲಿಕಟ್ಟೆ ಶಾಲಾ ಎಸ್‍.ಡಿ.ಎಂ.ಸಿ, ಪೋಷಕರಿಂದ ಆಗ್ರಹ Read More »

ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ | ಸುತ್ತೋಲೆ ಹೊರಡಿಸಿದ ಸರಕಾರ | ಪ್ರಿಂಟ್ ಮಿಸ್ಟೆಕ್ ಎಂದು ಸ್ಪಷ್ಟನೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಇನ್ನುಮುಂದೆ ಕಡ್ಡಾಯವಲ್ಲ. ಹೀಗೊಂದು ಸುತ್ತೋಲೆಯನ್ನು ರಾಜ್ಯ ಸರಕಾರ ಫೆ.16 ರಂದು ಹೊರಡಿಸಿದೆ. ಈ ನಡುವೆ ರಾಜ್ಯ ಸರಕಾರದ ವಿರುದ್ಧ ವಿರೋಧಗಳು ಎಲ್ಲೆಡೆ ವ್ಯಕ್ತವಾಗುತ್ತಿದೆ. ರಾಜ್ಯ ಸರಕಾರ ಹೊರಡಿಸಿದ ಸುತ್ತೋಲೆಯಲ್ಲಿ ರಾಷ್ಟ್ರ ಕವಿ, ಜ್ಞಾನಪೀಠ ಪುರಸ್ಕೃತ ಡಾ. ಕುವೆಂಪುರವರ ‘ಜಯ ಭಾರತ ಜನನಿಯ ತನುಜಾತೆ’ ಕವನವನ್ನು ‘ನಾಡಗೀತೆ’ಯಾಗಿ ಘೋಷಿಸುವ ಕುರಿತು ಹೊರಡಿಸಲಾದ ಸರಕಾರದ ಆದೇಶ ಹಾಗೂ ಅದಕ್ಕೆ ಫೆಬ್ರವರಿ 1 ರಂದು ಮಾಡಲಾದ ತಿದ್ದುಪಡಿ ಪ್ರಕಾರ, ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ

ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ | ಸುತ್ತೋಲೆ ಹೊರಡಿಸಿದ ಸರಕಾರ | ಪ್ರಿಂಟ್ ಮಿಸ್ಟೆಕ್ ಎಂದು ಸ್ಪಷ್ಟನೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ Read More »

ಅಪ್ರಾಪ್ತ ಬಾಲಕಿಗೆ ದೈಹಿಕ ಹಿಂಸೆ | ಆರೋಪಿ ಬಂಧನ !

ಬಂಟ್ವಾಳ : ಅಪ್ರಾಪ್ತ ಬಾಲಕಿಗೆ ದೈಹಿಕ ಹಿಂಸೆ ನೀಡಿದ ಆರೋಪದ ಮೇಲೆ ಹೊಟೇಲ್ ಮಾಲಕರೊಬ್ಬರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಸಜೀಪನಡು ಗ್ರಾಮದ ಅಬ್ದುಲ್ಲಾ ಎಂಬಾತನ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಅಪ್ರಾಪ್ತ ಶಾಲಾ ಬಾಲಕಿಗೆ ದೈಹಿಕ ಹಿಂಸೆ ನೀಡಿದ್ದಾನೆ ಎಂದು ಬಾಲಕಿಯ ತಾಯಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಠಾಣಾ ಎಸ್‍.ಐ. ಮೂರ್ತಿ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅಪ್ರಾಪ್ತ ಬಾಲಕಿಗೆ ದೈಹಿಕ ಹಿಂಸೆ | ಆರೋಪಿ ಬಂಧನ ! Read More »

ಫೆ.24,25,26 : ಎಸ್‍ಡಿಪಿ ರೆಮಿಡೀಸ್ ಆ್ಯಂಡ್ ರಿಸರ್ಚ್‍ ಸೆಂಟರ್ ಅರ್ಪಿಸುವ ಸಾಂಸ್ಕೃತಿಕ ಕಲಾ ಸಂಭ್ರಮ ‘ಕಲೋಪಾಸನಾ-2024’ | ಮೂರು ದಿನಗಳ ಕಾಲ ಮೇಳೈಸಲಿದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಪುತ್ತೂರು: ನಗರದ ಹೊರವಲಯದ ಪರ್ಲಡ್ಕದಲ್ಲಿರುವ ಕಾರ್ಯಾಚರಿಸುತ್ತಿರುವ ಎಸ್‍ಡಿಪಿ ರೆಮಿಡೀಸ್ ಆ್ಯಂಡ್ ರಿಸರ್ಚ್‍ ಸೆಂಟರ್ ಅರ್ಪಿಸುವ ಸಾಂಸ್ಕೃತಿಕ ಕಲಾ ಸಂಭ್ರಮ ‘ಕಲೋಪಾಸನಾ-2024’ ಫೆ.24, 25 ಹಾಗೂ 26 ರಂದು ಮೂರು ದಿನಗಳ ಕಾಲ ಸಂಜೆ ಹೊತ್ತಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಲಾರಸಿಕರ ಮನ ಸೆಳೆಯಲಿದೆ ಎಂದು ಎಸ್‍ಡಿಪಿ ರೆಮಿಡೀಸ್ ಆ್ಯಂಡ್ ರಿಸರ್ಚ್‍ ಸೆಂಟರ್ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿ 20ನೇ ವರ್ಷದ ಸಾಂಸ್ಕೃತಿಕ ಕಲಾ ಸಂಭ್ರಮ ಇದಾಗಿದ್ದು, ಕಳೆದ 19

ಫೆ.24,25,26 : ಎಸ್‍ಡಿಪಿ ರೆಮಿಡೀಸ್ ಆ್ಯಂಡ್ ರಿಸರ್ಚ್‍ ಸೆಂಟರ್ ಅರ್ಪಿಸುವ ಸಾಂಸ್ಕೃತಿಕ ಕಲಾ ಸಂಭ್ರಮ ‘ಕಲೋಪಾಸನಾ-2024’ | ಮೂರು ದಿನಗಳ ಕಾಲ ಮೇಳೈಸಲಿದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು Read More »

error: Content is protected !!
Scroll to Top