ನಾಗಬ್ರಹ್ಮ ಕೋಟಿ-ಚೆನ್ನಯ ಆದಿ ಬೈದೇರುಗಳ ಗರಡಿಯಲ್ಲಿ ಎಣ್ಮೂರು ಶಾಲಾ ಮಕ್ಕಳಿಂದ ಶ್ರಮದಾನ

ನಿಂತಿಕಲ್ಲು: ಮಾ. 23 ರಂದು ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಬೈದೇರುಗಳ ಗರಡಿಯಲ್ಲಿ ನಡೆಯುವ ನೇಮೋತ್ಸವದ ಅಂಗವಾಗಿ ಸರಕಾರಿ ಪ್ರೌಢಶಾಲೆ ಎಣ್ಮೂರು ಶಾಲಾ ಸ್ಕೌಟ್-ಗೈಡ್ ಮಕ್ಕಳಿಂದ ಶ್ರಮದಾನ ನಡೆಯಿತು. ಎಣ್ಮೂರು ಶಾಲಾ ಸ್ಕೌಟ್-ಗೈಡ್ ನ 30 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಗರಡಿಯ ಸುತ್ತ ಮುತ್ತಲ ಪ್ರದೇಶದಲ್ಲಿರುವ ಗಿಡ-ಗಂಟಿಗಳು, ಕಸ ಕಡ್ಡಿಗಳನ್ನು ತೆರವುಗೊಳಿಸಿ ಶ್ರಮದಾನ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕರು, ಅಧ್ಯಾಪಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಾಗಬ್ರಹ್ಮ ಕೋಟಿ-ಚೆನ್ನಯ ಆದಿ ಬೈದೇರುಗಳ ಗರಡಿಯಲ್ಲಿ ಎಣ್ಮೂರು ಶಾಲಾ ಮಕ್ಕಳಿಂದ ಶ್ರಮದಾನ Read More »

ಮಹಾನ್ ಭಾರತದ ಕನಸಿನ ಸಾಕಾರಮೂರ್ತಿ ನರೇಂದ್ರ ಮೋದಿಯವರನ್ನು  ಪ್ರಧಾನಿಯಾಗಿಸಲು ಪ್ರತೀ ಮನಸ್ಸುಗಳು ಒಂದಾಗಬೇಕು :ಚಕ್ರವರ್ತಿ ಸೂಲಿಬೆಲೆ

ಪುತ್ತೂರು: ಮಹಾನ್ ಭಾರತದ ಕನಸಿನ ಸಾಕಾರಮೂರ್ತಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸುವಲ್ಲಿ ಪ್ರತಿ ಮನಸ್ಸುಗಳು ಒಂದಾಗಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಪುತ್ತೂರು ನಮೋ ಭಾರತ್ ವತಿಯಿಂದ ಗುರುವಾರ ಸಂಜೆ ನಗರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಹಿಂದಿನ ಗದ್ದೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ರಾಷ್ಟ್ರದ ಅಭಿವೃದ್ಧಿಗಾಗಿ 10 ವರ್ಷಗಳಲ್ಲಿ ಒಂದು ದಿನವೂ ರಜೆಯನ್ನು ಮಾಡದೆ ಶ್ರಮಿಸುವ ಪ್ರಧಾನಿ ನರೇಂದ್ರ ಮೋದಿಯವರು, ಸೈನಿಕರ ಜತೆ

ಮಹಾನ್ ಭಾರತದ ಕನಸಿನ ಸಾಕಾರಮೂರ್ತಿ ನರೇಂದ್ರ ಮೋದಿಯವರನ್ನು  ಪ್ರಧಾನಿಯಾಗಿಸಲು ಪ್ರತೀ ಮನಸ್ಸುಗಳು ಒಂದಾಗಬೇಕು :ಚಕ್ರವರ್ತಿ ಸೂಲಿಬೆಲೆ Read More »

ಸವಿತಾ ಕೋಡಂದೂರ್-ಸಿಂಚನಾಲಕ್ಷ್ಮೀ ಅಮ್ಮ-ಮಗಳ ದ್ವಂದ್ವ ಗಾಯನ

ಪುತ್ತೂರ: ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಮಹಾಶಿವರಾತ್ರಿ ದಿನದಂದು ಸ್ವರ ಸಿಂಚನ ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರ್ ಮತ್ತು ಸಿಂಚನ ಲಕ್ಷ್ಮಿ ಕೋಡಂದೂರ್ ಅಮ್ಮ ಮಗಳ ದ್ವಂದ್ವ ಗಾಯನ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಭಕ್ತರ ಮನಸೆಳೆಯಿತು ಮಹಾ ಮಹಿಮನ ಆರಾಧನೆಯಲ್ಲಿ ಮಗ್ನರಾದ ಶಿವಭಕ್ತ ವೃಂದಕ್ಕೆ ಸಂಗೀತ ಕಲಾ ಸೇವೆಯನ್ನು ನೀಡಿ ಮನಸೆಳೆದರು ಜನಪ್ರಿಯ ಶಿವ ಗೀತೆಗಳು ಸುಮಧುರ ಗೀತೆಗಳನ್ನು ಹಾಡಿ ತನ್ನ ಹೆಜ್ಜೆ ಗುರುತಿನಿಂದ ಎಲ್ಲರ ಮೆಚ್ಚುಗೆ ಗಳಿಸಿದರು. ಶಿವನೆಂದರೆ ದೈವಗಳಿಗೆ ಮಹಾದೇವ ಸತ್ಯ

ಸವಿತಾ ಕೋಡಂದೂರ್-ಸಿಂಚನಾಲಕ್ಷ್ಮೀ ಅಮ್ಮ-ಮಗಳ ದ್ವಂದ್ವ ಗಾಯನ Read More »

ಸ್ಕೂಟರ್ ಕಳವು : ಪ್ರಕರಣ ದಾಖಲು

ಬಂಟ್ವಾಳ: ಗ್ಯಾರೇಜ್ ಒಂದರ ಬಳಿ ನಿಲ್ಲಿಸಲಾಗಿದ್ದ ಸ್ಕೂಟರ್ ಕಳವಾದ ಘಟನೆ ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಮ್ಟಾಡಿ ಗ್ರಾಮದ ಜೈದುರ್ಗ ಗ್ಯಾರೇಜ್ ಬಳಿ ಸುರೇಶ್ ಎಂಬವರು ಆ್ಯಕ್ಸಿಸ್ ಸ್ಕೂಟರ್ ನಿಲ್ಲಿಸಿದ್ದರು. ಮರುದಿನ ಬಂದು ನೋಡಿದಾಗ ಸ್ಕೂಟರ್ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಸ್ಕೂಟರ್ ಮೌಲ್ಯ 45 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್ ಕಳವು : ಪ್ರಕರಣ ದಾಖಲು Read More »

ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ಸ್ಪರ್ಧೆ !

ಶಿವಮೊಗ್ಗ: ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ  ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದು, ಯಡಿಯೂರಪ್ಪನವರ ಪುತ್ರ ರಾಘವೇಂದ್ರ ಅವರ ವಿರುದ್ಧ ನಿಲ್ಲುವುದಾಗಿ ಸವಾಲು ಹಾಕಿದ್ದಾರೆ. ಕಾರ್ಯಕರ್ತರ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ. ಗೆದ್ದ ಎರಡು ತಿಂಗಳಿನಲ್ಲಿ ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರು ಅವರಿಗೆ ಬೇಕಾದವರಿಗೆ ಟಿಕೇಟ್ ನೀಡಿದ್ದಾರೆ. ಸೋತರೆ ಯಡಿಯೂರಪ್ಪನವರೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನಗೆ ಆರೋಗ್ಯ ಸರಿಯಿಲ್ಲ, ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಬೊಮ್ಮಾಯಿ ತಿಳಿಸಿದ್ದರು.

ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ಸ್ಪರ್ಧೆ ! Read More »

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಬಾಗಿಲು ಹಾಕಿ ಪ್ರಮುಖರ ಸಭೆ | ಮಾಧ್ಯಮ ಸಹಿತ ಇತರರಿಗೆ ಪ್ರವೇಶ ನಿರಾಕರಣೆ

ಪುತ್ತೂರು: ಪುತ್ತೂರು ಬಿಜೆಪಿ ಕಚೇರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಇಂದು ಸಂಜೆ ಭೇಟಿ ನೀಡಿದ್ದು, ಪ್ರಮುಖರ ಆಂತರಿಕ ಸಭೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿ ಕಚೇರಿಯ ಬಾಗಿಲು ಹಾಕಿ ಸಭೆ ನಡೆಸಲಾಗುತ್ತಿದೆ. ಮಾಧ್ಯಮ ಸಹಿತ ಇತರರಿಗೆ ಪ್ರವೇಶಕ್ಕೆ ಅವಕಾಶ ನೀಡಿಲ್ಲ ಎಂದು ತಿಳಿದು ಬಂದಿದೆ.

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಬಾಗಿಲು ಹಾಕಿ ಪ್ರಮುಖರ ಸಭೆ | ಮಾಧ್ಯಮ ಸಹಿತ ಇತರರಿಗೆ ಪ್ರವೇಶ ನಿರಾಕರಣೆ Read More »

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ  ಅಧ್ಯಕ್ಷ, ಸದಸ್ಯರ ನೇಮಕ | ಅಧ್ಯಕ್ಷರಾಗಿ ಡಾ.ದೇವಿಪ್ರಸಾದ್ ಕಾನತ್ತೂರ್

ಕಾಣಿಯೂರು: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಡಾ.ದೇವಿ ಪ್ರಸಾದ್ ಕಾನತ್ತೂರ್ ಅವರನ್ನು ಆಯ್ಕೆ ಮಾಡಲಾಗಿದೆ. ದೇವಸ್ಥಾನದ ಆಡಳಿತ ಅಧಿಕಾರಿ, ಸುಳ್ಯ ತಹಶೀಲ್ದಾರ್ ಮಂಜುನಾಥ ಅವರಿಂದ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಹಾಗೂ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿದೆ. ಸಮಿತಿ ಸದಸ್ಯರಾಗಿ ಸತ್ಯನಾರಾಯಣ ಭಟ್‍ ಕಾಯಂಬಾಡಿ, ರಾಮಚಂದ್ರ ಭಟ್ (ಅರ್ಚಕರು), ಸಂತೋಷ್ ಕುಮಾರ್ ರೈ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ  ಅಧ್ಯಕ್ಷ, ಸದಸ್ಯರ ನೇಮಕ | ಅಧ್ಯಕ್ಷರಾಗಿ ಡಾ.ದೇವಿಪ್ರಸಾದ್ ಕಾನತ್ತೂರ್ Read More »

ರಾಮೇಶ್ವರಂ ಕೆಫೆ ಬಾಂಬ್‍ ಬ್ಲಾಸ್ಟ್ | ಓರ್ವ ಆರೋಪಿಯನ್ನು ಎನ್‍.ಐ.ಎ. ವಶಕ್ಕೆ ಪಡೆದು ವಿಚಾರಣೆ

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಎನ್‍ ಐಎ ಅಧಿಕಾರಿಗಳು ಬಾಡಿ ವಾರಂಟ್ ಆಧಾರದ ಮೇಲೆ ಓರ್ವನನ್ನು ವಿಚಾರಣೆ ನಡೆಸುತ್ತಿದ್ದಾರೆ. ಮಾಜ್ ಮುನೀರ್ ಎಂಬಾತನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈತ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್‍ ನ ಪ್ರಮುಖ ಆರೋಪಿಯಾಗಿದ್ದಾನೆ ಎನ್ನಲಾಗಿದೆ. ಟ್ರಯಲ್ ಬ್ಲಾಸ್ಟ್ ಕೇಸ್ ಸಂಬಂಧ ಈತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಸದ್ಯ ಈತನನ್ನು 7 ದಿನಗಳ ಕಾಲ ಎನ್‍ ಐಎ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ರಾಮೇಶ್ವರಂ ಕೆಫೆ ಬಾಂಬ್‍ ಬ್ಲಾಸ್ಟ್ | ಓರ್ವ ಆರೋಪಿಯನ್ನು ಎನ್‍.ಐ.ಎ. ವಶಕ್ಕೆ ಪಡೆದು ವಿಚಾರಣೆ Read More »

ಬೆಂಗಳೂರು ಉತ್ತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಂ ಗೆ ಭೇಟಿ | ಆಶೀರ್ವದಿಸಿದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ

ಪುತ್ತೂರು: ಬೆಂಗಳೂರು ಉತ್ತರ ಕ್ಷೇತ್ರ ಲೋಕಸಭಾ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಂಗೆ ಶುಕ್ರವಾರ ಭೇಟಿ ನೀಡಿದರು. ಮಹಾಸಂಸ್ಥಾನದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಶೋಭಾ ಕರಂದ್ಲಾಜೆಯವರನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಕುರಿತು ಶ್ರೀ ಸ್ವಾಮೀಜಿವರಿಂದ ಮಾರ್ಗದರ್ಶನ ಪಡೆದರು.

ಬೆಂಗಳೂರು ಉತ್ತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಂ ಗೆ ಭೇಟಿ | ಆಶೀರ್ವದಿಸಿದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ Read More »

ಮೇ25 : ಎಸ್.ಆರ್.ಕೆ. ಲ್ಯಾಡರ್ಸ್‍ ಸಂಸ್ಥೆಯ ರಜತ ಸಂಭ್ರಮ ಸಮಾರೋಪ | ಕಲಾಯಿಗುತ್ತುವಿನಲ್ಲಿ ಭರದಿಂದ ಸಾಗುತ್ತಿದೆ ಮೈದಾನ ಸಮತಟ್ಟು ಕಾರ್ಯ

ಪುತ್ತೂರು: ಮೇ 25 ರಂದು ನಡೆಯಲಿರುವ ಪುತ್ತೂರಿನ ಎಸ್‍.ಆರ್‍.ಕೆ. ಲ್ಯಾಡರ್ಸ್‍ ಸಂಸ್ಥೆಯ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮದ ಪೂರ್ವಸಿದ್ಧತೆಗಾಗಿ 24 ಸಾವಿರ ಚದರ ಅಡಿ ವಿಸ್ತೀರ್ಣದ ಮೈದಾನ ಸಮತಟ್ಟು ಕೆಲಸ ಕಡಬ ತಾಲೂಕಿನ ಕೊಯಿಲ ಕಲಾಯಿಗುತ್ತುವಿನಲ್ಲಿ ಭರದಿಂದ ಸಾಗುತ್ತಿದೆ. ಸುಮಾರು 3600 ಚದರ ಅಡಿ ವಿಸ್ತೀರ್ಣದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ಸಮಾರೋಪ ನಡೆಯಲಿದೆ. ಒಟ್ಟಾರೆಯಾಗಿ ದಿನಪೂರ್ತಿ ಕಾರ್ಯಕ್ರಮಗಳು ನಡೆಯಲಿದ್ದು, ಈ ಹಿನ್ನಲೆಯಲ್ಲಿ ಜೆಸಿಬಿ ಮೂಲಕ ಕೆಲಸ ಕಾರ್ಯಗಳು ನಡೆಯುತ್ತಿವೆ.

ಮೇ25 : ಎಸ್.ಆರ್.ಕೆ. ಲ್ಯಾಡರ್ಸ್‍ ಸಂಸ್ಥೆಯ ರಜತ ಸಂಭ್ರಮ ಸಮಾರೋಪ | ಕಲಾಯಿಗುತ್ತುವಿನಲ್ಲಿ ಭರದಿಂದ ಸಾಗುತ್ತಿದೆ ಮೈದಾನ ಸಮತಟ್ಟು ಕಾರ್ಯ Read More »

error: Content is protected !!
Scroll to Top