ಬೈಕ್ ಸಮೇತ ಸೇತುವೆಯಿಂದ ಕೆಳಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಕಾಣಿಯೂರು: ಬೈಕ್ ಸಮೇತ ಸೇತುವೆಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ದೋಳ್ಪಾಡಿ ಗ್ರಾಮದ ಅಜ್ಜಿನಡ್ಕ ನಿವಾಸಿ ಬಾಬು ಎಂಬವರ ಪುತ್ರ ವಸಂತ (40) ಮೃತಪಟ್ಟವರು. ಕಾಣಿಯೂರು ಸಮೀಪದ ದೋಳ್ಪಾಡಿ ಗ್ರಾಮದ ಕೊಜಂಬೇಡಿ ಎಂಬಲ್ಲಿ ಮೇ 13 ರಂದು ಬೆಳಗ್ಗೆ ಕೂಲಿ ಕೆಲಸಕ್ಕೆಂದು ತನ್ನ ಮೋಟಾರ್ ಬೈಕ್ ನಲ್ಲಿ ಎಡಮಂಗಲಕ್ಕೆ ಹೋಗಿದ್ದ ವಸಂತರವರು ಅದೇ ಬೈಕಿನಲ್ಲಿ ವಾಪಾಸು ಮನೆಗೆ ಬರುತ್ತಿರುವಾಗ ಕೊಜಂಬೇಡಿ ಎಂಬಲ್ಲಿರುವ ಸೇತುವೆ ಬಳಿ ನಿಯಂತ್ರಣ ತಪ್ಪಿ ಬೈಕ್ ಸಮೇತ ಸೇತುವೆಯಿಂದ […]

ಬೈಕ್ ಸಮೇತ ಸೇತುವೆಯಿಂದ ಕೆಳಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು Read More »

ಕಾಂಬೋಡಿಯಾದಲ್ಲಿ ಉದ್ಯೋಗ ಮೋಸದ ಜಾಲಕ್ಕೆ ಸಿಲುಕಿದ ಭಾರತೀಯರ ರಕ್ಷಣೆ

ಹೊಸದಿಲ್ಲಿ: ಕಾಂಬೋಡಿಯಾದಲ್ಲಿ ಉದ್ಯೋಗದ ಮೋಸದ ಜಾಲಕ್ಕೆ ಸಿಲುಕಿದ್ದ 60 ಮಂದಿ ಭಾರತೀಯರನ್ನು ಅಲ್ಲಿನ ಭಾರತೀಯ ರಾಯಭಾರ ಕಚೇರಿ ರಕ್ಷಣೆ ಮಾಡಿದೆ. ರಕ್ಷಣೆ ಮಾಡಿದ ಬೆನ್ನಲ್ಲೇ 60 ಮಂದಿಯ ಮೊದಲ ಬ್ಯಾಚ್ ಭಾರತಕ್ಕೆ ಮರಳಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಕಾಂಬೋಡಿಯಾ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಸಿಹಾನೌಕ್ವಿಲೈನಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಜಿನ್ ಬೆ-4 ಎಂಬ ಸ್ಥಳದಲ್ಲಿ ಭಾರತೀಯರನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಮುಂದೆ ಉದ್ಯೋಗಕ್ಕಾಗಿ ಕಾಂಬೋಡಿಯಾಕ್ಕೆ ಬರುವ ಭಾರತೀಯರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅನುಮೋದಿಸಿದ ಅಧಿಕೃತ

ಕಾಂಬೋಡಿಯಾದಲ್ಲಿ ಉದ್ಯೋಗ ಮೋಸದ ಜಾಲಕ್ಕೆ ಸಿಲುಕಿದ ಭಾರತೀಯರ ರಕ್ಷಣೆ Read More »

ವಿದ್ಯುತ್ ತಗುಲಿ ವ್ಯಕ್ತಿ ಮೃತ್ಯು

ಬಂಟ್ವಾಳ: ವಿದ್ಯುತ್‌ ಪರಿವರ್ತಕದ ಬಳಿ ನಿಂತುಕೊಂಡಿದ್ದ ವ್ಯಕ್ತಿಯೋರ್ವನಿಗೆ ಸಿಡಿಲು ಬಡಿದು ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್‌ ಠಾಣಾ ವ್ಯಾಪ್ತಿಯ ಇರಾದಲ್ಲಿ ಗುರುವಾರ ನಡೆದಿದೆ. ಇರಾ ಗ್ರಾಮದ ಮುರ್ಕಾಜೆ ನಿವಾಸಿ ಸತೀಶ್‌ ಚೌಟ (43) ಮೃತಪಟ್ಟ ವ್ಯಕ್ತಿ. ಸತೀಶ್ ಅವರು ಬಾಕ್ರಬೈಲಿನಲ್ಲಿ ಮರದ ಮಿಲ್ ನಲ್ಲಿ ಕೆಲಸಗಾರನಾಗಿದ್ದು, ಗುರುವಾರ ರಸ್ತೆಯ ಬದಿಯಲ್ಲಿ ಟ್ರಾನ್ಸ್ ಫಾರ್ಮರ್ ಪಕ್ಕದಲ್ಲಿ ನಿಂತುಕೊಂಡಿರುವ ಸಮಯದಲ್ಲಿ ಆಕಸ್ಮಿಕವಾಗಿ ಸಿಡಿಲು ಬಡಿದು, ಒಮ್ಮೆಲೇ ವಿದ್ಯುತ್‌ ಪ್ರವೇಶಿಸಿ ಮೃತಪಟ್ಟ ಬಗ್ಗೆ ಬ೦ಟ್ವಾಳ ಗ್ರಾಮಾಂತರ

ವಿದ್ಯುತ್ ತಗುಲಿ ವ್ಯಕ್ತಿ ಮೃತ್ಯು Read More »

ಕಳ್ಳತನ : ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ

ಮಂಗಳೂರು : ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ನಗರ ಠಾಣಾ ಪೊಲೀಸರ ತಂಡ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದೆ. ಕೊಡಗು ಜಿಲ್ಲೆ ವೀರಾಜಪೇಟೆ ಬೆಳ್ಳುರು ಗ್ರಾಮ ನಿವಾಸಿ ಸಚಿನ್ ಮತ್ತು ಕೊಡಗು ಜಿಲ್ಲೆ ಬಾಡಗಾ ಗ್ರಾಮ ನಿವಾಸಿ ನಿಶಾಂತ್ ಬಂಧಿತ ಆರೋಪಿಗಳು. ಮಂಗಳೂರು ನಗರದ ಕುಲಶೇಖರ ದ.ಕ ಸಹಕಾರಿ ಹಾಲು ಒಕ್ಕೂಟದ ಬಳಿಯ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ 87.5 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ

ಕಳ್ಳತನ : ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ Read More »

ಯುವಕರು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕೌಶಲ್ಯ ಅಭಿವೃದ್ಧಿಗೆ ಸಮಗ್ರ ವಿಧಾನ ಅತ್ಯಗತ್ಯ | ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಡಾ.ಬಿ.ವೆಂಕಟರಾಜ

ಪುತ್ತೂರು: ಸುಸ್ಥಿರ ಭವಿಷ್ಯವನ್ನು ರಚಿಸಲು ನಾವು ಇಂದಿನ ಯುವಕರನ್ನು ಸಶಕ್ತಗೊಳಿಸಬೇಕು. ಅಗತ್ಯ ಕೌಶಲ್ಯ ಮತ್ತು ಜ್ಞಾನದೊಂದಿಗೆ ಅವರನ್ನು ಸಜ್ಜುಗೊಳಿಸುವ ಮೂಲಕ ನಾಳೆಯ ಸವಾಲುಗಳನ್ನು ಎದುರಿಸಲು ಸಿದ್ಧರಾಗುವಂತೆ ಭವಿಷ್ಯದ ಬದುಕಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕು ಎಂದು ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವೆಲೋಪ್ ಮೆಂಟ್ ನ ಅರ್ಥಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಬಿ. ವೆಂಕಟರಾಜ ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಇಂದಿನ ಯುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಹೊಸಯುಗದ ಕೌಶಲ್ಯದ ಅಗತ್ಯತೆಯ ಬಗೆಗಿನ ವಿಶೇಷ ಉಪನ್ಯಾಸ

ಯುವಕರು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕೌಶಲ್ಯ ಅಭಿವೃದ್ಧಿಗೆ ಸಮಗ್ರ ವಿಧಾನ ಅತ್ಯಗತ್ಯ | ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಡಾ.ಬಿ.ವೆಂಕಟರಾಜ Read More »

ಅನಾರೋಗ್ಯಕ್ಕೆ ತುತ್ತಾದ ಧನ್ವಿತ್ | ಚಿಕಿತ್ಸೆಗೆ ಸಹೃದಯಿಗಳಿಂದ ಬೇಕಾಗಿದೆ ಧನಸಹಾಯ

ಭವಿಷ್ಯದ ಸುಂದರ ಬದುಕಿನ ಕನಸಿನೊಂದಿಗೆ ಹೆಜ್ಜೆ ಹಾಕಬೇಕಾಗಿದ್ದ ಬಾಲಕ ಮಾ.ಧನ್ವಿತ್ ಇದೀಗ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಚಿಕಿತ್ಸೆಗೆ ಸಹೃದಯಿಗಳಿಂದ ಧನ ಸಹಾಯ ಬೇಕಾಗಿದೆ. ಕಡಬ ತಾಲೂಕಿನ ಸವಣೂರು ಗ್ರಾಮದ ಕೇಕುಡೆ ನಿವಾಸಿಗಳು, ಶ್ರಮ ಭರಿತ ದುಡಿಮೆಯ ಆದಾಯದಿಂದ ಕಷ್ಟದ ಬದುಕು ಸಾಗಿಸುತ್ತಿರುವ ಮೋನಪ್ಪ  ಪೂಜಾರಿ ಹಾಗೂ ವನಿತಾ ದಂಪತಿ ಕಿರಿಯ ಪುತ್ರ 13 ವರ್ಷದ ಧನ್ವಿತ್ ಎಲ್ಲಾ ಮಕ್ಕಳಂತೆ ಆಟದಲ್ಲೂ ಪಾಠದಲ್ಲೂ ಸದಾ ಚಟುವಟಿಕೆಯಿಂದ್ದಿದ್ದ. ಮೂರು ತಿಂಗಳ ಹಿಂದೆ ತರಗತಿ ಪರೀಕ್ಷೆ ಸಂಧರ್ಭದಲ್ಲಿ ಇದ್ದಕಿದ್ದಂತೆ ವಾಂತಿ ಮಾಡಿ ಅನಾರೋಗ್ಯಕ್ಕೆ

ಅನಾರೋಗ್ಯಕ್ಕೆ ತುತ್ತಾದ ಧನ್ವಿತ್ | ಚಿಕಿತ್ಸೆಗೆ ಸಹೃದಯಿಗಳಿಂದ ಬೇಕಾಗಿದೆ ಧನಸಹಾಯ Read More »

ಬಸ್‍ ಗೆ ಡೀಸೆಲ್‍ ಹಾಕಲು ಸರಕಾರದ ಬಳಿ ಹಣವಿಲ್ಲವಂತೆ | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋ

ಸರಕಾರಿ ಬಸ್ಸಿಗೆ ಡೀಸೆಲ್ ಹಾಕಲು ಹಣವಿಲ್ಲವಂತೆ. ಪರಿಣಾಮ ಬೆಂಗಳೂರು-ಕುಂದಾಪುರ ಬಸ್ ಹುಲಿಕಲ್ ಬಳಿ ಬಾಕಿಯಾಗಿದೆ. ಫ್ರೀ ಎಂದು ಬೊಗಳೆ ಬಿಡುತ್ತಿರುವ ಕರ್ನಾಟಕ ಸರಕಾರದ ಬಳಿ ಡೀಸೆಲ್‍ ಹಾಕಲು ಹಣವಿಲ್ಲವಂತೆ. ಬಸ್ ಸಿಬ್ಬಂದಿಗಳು ತಮ್ಮ ಸ್ವಂತ ಖರ್ಚಿಸಲ್ಲಿ ಡೀಸೆಲ್‍ ತುಂಬಿಸಬೇಕಂತೆ. ಹೀಗೊಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ.

ಬಸ್‍ ಗೆ ಡೀಸೆಲ್‍ ಹಾಕಲು ಸರಕಾರದ ಬಳಿ ಹಣವಿಲ್ಲವಂತೆ | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋ Read More »

ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿ ಪ್ರವೇಶದ ವಯೋಮಿತಿ 6 ವರ್ಷ  | ಪೋಷಕರಿಂದ ಬದಲಾವಣೆಗೆ ಆಗ್ರಹ

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ 1 ನೇ ತರಗತಿ ಪ್ರವೇಶಕ್ಕೆ ಮುಂದಿನ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ನಿಗದಿಪಡಿಸಿರುವ ವಯೋಮಿತಿ ಅವೈಜ್ಞಾನಿಕವಾಗಿದ್ದು, ಇದನ್ನು ಬದಲಾವಣೆ ಮಾಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ. ಎಲ್ ಕೆಜಿ ದಾಖಲಾತಿಗೆ ಆಯಾ ಶೈಕ್ಷಣಿಕ ವರ್ಷದ ಜೂನ್ 1 ಕ್ಕೆ ಕಡ್ಡಾಯವಾಗಿ 4 ವರ್ಷ ಪೂರ್ಣಗೊಂಡಿರಬೇಕೆಂದು 2023-24 ನೇ ಸಾಲಿನಿಂದ ಜಾರಿಗೊಳಿಸಲಾಗಿದೆ. 1 ನೇ ತರಗತಿ ಪ್ರವೇಶಕ್ಕೆ 2024-25 ನೇ ಸಾಲಿನಿಂದ ಆಯಾ ಸಾಲಿನ ಜೂನ್ 1 ಕ್ಕೆ 6 ವರ್ಷ ಪೂರ್ಣಗೊಂಡಿರಬೇಕೆಂದು ಆದೇಶಿಸಲಾಗಿದೆ. ಆದರೆ ನಿಗದಿತ ವಯೋಮಿತಿಗೆ

ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿ ಪ್ರವೇಶದ ವಯೋಮಿತಿ 6 ವರ್ಷ  | ಪೋಷಕರಿಂದ ಬದಲಾವಣೆಗೆ ಆಗ್ರಹ Read More »

24 ಗಂಟೆಯೊಳಗೆ ನಿವೃತ್ತಿ ಘೋಷಿಸಿ : ಪಕ್ಷ ಶಿಸ್ತು ಉಲ್ಲಂಘನೆಗಾಗಿ ರಘುಪತಿ ಭಟ್ ಗೆ ಸುನಿಲ್ ಕುಮಾರ್ ಎಚ್ಚರಿಕೆ

ಬೆಂಗಳೂರು : ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣಾ ಕಣದಿಂದ 24 ಗಂಟೆಯೊಳಗೆ ನಿವೃತ್ತಿ ಘೋಷಿಸಿ ಇಲ್ಲವೇ ಪಕ್ಷದ ಶಿಸ್ತು ಉಲ್ಲಂಘನೆಗಾಗಿ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಕೆ ರಘುಪತಿ ಭಟ್‌ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ ಸುನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಕರಾವಳಿಗೆ ಅನ್ಯಾಯವಾದರೆ ಪಕ್ಷದೊಳಗೆ ಮಾತನಾಡಿ ಸರಿಪಡಿಸಬಹುದು. ಅವಕಾಶ ನೀಡಿದ ಪಕ್ಷಕ್ಕೆ ಮುಜುಗರ ತಂದೊಡ್ಡುವುದು ಸರಿಯಲ್ಲ ಎಂದಿದ್ದಾರೆ. ಮಾಜಿ ಶಾಸಕ, ವಿಧಾನಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ

24 ಗಂಟೆಯೊಳಗೆ ನಿವೃತ್ತಿ ಘೋಷಿಸಿ : ಪಕ್ಷ ಶಿಸ್ತು ಉಲ್ಲಂಘನೆಗಾಗಿ ರಘುಪತಿ ಭಟ್ ಗೆ ಸುನಿಲ್ ಕುಮಾರ್ ಎಚ್ಚರಿಕೆ Read More »

ಕಾಂಚನ ಈಶ್ವರ ಭಟ್ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಪುತ್ತೂರು: ಸುದಾನ ಸಂಗೀತ ಕಲಾ ಶಾಲಾ ನಿರ್ದೇಶಕ ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಪಡೀಲು ವಿಜಯನಗರ ಬಡವಾಣೆಯಲ್ಲಿರುವ ಮನೆಗೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಕುರಿತು ಇಂದು ಬೆಳಕಿಗೆ ಬಂದಿದೆ. ವಿದ್ವಾನ್ ಕಾಂಚನ ಈಶ್ವರ ಭಟ್ ಅವರು ಸಂಗೀತ ಕಾರ್ಯಕ್ರಮಕ್ಕೆ ಮೈಸೂರಿಗೆ ಹೋಗಿದ್ದು, ಅವರ ಪುತ್ರ ಬೆಂಗಳೂರಿಗೆ ಹೋಗಿದ್ದರು. ಇಂದು ಮನೆಗೆ ಹಿಂದಿರುಗಿದಾಗ ಕಳವಾದ ಕುರಿತು ಬೆಳಕಿಗೆ ಬಂದಿದೆ. ಅವರು ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲ ಬೀಗ ಮುರಿದು

ಕಾಂಚನ ಈಶ್ವರ ಭಟ್ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು Read More »

error: Content is protected !!
Scroll to Top