ಕ್ಯಾ.ಬ್ರಿಜೇಶ್ ಚೌಟ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ

ವಿಟ್ಲ:  ಬಿಜೆಪಿ ದ.ಕ.ಜಿಲ್ಲಾ ಲೋಕಸಭೆ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿದರು. ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸಹಿತ ಹಲವಾರು ಮಂದಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. ಬಳಿಕ ವಿಟ್ಲ ಬಿಜೆಪಿ ಕಚೇರಿಗೆ ಭೇಟಿ ನೀಡಿದರು.

ಕ್ಯಾ.ಬ್ರಿಜೇಶ್ ಚೌಟ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ Read More »

ದ.ಕ.ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ರೈತರಿಗೆ ಪರವಾನಿಗೆ ಪಡೆದ ಆಯುಧಗಳನ್ನು ಠೇವಣಿ ಇಡಲು ವಿನಾಯಿತಿ ನೀಡಿ | ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಪುತ್ತೂರು: ಚುನಾವಣೆ ಸಂದರ್ಭದಲ್ಲಿ ರೈತರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪರವಾನಿಗೆ ಪಡೆದ ಕೋವಿಗಳನ್ನು ಠೇವಣಿ ಇರಿಸಲು ಆದೇಶ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಠೇವಣಿ ಇಡಲು ವಿನಾಯಿತಿ ನೀಡಬೇಕು ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ. ಈಗಾಗಲೇ ಕೇರಳ ರಾಜ್ಯದ ಹೈಕೋರ್ಟ್‍ ಪರವಾನಿಗೆ ಪಡೆದ ಆಯುಧಗಳನ್ನು ಠೇವಣಿ ಇಡುವ ವಿಚಾರದಲ್ಲಿ ವಿನಾಯಿತಿ ನೀಡಿದೆ. ಕಳೆದ ಬಾರಿಯೂ ಚುನಾವಣಾ ಸಂದರ್ಭದಲ್ಲಿ ವಿನಾಯಿತಿ ನೀಡುವಂತೆ ನಮ್ಮ ಸಂಘದಿಂದ ಮನವಿ ನೀಡಿದ್ದೆವು. ಆದರೆ ವಿನಾಯಿತಿ ನೀಡಲಾಗಿಲ್ಲ.

ದ.ಕ.ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ರೈತರಿಗೆ ಪರವಾನಿಗೆ ಪಡೆದ ಆಯುಧಗಳನ್ನು ಠೇವಣಿ ಇಡಲು ವಿನಾಯಿತಿ ನೀಡಿ | ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ Read More »

ಬಿಜೆಪಿ ಒಳಮೊಗ್ರು ಶಕ್ತಿಕೇಂದ್ರದ ಸಭೆ

ಪುತ್ತೂರು: ಬಿಜೆಪಿ ಒಳಮೊಗ್ರು ಶಕ್ತಿಕೇಂದ್ರ ಲೋಕಸಭಾ ಚುನಾವಣೆ ಹಾಗೂ ಅಭ್ಯರ್ಥಿಯ ಮಹಾಶಕ್ತಿ ಕೇಂದ್ರ ಭೇಟಿಯ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಬೂತ್ ಸಮಿತಿ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ ಅವರ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಚುನಾವಣಾ ಸಮಿತಿ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿ, ಚುನಾವಣಾ ಬೂತ್ ಕಾರ್ಯ ಹಾಗೂ ಅಭ್ಯರ್ಥಿ ಭೇಟಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ , ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ಹರೀಶ್

ಬಿಜೆಪಿ ಒಳಮೊಗ್ರು ಶಕ್ತಿಕೇಂದ್ರದ ಸಭೆ Read More »

ಲೋಕಸಭೆ ಚುನಾವಣೆ : ಕಾಂಗ್ರೆಸ್ ನ ಎರಡನೇ ಪಟ್ಟಿ ಬಿಡುಗಡೆ | ದ.ಕ. ಲೋಕಸಭಾ ಕ್ಷೇತ್ರಕ್ಕೆ ಪದ್ಮರಾಜ್

ಹೊಸದಿಲ್ಲಿ: ರಾಜ್ಯದ 17 ಮಂದಿ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಪಟ್ಟಿ ಈ ರೀತಿ ಇದೆ : ಚಿಕ್ಕೋಡಿ-ಪ್ರಿಯಂಕಾ ಜಾರಕಿಹೊಳಿ, ಬೆಳಗಾವಿ-ಮೃಣಾಲ್ ಹೆಬ್ಬಾಳ್ ಕರ್, ಬಾಗಲಕೋಟೆ- ಸಂಯುಕ್ತಾ ಎಸ್ ಪಾಟೀಲ್, ಕಲಬುರಗಿ – ರಾಧಾಕೃಷ್ಣ, ರಾಯಚೂರು-ಜಿ.ಕುಮಾರನಾಯಕ್, ಬೀದರ್-ಸಾಗರ್ ಖಂಡ್ರೆ, ಕೊಪ್ಪಳ-ರಾಜಶೇಖರ್ ಹಿಟ್ನಾಳ, ಧಾರವಾಡ-ವಿನೋದ್ ಅಸೂಟಿ, ಉತ್ತರಕನ್ನಡ -ಡಾ.ಅಂಜಲಿ ನಿಂಬಾಳ್ಕರ್, ದಾವಣಗೆರೆ-ಪ್ರಭಾ ಮಲ್ಲಿಕಾರ್ಜುನ್, ಉಡುಪಿ ಚಿಕ್ಕಮಗಳೂರು-ಡಾ.ಜಯಪ್ರಕಾಶ್ ಹೆಗ್ಡೆ, ದಕ್ಷಿಣಕನ್ನಡ-ಪದ್ಮರಾಜ್, ಚಿತ್ರದುರ್ಗ-ಬಿ.ಎನ್ ಚಂದ್ರಪ್ಪಮೈಸೂರು ಕೊಡಗು -ಎಂ. ಲಕ್ಷ್ಮಣ್,

ಲೋಕಸಭೆ ಚುನಾವಣೆ : ಕಾಂಗ್ರೆಸ್ ನ ಎರಡನೇ ಪಟ್ಟಿ ಬಿಡುಗಡೆ | ದ.ಕ. ಲೋಕಸಭಾ ಕ್ಷೇತ್ರಕ್ಕೆ ಪದ್ಮರಾಜ್ Read More »

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ !

ಹೊಸದಿಲ್ಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಲು ಜಾರಿ ನಿರ್ದೇಶನಾಲಯದ (ಇ.ಡಿ.) ತಂಡ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಗುರುವಾರ ಬಂಧಿಸಿದೆ. ಕೇಜ್ರಿವಾಲ್ ನಿವಾಸಕ್ಕೆ ಗುರುವಾರ ಸಂಜೆ ಆಗಮಿಸಿದ ತನಿಖಾ ಸಂಸ್ಥೆಯ ತಂಡವು ಮನಿ ಲಾಂಡರಿಂಗ್ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್ 50 ರ ಅಡಿಯಲ್ಲಿ ದೆಹಲಿ ಮುಖ್ಯಮಂತ್ರಿಯ ಹೇಳಿಕೆಯನ್ನು ದಾಖಲಿಸಿಕೊಂಡು ಬಂಧನ ಮಾಡಿದೆ. ಅರವಿಂದ್ ಕೇಜ್ರಿವಾಲ್ ಅವರ ಕಾನೂನು ತಂಡವು ತತ್ ಕ್ಷಣವೇ ಈ ವಿಷಯದ ತುರ್ತು ವಿಚಾರಣೆಯನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ! Read More »

ವಿದ್ಯಾರಶ್ಮಿ ಕಾಲೇಜಿನಲ್ಲಿ ವಿವೇಚನಾ ಶಕ್ತಿಯ ಹೆಚ್ಚಿಸುವಿಕೆಯ ಕುರಿತು ಮಾಹಿತಿ ಕಾರ್ಯಕ್ರಮ

ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ ನಿಗ್ರಹ ಘಟಕದ ವತಿಯಿಂದ ಮಾನವನಲ್ಲಿ ವಿವೇಚನಾ ಶಕ್ತಿಯ ಹೆಚ್ಚಿಸುವಿಕೆ ವಿಚಾರದ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ, ಇಂಜಿನಿಯರ್ ಅಶ್ವಿನ್ ಎಲ್. ಶೆಟ್ಟಿ, ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ನಾವು ಮಾಡುವ ಕೆಲಸ ನಿರಂತರವಾದ ಪ್ರಕ್ರಿಯೆಯಾಗಿರುವಂತೆ ನೋಡಿಕೊಳ್ಳಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಪಂಜದ ನೆಮ್ಮದಿ ಕೌನ್ಸೆಲಿಂಗ್ ಸೆಂಟರ್ ನ ಮಾಲಕಿ ಶ್ರದ್ಧಾ ಲಲಿತ್ ರೈ ಮಾತನಾಡಿ, ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು

ವಿದ್ಯಾರಶ್ಮಿ ಕಾಲೇಜಿನಲ್ಲಿ ವಿವೇಚನಾ ಶಕ್ತಿಯ ಹೆಚ್ಚಿಸುವಿಕೆಯ ಕುರಿತು ಮಾಹಿತಿ ಕಾರ್ಯಕ್ರಮ Read More »

ವಿವಾದಾತ್ಮಕ ದೇವಾಲಯಗಳ ತೆರಿಗೆ ಮಸೂದೆಗೆ ಸಹಿ ಹಾಕಲು ರಾಜ್ಯಪಾಲರಿಂದ ನಿರಾಕರಣೆ

ವಿವಾದಾತ್ಮಕ ದೇವಾಲಯಗಳ ತೆರಿಗೆ ಮಸೂದೆಗೆ ರಾಜ್ಯಪಾಲರು ಸಹಿ ಹಾಕಲು ನಿರಾಕರಿಸಿದ್ದು, ಈ ಕುರಿತು ರಾಜ್ಯ ಸರಕಾರದ ಎದುರು ಹಲವು ಪ್ರಶ್ನೆಗಳನ್ನು ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಮಸೂದೆಗೆ ಸಹಿ ಹಾಕಲು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿದ್ದಾರೆ ಎಂಬ ವರದಿಯನ್ನು ರಾಷ್ಟ್ರೀಯ ದೃಶ್ಯ ಮಾಧ್ಯಮವೊಂದು ಬಿತ್ತರಿಸಿದೆ. ದೇವಾಲಯಗಳಿಗೆ ಮಾತ್ರ ಯಾಕೆ ತೆರಿಗೆ, ಇತರ ಧಾರ್ಮಿಕ ಸಂಸ್ಥೆಗಳಿಗೆ ತೆರಿಗೆ ಯಾಕೆ ವಿಧಿಸಬಾರದು ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ದತ್ತಿಗಳ ಮಸೂದೆ-2024 ನ್ನು ಸಿದ್ಧರಾಮಯ್ಯ

ವಿವಾದಾತ್ಮಕ ದೇವಾಲಯಗಳ ತೆರಿಗೆ ಮಸೂದೆಗೆ ಸಹಿ ಹಾಕಲು ರಾಜ್ಯಪಾಲರಿಂದ ನಿರಾಕರಣೆ Read More »

ನಾಳೆ ಕ್ಯಾ.ಬ್ರಿಜೇಶ್ ಚೌಟ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಭೇಟಿ

ಪುತ್ತೂರು: ದ.ಕ.ಜಿಲ್ಲಾ ಲೋಕಸಭೆ ಬಿಜೆಪಿ ಅಭ್ಯರ್ಥಿ ಕ್ಯಾ,ಬ್ರಿಜೇಶ್ ಮಾ.22 ರಂದು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 8.30 ಕ್ಕೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ, ಬಳಿಕ ವಿಟ್ಲ ಅರಮನೆ, ವಿವಿಧ ದೇವಸ್ಥಾನಳಿಗೆ ಭೇಟಿ ನೀಡಲಿದ್ದು.10 ಗಂಟೆಗೆ ಕಂಬಳಬೆಟ್ಟು ಭಜನಾ ಮಂದಿರದ ಬಳಿ ಧರ್ಮನಗರದಲ್ಲಿ ನಡೆಯುವ ವಿಟ್ಲ-ಪುಣಚ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ.  11 ಗಂಟೆಗೆ ಪುತ್ತೂರು ನಗರ ಮಂಡಲ ಹಾಗೂ ಬಲ್ನಾಡು, ಕೊಡಿಪಾಡಿ, ಕಬಕ, ಬನ್ನೂರು ಪಂಚಾಯಿತಿ ಕಾರ್ಯಕರ್ತರ ಸಭೆ ಜೈನಭವನದಲ್ಲಿ ನಡೆಯಲಿದ್ದು, ಪಾಲ್ಗೊಳ್ಳಲಿದ್ದಾರೆ.

ನಾಳೆ ಕ್ಯಾ.ಬ್ರಿಜೇಶ್ ಚೌಟ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಭೇಟಿ Read More »

ದಶಮಾನೋತ್ಸವ ಸಂಭ್ರಮದಲ್ಲಿರುವ ‘ಲಹರಿ’ ಡ್ರೈ ಫ್ರುಟ್ಸ್ | ಮಾ.24 ರಂದು ನವೀಕೃತಗೊಂಡು ನವೀನ ಮಾದರಿಯಲ್ಲಿ ಶುಭಾರಂಭ

ಪುತ್ತೂರು: ಏಳ್ಮುಡಿ ಮುಖ್ಯರಸ್ತೆಯಲ್ಲಿರುವ ಕೆ.ವಿ.ಶೆಣೈ ಪೆಟ್ರೋಲ್ ಪಂಪ್ ಎದುರು ಕಾರ್ಯಾಚರಿಸುತ್ತಿರುವ ‘ಲಹರಿ’ ಡ್ರೈ ಫ್ರುಟ್ಸ್ ಮಾರಾಟ ಸಂಸ್ಥೆ ನವೀಕೃತ ಮಳಿಗೆಯೊಂದಿಗೆ ನವೀನ ಮಾದರಿಯಲ್ಲಿ ಮಾ.24 ಭಾನುವಾರ ಬೆಳಿಗ್ಗೆ 9.30 ಕ್ಕೆ ಶುಭಾರಂಭಗೊಳ್ಳಲಿದೆ. ದಶಮಾನೋತ್ಸವದ ಸಂಭ್ರಮದಲ್ಲಿರುವ “ಲಹರಿ’ ಸಂಸ್ಥೆ ದಶಮಾನೋತ್ಸವ ಸಂಭ್ರಮಾಚರಣೆಯನ್ನು ಆಚರಿಸಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದಮಯಿ ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡುವರು. ಮುಖ್ಯ ಅತಿಥಿಗಳಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸಮಾಜ ಸೇವಕಿ ಡಾ.ಗೌರಿ

ದಶಮಾನೋತ್ಸವ ಸಂಭ್ರಮದಲ್ಲಿರುವ ‘ಲಹರಿ’ ಡ್ರೈ ಫ್ರುಟ್ಸ್ | ಮಾ.24 ರಂದು ನವೀಕೃತಗೊಂಡು ನವೀನ ಮಾದರಿಯಲ್ಲಿ ಶುಭಾರಂಭ Read More »

ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ವಾಗ್ವಾದ್ ನಡೆದಿದೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ : ಸಾಜ ರಾಧಾಕೃಷ್ಣ ಆಳ್ವ

ಪುತ್ತೂರು: ಇತ್ತೀಚಗೆ ದ.ಕ. ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಯ್ಕೆಯಾದ ನಂತರ ಮತ್ತು ಬಿಜೆಪಿಗೆ ಅರುಣ್ ಕುಮಾರ್ ಪುತ್ತಿಲ ಸೇರ್ಪಡೆಯ ವಿಚಾರವಾಗಿ ಪುತ್ತೂರಿನ ಹಿರಿಯ ಕಿರಿಯ ಕಾರ್ಯಕರ್ತರಲ್ಲಿ ಚರ್ಚಿಸಲು ದ.ಕ. ಜಿಲ್ಲಾಧ್ಯಕ್ಷರು ಪಾರ್ಟಿ ಕಛೇರಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಕಛೇರಿಗೆ ಬೀಗ ಹಾಕಿದ್ದರೂ ಮತ್ತು ಸಭೆಯಲ್ಲಿ ವಾಗ್ವಾದಗಳೂ ಜಿಲ್ಲಾಧ್ಯಕ್ಷರ ಎದುರಿಗೆ ಆಗಿವೆ ಎಂದು ವರದಿಯಾಗಿರುವುದು ಸತ್ಯಕ್ಕೆ ದೂರವಾದ ವಿಷಯ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು,

ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ವಾಗ್ವಾದ್ ನಡೆದಿದೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ : ಸಾಜ ರಾಧಾಕೃಷ್ಣ ಆಳ್ವ Read More »

error: Content is protected !!
Scroll to Top