ದೇವಸ್ಥಾನದ ಉತ್ಸವದಲ್ಲಿ ಭೀಕರ ಪಟಾಕಿ ಸ್ಫೋಟ : 154 ಮಂದಿಗೆ ಗಾಯ; 10 ಮಂದಿಯ ಸ್ಥಿತಿ ಚಿಂತಾಜನಕ | ಕಾಸರಗೋಡಿನ ನೀಲೇಶ್ವರದಲ್ಲಿ ಈ ವರ್ಷದ ಮೊದಲ ಉತ್ಸವದ ಮೊದಲ ದಿನವೇ ಸಂಭವಿಸಿದ ದುರಂತ
ಕಾಸರಗೋಡು: ಕಾಸರಗೋಡು ಸಮೀಪ ನೀಲೇಶ್ವರಂನಲ್ಲಿ ದೇವಸ್ಥಾನದ ಉತ್ಸವದ ವೇಳೆ ಭೀಕರ ಪಟಾಕಿ ದುರಂತ ಸಂಭವಿಸಿ, 154 ಮಂದಿ ಗಾಯಗೊಂಡಿದ್ದು 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಕಾಸರಗೋಡು, ಕಣ್ಣೂರು ಮತ್ತು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವೀರರ್ಕಾವು ದೇವಸ್ಥಾನದ ಬಳಿಯ ಪಟಾಕಿ ಸಂಗ್ರಹಾಗಾರಕ್ಕೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಮಂಗಳವಾರ ತಡರಾತ್ರಿ 12.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ […]










