ಸುದ್ದಿ

ಗ್ಯಾಸ್‌ ಸಿಲಿಂಡರ್‌ ಬೆಲೆ ಸದ್ದಿಲ್ಲದೆ 62 ರೂ. ಏರಿಕೆ

ಹೊಸದಿಲ್ಲಿ : ದೀಪಾವಳಿ ಹಬ್ಬದ ಸಂದರ್ಭದಲ್ಲೇ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು ಸದ್ದಿಲ್ಲದೆ ಏರಿಸಿವೆ. ನಿನ್ನೆ ವಾಣಿಜ್ಯ ಸಿಲಿಂಡರ್‌ ಬೆಲೆ 62 ರೂ. ಏರಿಕೆಯಾಗಿದೆ. ಇದರೊಂದಿಗೆ ಸತತ 3ನೇ ತಿಂಗಳು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾದಂತಾಗಿದೆ. ಆದರೆ 14 ಕೆಜಿಯ ಗೃಹ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 48 ರೂಪಾಯಿ ಏರಿಕೆಯಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ 19 […]

ಗ್ಯಾಸ್‌ ಸಿಲಿಂಡರ್‌ ಬೆಲೆ ಸದ್ದಿಲ್ಲದೆ 62 ರೂ. ಏರಿಕೆ Read More »

ಗೋಲ್‌ ಗುಂಬಜ್‌ ಸಹಿತ ಐತಿಹಾಸಿಕ ಸ್ಮಾರಕಗಳೂ ವಕ್ಫ್‌ ಆಸ್ತಿ!

53 ಐತಿಹಾಸಿಕ ಸ್ಥಳಗಳ ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು ಬೆಂಗಳೂರು : ರಾಜ್ಯದಲ್ಲಿರುವ ಹಲವು ಐತಿಹಾಸಿಕ ಸ್ಮಾರಕಗಳನ್ನೂ ವಕ್ಫ್‌ ಬೋರ್ಡ್‌ ತನ್ನದು ಎಂದು ಘೋಷಿಸಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ. ವಿಜಯಪುರದ ಪ್ರಸಿದ್ಧ ಗೋಲ್ ಗುಂಬಜ್, ಇಬ್ರಾಹಿಂ ರೋಜಾ, ಬಾರಾ ಕಮಾನ್, ಬೀದರ್ ಮತ್ತು ಕಲಬುರಗಿಯ ಕೋಟೆಗಳು ಸೇರಿದಂತೆ ಕರ್ನಾಟಕದಾದ್ಯಂತ ಕನಿಷ್ಠ 53 ಐತಿಹಾಸಿಕ ಸ್ಮಾರಕಗಳನ್ನು ವಕ್ಫ್ ಮಂಡಳಿ ತನ್ನದು ಎಂದು ಪ್ರತಿಪಾದಿಸುತ್ತಿದೆ. ಇವುಗಳಲ್ಲಿ ಆದಿಲ್ ಶಾಹಿಗಳ ಹಿಂದಿನ ರಾಜಧಾನಿ ವಿಜಯಪುರದಲ್ಲಿರುವ 43 ಆಸ್ತಿಗಳನ್ನು 2005ರಲ್ಲೇ ವಕ್ಫ್ ಬೋರ್ಡ್

ಗೋಲ್‌ ಗುಂಬಜ್‌ ಸಹಿತ ಐತಿಹಾಸಿಕ ಸ್ಮಾರಕಗಳೂ ವಕ್ಫ್‌ ಆಸ್ತಿ! Read More »

ಕಿರುಕುಳ ನೀಡುತ್ತಿದ್ದ ಚಿಕ್ಕಪ್ಪನ ಮಗನನ್ನು ಕೇಬಲ್‌ನಿಂದ ಕತ್ತು ಬಿಗಿದು ಕೊಂದ ಮಹಿಳೆ

ಕಟೀಲು : ಕಳೆದ ಭಾನುವಾರ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿ ಕಟೀಲು ಸಮೀಪದ ಗಿಡಿಗೆರೆ ನಿವಾಸಿ ತಾರನಾಥ ಮುಗೇರ ಎಂಬವರ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂಬುದು ಪತ್ತೆಯಾಗಿದೆ. ತಾರನಾಥ ಮುಗೇರ ಮೃತದೇಹ ಸಾರ್ವಜನಿಕ ಸ್ಥಳದಲ್ಲಿ ಕುತ್ತಿಗೆಗೆ ಕೇಬಲ್‌ನಿಂದ ಬಿಗಿದು ಮೃತಪಟ್ಟ ರೀತಿಯಲ್ಲಿ ಸಿಕ್ಕಿತ್ತು. ಪ್ರಕರಣ ಸಂಬಂಧ ವಿಚಾರಣೆ ನಡೆಸುವ ವೇಳೆ ಸಂಶಯ ದೃಢಪಟ್ಟ ಹಿನ್ನೆಲೆಯಲ್ಲಿ ಗುರುವಾರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಮನೆಯಿಂದ ಸುಮಾರು 100 ಮೀ. ದೂರದಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಅಕ್ಟೋಬರ್‌ 27ರಂದು ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸುತ್ತ

ಕಿರುಕುಳ ನೀಡುತ್ತಿದ್ದ ಚಿಕ್ಕಪ್ಪನ ಮಗನನ್ನು ಕೇಬಲ್‌ನಿಂದ ಕತ್ತು ಬಿಗಿದು ಕೊಂದ ಮಹಿಳೆ Read More »

ಹತ್ತು ತಿಂಗಳಲ್ಲಿ 2,140 ಕೋ.ರೂ. ಸೈಬರ್‌ ಚೋರರ ಪಾಲು

ಡಿಜಿಟಲ್‌ ಅರೆಸ್ಟ್‌ ಮೂಲಕ ನಡೆಯುತ್ತಿದೆ ಆನ್‌ಲೈನ್‌ ದರೋಡೆ ಹೊಸದಿಲ್ಲಿ : ಸೈಬರ್‌ ಚೋರರು ಕಳೆದ ಹತ್ತು ತಿಂಗಳಲ್ಲಿ ದೋಚಿದ ಮೊತ್ತ ಬರೋಬ್ಬರಿ 2,140 ಕೋ. ರೂ. ಕೇಂದ್ರ ಗೃಹ ಸಚಿವಾಲಯದ ಸೈಬರ್‌ ವಿಭಾಗ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಆನ್‌ಲೈನ್‌ ವಂಚನೆ ಮತ್ತು ಸೈಬರ್‌ ಅರೆಸ್ಟ್‌ನಂತಹ ತಂತ್ರಗಳಿಂದ ಸೈಬರ್‌ ಚೋರರು ಈ ವರ್ಷದ ಹತ್ತು ತಿಂಗಳಲ್ಲೇ 2,140 ಕೋ. ರೂ. ಲಪಟಾಯಿಸಿದ್ದಾರೆ ಎಂದು ಸೈಬರ್‌ ವಿಭಾಗ ಮಾಹಿತಿ ನೀಡಿದೆ.ಪ್ರತಿ ತಿಂಗಳು ಸರಾಸರಿ 214 ಕೋ.ರೂ.ಯಂತೆ ದೇಶದ ಜನರು ಸೈಬರ್‌

ಹತ್ತು ತಿಂಗಳಲ್ಲಿ 2,140 ಕೋ.ರೂ. ಸೈಬರ್‌ ಚೋರರ ಪಾಲು Read More »

ಮಂಗಳೂರಿನ ಸಮಾಜ ಸೇವಕನನ್ನು ಬೆಂಗಳೂರು ತನಕ ಕರೆಸಿಕೊಂಡು ಪ್ರಶಸ್ತಿ ನೀಡದೆ ಅವಮಾನಿಸಿದ ಸರಕಾರ

ಕೊನೇ ಕ್ಷಣದಲ್ಲಿ ನೀವು ಅವರಲ್ಲ ಕ್ಷಮಿಸಿ ಎಂದು ಹೇಳಿ ವಾಪಸು ಕಳುಹಿಸಿದ ಅಧಿಕಾರಿಗಳು ಮಂಗಳೂರು: ಮಂಗಳೂರಿನ ಸಮಾಜ ಸೇವಕರೊಬ್ಬರನ್ನು ಪ್ರಶಸ್ತಿ ಕೊಡುತ್ತೇವೆ ಎಂದು ಬೆಂಗಳೂರಿಗೆ ಕರೆಸಿ ಕೊನೇ ಕ್ಷಣದಲ್ಲಿ ನಿಮಗೆ ಪ್ರಶಸ್ತಿ ಇಲ್ಲ ಎಂದು ಹೇಳಿ ಸರಕಾರ ಘೋರ ಅವಮಾನ ಮಾಡಿದೆ. ಕನ್ನಡ ಮತ್ತು ಸಂಸ್ಕತಿ ಇಲಾಖೆ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಎಂದು ಮಂಗಳೂರಿನ ಸಮಾಜ ಸೇವಕ ಸಮಾಜ ಸೇವಕ ಬಾಬು ಪಿಲಾರ್ ಎಂಬವರನ್ನು ಫೋನ್ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡಿದೆ. ಇನ್ನೇನು ಪ್ರಶಸ್ತಿ ಸ್ವೀಕರಿಸಲು

ಮಂಗಳೂರಿನ ಸಮಾಜ ಸೇವಕನನ್ನು ಬೆಂಗಳೂರು ತನಕ ಕರೆಸಿಕೊಂಡು ಪ್ರಶಸ್ತಿ ನೀಡದೆ ಅವಮಾನಿಸಿದ ಸರಕಾರ Read More »

ಕನ್ನಡ ರಾಜ್ಯೋತ್ಸವಕ್ಕೆ ಮೋದಿ ಶುಭಾಶಯ

ಹೊಸದಿಲ್ಲಿ: ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಜನತೆಗೆ ಶುಭ ಹಾರೈಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಕನ್ನಡದಲ್ಲೇ ಸಂದೇಶ ಪ್ರಕಟಿಸುವ ಪ್ರಧಾನಿ ಕರ್ನಾಟಕದ ಜತೆ ಸದಾ ಸಂತೋಷ, ಯಶಸ್ಸು ಗಳಿಸುವಂತಾಗಲಿ ಎಂದು ಹಾರೈಸಿದ್ದಾರೆ. ಕನ್ನಡ ರಾಜ್ಯೋತ್ಸವವು ಅತ್ಯಂತ ವಿಶೇಷವಾದ ಸಂದರ್ಭವಾಗಿದ್ದು, ಇದು ಕರ್ನಾಟಕದ ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗುರುತಿಸುತ್ತದೆ. ರಾಜ್ಯವು ಮಹಾನ್ ವ್ಯಕ್ತಿಗಳನ್ನು ಪಡೆದಿದ್ದು, ಅವರು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ನಾವೀನ್ಯಕ್ಕೆ ಶಕ್ತಿ ತುಂಬುತ್ತಿದ್ದಾರೆ. ಕರ್ನಾಟಕದ ಜನರು ಸದಾ ಸಂತೋಷ

ಕನ್ನಡ ರಾಜ್ಯೋತ್ಸವಕ್ಕೆ ಮೋದಿ ಶುಭಾಶಯ Read More »

ನ.17ರಿಂದ ಕಂಬಳ ಋತು ಆರಂಭ

ಪಿಲಿಕುಳದಲ್ಲಿ ಹಲವು ವರ್ಷಗಳ ಬಳಿಕ ಮೊದಲ ಕಂಬಳ ಮಂಗಳೂರು: ಈ ಕಂಬಳ ಋತುವಿನ ಮೊದಲ ಕಂಬಳ ನ.17ರಂದು ಪಿಲಿಕುಳದಲ್ಲಿ ನಡೆಯಲಿದೆ. ಹಿಂದೆ ಪಿಲಿಕುಳದಲ್ಲಿ ಕಂಬಳ ನಡೆಯುತ್ತಿದ್ದರೂ ನಿಂತುಹೋಗಿ ಬಹಳ ವರ್ಷಗಳಾಗಿತ್ತು. ಹೀಗಾಗಿ ಕಂಬಳ ಋತುವನ್ನು ಪಿಲಿಕುಳದಿಂದ ಪ್ರಾರಂಭಿಸಲು ಕಂಬಳ ಸಮಿತಿ ತೀರ್ಮಾನಿಸಿದೆ. ಈ ಕಂಬಳಕ್ಕೆ ಸಕಲ ಸಿದ್ಧತೆಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈಗೊಂಡಿದೆ. ಈಗಾಗಲೇ ಒಂದೆರಡು ಕಡೆ ಸಾಂಪ್ರದಾಯಿಕವಾಗಿ ಜೂನಿಯರ್‌ ಮತ್ತು ಸಬ್‌ಜೂನಿಯರ್‌ ಕಂಬಳಗಳು ನಡೆದಿವೆ. ಇವುಗಳಲ್ಲಿ ಸೀಮಿತ ಸಂಖ್ಯೆಯ ಕೋಣಗಳಷ್ಟೇ ಭಾಗವಹಿಸಿವೆ. ಇದೇ ಮಾದರಿಯ ಇನ್ನೊಂದು

ನ.17ರಿಂದ ಕಂಬಳ ಋತು ಆರಂಭ Read More »

ಪುರಾತನ ದೇವಸ್ಥಾನಕ್ಕೂ ಬಂತು ವಕ್ಫ್‌ ನೋಟಿಸ್‌

ಒಂದು ವರ್ಷದ ಹಿಂದೆ ಪಹಣಿ ತಿದ್ದುಪಡಿ ಮಾಡಿರುವ ಅನುಮಾನ ಮಂಡ್ಯ : ವಕ್ಫ್ ನೋಟಿಸ್‌ಗಳಿಂದ ರೈತರು ಮತ್ತು ಮಠಗಳು ಕಂಗಾಲಾಗಿರುವ ಹೊತ್ತಲ್ಲೇ ಪುರಾತನ ದೇವಸ್ಥಾನದ ಆಸ್ತಿಯನ್ನೂ ವಕ್ಫ್‌ ಮಂಡಳಿಗೆ ಸೇರಿಸಿರುವುದು ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಪುರಾತನ ಶ್ರೀ ಚಿಕ್ಕಮ್ಮ ಚಿಕ್ಕದೇವಿ ದೇವಸ್ಥಾನದ ಪಹಣಿಯಲ್ಲಿಯೂ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ತಿಳಿದುಬಂದಿದೆ. ಇದು ಗ್ರಾಮಸ್ಥರನ್ನು ಕೆರಳಿಸಿದೆ. ರಾಜ್ಯದಾದ್ಯಂತ ವಕ್ಫ್ ವಿಚಾರದ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ದೇಗುಲದ ಆಸ್ತಿ ದಾಖಲೆ ನೋಡಿದ ಗ್ರಾಮಸ್ಥರಿಗೆ ಶಾಕ್

ಪುರಾತನ ದೇವಸ್ಥಾನಕ್ಕೂ ಬಂತು ವಕ್ಫ್‌ ನೋಟಿಸ್‌ Read More »

ತುಳು ಭಾಷೆಗೆ ಇನ್ನೊಂದು ಗರಿ : ತುಳು ವಿಕ್ಷನರಿ, ತುಳು ವಿಕಿಸೋರ್ಸ್‌ ಲೈವ್‌

ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುವಂತೆ ಡಿಜಿಟಲ್‌ ಆವಿಷ್ಕಾರ ಮಂಗಳೂರು: ತುಳು ಲಿಪಿಗೆ ಯುನಿಕೋಡ್‌ ಮಾನ್ಯತೆ ಸಿಕ್ಕಿದ ಬೆನ್ನಿಗೆ ಈಗ ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್‌ ಲೈವ್‌ ಆಗಿದೆ. ತುಳು ಭಾಷೆಯ ಬೆಳವಣಿಗೆಯ ಉದ್ದೇಶದಿಂದ ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್ ಅಧಿಕೃತವಾಗಿ ಲೈವ್ ಆಗಿವೆ. ವಿಕಿಮೀಡಿಯಾ ಫೌಂಡೇಶನ್ ನಿರ್ವಹಿಸುವ ಅಂತರಜಾಲ ನಿಘಂಟು ತುಳು ವಿಕ್ಷನರಿ. ಬಳಕೆದಾರರು ತುಳು ವಿಕ್ಷನರಿಯಲ್ಲಿ ಮಾಹಿತಿ ಹುಡುಕಬಹುದು, ಸಂಪಾದಿಸಬಹುದು ಮತ್ತು ಕೊಡುಗೆ ನೀಡಬಹುದು. ಈ ವಿಕ್ಷನರಿ ಕರಾವಳಿ ವಿಕಿಮೀಡಿಯನ್ನರು ಮತ್ತು ತುಳು ವಿಕಿಮೀಡಿಯನ್ನರ

ತುಳು ಭಾಷೆಗೆ ಇನ್ನೊಂದು ಗರಿ : ತುಳು ವಿಕ್ಷನರಿ, ತುಳು ವಿಕಿಸೋರ್ಸ್‌ ಲೈವ್‌ Read More »

ವಕ್ಫ್‌ ಕೋಲಾಹಲ : ನ.4ರಂದು ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆ

ವಕ್ಫ್‌ ಸಚಿವ ಜಮೀರ್‌ ಅಹ್ಮದ್‌ ಕಿತ್ತೊಗೆಯಲು ಆಗ್ರಹ ಬೆಂಗಳೂರು: ವಕ್ಫ್ ಮಂಡಳಿ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳಲು ಹುನ್ನಾರ ನಡೆಸಿರುವುದನ್ನು ಪ್ರತಿಭಟಿಸಿ ಮತ್ತು ವಕ್ಫ್‌ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ನ.4ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಪ್ರತಿಭಟನೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಸಂಸದರು, ಶಾಸಕರು, ಪರಿಷತ್ ಸದಸ್ಯರು, ಮಾಜಿ ಲೋಕಸಭಾ ಸದಸ್ಯರು, ಪಕ್ಷದ ಪದಾಧಿಕಾರಿಗಳು ಪತ್ರ ಬರೆದಿದ್ದು, ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರನ್ನು ಬೆಂಬಲಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ವಕ್ಫ್‌ ಕೋಲಾಹಲ : ನ.4ರಂದು ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆ Read More »

error: Content is protected !!
Scroll to Top