ಸುದ್ದಿ

ಯುವಕನ ಕಿರುಕುಳದಿಂದ ಬೇಸತ್ತು ಯುವತಿ ಆತ್ಮಹತ್ಯೆಗೆ ಯತ್ನ

24 ತುಂಡು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಅನ್ಯಕೋಮಿನ ಯುವಕ ಮಂಗಳೂರು: ಅನ್ಯಕೋಮಿನ ಯುವಕನೊಬ್ಬನ ಕಿರುಕುಳದಿಂದ ಬೇಸತ್ತು ಸುರತ್ಕಲ್‌ ಸಮೀಪದ ಇಡ್ಯದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಸಂಭವಿಸಿದ್ದು, ಇದು ಲವ್‌ ಜಿಹಾದ್‌ ಕೃತ್ಯ ಎಂಬ ಆರೋಪ ಕೇಳಿಬಂದಿದೆ. ಅನ್ಯಕೋಮಿನ ಯುವಕ ಯುವತಿಯ ಸಹೋದರನಿಗೆ ಸಂದೇಶ ಕಳುಹಿಸಿ ತಂಗಿಯನ್ನು ಪ್ರೀತಿಸಲು ಹೇಳು ಇಲ್ಲದಿದ್ದರೆ 24 ತುಂಡು ಮಾಡುತ್ತೇನೆ ಎಂದು ಬೆದರಿಕೆ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ.ನನ್ನನ್ನು ಪ್ರೀತಿಸುವಂತೆ ನಿನ್ನ ಸಹೋದರಿಗೆ ಹೇಳು, ಇಲ್ಲ ನಿನ್ನನ್ನು 24 ತುಂಡು […]

ಯುವಕನ ಕಿರುಕುಳದಿಂದ ಬೇಸತ್ತು ಯುವತಿ ಆತ್ಮಹತ್ಯೆಗೆ ಯತ್ನ Read More »

ಒಂದೇ ಪ್ರಕರಣದಲ್ಲಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ : ನ್ಯಾಯಾಲಯದ ಅಪರೂಪದ ತೀರ್ಪು

ಕೊಪ್ಪಳ ಜಿಲ್ಲೆಯ ಗಂಗಾವತಿಯ ಮರಕುಂಬಿ ದಲಿತ ದೌರ್ಜನ್ಯ ಪ್ರಕರಣ ಕೊಪ್ಪಳ: ಒಂದೇ ಪ್ರಕರಣದಲ್ಲಿ ಬರೋಬ್ಬರಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ಕೊಪ್ಪಳ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಂಗ ಇತಿಹಾಸದಲ್ಲಿ ಅಪರೂಪದ ತೀರ್ಪ ನೀಡಿದ ಹಿರಿಮೆಗೆ ಪಾತ್ರವಾಗಿದೆ. ಗಂಗಾವತಿಯ ಮರುಕುಂಬಿ ದಲಿತ ದೌರ್ಜನ್ಯ ಪ್ರಕರಣದ 98 ಅಪರಾಧಿಗಳಿಗೆ ಗುರುವಾರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದ ಇತರ ಮೂವರು ಆರೋಪಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ

ಒಂದೇ ಪ್ರಕರಣದಲ್ಲಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ : ನ್ಯಾಯಾಲಯದ ಅಪರೂಪದ ತೀರ್ಪು Read More »

ನ್ಯಾ.ಸಂಜೀವ್‌ ಖನ್ನಾ ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಾಧೀಶ

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯನ್ಯಾಯಾಧೀಶರಾಗಿ (ಸಿಜೆಐ) ನ್ಯಾ.ಸಂಜೀವ್‌ ಖನ್ನಾ ಆಯ್ಕೆಯಾಗಿದ್ದು, ಅವರನ್ನು ನೇಮಕ ಮಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಸೂಚನೆ ಹೊರಡಿಸಿದ್ದಾರೆ. ನವೆಂಬರ್‌ 11ರಂದು ಹಾಲಿ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್‌ ನಿವೃತ್ತಿಯಾಗಲಿದ್ದಾರೆ. ಅಂದೇ ಸಂಜೀವ್‌ ಖನ್ನಾ ಅಧಿಕಾರ ವಹಿಸಿಕೊಳ್ಳಲಿದ್ದು, 2025ರ ಮೇ 13ರ ವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ. 2019ರ ಜನವರಿ 18ರಂದು ನ್ಯಾ. ಸಂಜೀವ್‌ ಖನ್ನಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌‌ ಹುದ್ದೆಗೆ ನೇಮಿಸಲಾಗಿತ್ತು. 2022ರ ನವೆಂಬರ್ 8ರಂದು ಸಿಜೆಐ ಉದಯ್ ಉಮೇಶ್ ಲಲಿತ್

ನ್ಯಾ.ಸಂಜೀವ್‌ ಖನ್ನಾ ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಾಧೀಶ Read More »

ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ ಚಂಡಮಾರುತ

120 ಕಿ.ಮೀ. ಪ್ರಚಂಡ ವೇಗದ ಗಾಳಿ; 6 ಲಕ್ಷ ಮಂದಿ ಸ್ಥಳಾಂತರ ಭುವನೇಶ್ವರ : ಬಂಗಾಳಕೊಲ್ಲಿಯ ವಾಯವ್ಯ ಭಾಗದಲ್ಲಿ ಸೃಷ್ಟಿಯಾಗಿರುವ ಡಾನಾ ಚಂಡಮಾರುತ ನಿರೀಕ್ಷೆಯಂತೆ ಮಧ್ಯರಾತ್ರಿ ಒಡಿಶಾ ಕರಾವಳಿಗೆ ಅಪ್ಪಳಿಸಿದೆ. ಕೇಂದ್ರಪಾರ ಜಿಲ್ಲೆಯ ಭಿತರ್ಕಾನಿಕಾ ಮತ್ತು ಭದ್ರಕ್‌ನ ಧಮ್ರಾ ನಡುವೆ ಅಪ್ಪಳಿಸಿ ಜೋರು ಮಳೆಯಾಗುತ್ತಿದೆ. ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು ಒಡಿಶಾ, ಬಂಗಾಳದ ತೀರ ಪ್ರದೇಶಗಳಲ್ಲಿ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುತ್ತಿದೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಉತ್ತರ ವಾಯವ್ಯ ದಿಕ್ಕಿನತ್ತ ಚಲಿಸುತ್ತಿದೆ.ನೆರೆಯ ಪಶ್ಚಿಮ ಬಂಗಾಳದ

ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ ಚಂಡಮಾರುತ Read More »

17 ಬುಲೆಟ್‌ಗಳು ಹೊಕ್ಕಿದ್ದರೂ ಟೈಗರ್ ಹಿಲ್ ಗೆದ್ದು ಬಂದ ಸೈನಿಕ

19 ವರ್ಷ ಪ್ರಾಯದಲ್ಲೇ ಪರಮವೀರ ಚಕ್ರ ಪಡೆದ ವೀರ ಯೋಧ ಆತನ ತಂದೆ ಕರಣ್ ಸಿಂಗ್‌ ಯಾದವ್ 1965-71ರ ಅವಧಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಹಾಗೆಯೇ ಎರಡು ಇಂಡೋ-ಪಾಕ್ ಯುದ್ಧಗಳಲ್ಲಿ ಧೀರೋದಾತ್ತವಾಗಿ ಹೋರಾಡಿ ಭಾರತವನ್ನು ಗೆಲ್ಲಿಸಿದ್ದರು. ಅದರಿಂದ ಮಗನಿಗೆ ರಾಷ್ಟ್ರಪ್ರೇಮವು ರಕ್ತದಲ್ಲಿಯೇ ಬಂದಿತ್ತು ಅನ್ನಿಸುತ್ತದೆ. ಅದರಿಂದ ಆತ ಭಾರತೀಯ ಸೇನೆಗೆ ಆಯ್ಕೆಯಾಗುವಾಗ ಆತನ ವಯಸ್ಸು ಕೇವಲ 16 ವರ್ಷ 5 ತಿಂಗಳು ಆಗಿತ್ತು. ಅಪ್ಪನ ಭುಜದ ಮೇಲೆ ಮಿಂಚುತ್ತಿದ್ದ ಮೆಡಲ್‌ಗಳೇ ಆತನಿಗೆ ಪ್ರೇರಣೆ ಆತನ ಹೆಸರು

17 ಬುಲೆಟ್‌ಗಳು ಹೊಕ್ಕಿದ್ದರೂ ಟೈಗರ್ ಹಿಲ್ ಗೆದ್ದು ಬಂದ ಸೈನಿಕ Read More »

ತುಳು ಚಿತ್ರರಂಗಕ್ಕೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ದಂಪತಿ

ಹರಿಕೃಷ್ಣ ಬಂಟ್ವಾಳ್‌ ಪುತ್ರ ನಾಯಕನಾಗಿರುವ ಚಿತ್ರ ಶಿಲ್ಪಾ ಗಣೇಶ್‌ ನಿರ್ಮಾಣ ಮಂಗಳೂರು: ಮುಂಗಾರು ಮಳೆ ಖ್ಯಾತಿಯ ಗೋಲ್ಡನ್ ಸ್ಟಾರ್ ಗಣೇಶ್ ಈಗ ತುಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ಪತ್ನಿ ಶಿಲ್ಪಾ ಗಣೇಶ್ ತುಳು ಚಿತ್ರವೊಂದನ್ನು ನಿರ್ಮಿಸಲಿದ್ದು, ಅದರಲ್ಲಿ ಅತಿಥಿ ನಟನಾಗಿ ಗಣೇಶ್‌ ನಟಿಸಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಶಿಲ್ಪಾ ಗಣೇಶ್‌ ಈಗಾಗಲೇ ನಿರ್ಮಾಪಕಿಯಾಗಿ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಈಗ ಮೊದಲ ಬಾರಿಗೆ ತುಳು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಶಿಲ್ಪಾ ಗಣೇಶ್‌ ಕರಾವಳಿ ಮೂಲದವರು.ಉತ್ತಮ ಬಜೆಟ್​ನಲ್ಲಿ ಗುಣಮಟ್ಟದ ಸಿನಿಮಾ

ತುಳು ಚಿತ್ರರಂಗಕ್ಕೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ದಂಪತಿ Read More »

ಮಹಾಮಳೆಗೆ ತತ್ತರಿಸಿದ ಬೆಂಗಳೂರು : 10 ಬಡಾವಣೆಗಳು ಜಲಾವೃತ

ವಿದ್ಯುತ್‌, ಇಂಟರ್‌ನೆಟ್‌ ಸಂಪರ್ಕವಿಲ್ಲದೆ ಜನರ ಪರದಾಟ ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರು ನಗರ ಕಂಡು ಕೇಳರಿಯದ ಮಳೆಯ ಆರ್ಭಟ ಎದುರಿಸುತ್ತಿದೆ. ಭಾರಿ ಮಳೆಯಿಂದಾಗಿ ನಗರದ ಜನಜೀವನ ಪೂರ್ತಿ ಅಸ್ತವ್ಯಸ್ತಗೊಂಡಿದ್ದು, ಜನರು ಮನೆಯಿಂದ ಹೊರಗಿಳಿಯಲು ಸಾಧ್ಯವಾಗದ ಪರಿಸ್ಥಿತಿಯಿದೆ. ಯಲಹಂಕ ಪ್ರದೇಶದಲ್ಲಿ ಉಂಟಾದ ಮೇಘಸ್ಫೋಟದಿಂದ ಇಲ್ಲಿನ ನಿವಾಸಿಗಳು ಬಹಳ ಕಷ್ಟಪಡುತ್ತಿದ್ದಾರೆ. ಭಾರಿ ಮಳೆಯಿಂದಾಗಿ 10 ಲೇಔಟ್‌ಗಳು ಮತ್ತು ಸುತ್ತಮುತ್ತಲಿನ ಸಾವಿರಾರು ನಿವಾಸಿಗಳು ಆಹಾರ, ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದೆ ಕಂಗಾಲಾಗಿದ್ದಾರೆ. ಎಲ್ಲ ದಿಕ್ಕುಗಳಿಂದಲೂ ನೀರಿನಿಂದ ಆವೃತವಾದ ಪ್ರದೇಶಗಳ ಜನರನ್ನು

ಮಹಾಮಳೆಗೆ ತತ್ತರಿಸಿದ ಬೆಂಗಳೂರು : 10 ಬಡಾವಣೆಗಳು ಜಲಾವೃತ Read More »

ಕಲುಷಿತ ನೀರು ಕುಡಿದು 8 ತಿಂಗಳ ಮಗು ಸಹಿತ ಐವರು ಸಾವು

ವಿಜಯನಗರ: ಕಲುಷಿತ ನೀರು ಕುಡಿದು ವಾಂತಿಭೇದಿಯಿಂದ ಬಳಲಿ ನವಜಾತ ಶಿಶು ಸೇರಿದಂತೆ ಐವರು ಮೃತಪಟ್ಟಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಸಂಭವಿಸಿದೆ. ಹರಪನಹಳ್ಳಿ ತಾಲೂಕಿನ ಟಿ ತುಂಬಿಗೇರೆ ಗ್ರಾಮದ ಸುರೇಶ್ (30), ಮಹಾಂತೇಶ್ (45), ಗೌರಮ್ಮ (60), ಹನುಮಂತಪ್ಪ (38) ಮತ್ತು ಎಂಟು ತಿಂಗಳ ಗಂಡು ಮಗು ಮೃತಪಟ್ಟಿದೆ.ಗ್ರಾಮಕ್ಕೆ ಕಳೆದ 15 ದಿನಗಳಿಂದ ಕಲುಷಿತ ನೀರು ಸರಬರಾಜು ಆಗುತ್ತಿದೆ. ಇದನ್ನು ತಿಳಿಯದೆ ಗ್ರಾಮಸ್ಥರು ನೀರು ಕುಡಿಯುತ್ತಿದ್ದಾರೆ. ಇದರಿಂದ ಗ್ರಾಮದ 50ಕ್ಕೂ ಹೆಚ್ಚು ಜನರು ವಾಂತಿಭೇದಿಯಿಂದ ಆಸ್ಪತ್ರೆಗೆ

ಕಲುಷಿತ ನೀರು ಕುಡಿದು 8 ತಿಂಗಳ ಮಗು ಸಹಿತ ಐವರು ಸಾವು Read More »

ಬೆಂಗಳೂರು: ಕಟ್ಟಡ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 5ಕ್ಕೇರಿಕೆ

ಭಾರಿ ಮಳೆಗ ಕುಸಿದು ಬಿದ್ದ ನಿರ್ಮಾಣ ಹಂತದ 7 ಅಂತಸ್ತಿನ ಕಟ್ಟಡ ಬೆಂಗಳೂರು: ಭಾರಿ ಮಳೆ ಬೆಂಗಳೂರಿನಲ್ಲಿ ಹಲವು ಅನಾಹುತಗಳನ್ನು ಸೃಷ್ಟಿಸಿದ್ದು, ನಿನ್ನೆ ಸಂಜೆ ಸಂಭವಿಸಿದ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೇರಿದೆ. ಮಂಗಳವಾರ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ 7 ಮಹಡಿಯ ಕಟ್ಟಡ ಕುಸಿದಿತ್ತು. ಓರ್ವನ ಶವ ನಿನ್ನೆಯೆ ಸಿಕ್ಕಿತ್ತು. ಉಳಿದವರ ಶವಗಳನ್ನು ಮಧ್ಯರಾತ್ರಿಗಾಗುವಾಗ ಹೊರತೆಗೆಯಲಾಗಿದೆ. ಮೃತರೆಲ್ಲ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಕಾರ್ಮಿಕರು.ರಾತ್ರಿಯಿಡೀ ಅವಶೇಷಗಳಡಿ ಸಿಲುಕಿದವರ ಪತ್ತೆ ಮತ್ತು ರಕ್ಷಣಾ ಕಾರ್ಯ ನಡೆದಿದೆ.

ಬೆಂಗಳೂರು: ಕಟ್ಟಡ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 5ಕ್ಕೇರಿಕೆ Read More »

ಅನ್ನಭಾಗ್ಯ ಹಣ ವರ್ಗಾವಣೆ ಸದ್ಯ ಮುಂದುವರಿಕೆ : ಮುನಿಯಪ್ಪ

ಫಲಾನಭವಿಗಳ ಖಾತೆಗೆ ಹಣ ವರ್ಗಾವಣೆ ವ್ಯವಸ್ಥೆಯಲ್ಲಿ ಬದಲಾವಣೆಯಿಲ್ಲ ಬೆಂಗಳೂರು : ಅನ್ನಭಾಗ್ಯ ಫಲಾನುಭವಿಗಳಿಗೆ ಐದು ಕೆಜಿ ಅಕ್ಕಿ ಬದಲಿಗೆ 170 ರೂ. ನೇರ ನಗದು ವರ್ಗಾವಣೆ (ಡಿಬಿಟಿ) ವ್ಯವಸ್ಥೆ ಸದ್ಯಕ್ಕೆ ಮುಂದುವರಿಯಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ. ರಾಜ್ಯಕ್ಕೆ ಕೆಜಿಗೆ 28 ರೂ.ಯಂತೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೆಚ್ಚುವರಿಯಾಗಿ ಅಗತ್ಯವಿರುವ 20,000 ಮೆಟ್ರಿಕ್ ಟನ್ ಅಕ್ಕಿಯನ್ನು ರಾಜ್ಯ ಸರ್ಕಾರ ಬೇರೆಡೆಗಳಿಂದ ಸಂಗ್ರಹಿಸಲಿದೆ. ಆದರೆ ಸದ್ಯಕ್ಕೆ ಫಲಾನುಭವಿಗಳ

ಅನ್ನಭಾಗ್ಯ ಹಣ ವರ್ಗಾವಣೆ ಸದ್ಯ ಮುಂದುವರಿಕೆ : ಮುನಿಯಪ್ಪ Read More »

error: Content is protected !!
Scroll to Top