ಡಾ.ಕೃತಿಕಾ ಆರ್. ಐತಾಳ್ ಗೆ ಪ್ರಥಮ ವರ್ಷದ ಎಂ.ಡಿ. ಆಯುರ್ವೇದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

ಪುತ್ತೂರು : ಮೈಸೂರಿನ ಜೆ.ಎಸ್.ಎಸ್. ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಡಾ. ಕೃತಿಕಾ ಆರ್. ಐತಾಳ್ ಅವರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಡೆಸಿದ ಪ್ರಥಮ ವರ್ಷದ ಎಂ.ಡಿ. ಆಯುರ್ವೇದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಹೈದರಾಬಾದ್ ನಲ್ಲಿ ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಮಟ್ಟದ ಸ್ವಾಸ್ಥ್ಯ ಆಯುಷ್ ಎಕ್ಸ್ ಪೋನಲ್ಲಿ ಬೆಸ್ಟ್ ಓರಲ್ ಪೇಪರ್ ಪ್ರೆಸೆಂಟೇಟರ್ ಆಗಿ ತೆಲಂಗಾಣದ ಮಾಜಿ ರಾಜ್ಯಪಾಲರಾದ ಡಾ. ತಮಿಳಾಸೈ ಸೌಂದರಾಜನ್ ಅವರಿಂದ ಪ್ರಶಸ್ತಿ ಸ್ವೀಕಾರ ಮಾಡಿರುವ ಕೃತಿಕಾ ಆರ್. ಐತಾಳ್ […]

ಡಾ.ಕೃತಿಕಾ ಆರ್. ಐತಾಳ್ ಗೆ ಪ್ರಥಮ ವರ್ಷದ ಎಂ.ಡಿ. ಆಯುರ್ವೇದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ Read More »

ಇಂದು ವಿದ್ಯುತ್ ನಿಲುಗಡೆ | ಎಲ್ಲೆಲ್ಲಿ ?

ಪುತ್ತೂರು: ಉಪ್ಪಿನಂಗಡಿ ಪುತ್ತೂರು ಚತುಷ್ಪಥ ಮಾರ್ಗ ಕಾಮಗಾರಿ ನಿಮಿತ್ತ ಇಂದು ಬೆಳಿಗ್ಗೆ 10 ರಿಂದ ಸಂಜೆ 5.30 ರ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು. 110/33/11ಕೆಎ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಎಕ್ಸ್ ಪ್ರೆಸ್ ಉಪ್ಪಿನಂಗಡಿ ಓಲ್ಡ್, ಕಾಂಚನ & ವಾಟರ್ ಸಪ್ಲೈ ಫೀಡರ್ನಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್ನಿಂದ ವಿದ್ಯುತ್ ಸರಬರಾಜಾಗುವ ಬಜತ್ತೂರು, ನೆಕ್ಕಿಲಾಡಿ & ಉಪ್ಪಿನಂಗಡಿ ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಬೇಕಾಗಿ

ಇಂದು ವಿದ್ಯುತ್ ನಿಲುಗಡೆ | ಎಲ್ಲೆಲ್ಲಿ ? Read More »

ಶಿವಾಮೃತ ಸಂಚಿಕೆ ಸಾಂಸ್ಕೃತಿಕ ಲೋಕವನ್ನು ಕಟ್ಟಿಕೊಡುತ್ತಿದೆ | ನ್ಯೂಸ್ ಪುತ್ತೂರಿನ “ಶಿವಾಮೃತ” ಸಂಚಿಕೆ ಬಿಡುಗಡೆಗೊಳಿಸಿ ಡಾ.ಕೆ.ಚಿನ್ನಪ್ಪ ಗೌಡ

ಪುತ್ತೂರು: ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಡಿ ಕಾರ್ಯಾಚರಿಸುತ್ತಿರುವ ನ್ಯೂಸ್ ಪುತ್ತೂರಿನ ‘ಶಿವಾಮೃತ’ ವಿಶೇಷ ಸಂಚಿಕೆ ಏ.15 ರಂದು ಸಂಜೆ ಲೋಕಾರ್ಪಣೆಗೊಂಡಿತು. ಬನ್ನೂರು ಜೋಡುಕಟ್ಟೆ ಮೈದಾನದಲ್ಲಿ ನಡೆದ “ಪುತ್ತೂರ ಹಬ್ಬ” ಕಾರ್ಯಕ್ರಮದಲ್ಲಿ ಹಾವೇರಿ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ ಚಿನ್ನಪ್ಪ ಗೌಡ “ಶಿವಾಮೃತ” ಸಂಚಿಕೆ ಲೋಕಾರ್ಪಣೆ ಮಾಡಿ ಮಾತನಾಡಿ. ಪ್ರಸ್ತುತ ಮಕ್ಕಳು ಸಾಂಸ್ಕೃತಿಕ ಬೇರುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಮನಸ್ಥಿತಿಯಿಂದ ಹೊರಗೆ ಬರಬೇಕು. ಮಕ್ಕಳನ್ನು ಬುದ್ಧಿವಂತರನ್ನಾಗಿಸುವ ಜತೆಗೆ ಸಾಂಸ್ಕೃತಿಕ ಕಲಾಪಗಳಲ್ಲಿ ಪಾಲ್ದೊಳ್ಳುವ ಮೂಲಕ ಸಾಂಸ್ಕೃತಿಕ, ಸಂಸ್ಕಾರವನ್ನು ಜೀವಂತ

ಶಿವಾಮೃತ ಸಂಚಿಕೆ ಸಾಂಸ್ಕೃತಿಕ ಲೋಕವನ್ನು ಕಟ್ಟಿಕೊಡುತ್ತಿದೆ | ನ್ಯೂಸ್ ಪುತ್ತೂರಿನ “ಶಿವಾಮೃತ” ಸಂಚಿಕೆ ಬಿಡುಗಡೆಗೊಳಿಸಿ ಡಾ.ಕೆ.ಚಿನ್ನಪ್ಪ ಗೌಡ Read More »

ಬಪ್ಪಳಿಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಕಟ್ಟೆಯಲ್ಲಿ ಪೂಜೆಗೊಂಡ ಶ್ರೀ ಮಹಾಲಿಂಗೇಶ್ವರ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ಸವಾರಿ ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣಕ್ಕೆ ಶನಿವಾರ ಆಗಮಿಸಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ದಂಪತಿ ಹಾಗೂ ಪುತ್ರ ಶ್ರೀಕೃಷ್ಣ ನಟ್ಟೋಜ ದೇವರನ್ನು ಬರಮಾಡಿಕೊಂಡರು. ನಂತರ ಶ್ರೀ ದೇವರಿಗೆ ಸಂಸ್ಥೆಗಳ ವತಿಯಿಂದ ಕಟ್ಟೆಪೂಜೆ ನಡೆಯಿತು. ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ

ಬಪ್ಪಳಿಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಕಟ್ಟೆಯಲ್ಲಿ ಪೂಜೆಗೊಂಡ ಶ್ರೀ ಮಹಾಲಿಂಗೇಶ್ವರ Read More »

ಸೇತುವೆ ಕಾಮಗಾರಿ ವೇಳೆ ಕುಸಿತ : ಇಬ್ಬರು ಸಣ್ಣಪುಟ್ಟ ಗಾಯಗಳಿಂದ ಪಾರು

ಪುಣಚ: ಸೇತುವೆ ಕಾಮಗಾರಿ ನಡೆಯುತ್ತಿದ್ದ ವೇಳೆ ಸೇತುವೆ ಕುಸಿದು ಇಬ್ಬರು ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾದ ಘಟನೆ ವಿಟ್ಲ ಪುಣಚದ ಬರೆಂಜ ಎಂಬಲ್ಲಿ ಇಂದು ನಡೆದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೊದೊಯ್ದು ಚಿಕಿತ್ಸೆ ನೀಡಲಾಗಿದೆ. ಬರೆಂಜ-ಕುರುಡುಕಟ್ಟೆ ಸಂಪರ್ಕ ರಸ್ತೆಗೆ ನೂತನ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸೇತುವೆ ಕುಸಿದಿದೆ. ಈ ಸಂದರ್ಭ ಇಬ್ಬರು ಸೇತುವೆ ಕೆಳಗೆ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಇಬ್ಬರು ಗಾಯಗೊಂಡರೆನ್ನಲಾಗಿದೆ.

ಸೇತುವೆ ಕಾಮಗಾರಿ ವೇಳೆ ಕುಸಿತ : ಇಬ್ಬರು ಸಣ್ಣಪುಟ್ಟ ಗಾಯಗಳಿಂದ ಪಾರು Read More »

ಇಂದು ನ್ಯೂಸ್ ಪುತ್ತೂರಿನ ‘ಶಿವಾಮೃತ’ ವಿಶೇಷ ಸಂಚಿಕೆ ಲೋಕಾರ್ಪಣ ಸಮಾರಂಭ

ಪುತ್ತೂರು: ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಡಿ ಕಾರ್ಯಾಚರಿಸುತ್ತಿರುವ ನ್ಯೂಸ್ ಪುತ್ತೂರಿನ ‘ಶಿವಾಮೃತ’ ವಿಶೇಷ ಸಂಚಿಕೆ ಲೋಕಾರ್ಪಣಾ ಸಮಾರಂಭ ಇಂದು ಸಂಜೆ 6.30 ಕ್ಕೆ ಬನ್ನೂರು ಜೋಡುಕಟ್ಟೆ ಮೈದಾನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ನೆರವೇರಿಸಲಿದ್ದಾರೆ. ಮಂಗಳೂರು ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಹಾವೇರಿ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ ಚಿನ್ನಪ್ಪ ಗೌಡ “ಶಿವಾಮೃತ” ಸಂಚಿಕೆ

ಇಂದು ನ್ಯೂಸ್ ಪುತ್ತೂರಿನ ‘ಶಿವಾಮೃತ’ ವಿಶೇಷ ಸಂಚಿಕೆ ಲೋಕಾರ್ಪಣ ಸಮಾರಂಭ Read More »

ಏ.20 : ಉಚಿತ ವಾಲಿಬಾಲ್‍ ಬೇಸಿಗೆ ಶಿಬಿರ ಉದ್ಘಾಟನೆ | ಮಿತ್ರವೃಂದ ವಾಲಿಬಾಲ್‍ ಅಕಾಡೆಮಿ, ರೋಟರಿ ಕ್ಲಬ್‍ ಬಿರುಮಲೆ ಹಿಲ್ಸ್, ಲಿಟ್ಲ್ ಫ್ಲವರ್ ಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ ಶಿಬಿರ

ಪುತ್ತೂರು: ಮಿತ್ರವೃಂದ ವಾಲಿಬಾಲ್‍ ಅಕಾಡೆಮಿ, ಪುತ್ತೂರು ರೋಟರಿ ಕ್ಲಬ್‍ ಬಿರಮಲೆ ಹಿಲ್ಸ್ ಹಾಗೂ ದರ್ಬೆ ಲಿಟ್ಲ್ ಫ್ಲವರ್ ಶಾಲಾ ಸಂಯುಕ್ತ ಆಶ್ರಯದಲ್ಲಿ ಒಂದು ತಿಂಗಳ ಕಾಲ ನಡೆಯುವ ಉಚಿತ ಬೇಸಿಗೆ ವಾಲಿಬಾಲ್ ತರಬೇತಿ ಶಿಬಿರ ಏ.20 ರಂದು ದರ್ಬೆ ಲಿಟ್ಲ್ ಫ್ಲವರ್ ಶಾಲಾ ಮೈದಾನದಲ್ಲಿ ಆರಂಭಗೊಳ್ಳಲಿದೆ ಎಂದು ಮಿತ್ರವೃಂದ ವಾಲಿಬಾಲ್‍ ಅಕಾಡೆಮಿ ಪ್ರಧಾನ ಕಾರ್ಯದರ್ಶಿ  ಬಾಲಚಂದ್ರ ಕೆಮ್ಮಿಂಜೆ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 40 ವರ್ಷಗಳಿಂದ ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಗ್ರಾಮೀಣ ಪ್ರದೇಶದ ಆಸಕ್ತರಿಗೆ

ಏ.20 : ಉಚಿತ ವಾಲಿಬಾಲ್‍ ಬೇಸಿಗೆ ಶಿಬಿರ ಉದ್ಘಾಟನೆ | ಮಿತ್ರವೃಂದ ವಾಲಿಬಾಲ್‍ ಅಕಾಡೆಮಿ, ರೋಟರಿ ಕ್ಲಬ್‍ ಬಿರುಮಲೆ ಹಿಲ್ಸ್, ಲಿಟ್ಲ್ ಫ್ಲವರ್ ಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ ಶಿಬಿರ Read More »

ಮೀನು ಹಿಡಿಯಲು ಹೊಳೆಗೆ ಇಳಿದ ಮಹಿಳೆ ಮೃತ್ಯು

ಉಡುಪಿ : ಸಿಗಡಿ ಮೀನು ಹಿಡಿಯಲು ಹೊಳೆಗೆ ಇಳಿದ ಮಹಿಳೆ ಮುಳುಗಿ ಮೃತಪಟ್ಟ ಘಟನೆ ಕುಂದಾಪುರದ ಕೋಣಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕುಂದಾಪುರ ಕೋಣಿ ಗ್ರಾಮದ ವನಜ ಮೃತ ದುರ್ದೈವಿ. ವನಜ ಎಂದಿನಂತೆ ಸಿಗಡಿ ಮೀನು ಹಿಡಿಯಲು ಕೋಣಿಯ ಮಲ್ಲನಬೆಟ್ಟು ಹೊಳೆಗೆ ಹೋಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿದ್ದಾರೆ. ಬಳಿಕ ವನಜಾ ಅವರ ಪತಿ ವಾಸು ಹಾಗೂ ಸ್ಥಳೀಯರು ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅದಾಗಲೇ ವೈದ್ಯರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮೀನು ಹಿಡಿಯಲು ಹೊಳೆಗೆ ಇಳಿದ ಮಹಿಳೆ ಮೃತ್ಯು Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಸುಳ್ಯ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಇಂದು ಮುಂಜಾನೆ ಸುಳ್ಯದ ಅರಂತೋಡಿನಲ್ಲಿ ನಡೆದಿದೆ. ಬೆಂಗಳೂರಿನಿಂದ ತೊಡಿಕಾನಕ್ಕೆ ಬರುತ್ತಿದ್ದ ಕಾರು ಚಾಲಕ ನಿದ್ರೆಯ ಮಂಪರಿನಲ್ಲಿದ್ದರು ಎನ್ನಲಾಗಿದ್ದು, ನಿಯಂತ್ರಣ ತಪ್ಪಿ ರಸ್ತೆ ಬದಿ ಉರುಳಿ ಬಿದ್ದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ Read More »

ಎರ್ಕ ಬಾಬು ಗುರುಸ್ವಾಮಿ ನಿಧನ

ಪುತ್ತೂರು : ಅರಿಯಡ್ಕ ಗ್ರಾಮದ ಎರ್ಕ ನಿವಾಸಿ ಬಾಬು ಗುರುಸ್ವಾಮಿ ಅವರು ಇಂದು ನಿಧನರಾದರು. ಬಾಬು ಗುರುಸ್ವಾಮಿ ಅವರು 53 ವರ್ಷ ಶಬರಿಮಲೆ ಯಾತ್ರೆ ಮಾಡಿದ್ದು ,ಕುಂಬ್ರ ಹಾಗೂ ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಗುರುಸ್ವಾಮಿಯಾಗಿ ಸಾವಿರಾರು ಮಂದಿಗೆ ಮಾಲಾಧಾರಣೆ ಮಾಡಿ ಶಬರಿಮಲೆ ಯಾತ್ರೆ ಮಾಡಿದ್ದರು. ಮೃತರ ಮಕ್ಕಳಾದ ಜಯಂತ್ ,ವೀಣಾ,ವಾಣಿ,ಸಂತೋಷ್ ಅವರನ್ನು ಅಗಲಿದ್ದಾರೆ.

ಎರ್ಕ ಬಾಬು ಗುರುಸ್ವಾಮಿ ನಿಧನ Read More »

error: Content is protected !!
Scroll to Top