ಇಂದು ಅಂತಿಮಗೊಳ್ಳಲಿದೆ ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ |  28 ರಲ್ಲಿ 25 ಕ್ಷೇತ್ರಗಳಲ್ಲಿ ಗೆಲುವು ಗ್ಯಾರಂಟಿ : ಬಿ.ಎಸ್.ಯಡಿಯೂರಪ್ಪ

ದೆಹಲಿ: ಇಂದು ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ ಎಂದು ಮಾಜಿ ಸಿಎಂ ಬಿ.ಎಸ್‍.ಯಡಿಯೂರಪ್ಪ ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದೆಹಲಿಯಲ್ಲಿದ್ದು, ಈ ಕುರಿತು ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಿದ್ದಾರೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಈ ಬಾರಿ ಗೆಲುವು ಗ್ಯಾರಂಟಿ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರು ಲೋಕಸಭಾ ಅಭ್ಯರ್ಥಿ ವಿಚಾರದ ಕುರಿತು ಯದುವೀರ್‍ ಅವರಲ್ಲಿ ಚರ್ಚೆ ಮಾಡಿರುವ ಕುರಿತು ಇಲ್ಲಿ ಚರ್ಚೆ ಮಾಡುವುದಿಲ್ಲ ಎಂದಿದ್ದಾರೆ. ಹಾಲಿ ಎಂಪಿಗಳಿಗೆ ಟಿಕೆಟ್ ಕೈತಪ್ಪುವ ವಿಚಾರವಾಗಿ […]

ಇಂದು ಅಂತಿಮಗೊಳ್ಳಲಿದೆ ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ |  28 ರಲ್ಲಿ 25 ಕ್ಷೇತ್ರಗಳಲ್ಲಿ ಗೆಲುವು ಗ್ಯಾರಂಟಿ : ಬಿ.ಎಸ್.ಯಡಿಯೂರಪ್ಪ Read More »

ಬಿಜೆಪಿ ದ.ಕ.ಜಿಲ್ಲಾ ಪ್ರಕೋಷ್ಟಗಳ ಸಹಸಂಚಾಲಕರಾಗಿ ಪ್ರಸನ್ನ ದರ್ಬೆ ನಿಯುಕ್ತಿ

ಪುತ್ತೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಪ್ರಕೋಷ್ಟಗಳ ಸಹ ಸಂಚಾಲಕರಾಗಿ ಪ್ರಸನ್ನ ದರ್ಬೆ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಈ ಕುರಿತು ಪಕ್ಷದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆ ನೀಡಿದ್ದು, ಲೋಕೋಪಯೋಗಿ ಇಲಾಖೆ ಕೇಂದ್ರ ವಲಯ ವ್ಯಾಪ್ತಿಯ ಶಿವಮೊಗ್ಗ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ದಾವಣಗೆರೆ ವ್ಯಾಪ್ತಿಯಲ್ಲಿ ಬರುವ ಕಟ್ಟಡ, ಸೇತುವೆ ಮತ್ತು ರಸ್ತೆ ಇತ್ಯಾದಿ ಕಾಮಗಾರಿಗಳ ಸ್ಟ್ರಕ್ಚರಲ್ ವಿನ್ಯಾಸ ಇಂಜಿನಿಯರ್ ಆಗಿ ಆಯ್ಕೆಯಾಗಿರುವ ಪ್ರಸನ್ನ ದರ್ಬೆ ಅವರು, ಸರಕಾರಿ ಹುದ್ದೆಯನ್ನು ತೊರೆದು ದಕ್ಷಿಣ

ಬಿಜೆಪಿ ದ.ಕ.ಜಿಲ್ಲಾ ಪ್ರಕೋಷ್ಟಗಳ ಸಹಸಂಚಾಲಕರಾಗಿ ಪ್ರಸನ್ನ ದರ್ಬೆ ನಿಯುಕ್ತಿ Read More »

ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ತಾಳಮದ್ದಳೆ

ಬೆಳ್ತಂಗಡಿ: ಶ್ರೀ ಮಹಿಷಮರ್ಧಿನಿ ಯಕ್ಷಗಾನ ಪ್ರತಿಷ್ಠಾನ, ಚಾರ- ಹೆಬ್ರಿ ಇದರ ಸಂಯೋಜನೆಯಲ್ಲಿ ಬೆಳ್ತಂಗಡಿ ತಾಲೂಕಿನ ರುದ್ರಗಿರಿ ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಶಿವಭಕ್ತ ಪುರುಷಮೃಗ ತಾಳಮದ್ದಳೆ ಜರಗಿತು. ಭಾಗವತರಾಗಿ ಶ್ರೀಮತಿ ಅಮೃತ ಅಡಿಗ, ಹಿಮ್ಮೇಳನದಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್ ಮತ್ತು ಪದ್ಯಾಣ ಜಯರಾಮ ಭಟ್ ಅರ್ಥಧಾರಿಗಳಾಗಿ ನಾ. ಕಾರಂತ ಪೆರಾಜೆ, ವಿದ್ವಾನ್ ಡಾ. ವಿನಾಯಕ ಭಟ್ ಗಾಳಿಮನೆ, ದಿವಾಕರ ಆಚಾರ್ಯ ಗೇರುಕಟ್ಟೆ, ವಿದ್ವಾನ್ ಕೇಕಣಾಜೆ ಕೇಶವ ಭಟ್, ಚಾರ ಪ್ರದೀಪ್ ಹೆಬ್ಬಾರ್ ಭಾಗವಹಿಸಿದ್ದರು.

ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ತಾಳಮದ್ದಳೆ Read More »

ದಕ್ಷಿಣ ಭಾರತ ಹಿರಿಯರ ಕ್ರೀಡಾಕೂಟದಲ್ಲಿ ವೆಂಕಟೇಶ್ ಪ್ರಸಾದ್ ರಿಗೆ ಪ್ರಶಸ್ತಿ

ಪುತ್ತೂರು: ಉಡುಪಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಉಡುಪಿ ಅಜ್ಜರಕಾಡಿನ ಮಹಾತ್ಮಾ ಗಾಂಧಿ ಸ್ಟೇಡಿಯಂನಲ್ಲಿ ಎರಡು ದಿನಗಳ ಕಾಲ ನಡೆದ 2ನೇ ದಕ್ಷಿಣ ಭಾರತ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ದರ್ಬೆತ್ತಡ್ಕ ವೆಂಕಟೇಶ್ ಪ್ರಸಾದ್ ಇವರು 45ರ ವಯೋಮಾನದ 110 ಮೀ ಹರ್ಡಲ್ಸ್ ನಲ್ಲಿ ಪ್ರಥಮ , ಹೈಜಂಪ್  ಹಾಗೂ 4×100 ಮೀ ರಿಲೇಗಳಲ್ಲಿ ಚತುರ್ಥ ಸ್ಥಾನ ಗಳಿಸಿದ್ದಾರೆ. ದರ್ಬೆತ್ತಡ್ಕ ಹಿರಿಯ ಪ್ರಾಥಮಿಕ ಶಾಲೆ, ಪೆರ್ನಾಜೆ ಶ್ರೀ ಸೀತಾರಾಘವ ಪದವಿಪೂರ್ವ ಕಾಲೇಜು ಹಾಗೂ

ದಕ್ಷಿಣ ಭಾರತ ಹಿರಿಯರ ಕ್ರೀಡಾಕೂಟದಲ್ಲಿ ವೆಂಕಟೇಶ್ ಪ್ರಸಾದ್ ರಿಗೆ ಪ್ರಶಸ್ತಿ Read More »

ಮಾ.13 : ಪುತ್ತೂರಿನಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ

ಪುತ್ತೂರು: ಕರ್ನಾಟಕ ಲೋಕಾಯುಕ್ತ ಮಂಗಳೂರು ಘಟಕದ ವತಿಯಿಂದ ಲೋಕಾಯುಕ್ತ ಜನ ಸಂಪರ್ಕ ಸಭೆ ಮಾ.13 ಬುಧವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಆಡಳಿತದಲ್ಲಿನ ದುರಾಡಳಿತವನ್ನು ಸರಿಪಡಿಸಿ ಪಾರದರ್ಶಕ ಆಡಳಿತ ಒದಗಿಸುವ ನಿಟ್ಟಿನಲ್ಲಿ ಲೋಕಾಯುಕ್ತರು, ಪೊಲೀಸ್ ಮಹಾನಿರ್ದಶಕರು ಹಾಗೂ ನಿಬಂಧಕರು ಈಗಾಗಲೇ ಹೊರಡಿಸಿರುವ ಆದೇಶದಂತೆ ಈ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ, ಇನ್ನಿತರ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ನಿಗದಿತ ಪತ್ರದಲ್ಲಿ ದೂರು ಅರ್ಜಿಗಳನ್ನು ನೀಡಬಹುದು. ಬೆಳಿಗ್ಗೆ 11 ಗಂಟೆಗೆ ಸಭೆ ನಿಗದಿಪಡಿಸಲಾಗಿದ್ದು,

ಮಾ.13 : ಪುತ್ತೂರಿನಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ Read More »

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‍ ದರೋಡೆ | ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ

ವಿಟ್ಲ: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಶೇಷ ತಂಡ ಮೂವರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ರಫೀಕ್ ಯಾನೆ ಗೂಡಿನ ಬಳಿ ರಫೀಕ್, ಮೂಲತಃ ಸುಳ್ಯದ ಕೊಯಿಲ, ಕಾಸರಗೋಡಿನ ಚೌಕಿ ನಿವಾಸಿ ಖಲಂದರ್ ಹಾಗೂ ಬಾಯಾರು ನಿವಾಸಿ ದಯಾನಂದ ಬಂಧಿತ ಪ್ರಮುಖ ಆರೋಪಿಗಳು. ಫೆ. 7 ರಂದು ರಾತ್ರಿ ಬ್ಯಾಂಕ್ ಕಟ್ಟಡದ ಹಿಂಬದಿ ಕಿಟಕಿಯ ಸರಳುಗಳನ್ನು ತುಂಡರಿಸಿ ಒಳನುಗ್ಗಿದ ಆರೋಪಿಗಳು ಕೋಟ್ಯಾಂತರ ಮೌಲ್ಯದ ಚಿನ್ನಾಭರಣ

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‍ ದರೋಡೆ | ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ Read More »

ಕಾನೂನು ಬಾಹಿರ ಆಟೋ ಚಾಲನೆ | ದಂಡ ವಿಧಿಸಿದ ಪೊಲೀಸರು | ಚಾಲಕನಿಂದ ಸರಕಾರಿ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ

ಬಂಟ್ವಾಳ: ಆಟೋರಿಕ್ಷಾ ಚಲಾಯಿಸುತ್ತಿದ್ದ ವ್ಯಕ್ತಿಯೋರ್ವನನ್ನು ಟ್ರಾಫಿಕ್ ಪೋಲೀಸರು ತಡೆದು ದಂಡ ಹಾಕಿದ್ದಾರೆ. ಈ ಕಾರಣಕ್ಕೆ ಆವೇಶಕ್ಕೊಳಗಾದ ಆಟೋ ಚಾಲಕ, ಟ್ರಾಫಿಕ್ ಎಸ್.ಐ. ಹಾಗೂ ಸರಕಾರಿ ‌ವಾಹನಕ್ಕೆ ಮತ್ತು ಅಟೋ ರಿಕ್ಷಾಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದ ಘಟನೆ ಬಿಸಿರೋಡಿನ ‌ಕೈಕಂಬದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಗೂಡಿನಬಳಿ ನಿವಾಸಿ ಮಹಮ್ಮದ್ ಅನ್ಸಾರ್ ಪ್ರಕರಣದ ಆರೋಪಿಯಾಗಿದ್ದು ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಈತ ಕಾನೂನುಬಾಹಿರವಾಗಿ ಯೂನಿಫಾರ್ಮ್‍ ಹಾಕದೆ, ಮೊಬೈಲ್‍ನಲ್ಲಿ ಮಾತನಾಡಿಕೊಂಡು ಆಟೋ ಓಡಿಸುತ್ತಿದ್ದ. ತಕ್ಷಣ ಪೊಲೀಸರು ಈತನನ್ನು ತಡೆಹಿಡಿದು ಎರಡು ಸಾವಿರ

ಕಾನೂನು ಬಾಹಿರ ಆಟೋ ಚಾಲನೆ | ದಂಡ ವಿಧಿಸಿದ ಪೊಲೀಸರು | ಚಾಲಕನಿಂದ ಸರಕಾರಿ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ Read More »

ಹೃದಯಾಘಾತದಿಂದ ಯುವಕ ಉದಯ ಮೃತ್ಯು !

ಬಂಟ್ವಾಳ: ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಮೆಲ್ಕಾರ್ ನಲ್ಲಿ ನಡೆದಿದೆ. ಉದಯ (36) ಮೃತಪಟ್ಟ ಯುವಕ ಉದಯ ಅವರು ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಗ್ರಂಥಪಾಲಕನಾಗಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಭಾನುವಾರ ರಾತ್ರಿ ಊಟ ಮಾಡಿ ಮಲಗಿದವರನ್ನು ಇಂದು ಬೆಳಿಗ್ಗೆ ಮನೆಯರು ಎಬ್ಬಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಆಸ್ಪತ್ರೆಗೆ ಕರೆತಂದರು. ವೈದ್ಯರು ಪರೀಕ್ಷಿಸಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಬಂಟ್ವಾಳ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೃದಯಾಘಾತದಿಂದ ಯುವಕ ಉದಯ ಮೃತ್ಯು ! Read More »

ಭಾರತೀಯ ಮೂಲದ ಮಹಿಳೆ ಚೈತನ್ಯ ಶವ ಆಸ್ಟ್ರೇಲಿಯಾದ ಕಸದ ತೊಟ್ಟಿಯಲ್ಲಿ ಪತ್ತೆ | ಪತಿಯೇ ಕೃತ್ಯ ಎಸಗಿರುವ ಶಂಕೆ

ಪುತ್ತೂರು: ಭಾರತೀಯ ಮೂಲದ ಮಹಿಳೆಯೊಬ್ಬರ ಶವ ಕಸದ ತೊಟ್ಟಿಯಲ್ಲಿ ಪತ್ತೆಯಾದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಹೈದರಾಬಾದ್ ಮೂಲದ ಚೈತನ್ಯ ಮದಗಣಿ (36) ಮೃತ ಮಹಿಳೆ. ಈಕೆಯ ಶವ ಆಸ್ಟ್ರೇಲಿಯಾದ ಬಕ್ಲಿಯ ರಸ್ತೆ ಬದಿಯಲ್ಲಿ ಇರಿಸಿದ್ದ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಚೈತನ್ಯ ಹಲವು ವರ್ಷಗಳಿಂದ ತನ್ನ ಪತಿ ಅಶೋಕ್‍ ಜತೆ ಆಸ್ಟ್ರೇಲಿಯಾದ ಪಾಯಿಂಟ್ ಕುಕ್ಕ್ ಎಂಬಲ್ಲಿ ವಾಸವಾಗಿದ್ದು, ಒಂದು ಗಂಡು ಮಗು ಹೊಂದಿದ್ದಾರೆ. ಶನಿವಾರ ಪೊಲೀಸರು ಮಹಿಳೆಯ ಶವವನ್ನು ಪತ್ತೆ ಹಚ್ಚಿದ್ದು, ಪ್ರಾಥಮಿಕ ತನಿಖೆ

ಭಾರತೀಯ ಮೂಲದ ಮಹಿಳೆ ಚೈತನ್ಯ ಶವ ಆಸ್ಟ್ರೇಲಿಯಾದ ಕಸದ ತೊಟ್ಟಿಯಲ್ಲಿ ಪತ್ತೆ | ಪತಿಯೇ ಕೃತ್ಯ ಎಸಗಿರುವ ಶಂಕೆ Read More »

ಹಿರಿಯ ಲೇಖಕ, ಪತ್ರಕರ್ತ ನಾಗರಾಜ ಪೂವಣಿ ನಿಧನ

ಬೆಳ್ತಂಗಡಿ: ಹಿರಿಯ ಲೇಖಕ, ಪ್ರಾಧ್ಯಾಪಕ, ಪತ್ರಕರ್ತ ನಾಗರಾಜ ಪೂವಣಿ  (‘ನಾ’ವುಜಿರೆ) (80) ಇಂದು ಸ್ವಗೃಹದಲ್ಲಿ ನಿಧನರಾದರು. ಅಲ್ಪಕಾಲದ ಅಸೌಖ್ಯದಿಂದ ಅವರು ಇಂದು ಮುಂಜಾನೆ ನಿಧನರಾದರು. ತಾಲೂಕಿನ ಹಿರಿಯ ಸಾಹಿತಿಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಉದಯವಾಣಿ ಪತ್ರಿಕೆಯಲ್ಲಿ ಹಲವಾರು ವರ್ಷಗಳ ಕಾಲ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಜತೆಗೆ ಶಿಕ್ಷಕರಾಗಿ ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಅಪಾರ ಉತ್ತಮ ಪಾಂಡಿತ್ಯ ಹೊಂದಿದ್ದರು. ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಹಿರಿಯ ಲೇಖಕ, ಪತ್ರಕರ್ತ ನಾಗರಾಜ ಪೂವಣಿ ನಿಧನ Read More »

error: Content is protected !!
Scroll to Top