ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕುಂಬ್ರ ಶಾಖೆಯ ದಶಮಾನೋತ್ಸವ ಸಂಭ್ರಮ | ಗಣಪತಿ ಹೋಮ, ಶ್ರೀ ಲಕ್ಷ್ಮೀ ಪೂಜೆಯೊಂದಿಗೆ 10ನೇ ವರ್ಷಕ್ಕೆ ಪಾದಾರ್ಪಣೆಗೈದ ಶಾಖೆ | ಖಾಸಗಿ, ಜಾತಿಯ ಹಿನ್ನಲೆಯಲ್ಲಿ ಆರಂಭಗೊಂಡ ಸಹಕಾರಿ ಸಂಘ ಅತ್ಯುನ್ನತ ಸಹಕಾರ ಸಂಘವಾಗಿ ಬೆಳೆದಿದೆ : ಚಿದಾನಂದ ಬೈಲಾಡಿ

ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕುಂಬ್ರ ಶಾಖೆಯ ದಶಮಾನೋತ್ಸವ ಕಾರ್ಯಕ್ರಮ ಇಂದು ಬೆಳಿಗ್ಗೆ ಶಾಖೆಯಲ್ಲಿ ನಡೆಯಿತು. ದಶಮಾನೋತ್ಸವದ ಅಂಗವಾಗಿ ಗಣಹೋಮ, ಶ್ರೀ ಲಕ್ಷ್ಮೀಪೂಜೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, 2002 ರಲ್ಲಿ ಡಿ.ವಿ.ಸದಾನಂದ ಗೌಡರು ಶಾಸಕರಾಗಿದ್ದಾಗ ಸಮಾನ ಮನಸ್ಕರ ಕಲ್ಪನೆಯಂತೆ ಪುತ್ತೂರಿನಲ್ಲಿ ಪ್ರಥಮ ಶಾಖೆಯನ್ನು 2002 ರಲ್ಲಿ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಮೋಹನ ಗೌಡ ನೇತೃತ್ವ ವಹಿಸಿದ್ದರು. ತನ್ನದೇ ಆದ ಕಾರ್ಯಶೈಲಿಯಲ್ಲಿ ಚಟುವಟಿಕೆಗಳನ್ನು ಮಾಡುತ್ತಾ 2009 ರಲ್ಲಿ ಕಡಬ, […]

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕುಂಬ್ರ ಶಾಖೆಯ ದಶಮಾನೋತ್ಸವ ಸಂಭ್ರಮ | ಗಣಪತಿ ಹೋಮ, ಶ್ರೀ ಲಕ್ಷ್ಮೀ ಪೂಜೆಯೊಂದಿಗೆ 10ನೇ ವರ್ಷಕ್ಕೆ ಪಾದಾರ್ಪಣೆಗೈದ ಶಾಖೆ | ಖಾಸಗಿ, ಜಾತಿಯ ಹಿನ್ನಲೆಯಲ್ಲಿ ಆರಂಭಗೊಂಡ ಸಹಕಾರಿ ಸಂಘ ಅತ್ಯುನ್ನತ ಸಹಕಾರ ಸಂಘವಾಗಿ ಬೆಳೆದಿದೆ : ಚಿದಾನಂದ ಬೈಲಾಡಿ Read More »

ಬಕ್ರೀದ್ ಹಬ್ಬದಂದು ನಾಪತ್ತೆಯಾದ ಕರೀಂ ಶವ ಪತ್ತೆ |

ಬಂಟ್ವಾಳ : ಬಕ್ರೀದ್ ಹಬ್ಬದಂದು ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಮೃತದೇಹ ಬಿ ಸಿ ರೋಡು ಸಮೀಪದ ತಲಪಾಡಿ-ಕೆಇಬಿ ಸಬ್ ಸ್ಟೇಷನ್ ಬಳಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಬಿ ಸಿ ರೋಡು ಸಮೀಪದ ಕೈಕಂಬ ನಿವಾಸಿ ಕರೀಂ (61) ಮೃತ ವ್ಯಕ್ತಿ. ಬಕ್ರೀದ್ ಹಬ್ಬದಂದು ಸಂಜೆ ಮನೆಯಿಂದ ಹೊರಟ ಕರೀಂ ಅವರು ಬಳಿಕ ವಾಪಾಸು ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಮನೆ ಮಂದಿ ಸಹಿತ ಊರ ನಾಗರಿಕರು ಹುಡುಕಾಟ ನಡೆಸಿದ್ದರು. ಇವರ ಪತ್ತೆಗಾಗಿ ಸಾಮಾಜಿಕ ಜಾಲ ತಾಣಗಳಲ್ಲೂ ಭಾವಚಿತ್ರ ಸಹಿತ

ಬಕ್ರೀದ್ ಹಬ್ಬದಂದು ನಾಪತ್ತೆಯಾದ ಕರೀಂ ಶವ ಪತ್ತೆ | Read More »

ರಾಜ್ಯಮಟ್ಟದ 10 ಕಿ.ಮೀ. ಕ್ರಾಸ್ ಕಂಟ್ರಿ | ವಿವೇಕಾನಂದ ಕಾಲೇಜ್ ಆಫ್‍ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ವಿದ್ಯಾರ್ಥಿನಿಯರ ತಂಡ ಚಾಂಪಿಯನ್ ಶಿಪ್

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿನಿಯರ ತಂಡ 2024-25 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ 10 ಕಿಮೀ ಕ್ರಾಸ್-ಕಂಟ್ರಿ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಸತತ ಮೂರನೇ ಬಾರಿಗೆ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದುಕೊಂಡಿದೆ. ಶ್ರವಣಬೆಳಗೊಳದ ಬಾಹುಬಲಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಈ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ. ತೃತೀಯ ವರ್ಷದ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾ.ಸಿ.ಎಸ್ ತೃತೀಯ ಸ್ಥಾನ, ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಜೀಕ್ಷಿತಾ.ಕೆ 4ನೇ

ರಾಜ್ಯಮಟ್ಟದ 10 ಕಿ.ಮೀ. ಕ್ರಾಸ್ ಕಂಟ್ರಿ | ವಿವೇಕಾನಂದ ಕಾಲೇಜ್ ಆಫ್‍ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ವಿದ್ಯಾರ್ಥಿನಿಯರ ತಂಡ ಚಾಂಪಿಯನ್ ಶಿಪ್ Read More »

ಹಳೆಯ ಕಟ್ಟಡ ಹಠಾತ್ತನೆ ಕುಸಿತ | ಹಲವರು ಗಂಭೀರ | ಮೂವರು ಸಿಲುಕಿಕೊಂಡಿರುವ ಶಂಕೆ

ಮಡಿಕೇರಿ : ಹಳೆಯ ಕಟ್ಟಡವೊಂದು ಹಠಾತ್ತನೆ ಕುಸಿದು ಬಿದ್ದಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಡಗು ಜಿಲ್ಲೆಯ ಗೋಣಿಕೊಪ್ಪ ಪಟ್ಟಣದಲ್ಲಿ ಇಂದು ನಡೆದಿದೆ. ಇಂದು ಮಧ್ಯಾಹ್ನ ಕಟ್ಟಡ ಕುಸಿದುಬಿದ್ದು ನೆಲಸಮಗೊಂಡಿದೆ. ಅಗ್ನಿ ಶಾಮಕದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮೂವರನ್ನು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವವರನ್ನು ಮೈಸೂರು ಆಸ್ಪತೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಮೂವರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು, ಕಾರ್ಯಾಚರಣೆ ಮುಂದುವರೆದಿದೆ.

ಹಳೆಯ ಕಟ್ಟಡ ಹಠಾತ್ತನೆ ಕುಸಿತ | ಹಲವರು ಗಂಭೀರ | ಮೂವರು ಸಿಲುಕಿಕೊಂಡಿರುವ ಶಂಕೆ Read More »

ದರ್ಶನ್ ವಿರುದ್ಧ ವರದಿ ಮಾಡದಂತೆ ಕೋರ್ಟ್ ನಿಂದ ತಡೆಯಾಜ್ಞೆ | ದರ್ಶನ್ ಪತ್ನಿ ವಿಜಯಲಕ್ಷ್ಮೀಯಿಂದ ಇನ್‍ ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೆ

ಬೆಂಗಳೂರು: ದರ್ಶನ್ ವಿರುದ್ಧ ವರದಿ ಪ್ರಕಟಿಸದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಇದೀಗ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ. ಈ ಕುರಿತು ಕಾನೂನು ಹೋರಾಟಕ್ಕೆ ಇಳಿದಿರುವ ಕುರಿತು ಇನ್‍ ಸ್ಟಾಗ್ರಾಂನಲ್ಲಿ ಮೊದಲ ಪೋಸ್ಟ್ ಹಂಚಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಹೊಸ ಬೆಳವಣಿಗೆಗಳು ನಡೆಯುತ್ತಿದೆ. ಇತ್ತೀಚೆಗೆ ದರ್ಶನ್ ಪತ್ನಿ ತನ್ನ ಇನ್‌ಸ್ಟಾಗ್ರಾಂ ಫೋಟೋಗಳನ್ನು ಡಿಲೀಟ್ ಮಾಡಿ ಭಾರಿ ಸುದ್ದಿಯಾಗಿದ್ದರು. ಈಗ ದರ್ಶನ ಪ್ರಕರಣದ ಕುರಿತು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ

ದರ್ಶನ್ ವಿರುದ್ಧ ವರದಿ ಮಾಡದಂತೆ ಕೋರ್ಟ್ ನಿಂದ ತಡೆಯಾಜ್ಞೆ | ದರ್ಶನ್ ಪತ್ನಿ ವಿಜಯಲಕ್ಷ್ಮೀಯಿಂದ ಇನ್‍ ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೆ Read More »

ವಿದ್ಯಾರಶ್ಮಿಯಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮನೋವಿಶ್ಲೇಷಣಾ ಕಾರ್ಯಾಗಾರ

ಸವಣೂರು : ವಿದ್ಯಾರಶ್ಮಿಯಲ್ಲಿ ವಿದ್ಯಾರ್ಥಿಗಳಿಗೆ ಹದಿಹರೆಯದ ಮತ್ತು ಮಾನಸಿಕ ಗೊಂದಲಗಳ ನಿವಾರಣೆಗಾಗಿ ಮನೋವಿಶ್ಲೇಷಣಾ ಕಾರ್ಯಾಗಾರ ನಡೆಯಿತು. ಸಭಾಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿಯವರು ಕಾರ್ಯಾಗಾರದ ಉಪಯುಕ್ತತೆಗಳ ಬಗ್ಗೆ ಮಾತಾನಾಡಿದರು.ಹುಡುಗರ ವಿಭಾಗವನ್ನು ಉದ್ದೇಶಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಪುರುಷರಕಟ್ಟೆಯ ಪ್ರಸಾದಿನೀ ಆಯುರ್ವೇದ ಕ್ಲಿನಿಕ್ ನ ವೈದ್ಯರಾದ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮಾಹಿತಿಯನ್ನು ನೀಡಿದರು. ಹುಡುಗಿಯರ ಸಮಸ್ಯೆಗಳ ಪರಿಹಾರ ಮಾಡುವುದಕ್ಕಾಗಿ ಮನೋವಿಶ್ಲೇಷಣಾ ತಜ್ಞೆ ನೆಮ್ಮದಿ ಮನೋಚಿಕಿತ್ಸಾ ಕೇಂದ್ರದ ಶ್ರೀಮತಿ ಶ್ರದ್ದಾ ರೈ ಮಾಹಿತಿ ನೀಡಿದರು. ವಿದ್ಯಾರಶ್ಮಿ ಸ್ವತಂತ್ರ

ವಿದ್ಯಾರಶ್ಮಿಯಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮನೋವಿಶ್ಲೇಷಣಾ ಕಾರ್ಯಾಗಾರ Read More »

ತೈಲ ಬೆಲೆ ಏರಿಕೆ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ

ಮಂಗಳೂರು: ರಾಜ್ಯ ಸರಕಾರ ತೈಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಮಂಗಳೂರಿನಲ್ಲಿ  ರಾಜ್ಯ ಸರಕಾರದ ವಿರುದ್ಧ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗದೆ ಮತ್ತು ವಾಲ್ಮೀಕಿ ನಿಗಮದ ಭ್ರಷ್ಟಾಚಾರದಂತಹ ಅವ್ಯವಸ್ಥೆಗಳಿಂದ ಕಂಗೆಟ್ಟು ಹೋಗಿರುವ ಕಾಂಗ್ರೆಸ್ ಸರಕಾರ ಹಣವನ್ನು ಸರಿದೂಗಿಸಲು ಸಾಮಾನ್ಯ ಜನರ ಕಿಸೆಗೆ ಕನ್ನ ಹಾಕುತ್ತಿರುವುದು

ತೈಲ ಬೆಲೆ ಏರಿಕೆ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ Read More »

ಉಪ್ಪಿನಂಗಡಿ ಹೇಮಾವತಿ ಕೊಲೆ ಪ್ರಕರಣ | ಬಾಲಕ ರಿಮಾಂಡ್ ಹೋಮ್ ಗೆ

ಉಪ್ಪಿನಂಗಡಿ: ಸಮೀಪದ ಪೆರ್ನೆ ಗ್ರಾಮ ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ (37) ಎಂಬುವವರು ರವಿವಾರ ತಡ ರಾತ್ರಿ ಕೊಲೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಅಪ್ರಾಪ್ತ ವಯಸ್ಕ ಬಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳವರೆಗೆ ರಿಮಾಂಡ್ ಹೋಮ್ ಗೆ ಕಳುಹಿಸಿದೆ. ಹೇಮಾವತಿ ಅವರ ಮನೆಯಲ್ಲಿ ಘಟನೆಯ ರಾತ್ರಿ ತಂಗಿದ್ದ ಅವರ ಅಕ್ಕನ ಮಗ, ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ, ಅಪ್ರಾಪ್ತ ಬಾಲಕ ಹೇಮಾವತಿ ಮಲಗಿದ್ದಲ್ಲಿಗೆ ಹೋಗಿ ದೇಹ ಸುಖ ಬಯಸಿದ್ದು, ಇದಕ್ಕೆ ಹೇಮಾವತಿಯವರು ಪ್ರತಿರೋಧ ವ್ಯಕ್ತಪಡಿಸಿದ್ದರು. ಆಗ

ಉಪ್ಪಿನಂಗಡಿ ಹೇಮಾವತಿ ಕೊಲೆ ಪ್ರಕರಣ | ಬಾಲಕ ರಿಮಾಂಡ್ ಹೋಮ್ ಗೆ Read More »

ಕಣ್ಣುಕುಕ್ಕುವ ಹೆಡ್ ಲೈಟ್ ನಿಂದ ಹೈರಾಣಾದ ವಾಹನಸವಾರರು

ಬೆಂಗಳೂರು : ಕಾರು, ಬೈಕ್ ಹಾಗೂ ಇತರ ವಾಹನಗಳಲ್ಲಿ ಕಣ್ಣುಕುಕ್ಕುವಂಥ ಎಲ್ಇಡಿ ಲೈಟ್ ಗಳನ್ನು ಅಳವಡಿಸುವುದರ ವಿರುದ್ಧ ಕಠಿಣ ಕ್ರಮಕ್ಕೆ ಸಂಚಾರ ಪೊಲೀಸರು ಮುಂದಾಗಿದ್ದಾರೆ. ಈ ರೀತಿಯ ಲೈಟ್ ಗಳನ್ನು ಅಳವಡಿಸುವುದರಿಂದ ಎದುರಿನಿಂದ ಬರುವ ವಾಹನಗಳ ಚಾಲಕರಿಗೆ ತೊಂದರೆಯಾಗುತ್ತಿದ್ದು, ಅಪಘಾತಗಳಿಗೂ ಕಾರಣವಾಗುತ್ತಿದೆ. ಹೀಗಾಗಿ ಇಂಥ ಲೈಟ್ ಗಳನ್ನು ಅಳವಡಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸಂಚಾರ ಪೊಲೀಸರು ಮುಂದಾಗಿದ್ದಾರೆ. ಉಲ್ಲಂಘಿಸಿದವರು ದಂಡ ಸೇರಿದಂತೆ ಇತರ ಕಾನೂನು ಕ್ರಮಗಳನ್ನು ಎದುರಿಸಬೇಕಾಗಲಿದೆ. ಈ ಕುರಿತು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ

ಕಣ್ಣುಕುಕ್ಕುವ ಹೆಡ್ ಲೈಟ್ ನಿಂದ ಹೈರಾಣಾದ ವಾಹನಸವಾರರು Read More »

ರಾಜ್ಯ ಸರಕಾರದಿಂದ ಪೆಟ್ರೋಲ್, ಡಿಸೇಲ್ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆ | ಸರಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಪುತ್ತೂರು: ರಾಜ್ಯ ಸರಕಾರ ಪೆಟ್ರೋಲ್, ಡಿಸೇಲ್ ಸಹಿತ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಪುತ್ತೂರು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ನಗರದ ಬಸ್ ನಿಲ್ದಾಣದ ಬಳಿ ಇರುವ ಗಾಂಧಿಕಟ್ಟೆ ಸಮೀಪ ನಡೆಯಿತು. ಮೊದಲಿಗೆ ಖಾಸಗಿ ಬಸ್ ನಿಲ್ದಾಣದಿಂದ ಕಾಲ್ನಡಿಗೆಯಲ್ಲಿ ಜಾಥಾ ಮೂಲಕ ಬಂದು ಗಾಂಧಿಕಟ್ಟೆ ಸಮೀಪ ರಸ್ತೆ ತಡೆ ಮಾಡಿ ಪ್ರತಿಭಟಿಸಲಾಯಿತು. ಬಳಿಕ ಅಲ್ಲಿಂದ ಮುಖ್ಯರಸ್ತೆಯಾಗಿ ಶ್ರೀಧರ ಭಟ್ ಬಳಿಯಿಂದ ತೆರಳಿ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರಕಾರದಿಂದ ಪೆಟ್ರೋಲ್, ಡಿಸೇಲ್ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆ | ಸರಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ Read More »

error: Content is protected !!
Scroll to Top