ಯುವಕ ವಿಶ್ವನಾಥ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆರ್ಯಾಪು ಗ್ರಾಮದ ಪಂಜಳದಿಂದ ವರದಿಯಾಗಿದೆ. ವಿಶ್ವನಾಥ ಅಲಿಯಾಸ್ ವೇಣು (32) ಆತ್ಮಹತ್ಯೆ ಮಾಡಿಕೊಂಡವರು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವಿಶ್ವನಾಥ ಮನೆಯಲ್ಲಿ ನೈಲಾನ್‍ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ತಂದೆ ನೀಡಿದ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕ ವಿಶ್ವನಾಥ ನೇಣು ಬಿಗಿದು ಆತ್ಮಹತ್ಯೆ Read More »

ಲಾರಿ ಹಾಗೂ ಸ್ಕೂಟರ್  ಡಿಕ್ಕಿ : ಸ್ಕೂಟರ್  ಸವಾರ ಸಾವು

ಬಿ.ಸಿ.ರೋಡ್ : ಲಾರಿ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿದ್ದು, ಸಹಸವಾರ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಕಾವಳಪಡೂರು ಗ್ರಾಮದ ವಗ್ಗದಲ್ಲಿ ಸಂಭವಿಸಿದೆ. ಕಾಸರಗೋಡು ಸಮೀಪದ ಬೇಕಲ ನಿವಾಸಿ  ಸುಮಿತ್ (24)  ಮೃತಪಟ್ಟ‌ ದುರ್ದೈವಿಯಾಗಿದ್ದಾರೆ. ಸ್ಕೂಟರ್‌ ಸಹಸವಾರ ಗುರುಪ್ರೀತ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ  ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಬೆಳ್ತಂಗಡಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಾಗುತ್ತಿದ್ದ ಸ್ಕೂಟರ್ ಗೆ ಎದುರು ನಿಂದ ಬಂಟ್ವಾಳ ಕಡೆಯಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಲಾರಿ ಡಿಕ್ಕಿ ಯಾಗಿದೆ. 

ಲಾರಿ ಹಾಗೂ ಸ್ಕೂಟರ್  ಡಿಕ್ಕಿ : ಸ್ಕೂಟರ್  ಸವಾರ ಸಾವು Read More »

ನರೇಂದ್ರ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೂತನ ಘಟಕ ಉದ್ಘಾಟನೆ

ಪುತ್ತೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎನ್ನುವುದು ಭಾರತದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ. ಇಂದಿನ ಯುವ ವಿದ್ಯಾರ್ಥಿಗಳು ತಮ್ಮ  ಇಚ್ಛಾಶಕ್ತಿ, ಸಂಕಲ್ಪಶಕ್ತಿ, ಕ್ರಿಯಾಶಕ್ತಿಗಳನ್ನು ಉಪಯೋಗಿಸಿಕೊಂಡು, ಸೃಜನಶೀಲತೆಯಿಂದ ಮುಂದುವರಿದು, ತಮ್ಮ ಜವಾಬ್ದಾರಿ ಅರಿತು ವ್ಯಕ್ತಿತ್ವ ವಿಕಸನದ ಜೊತೆಗೆ ರಾಷ್ಟ್ರ ಪುನರ್ ನಿರ್ಮಾಣದ ಕೈಂಕರ್ಯದಲ್ಲಿ ಶ್ರಮಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್‍ಯಕಾರಿಣಿ ಸದಸ್ಯ ಶ್ರೀರಾಮ್ ಅಂಗಿರಸ ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೂತನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಘಟಕದ

ನರೇಂದ್ರ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೂತನ ಘಟಕ ಉದ್ಘಾಟನೆ Read More »

ಲವ್ ಜಿಹಾದ್ : ಶ್ರೀರಾಮಸೇನೆ ಗೆ ಬೆದರಿಕೆ

ಹುಬ್ಬಳ್ಳಿ : ಲವ್ ಜಿಹಾದ್ ವಿರುದ್ಧ ಶ್ರೀರಾಮಸೇನೆ ಸಹಾಯ ವಾಣಿಗೆ   170ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿದ್ದು, ಅಭಿಯಾನ ಆರಂಭಿಸಿದ ಶ್ರೀರಾಮಸೇನೆ ಮೇಲೆ ಬಾಂಬ್‌ ಹಾಕುವ ಹಾಗೂ ಜೀವ ತೆಗೆಯುವ ಬೆದರಿಕೆಗಳು ಕೇಳಿಬರುತ್ತಿವೆ ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಮುಖಂಡ ಗಂಗಾಧರ ಕುಲಕರ್ಣಿ ಗಂಭೀರ ಆರೋಪ ಮಾಡಿದ್ದಾರೆ. ಲವ್ ಜಿಹಾದ್ ವಿರುದ್ಧ ಸಮರ ಸಾರಿರುವ ಶ್ರೀರಾಮಸೇನೆ ಮೇ 29 ರಂದು ಸಹಾಯ ವಾಣಿಗೆ   ಆರಂಭಿಸಿತ್ತು. ಈ ಸಹಾಯ ವಾಣಿಗೆ  ಇದುವರೆಗೆ 1000ಕ್ಕೂ ಅಧಿಕ ಕಾಲ್ ಗಳು

ಲವ್ ಜಿಹಾದ್ : ಶ್ರೀರಾಮಸೇನೆ ಗೆ ಬೆದರಿಕೆ Read More »

ಎಲ್‍.ಕೆ.ಅಡ್ವಾಣಿ ನಿಧನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ | ಆರೋಗ್ಯವಾಗಿದ್ದಾರೆ ಎನ್ನುವುದಕ್ಕೆ ಎಎನ್‍ ಐಯಿಂದ ವರದಿ

ದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್‍.ಕೆ.ಅಡ್ವಾಣಿ ನಿಧನ. ಹೀಗೊಂದು ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಡ್ವಾಣಿಯವರ ಆರೋಗ್ಯದಲ್ಲಿ ವ್ಯತ್ಯ ಉಂಟಾದ್ದು ಸರಿ. ಆದರೆ ಆಸ್ಪತ್ರೆಗೆ ದಾಖಲಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್‍ ಆದ ಬಳಿಕ ಅವರ ಆರೋಗ್ಯ ಸ್ಥಿರವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಕಿಡಿಗೇಡಿಗಳು ಅವರ ನಿಧನರಾಗಿದ್ದಾರೆ ಎಂದು ಶ್ರದ್ಧಾಂಜಲಿ ನೀಡಿದ ಪೋಸ್ಟರ್‍ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಇದು ಶುದ್ಧ ಸುಳ್ಳು. ಅಡ್ವಾಣಿಯವರು ಆರೋಗ್ಯವಾಗಿದ್ದಾರೆ ಎಂಬುದಕ್ಕೆ ಇದೀಗ ಎಎನ್‍ ಐ ಸುದ್ದಿ ಸಂಸ್ಥೆ ಸ್ಪಷ್ಟಪಡಿಸಿದೆ.

ಎಲ್‍.ಕೆ.ಅಡ್ವಾಣಿ ನಿಧನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ | ಆರೋಗ್ಯವಾಗಿದ್ದಾರೆ ಎನ್ನುವುದಕ್ಕೆ ಎಎನ್‍ ಐಯಿಂದ ವರದಿ Read More »

ಕೃಷಿಕ ನವೀನ್ ಚಾತುಬಾಯಿಯವರಿಗೆ ಮ್ಯಾಕ್ಸ್ ಲೈಫ್ ಕೃಷಿಕ ರತ್ನ ಪುರಸ್ಕಾರ

ಐವರ್ನಾಡು : ಐವರ್ನಾಡು ಗ್ರಾಮದ ಕೃಷಿಕರಾದ ಸಿ.ಕೆ.ನವೀನ್ ಚಾತುಬಾಯಿ ಅವರಿಗೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ಕೊಡ ಮಾಡುವ ಕೃಷಿಕ ರತ್ನ ಪುರಸ್ಕಾರ ಜುಲೈ 5 ರಂದು ನೀಡಲಾಗಿದೆ. ಮಂಗಳೂರಿನ ರೀಜನಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ಮಾಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಯ ಸೀನಿಯ‌ರ್ ಮ್ಯಾನೇಜರ್ ಸುಧಾಕರ್ ಶೆಟ್ಟಿ ಮತ್ತು ಕಂಪನಿಯ ಅಧಿಕಾರಿಗಳು ಸಿಬ್ಬಂದಿಗಳು ನಿರ್ವಹಿಸಿದರು.

ಕೃಷಿಕ ನವೀನ್ ಚಾತುಬಾಯಿಯವರಿಗೆ ಮ್ಯಾಕ್ಸ್ ಲೈಫ್ ಕೃಷಿಕ ರತ್ನ ಪುರಸ್ಕಾರ Read More »

ಉಪ್ಪಿನಂಗಡಿ ಬ್ರಿಟಿಷರ ಕಾಲದಲ್ಲಿ ಕುಮಾರಧಾರ ನದಿಗೆ ನಿರ್ಮಿಸಿದ ಸೇತುವೆ ಬಂದ್ | ವಾಹನ ಸಂಚಾರ, ಸಾರ್ವಜನಿಕರಿಗೆ ಜಿಲ್ಲಾಡಳಿತದಿಂದ ನಿರ್ಬಂಧ

ಉಪ್ಪಿನಂಗಡಿ : ಕುಮಾರಧಾರ ನದಿಗೆ ನಿರ್ಮಿಸಲಾಗಿದ್ದ ಬ್ರಿಟಿಷರ ಕಾಲದ ಸೇತುವೆಯಲ್ಲಿ ವಾಹನ ಸಂಚಾರ ಸಹಿತ ಸಾರ್ವಜನಿಕರಿಗೆ ಇದೀಗ ನಿರ್ಬಂಧ ಹೇರಲಾಗಿದೆ. ಒಂದು ಕಾಲದಲ್ಲಿ ಬ್ರಿಟಿಷ್ ಕಾಲದ ಸೇತುವೆಯನ್ನು ವಾಹನ ಸಂಚಾರ ಹಾಗೂ ಸಾವರ್ಜನಿಕರು ಉಪಯೋಗಿಸುತ್ತಿದ್ದರು. ಬಹಳ ಇಕ್ಕಟ್ಟಾದ ಸೇತುವೆ ಇದಾಗಿತ್ತು. ಬಳಿಕ ದಿನಗಳಲ್ಲಿ ಇದೇ ನದಿಗೆ ಹೊಸ ಸೇತುವೆ ನಿರ್ಮಾಣಗೊಂಡ ಬಳಿಕ ಈ ಬ್ರಿಟಿಷರ ಕಾಲದ ಸೇತುವೆಯಲ್ಲಿ ಸಾರ್ವಜನಿಕರು ನಡೆಯಲಷ್ಟೇ ಉಪಯೋಗವಾಗುತ್ತಿತ್ತು. ಕೆಲವೊಂದು ದ್ವಿಚಕ್ರ ವಾಹನ ಈ ಸೇತುವೆಯಲ್ಲಿ ಚಲಾಯಿಸುತ್ತಿದ್ದವು.ಇದೀಗ ಈ ಸೇತುವೆಯಲ್ಲಿ ಇನ್ಮುಂದೆ ಯಾವುದೇ ತರಹದ

ಉಪ್ಪಿನಂಗಡಿ ಬ್ರಿಟಿಷರ ಕಾಲದಲ್ಲಿ ಕುಮಾರಧಾರ ನದಿಗೆ ನಿರ್ಮಿಸಿದ ಸೇತುವೆ ಬಂದ್ | ವಾಹನ ಸಂಚಾರ, ಸಾರ್ವಜನಿಕರಿಗೆ ಜಿಲ್ಲಾಡಳಿತದಿಂದ ನಿರ್ಬಂಧ Read More »

ಕಾರುಗಳ ನಡುವೆ ಭೀಕರ ಅಪಘಾತ |  3  ಸಾವು, 3 ಗಂಭೀರ

ಶಿವಮೊಗ್ಗ :  ಲಯನ್ ಸಫಾರಿ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಎರಡು ಕಾರುಗಳ ನಡುವೆ ಭೀಕರ ಅಪಘಾತವಾಗಿದೆ.  ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರ ಸ್ಥಿತಿ ಗಂಭೀರವಾಗಿದೆ, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಗಯಾಳುಗಳನ್ನು ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಶಿವಮೊಗ್ಗದ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

ಕಾರುಗಳ ನಡುವೆ ಭೀಕರ ಅಪಘಾತ |  3  ಸಾವು, 3 ಗಂಭೀರ Read More »

ತಾಲೂಕು ಕಚೇರಿಯಲ್ಲೇ ಆಧಾರ್ ವ್ಯವಸ್ಥೆ : ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರಿನ ತಾಲೂಕು ಕಚೇರಿಯಲ್ಲಿ ಆಧಾರ್ ಕೇಂದ್ರವನ್ನು ತೆರೆಯಲಾಗಿದ್ದು, ಇನ್ನು ಮುಂದೆ ಆಧಾರ್ ಕಾರ್ಡು ಮಾಡಿಸಲು ಅಂಚೆ ಕಚೇರಿ ಮುಂದೆ ಕ್ಯೂ ನಿಲ್ಲುವ ಅಗತ್ಯವಿಲ್ಲ ಎಂದು ಶಾಸಕ ಅಶೋಕ್ ರೈ ತಿಳಿಸಿದರು. ಪುತ್ತೂರು ತಾಲೂಕು ಕಚೇರಿಯಲ್ಲಿ ನೂತನ ಆಧಾರ್ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ನೂತನ ಕೇಂದ್ರದಲ್ಲಿ 18 ವರ್ಷ ಪ್ರಾಯದವರೆಗಿನ ಮಕ್ಕಳಿಗೆ ಹೊಸ ಆಧಾರ್ ,18 ರ ನಂತರದವರ ಆದಾರ್ ತಿದ್ದುಪಡಿ. ನಂಬರ್ ತಿದ್ದುಪಡಿ, ವಿಳಾಸ ಸೇರಿದಂತೆ ತಿದ್ದುಪಡಿ‌ಮಾಡಲು ಅವಕಾಶವಿದೆ. ವಾರದ ರಜಾ ದಿನ

ತಾಲೂಕು ಕಚೇರಿಯಲ್ಲೇ ಆಧಾರ್ ವ್ಯವಸ್ಥೆ : ಶಾಸಕ ಅಶೋಕ್ ರೈ Read More »

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ | ಕಾರಿಗೆ ಹಾನಿ

ವಿಟ್ಲ: ಕೊಡಾಜೆ ಅನಂತಾಡಿ ರಸ್ತೆಯ ಗೋಳಿಕಟ್ಟೆ ಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಉರುಳಿ ಬಿದ್ದು ಕಾರು ಜಖಂಗೊಂಡಿರುವ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ಈ ಘಟನೆ ಸಂಭವಿಸಿದ್ದು, ಶಬರಿ ರತ್ನಾಕರ ಎಂಬವರು ಕೊಡಾಜೆ ಅನಂತಾಡಿ ರಸ್ತೆಯ ಗೋಳಿಕಟ್ಟೆ ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಬೃಹತ್ ಮರವೊಂದು ಉರುಳಿ ಬಿದ್ದಿದೆ.  ಪರಿಣಾಮ ಕಾರು ಜಖಂಗೊಂಡಿದ್ದು, ತಕ್ಷಣವೇ ಸ್ಥಳೀಯರು ಕಾರಿನ ಮೇಲೆ ಬಿದ್ದಿರುವ ಮರವನ್ನು ತೆರವುಗೊಳಿಸಿದ್ದಾರೆ.

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ | ಕಾರಿಗೆ ಹಾನಿ Read More »

error: Content is protected !!
Scroll to Top