ಜಮೀನಿನ ನಕ್ಷೆ ನೀಡಲು ಸರ್ವೆಯರ್‍ ನಿಂದ ಲಂಚ ಸ್ವೀಕಾರ : ಲೋಕಾಯುಕ್ತರ ಬಲೆಗೆ

ಮಂಗಳೂರು: ಲಂಚ ಸ್ವೀಕರಿಸುತ್ತಿರುವ ಸಂದರ್ಭ ಸರ್ವೆಯರ್ ಶೀತಲ್ ರಾಜ್ ಎಂಬವರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಜಮೀನಿನ ನಕ್ಷೆ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ನೀರುಮಾರ್ಗದ ಲಿಲ್ಲಿ ಪೀಟರ್ ವಾಸ್ ಇವರ ಪರವಾಗಿ ಸ್ಟೆಲ್ಲಾ ಜಾನೆಟ್ ವಾಸ್ ಅವರ ಹೆಸರಿಗೆ ತತ್ಕಾಲ್ ಪೋಡಿ ಮಾಡಿಕೊಡುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯ ಪಹಣಿ ವಿಭಾಗದಲ್ಲಿ ಆನ್‌ಲೈನ್ ಮುಖಾಂತರ ಜಮೀನಿನ ತತ್ಕಾಲ್ ಪೋಡಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಸಮಯ ಸರಕಾರಿ ಶುಲ್ಕ 1500 ರೂ. ಪಾವತಿಸಿ ರಶೀದಿ ಪಡೆದಿದ್ದರು. […]

ಜಮೀನಿನ ನಕ್ಷೆ ನೀಡಲು ಸರ್ವೆಯರ್‍ ನಿಂದ ಲಂಚ ಸ್ವೀಕಾರ : ಲೋಕಾಯುಕ್ತರ ಬಲೆಗೆ Read More »

ವೈಜ್ಞಾನಿಕ ಜೇನು ಕೃಷಿ ತರಬೇತಿ ಹಾಗೂ ಜೇನು ಪೆಟ್ಟಿಗೆ, ಕೃಷಿ ಪರಿಕರಗಳ ವಿತರಣಾ ಕಾರ್ಯಕ್ರಮ

ಸುಳ್ಯ: ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವೈಜ್ಞಾನಿಕ ಜೇನು ಕೃಷಿ ಕುರಿತು ತರಬೇತಿ ಕಾರ್ಯಕ್ರಮ ಸುಳ್ಯ ತಾಲೂಕಿನ ಉಬರಡ್ಕ ಗ್ರಾಮ ಪಂಚಾಯತ್ ನಲ್ಲಿ ನಡೆಯಿತು. ಹರೀಶ್ ಉಬರಡ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರಿಗೆ ಜೇನು ಕೃಷಿಯ ಕುರಿತು ವೈಜ್ಞಾನಿಕ ಮಾಹಿತಿಯನ್ನು ಪಡೆದುಕೊಳ್ಳಲು ತಿಳಿಸಿದರು. ಡಾ. ಟಿ. ಜೆ. ರಮೇಶ ರವರು ವೈಜ್ಞಾನಿಕ ಜೇನು ಕೃಷಿಯ ಮಹತ್ವದ ಕುರಿತು ರೈತರಿಗೆ ಮಾಹಿತಿ ನೀಡಿದರು. ಡಾ. ಕೇದಾರನಾಥ ಹಾಗೂ ಗಿರಿಧರ ದಾಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವೈಜ್ಞಾನಿಕ ಜೇನು

ವೈಜ್ಞಾನಿಕ ಜೇನು ಕೃಷಿ ತರಬೇತಿ ಹಾಗೂ ಜೇನು ಪೆಟ್ಟಿಗೆ, ಕೃಷಿ ಪರಿಕರಗಳ ವಿತರಣಾ ಕಾರ್ಯಕ್ರಮ Read More »

ನುಡಿದಂತೆ ನಡೆವ ಸರಕಾರ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ : ಹರೀಶ್ ಕುಮಾರ್ | ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ

ಪುತ್ತೂರು: ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಗುರುವಾರ ಕಿಲ್ಲೇ ಮೈದಾನದಲ್ಲಿ ನಡೆಯಿತು. ಸಮಾವೇಶ ಉದ್ಘಾಟಿಸಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಮಾತನಾಡಿ, ಫಲಾನುಭವಿಗಳಿಗೆ ಕಾರ್ಯಕ್ರಮದ ಅರಿವು ನೀಡುವ ನಿಟ್ಟಿನಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ. ಸಿದ್ಧರಾಮಯ್ಯ ಅವರು ಎರಡನೇ ಮುಖ್ಯಮಂತ್ರಿ  ಅವಧಿಯಲ್ಲಿ ಮೂರು ತಿಂಗಳ ಅವಧಿಯಲ್ಲಿ ನಾಲ್ಕು ಗ್ಯಾರಂಟಿ ಅನುಷ್ಠಾನ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ನುಡಿದಂತೆ ನಡೆಯುವ ಸರಕಾರ ಕಾಂಗ್ರೆಸ್ ಎಂದು ತೋರಿಸಿಕೊಟ್ಟಿದ್ದಾರೆ ಎಂದ ಅವರು, ಪ್ರಸ್ತುತ ಸರಕಾರದಲ್ಲಿ ಯಾವುದೇ

ನುಡಿದಂತೆ ನಡೆವ ಸರಕಾರ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ : ಹರೀಶ್ ಕುಮಾರ್ | ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ Read More »

ಇಂಡಿಯನ್ ರೋಡ್ ಕಾಂಗ್ರೆಸ್ ತಾಂತ್ರಿಕ ಸಮಿತಿ ಸದಸ್ಯರಾಗಿ ಹರ್ಷಕುಮಾರ್ ರೈ ಮಾಡಾವು ನೇಮಕ

ಪುತ್ತೂರು: ಭಾರತ ಸರಕಾರ ಸಾಮ್ಯದ ಇಂಡಿಯನ್ ರೋಡ್ ಕಾಂಗ್ರೆಸ್ ನ ತಾಂತ್ರಿಕ ಸಮಿತಿಗೆ ಸದಸ್ಯರಾಗಿ ಪುತ್ತೂರಿನ ಹೈವೇ ಇಂಜಿನಿಯರ್ ಹರ್ಷ ಕುಮಾರ್ ರೈ ಮಾಡಾವು ನೇಮಕಗೊಂಡಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಆರ್ಕಿಟೆಕ್ಟ್ ಮತ್ತು ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರು ಬೈಟ್ ವೇ ಇಂಡಿಯಾ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದಾರೆ. ಇಂಡಿಯನ್ ರೋಡ್ ಕಾಂಗ್ರೆಸ್ 1934 ಇಸವಿಯಲ್ಲಿ ಸ್ಥಾಪನೆಗೊಂಡಿದ್ದು, ನವದೆಹಲಿಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿದೆ. ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟ ಹೊಸ ಹೊಸ ವಿನ್ಯಾಸ ಮತ್ತು ತಂತ್ರಜ್ಞಾನ

ಇಂಡಿಯನ್ ರೋಡ್ ಕಾಂಗ್ರೆಸ್ ತಾಂತ್ರಿಕ ಸಮಿತಿ ಸದಸ್ಯರಾಗಿ ಹರ್ಷಕುಮಾರ್ ರೈ ಮಾಡಾವು ನೇಮಕ Read More »

ತಾಂತ್ರಿಕ ಹಾಗೂ ಸಾಹಿತ್ಯಿಕ ಪ್ರತಿಭೆಗಳ ಅನಾವರಣ ಕಾರ್ಯಕ್ರಮ ‘ಚತುರಂ’ ಗೆ ಚಾಲನೆ

ಪುತ್ತೂರು: ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯಗಳಲ್ಲಿ ಪರಿಣತರೇ ಆಗಿರುತ್ತಾರೆ. ಸೂಕ್ತ ಅವಕಾಶಗಳು ಹಾಗೂ ಸರಿಯಾದ ವೇದಿಕೆಗಳು ಸಿಕ್ಕಿದಾಗ ಅವರ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಚತುರಂ ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿದೆ ಎಂದು ಸ್ವಾಯತ್ತ ವಿವೇಕಾನಂದ ಪದವಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಪ್ರಕಾಶ್ ಕುಮಾರ್.ಪಿ ಹೇಳಿದರು. ಅವರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಐಇಇಇ ವಿದ್ಯಾರ್ಥಿ ವಿಭಾಗದ ಆಶ್ರಯದಲ್ಲಿ ನಡೆದ ತಾಂತ್ರಿಕ ಹಾಗೂ ಸಾಹಿತ್ಯಿಕ ಪ್ರತಿಭೆಗಳ

ತಾಂತ್ರಿಕ ಹಾಗೂ ಸಾಹಿತ್ಯಿಕ ಪ್ರತಿಭೆಗಳ ಅನಾವರಣ ಕಾರ್ಯಕ್ರಮ ‘ಚತುರಂ’ ಗೆ ಚಾಲನೆ Read More »

ನಗರದಲ್ಲಿ ತೀರಾ ಹದಗೆಟ್ಟ ರಸ್ತೆಗಳನ್ನು ದುರಸ್ತಿಪಡಿಸುವಂತೆ ಪೌರಾಯುಕ್ತರಿಗೆ ಪುತ್ತಿಲ ಪರಿವಾರದಿಂದ ಮನವಿ | ಪ್ರತಿಭಟನೆ ಎಚ್ಚರಿಕೆ ನೀಡಿದ ಪುತ್ತಿಲ ಪರಿವಾರ

ಪುತ್ತೂರು: ನಗರದ ಪ್ರಮುಖ ರಸ್ತೆಗಳು ವಾಹನ ಸಂಚಾರಕ್ಕೆ ಅಸಾಧ್ಯವಾಗಿರುವ ರೀತಿಯಲ್ಲಿ ಇದ್ದು ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದೆ. ತಕ್ಷಣ ರಸ್ತೆ ದುರಸ್ತಿಪಡಿಸಬೇಕೆಂದು ಪುತ್ತಿಲ ಪರಿವಾರ ನಗರಸಭೆ ಪೌರಾಯುಕ್ತರಿಗೆ ಮನವಿ ಮೂಲಕ ವಿನಂತಿಸಿದೆ. ಪುತ್ತೂರು ಗಾಂಧಿಕಟ್ಟೆ ಬಳಿ ರಸ್ತೆ ಸಹಿತ  ವಿಶ್ವಕರ್ಮ ಸಭಾಭವನದ ಬಳಿಯಲ್ಲಿ ಹದೆಗೆಟ್ಟಿರುವ ಈ ರಸ್ತೆಯನ್ನು ತಕ್ಷಣ ಸರಿಪಡಿಸಿ ವಾಹನ ಸಂಚಾರಕ್ಕೆ ಯೋಗ್ಯವಾಗಿ ದುರಸ್ಥಿಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ. ಮುಂದಿನ ದಿವಸಗಳಲ್ಲಿ ರಸ್ತೆ ತಡೆಮಾಡಿ ಪ್ರತಿಭಟನೆಯನ್ನು ಸಾರ್ವಜನಿಕರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವುದು ಎಂದು

ನಗರದಲ್ಲಿ ತೀರಾ ಹದಗೆಟ್ಟ ರಸ್ತೆಗಳನ್ನು ದುರಸ್ತಿಪಡಿಸುವಂತೆ ಪೌರಾಯುಕ್ತರಿಗೆ ಪುತ್ತಿಲ ಪರಿವಾರದಿಂದ ಮನವಿ | ಪ್ರತಿಭಟನೆ ಎಚ್ಚರಿಕೆ ನೀಡಿದ ಪುತ್ತಿಲ ಪರಿವಾರ Read More »

ರಾಮೇಶ್ವರಂ ಕೆಫೆ ಬ್ಲಾಸ್ಟ್ ಶಂಕಿತನ ರೇಖಾಚಿತ್ರ ಬಿಡುಗಡೆ

ಬೆಂಗಳೂರು : ರಾಮೇಶ್ವರಂ ಕೆಫೆ ಬ್ಲಾಸ್ಟ್‌ನ ಶಂಕಿತ ಉಗ್ರನ ಸುಳಿವಿಗೆ 10 ಲಕ್ಷ ನಗದು ಬಹುಮಾನ ಘೋಷಣೆ ಬೆನ್ನಲ್ಲೇ ಬಾಂಬರ್‍ ನ ರೇಖಾಚಿತ್ರವನ್ನು ಸಿಸಿಬಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಬಾಂಬರ್‍ ನ ಸಿಸಿಟಿವಿ ಫೋಟೋವನ್ನು ಬುಧವಾರ ಎನ್‌ಐಎ ಬಿಡುಗಡೆ ಮಾಡಿತ್ತು. ಆದರೆ ಬಾಂಬರ್‍ ನ ಚಹರೆ ದೃಶ್ಯ ಸಮರ್ಪಕವಾಗಿ ಸ್ಪಷ್ಟವಾಗದ ಹಿನ್ನಲೆಯಲ್ಲಿ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ. ಸಿಸಿ ಟಿವಿ ದೃಶ್ಯ ಬಿಡುಗಡೆಗೊಂಡಾಗ ಆರೋಪಿಯನ್ನು ನೋಡಿದ್ದಾಗಿ ಸಾರ್ವಜನಿಕರಿಂದ ಸಾಕಷ್ಟು ಕರೆಗಳು ಬಂದಿವೆ ಈ ಹಿನ್ನಲೆಯಲ್ಲಿ ರೇಖಾಚಿತ್ರ ಬಿಡುಗಡೆ ಮಾಡಲು

ರಾಮೇಶ್ವರಂ ಕೆಫೆ ಬ್ಲಾಸ್ಟ್ ಶಂಕಿತನ ರೇಖಾಚಿತ್ರ ಬಿಡುಗಡೆ Read More »

ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ

ಪುತ್ತೂರು: ನಮ್ಮ ಪ್ರತಿಯೊಂದು ದೈನಂದಿನ ವ್ಯವಹಾರಗಳಲ್ಲಿ ನಾವು ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಬಳಕೆ ಮಾಡುತ್ತೇವೆ. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ತಂತ್ರಜ್ಞಾನಗಳನ್ನು ನಾವು ಅರಿತುಕೊಂಡರೆ ಜೀವನ ಸುಗಮವಾಗುತ್ತದೆ ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಮೂಲ ವಿಜ್ಞಾನ ವಿಭಾಗ ಹಾಗೂ ಐಎಸ್‌ಟಿಇ ವಿದ್ಯಾರ್ಥಿ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಸಂದರ್ಭದಲ್ಲಿ

ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ Read More »

ಸಮುದ್ರ ಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ

ಉಪ್ಪಳ: ಸಮುದ್ರಪಾಲಾಗಿದ್ದ ವಿದ್ಯಾರ್ಥಿಯೊಬ್ಬನ ಮೃತದೇಹ ಉಪ್ಪಳ ಠಾಣಾ ವ್ಯಾಪ್ತಿಯ ಮೂಸೋಡಿ ಬಳಿಯ ಸಮುದ್ರದಲ್ಲಿ ಬುಧವಾರ ಪತ್ತೆಯಾಗಿದೆ. ಪೊರ್ಕೋಡಿ ನಿವಾಸಿ ವಿದ್ಯಾರ್ಥಿ ಲಿಖಿತ್ (18) ಮೃತದೇಹ ಪತ್ತೆಯಾಗಿದೆ. ಮೂರು ದಿನಗಳ ಬಳಿಕ ಮೃತದೇಹ ಕೊಳೆತ ಸ್ಥಿತಿಯಲ್ಲಿ ದೊರೆತಿದ್ದು, ಕುತ್ತಿಗೆಯಲ್ಲಿ ಚೈನ್, ಒಳ ಉಡುಪು ಆಧಾರದಲ್ಲಿ ಲಿಖಿತ್ ಎಂದು ಗುರುತಿಸಲಾಗಿದೆ. ಸ್ಥಳೀಯ ಪೊಲೀಸರು ಮಂಗಲ್ಪಾಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಸಂಬಂಧಪಟ್ಟ ಪಣಂಬೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಕಳೆದ ಭಾನುವಾರ ಪೊರ್ಕೋಡಿಯ ಸ್ನೇಹಿತರಾದ ನಾಗರಾಜ್‌ (24), ಮಿಲನ್‌ (20) ಹಾಗೂ

ಸಮುದ್ರ ಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ Read More »

ಮುರಳೀಕೃಷ್ಣ ಹಸಂತಡ್ಕ ಪೊಲೀಸ್ ವಶದಿಂದ ಬಿಡುಗಡೆ | ಪುತ್ತೂರಿನಲ್ಲಿ ಸ್ವಾಗತ

ಪುತ್ತೂರು: ತುಮಕೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ತೆರಳುತ್ತಿದ್ದ ವೇಳೆ ಪೊಲೀಸ್ ವಶವಾದ ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಅವರು ಬಿಡುಗಡೆಗೊಂಡು ಪುತ್ತೂರಿಗೆ ಆಗಮಿಸಿದಾಗ ಕಾರ್ಯಕರ್ತರು ಅವರನ್ನು ಬೊಳುವಾರಿನಲ್ಲಿ ಕೇಸರಿ ಶಲ್ಯ ಹಾಕುವ ಮೂಲಕ ಸ್ವಾಗತಿಸಿದರು. ಮುರಳೀಕೃಷ್ಣ ಹಸಂತಡ್ಕ ಅವರು ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಎದುರು ಕಾರಿನಿಂದ ಇಳಿದು ಆಂಜನೇಯ ಸ್ವಾಮಿಗೆ ನಮಸ್ಕರಿಸಿ ಕಾರ್ಯಕರ್ತರಿಂದ ಶಲ್ಯ, ಹಾರವನ್ನು ಪಡೆದು ಕೊಂಡರು. ಅವರ ಜೊತೆಗಿದ್ದ ವಿಹಿಂಪದ ಜಯಂತ್ ಕುಂಜೂರುಪಂಜ ಅವರಿಗೂ ಶಲ್ಯ ಹಾಕಿ ಸ್ವಾಗತಿಸಲಾಯಿತು.

ಮುರಳೀಕೃಷ್ಣ ಹಸಂತಡ್ಕ ಪೊಲೀಸ್ ವಶದಿಂದ ಬಿಡುಗಡೆ | ಪುತ್ತೂರಿನಲ್ಲಿ ಸ್ವಾಗತ Read More »

error: Content is protected !!
Scroll to Top