ಲೋಕಸಭೆ ಚುನಾವಣೆ | ಬಿಜೆಪಿ ಮೊದಲ ಪಟ್ಟಿ ಬಿಡುಗಡೆ

ಹೊಸದಿಲ್ಲಿ: ಲೋಕಸಭೆ ಚುನಾವಣೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿಯಿಂದ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಪಟ್ಟಿಯ ಆಧಾರದಲ್ಲಿ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ, ಮಾಡುವುದು ಖಚಿತಗೊಂಡಿದ್ದು, ಗಾಂಧಿನಗರದಿಂದ ಅಮಿತ್ ಶಾ, ಲಖನೌದಿಂದ ರಾಜನಾಥ ಸಿಂಗ್, ತಿರುವನಂತಪುರದಿಂದ ರಾಜೀವ್ ಚಂದ್ರಶೇಖರ್, ವಿದಿಶಾದಿಂದ ಮಧ್ಯಪ್ರದೇಶದ ಮಾಜಿ ಸಿ.ಎಂ.ಶಿವರಾಜ್ ಸಿಂಗ್ ಚೌಹಾಣ್ ಸ್ಪರ್ಧಿಸಲಿದ್ದಾರೆ. ಇದೀಗ ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ 195 ಮಂದಿಗೆ ಟಿಕೇಟ್ ಘೋಷಣೆಯಾಗಿದೆ. ಆದರೆ ಕರ್ನಾಟಕ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣ ಆಗಿಲ್ಲ.

ಲೋಕಸಭೆ ಚುನಾವಣೆ | ಬಿಜೆಪಿ ಮೊದಲ ಪಟ್ಟಿ ಬಿಡುಗಡೆ Read More »

ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಕ್ತ ಅವಕಾಶ | ಯಾವ ಕಾರಣಕ್ಕೆ ಸೇರ್ಪಡೆಗೊಳ್ಳುತ್ತಿಲ ಎಂಬುದಕ್ಕೆ ಅವರೇ ಉತ್ತರ ನೀಡಬೇಕು | ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಮಂಗಳೂರು : ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಆಹ್ವಾನ ನೀಡಲಾಗಿದೆ. ಆದರೆ ಯಾವ ಕಾರಣಕ್ಕೆ ಬರುತ್ತಿಲ್ಲ ಎಂದು ಅವರೇ ಉತ್ತರ ಕೊಡಬೇಕು. ಇಂದಿಗೂ ನಾವು ಮಾತುಕತೆ ಹಂತದಲ್ಲಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ. ಶನಿವಾರ ಮಂಗಳೂರು ಬಿಜೆಪಿ ಚುನಾವಣಾ ಕಚೇರಿಯಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಅರುಣ್‌ ಕುಮಾ‌ರ್ ಪುತ್ತಿಲ ಅವರ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಕುರಿತು ಸತ್ಯ ತಿಳಿಸಲು ಪತ್ರಿಕಾಗೋಷ್ಠಿ

ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಕ್ತ ಅವಕಾಶ | ಯಾವ ಕಾರಣಕ್ಕೆ ಸೇರ್ಪಡೆಗೊಳ್ಳುತ್ತಿಲ ಎಂಬುದಕ್ಕೆ ಅವರೇ ಉತ್ತರ ನೀಡಬೇಕು | ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ Read More »

ಮಾ.11 : ಎಸ್‌ಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ | ನಿರ್ದೇಶಕ ಸ್ಥಾನಕ್ಕೆ ಹಿರಿಯ ಬಿಜೆಪಿ ಮುಖಂಡ ಎಸ್‍.ಎನ್‍.ಮನ್ಮಥ ನಾಮಪತ್ರ ಸಲ್ಲಿಕೆ

ಸುಳ್ಯ:  ಎಸ್‌ಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯ ನಿರ್ದೇಶಕ ಸ್ಥಾನಕ್ಕೆ ಹಿರಿಯ ಬಿಜೆಪಿ ಮುಖಂಡ ಎಸ್.ಎನ್.ಮನ್ಮಥ ಅವರು ಶನಿವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.  ಮಾ.11 ರಂದು ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಶಶಿಕುಮಾ‌ರ್ ರೈ ಬಾಲ್ಯೂಟ್ಟು, ರಾಜಕೀಯ ಹಾಗೂ ರಾಜಕೀಯ ಕ್ಷೇತ್ರದ ಪ್ರಮುಖರಾದ ವೆಂಕಟ್ ದಂಬೆಕೋಡಿ, ಸಂತೋಷ್ ಜಾಕೆ, ಸಂತೋಷ್ ಕುತ್ತಮೊಟ್ಟೆ, ಶ್ರೀನಾಥ್ ರೈ ಬಾಳಿಲ, ಬಾಲಕೃಷ್ಣ ಕೀಲಾಡಿ, ಸತೀಶ್ ಕೆಮ್ಮನಬಳ್ಳಿ,

ಮಾ.11 : ಎಸ್‌ಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ | ನಿರ್ದೇಶಕ ಸ್ಥಾನಕ್ಕೆ ಹಿರಿಯ ಬಿಜೆಪಿ ಮುಖಂಡ ಎಸ್‍.ಎನ್‍.ಮನ್ಮಥ ನಾಮಪತ್ರ ಸಲ್ಲಿಕೆ Read More »

ರಾಜ್ಯಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟ | ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಪುರುಷರ ತಂಡ ದ್ವಿತೀಯ

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಪುರುಷರ ವಾಲಿಬಾಲ್ ತಂಡವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ರಾಜ್ಯಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಉಜಿರೆಯ ಎಸ್‌ಡಿಎಂಐಟಿ ಯಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಕಾಲೇಜಿನ ತಂಡವು ಉತ್ತಮ ಸಾಧನೆಯೊಂದಿಗೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದು ಈ ಮೂಲಕ ವಾಲಿಬಾಲ್ ಸ್ಪರ್ಧೆಯಲ್ಲಿ ಕಾಲೇಜು ಪ್ರಥಮ ಬಾರಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ವಿಶ್ವವಿದ್ಯಾನಿಲಯ ಮಟ್ಟದ 8 ವಿಭಾಗಗಳ ಒಟ್ಟು 16 ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.

ರಾಜ್ಯಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟ | ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಪುರುಷರ ತಂಡ ದ್ವಿತೀಯ Read More »

ಮುಳಿಯ ಜ್ಯುವೆಲ್ಸ್ ನಲ್ಲಿ ಕರಿಮಣಿ ಉತ್ಸವ | ಮಾ.7 ರ ತನಕ ಕರಿಮಣಿ ಉತ್ಸವ ಮುಂದುವರಿಕೆ

ಪುತ್ತೂರು : ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ನ ಪುತ್ತೂರು ಮತ್ತು ಬೆಳ್ತಂಗಡಿ ಮಳಿಗೆಯಲ್ಲಿ ನಡೆಯುತ್ತಿರುವ ಕರಿಮಣಿ ಉತ್ಸವಕ್ಕೆ ಗ್ರಾಹಕರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ಬೇಡಿಕೆಯ ಮೇರೆಗೆ ಮಾರ್ಚ್ 7ರ ವರೆಗೆ ಉತ್ಸವವನ್ನು ಮುಂದುವರಿಸಲಾಗಿದೆ. ಈ ಕುರಿತು ಮುಳಿಯ ಜ್ಯುವೆಲ್ಸ್ ಪ್ರಕಟಣೆ ನೀಡಿದ್ದು, ಗ್ರಾಹಕರ ಬೇಡಿಕೆಯ ಮೇರೆಗೆ ಕರಿಮಣಿ ಉತ್ಸವವನ್ನು ಮಾರ್ಚ್ 7ರವರೆಗೆ ಮುಂದುವರಿಸುತ್ತಿರುವುದಾಗಿ ತಿಳಿಸಿದೆ. ಆರಂಭದಲ್ಲಿ 15 ದಿನಗಳ ಕಾಲ ಮಾತ್ರ ನಡೆಸಲು ಉದ್ದೇಶಿಸಲಾಗಿದ್ದ ಕರಿಮಣಿ ಉತ್ಸವಕ್ಕೆ ಫೆ.16ರಂದು ಚಾಲನೆ ನೀಡಲಾಗಿತ್ತು. ಇದರಲ್ಲಿ ನವನವೀನ

ಮುಳಿಯ ಜ್ಯುವೆಲ್ಸ್ ನಲ್ಲಿ ಕರಿಮಣಿ ಉತ್ಸವ | ಮಾ.7 ರ ತನಕ ಕರಿಮಣಿ ಉತ್ಸವ ಮುಂದುವರಿಕೆ Read More »

ವಿವೇಕಾನಂದ ಸ್ವಾಯತ್ತ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಪುತ್ತೂರು: ಬದುಕು ಎಂದರೆ ಗೆಲ್ಲಬೇಕು ಎಂಬ ಹೋರಾಟ, ಸೋತರೆ ಸೋಲನ್ನು ಒಪ್ಪಿಕೊಂಡು ಗೆಲ್ಲಲು ಮತ್ತೆ ಹೋರಾಡುವುದು, ಅದೇ ಜೀವನದ ನಿಯಮ. ಅಂತೆಯೇ ಕ್ರೀಡೆಯಲ್ಲಿ ಸೋಲು ಗೆಲುವು ಎಂಬುದು ಇದ್ದದ್ದೆ. ಹಾಗಾಗಿ ಧನಾತ್ಮಕವಾಗಿ ಭಾಗವಹಿಸುವುದು ಮುಖ್ಯ. ಕ್ರೀಡೆ ಕೇವಲ ಆಟವಲ್ಲ ಅದು ಬದುಕಿಗೊಂದು ಪಾಠ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಹೇಳಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ( ಸ್ವಾಯತ್ತ )ಲ್ಲಿ ಆಯೋಜಿಸಿದ 2023-24 ನೇ ಸಾಲಿನ ವಾರ್ಷಿಕ

ವಿವೇಕಾನಂದ ಸ್ವಾಯತ್ತ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ Read More »

ರಾಮೇಶ್ವರಂ ಕೆಫೆಯಲ್ಲಿ ನಡೆದ ನಿಗೂಢ ಬಾಂಬ್ ಸ್ಫೋಟ | ಎನ್‍ ಐ ಎ ತನಿಖೆಗೆ ಬಜರಂಗದಳ ಆಗ್ರಹ

ಪುತ್ತೂರು: ನಿನ್ನೆ ಮಧ್ಯಾಹ್ನ 12.55ರ ಸಮಯದಲ್ಲಿ ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಎರಡು ಬಾರಿ ನಿಗೂಢ ಬಾಂಬ್ ಸ್ಫೋಟವಾಗಿದ್ದು, ಈ ಕುರಿತು ಪ್ರಕರಣವನ್ನು ಎನ್‍ ಐ ಎ ತನಿಖೆಗೊಳಪಡಿಸಬೇಕು ಎಂದು ಬಜರಂಗದಳ ಆಗ್ರಹಿಸಿದೆ. ಕಳೆದ ವರ್ಷ ಹಲವು ಬಾರಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದರೂ ಈ ವರೆಗೂ ಹುಸಿ ಕರೆ ಸಂಬಂಧ ಯಾರ ಬಂಧನವೂ ಆಗಿಲ್ಲ. ಇದರ ಹಿಂದೆ ನಿಷೇಧಿತ ಭಯೋತ್ಪಾದಕ ಸಂಘಟನೆಯ ಕೈವಾಡವಿರುವ ಶಂಕೆ ಇದ್ದು, ವಿಧಾನ ಸೌಧದಲ್ಲಿ

ರಾಮೇಶ್ವರಂ ಕೆಫೆಯಲ್ಲಿ ನಡೆದ ನಿಗೂಢ ಬಾಂಬ್ ಸ್ಫೋಟ | ಎನ್‍ ಐ ಎ ತನಿಖೆಗೆ ಬಜರಂಗದಳ ಆಗ್ರಹ Read More »

ಉಜ್ರುಪಾದೆ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಶ್ರೀ ಕೊರಗಜ್ಜ ದೈವದ ವರ್ಷಾವಧಿ ಮತ್ತು ಹರಕೆ ನೇಮೋತ್ಸವ

ಪುತ್ತೂರು: ಬಲ್ನಾಡು ಗ್ರಾಮದ ಉಜ್ರುಪಾದೆ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಶ್ರೀ ಕೊರಗಜ್ಜ ದೈವದ ವರ್ಷಾವಧಿ ಮತ್ತು ಹರಕೆ ನೇಮೋತ್ಸವ ಇಂದು ರಾತ್ರಿ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ಪ್ರತಿ ತಿಂಗಳು ಅಗೇಲು ಸೇವೆ ನಡೆಯುತ್ತಿದ್ದು, ಪ್ರತೀ ದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹಣ್ಣುಕಾಯಿ, ಊದುಬತ್ತಿ, ಕರ್ಪೂರ, ಸೀಯಾಳ, ಎಳ್ಳೆಣ್ಣೆ, ತೆಂಗಿನ ಎಣ್ಣೆ, ಅಮೃತ, ಕಲಶ, ಬೀಡ, ಚಕ್ಕುಲಿ, ಹೂವು, ಹಾಲು ಹಾಗೂ ಹರಿಕೆ ಸಂಬಂಧ

ಉಜ್ರುಪಾದೆ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಶ್ರೀ ಕೊರಗಜ್ಜ ದೈವದ ವರ್ಷಾವಧಿ ಮತ್ತು ಹರಕೆ ನೇಮೋತ್ಸವ Read More »

ದ್ವಿಚಕ್ರ ವಾಹನ ಕಳವು : ಪ್ರಕರಣ ದಾಖಲು

ಬೆಳ್ತಂಗಡಿ: ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಿಗೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಬೇಕರಿಯೊಂದರ ಸಮೀಪದ ಹೊಂಡಾ ಯೂನಿಕಾರ್ನ್‍ ದ್ವಿಚಕ್ರ ವಾಹನವನ್ನು ಉಜಿರೆಯ ರಾಜು ಎಂಬವರು ನಿಲ್ಲಿಸಿದ್ದರು. ಒಂದು ಗಂಟೆ ಬಳಿಕ ಬಂದು ನೋಡಿದಾಗ ವಾಹನ ಕಳವಾಗಿರುವುದು ಬೆಳಕಿಗೆ ಬಂದಿದೆ. ಸುತ್ತಮುತ್ತಲು ಹುಡುಕಾಡಿದರೂ ಎಲ್ಲೂ ಸಿಗದಿದ್ದ ಹಿನ್ನಲೆಯಲ್ಲಿ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

ದ್ವಿಚಕ್ರ ವಾಹನ ಕಳವು : ಪ್ರಕರಣ ದಾಖಲು Read More »

ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ, ಪೋಷಕರಿಗೆ ತರಬೇತಿ ಕಾರ್ಯಾಗಾರ

ಪುತ್ತೂರು: ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ, ಪೋಷಕರಿಗೆ ತರಬೇತಿ ಕಾರ್ಯಾಗಾರ ಸಾಮೆತ್ತಡ್ಕ ಶಾಲೆಯಲ್ಲಿ ನಡೆಯಿತು. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿ, ಜೆ.ಸಿ.ಐ ಪುತ್ತೂರು ಮತ್ತು ಸಾಮೆತ್ತಡ್ಕ “ನಮ್ಮ ಶಾಲೆ”ಸ. ಹಿ. ಪ್ರಾ. ಶಾಲೆಯ ಸಹಭಾಗಿತ್ವದಲ್ಲಿ ನಡೆದ ಕಾರ್ಯಾಗಾರವನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ರಸಾದ್‌ ದೀಪ ಬೆಳಗಿಸಿ ಚಾಲನೆ ನೀಡಿದರು. ಜೆಸಿಐ ಅಧ್ಯಕ್ಷ ಮೋಹನ್ ಕೆ ಮುಖ್ಯ ಅತಿಥಿಯಾಗಿ ಶುಭ ಕೋರಿದರು. ಜೆಸಿಐ ತರಬೇತಿ ವಿಭಾಗದ ಉಪಾಧ್ಯಕ್ಷ, ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ

ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ, ಪೋಷಕರಿಗೆ ತರಬೇತಿ ಕಾರ್ಯಾಗಾರ Read More »

error: Content is protected !!
Scroll to Top