ಸುದ್ದಿ

ಈಗ ಗೋಲ್‌ಗಪ್ಪಾ ಮೇಲೆ ಆರೋಗ್ಯ ಇಲಾಖೆ ಕಣ್ಣು

ರುಚಿ ಹೆಚ್ಚಿಸಲು ಯೂರಿಯಾ, ಹಾರ್ಪಿಕ್‌ ಬಳಸುವ ಆರೋಪದ ಹಿನ್ನೆಲೆಯಲ್ಲಿ ಪರಿಶೀಲನೆ ಬೆಂಗಳೂರು: ಗೋಬಿ ಮಂಚೂರಿ, ಕೇಕ್‌, ಬಾಂಬೆ ಮಿಠಾಯಿ ಇತ್ಯಾದಿ ತಿನಿಸುಗಳಲ್ಲಿರುವ ರಾಸಾಯನಿಕ ಅಂಶವನ್ನು ಪತ್ತೆಹಚ್ಚಿರುವ ಆರೋಗ್ಯ ಇಲಾಖೆಯ ಕಣ್ಣು ಈಗ ಜನಪ್ರಿಯ ಸ್ಟ್ರೀಟ್‌ ಫುಡ್‌ ಪಾನಿಪುರಿ ಮೇಲೆ ಬಿದ್ದಿದೆ. ಗೋಲ್‌ಗಪ್ಪಾ ಎಂದೂ ಕರೆಯಲಾಗುವ ಪಾನಿಪುರಿಯಲ್ಲಿ ರುಚಿ ಹೆಚ್ಚಳಕ್ಕೆ ಯೂರಿಯಾ ಗೊಬ್ಬರ ಹಾಗೂ ಹಾರ್ಪಿಕ್ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಪ್ರಾರಂಭಿಸಿದ್ದಾರೆ.ಕೆಲವು ರಾಜ್ಯಗಳಲ್ಲಿ ಗೋಲ್‌ಗಪ್ಪಾದ ರುಚಿ ಹೆಚ್ಚಿಸಲು ಅಪಾಯಕಾರಿ […]

ಈಗ ಗೋಲ್‌ಗಪ್ಪಾ ಮೇಲೆ ಆರೋಗ್ಯ ಇಲಾಖೆ ಕಣ್ಣು Read More »

ವಕ್ಫ್‌ ಮಂಡಳಿ ನಿಷೇಧ : ಬಿಜೆಪಿ ಒತ್ತಾಯ

ಕಾಂಗ್ರೆಸ್‌ನಿಂದಾಗಿ ವಕ್ಫ್‌ಗೆ ವಿಶೇಷ ಅಧಿಕಾರ ಎಂದು ಆರೋಪ ಬೆಂಗಳೂರು: ರೈತರ ಕೃಷಿ ಜಮೀನು ಕಿತ್ತುಕೊಳ್ಳುತ್ತಿರುವ ವಕ್ಫ್‌ ಮಂಡಳಿಯನ್ನು ನಿಷೇಧಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ವಕ್ಫ್ ಮಂಡಳಿ ರೈತರ ಜಮೀನು ಕಿತ್ತುಕೊಳ್ಳುತ್ತಿದ್ದು, ರೈತರಿಗೆ ನೋಟಿಸ್ ನೀಡಿದೆ. ಈ ಮಂಡಳಿಯನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದ್ದಾರೆ. ಕಳೆದ 70 ವರ್ಷಗಳಿಂದ ವಕ್ಫ್ ಬೋರ್ಡ್‌ಗೆ ಅಧಿಕಾರ ನೀಡುವ ಮೂಲಕ ಸಮಸ್ಯೆ ಮತ್ತು ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ. ವಕ್ಫ್ ಬೋರ್ಡ್

ವಕ್ಫ್‌ ಮಂಡಳಿ ನಿಷೇಧ : ಬಿಜೆಪಿ ಒತ್ತಾಯ Read More »

ಅನಿಷ್ಟಗಳಿಗೆಲ್ಲ ಜಾತಿ ವ್ಯವಸ್ಥೆ ಕಾರಣ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ: ಪೇಜಾವರ ಶ್ರೀ

ಬಿ.ಕೆ.ಹರಿಪ್ರಸಾದ್‌ರ ಪುಡಿ ರಾಜಕಾರಣಿ ಟೀಕೆಗೆ ಶ್ರೀಗಳ ತಿರುಗೇಟು ಮಂಗಳೂರು: ಒಂದು ಕಡೆ ನಾವು ಜಾತ್ಯಾತೀತರು ಎನ್ನುವುದು. ಇನ್ನೊಂದು ಕಡೆ ಎಲ್ಲ ವಲಯದಲ್ಲೂ ಜಾತಿ ವ್ಯವಸ್ಥೆಯನ್ನು ಪೋಷಿಸುವುದು. ಜಾತಿ ವ್ಯವಸ್ಥೆಯನ್ನು ಅನಿಷ್ಟಗಳಿಗೆ ಮೂಲ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜಾತ್ಯಾತೀತ ಎಂದು ಹೇಳಿಕೊಳ್ಳುವಾಗ ಇಲ್ಲಿ ಜಾತಿ, ಪಂಗಡಗಳ ಲೆಕ್ಕಾಚಾರ ಯಾಕೆ ಎಂದು ಉಡುಪಿ ಪ್ರಶ್ನಿಸಿ ಶ್ರೀಗಳು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಬಿ.ಕೆ ಹರಿಪ್ರಸಾದ್ ತನ್ನ ವಿರುದ್ಧ ಮಾಡಿದ

ಅನಿಷ್ಟಗಳಿಗೆಲ್ಲ ಜಾತಿ ವ್ಯವಸ್ಥೆ ಕಾರಣ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ: ಪೇಜಾವರ ಶ್ರೀ Read More »

ಇದು ಕಾಂಗ್ರೆಸ್‌ ಡಿಎನ್‌ಎ : ವಿಪಕ್ಷ ನಾಯಕ ಅಶೋಕ್‌ ವ್ಯಂಗ್ಯ

ರಾಹುಲ್‌ ಗಾಂಧಿ ಜೊತೆ ಅಪರಾಧಿ ಸೈಲ್‌ ಇರುವ ಫೋಟೊ ಟ್ವೀಟ್‌ ಮಾಡಿ ಲೇವಡಿ ಬೆಂಗಳೂರು: 200 ಕೋಟಿ ರೂ. ಮೌಲ್ಯದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾರವಾರದ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜೊತೆಗಿರುವ ಫೋಟೊ ಟ್ವೀಟ್‌ ಮಾಡಿ ವಿಪಕ್ಷ ನಾಯಕ ಆರ್‌. ಅಶೋಕ್‌ ಕಾಂಗ್ರೆಸ್‌ನ ಕಾಲೆಳೆದಿದ್ದಾರೆ. ಎಕ್ಸ್​ನಲ್ಲಿ ರಾಹುಲ್ ಗಾಂಧಿ ಜೊತೆ ಸತೀಶ್ ಸೈಲ್ ಇರುವ ಫೋಟೊ ಪೋಸ್ಟ್ ಮಾಡಿರುವ ವಿಪಕ್ಷ ನಾಯಕ

ಇದು ಕಾಂಗ್ರೆಸ್‌ ಡಿಎನ್‌ಎ : ವಿಪಕ್ಷ ನಾಯಕ ಅಶೋಕ್‌ ವ್ಯಂಗ್ಯ Read More »

ಪಟಾಕಿ ಸುಡಲು ಎರಡು ತಾಸು ಮಾತ್ರ ಅವಕಾಶ

ರಾತ್ರಿ 8ರಿಂದ 10ರ ನಡುವೆ ಹಸಿರು ಪಟಾಕಿ ಸುಡಬೇಕು ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ 2 ತಾಸು ಮಾತ್ರ ಪಟಾಕಿ ಸುಡಲು ಅವಕಾಶ ಸಿಗುತ್ತದೆ. ಸುಪ್ರೀಂ ಕೋರ್ಟ್ ಆದೇಶದ ಅನುಸಾರ ರಾತ್ರಿ 8ರಿಂದ 10 ಗಂಟೆ ತನಕ ಹಸಿರು ಪಟಾಕಿ ಹೊಡೆಯಬೇಕು ಎಂದು ಸರಕಾರ ಆದೇಶ ನೀಡಿದೆ.ರಾತ್ರಿ 8 ಗಂಟೆಯಿಂದ 10 ಗಂಟೆ ತನಕ ಪಟಾಕಿ ಹೊಡೆಯಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಪರಿಸರಕ್ಕೆ ಹಾನಿಯಾಗುವ

ಪಟಾಕಿ ಸುಡಲು ಎರಡು ತಾಸು ಮಾತ್ರ ಅವಕಾಶ Read More »

ಎರಡು ಕಾಲಿಲ್ಲದಿದ್ದರೂ ಮೌಂಟ್ ಎವರೆಸ್ಟ್ ಏರಿದವನ ಕಥೆ

ಮಾರ್ಕ್ ಇಂಗ್ಲಿಸ್ ಬದುಕು ಯಾರಿಗಾದರೂ ಸ್ಫೂರ್ತಿ ನೀಡಬಲ್ಲದು ಈ ವ್ಯಕ್ತಿಯ ಬದುಕು ಮತ್ತು ಸಾಧನೆಗಳು ನಮಗೆ ಖಂಡಿತ ಸ್ಫೂರ್ತಿ ತುಂಬುವ ಶಕ್ತಿ ಹೊಂದಿದೆ.ಆತನನ್ನು ನಿಮಗೆ ಹೇಗೆ ಪರಿಚಯ ಮಾಡಲಿ? ಅವನೊಬ್ಬ ಪರ್ವತಾರೋಹಿ, ಸಾಹಸಿ, ಉದ್ಯಮಿ, ಲೇಖಕ, ಸೈಕ್ಲಿಸ್ಟ್, ಸಂಶೋಧಕ ಮತ್ತು ಖಂಡಿತವಾಗಿಯು ಅದ್ಭುತ ಸಾಧಕ. ಆತನ ಕಥೆ ಆರಂಭ ಆಗೋದು ಹೀಗೆ… ಆತ ನ್ಯೂಜಿಲ್ಯಾಂಡ್ ದೇಶದವನು. ಹುಟ್ಟಿದ್ದು 1959 ಸೆಪ್ಟೆಂಬರ್ 27ರಂದು. ಆತನಿಗೆ ಬಾಲ್ಯದಿಂದ ಸಾಹಸಿ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ. ಪರ್ವತಾರೋಹಣ, ಟ್ರೆಕ್ಕಿಂಗ್ ಇವೆಲ್ಲವೂ ಅವನ ಬದುಕಿನ

ಎರಡು ಕಾಲಿಲ್ಲದಿದ್ದರೂ ಮೌಂಟ್ ಎವರೆಸ್ಟ್ ಏರಿದವನ ಕಥೆ Read More »

ನೂರಾರು ಎಕರೆ ಕೃಷಿ ಭೂಮಿ ವಕ್ಫ್‌ ವಶ : ರೈತರು ಕಂಗಾಲು

ಪಹಣಿಯಲ್ಲಿ ವಕ್ಫ್‌ ಮಂಡಳಿಗೆ ಸೇರಿದ್ದು ಎಂದು ಸೇರ್ಪಡೆ ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ನೂರಾರು ಎಕರೆ ಕೃಷಿಭೂಮಿಯನ್ನು ವಕ್ಫ್‌ ಆಸ್ತಿ ಎಂದು ನೋಟಿಸ್‌ ನೀಡಿರುವುದು ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಈ ಕ್ರಮದ ವಿರುದ್ಧ ಕಿಡಿಕಾರಿದ್ದು, ಕಾಂಗ್ರೆಸ್‌ ಆಡಳಿತದಲ್ಲಿ ಕರ್ನಾಟಕ ಪಾಕಿಸ್ಥಾನವಾಗಿ ಬದಲಾಗುತ್ತಿದೆ ಎಂದು ಹೇಳಿದೆ.ರೈತರು ತಲೆಮಾರುಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ನೂರಾರು ಎಕರೆ ಜಮೀನು ವಕ್ಫ್‌ ಮಂಡಳಿಗೆ ಸೇರಿದ್ದು ಎಂದು ಪಹಣಿಯಲ್ಲಿ ದಾಖಲಾಗಿದೆ. ರೈತರಿಗೆ ಕಂದಾಯ ಇಲಾಖೆಯಿಂದ ವಕ್ಫ್‌ ಆಸ್ತಿಯ ಬಗ್ಗೆ ದಾಖಲೆಗಳನ್ನು ಸಲ್ಲಿಸಲು

ನೂರಾರು ಎಕರೆ ಕೃಷಿ ಭೂಮಿ ವಕ್ಫ್‌ ವಶ : ರೈತರು ಕಂಗಾಲು Read More »

ಇರಾನ್‌ ರಾಜಧಾನಿ ಟೆಹ್ರಾನ್‌ ಮೇಲೆ ಇಸ್ರೇಲ್‌ ದಾಳಿ

ಸೇನಾನೆಲೆಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ; ಭೀಕರ ಸ್ಫೋಟ ಟೆಹ್ರಾನ್‌: ಕಳೆದ ಅಕ್ಟೋಬರ್ 1 ರಂದು ನಡೆದಿದ್ದ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇರಾನ್‌ನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ಶನಿವಾರ ಮುಂಜಾನೆ ವೈಮಾನಿಕ ದಾಳಿ ಆರಂಭಿಸಿದೆ. ದಾಳಿಯಿಂದಾದ ಸಾವುನೋವಿನ ಬಗ್ಗೆ ತಕ್ಷಣದ ಮಾಹಿತಿ ಸಿಕ್ಕಿಲ್ಲ. ಇರಾನ್‌ನ ಮಿಲಿಟರಿ ಗುರಿಗಳ ಮೇಲೆ ನಡೆಸಲಾದ ನಿಖರವಾದ ದಾಳಿ ಎಂದು ಇಸ್ರೇಲ್ ಮಿಲಿಟರಿ ಹೇಳಿಕೊಂಡಿದೆ. ಇರಾನಿನ ರಾಜಧಾನಿ ಟೆಹ್ರಾನ್‌ನಲ್ಲಿ ಭೀಕರ ಸ್ಫೋಟದ ಸದ್ದು ಕೇಳಿಸಿದೆ. ಕನಿಷ್ಠ ಏಳು ಸ್ಫೋಟಗಳು ಮುಂಜಾನೆ ವೇಳೆ ಸಂಭವಿಸಿವೆ.

ಇರಾನ್‌ ರಾಜಧಾನಿ ಟೆಹ್ರಾನ್‌ ಮೇಲೆ ಇಸ್ರೇಲ್‌ ದಾಳಿ Read More »

24 ತುಂಡು ಮಾಡುತ್ತೇನೆ ಎಂದು ಹಿಂದೂ ಯುವತಿಗೆ ಬೆದರಿಕೆಯೊಡ್ಡಿದ ಆರೋಪಿ ಬಂಧನ

ಯುವತಿಯ ಅಂಗಡಿ ಎದುರು ಬಂದು ಕಿರುಕುಳ ನೀಡುತ್ತಿದ್ದ ಯುವಕರ ತಂಡ ಮಂಗಳೂರು: ಸುರತ್ಕಲ್‌ನ ಹಿಂದು ಯುವತಿಗೆ ಕಿರುಕುಳ ನೀಡಿದ ಆರೋಪಿ ಸುರತ್ಕಲ್‌ ಗ್ರಾಮದ ಇಡ್ಯಾ ಗ್ರಾಮದ ಶಾರೀಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಿರಂತರ ಕಿರುಕುಳದಿಂದ ಬೇಸತ್ತು ಯುವತಿ ನಿನ್ನೆ ಮುಂಜಾನೆ ನಿದ್ದೆ ಮಾತ್ರ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿತ್ತು. ಹಿಂದೂ ಸಂಘಟನೆಗಳು ಲವ್‌ ಜಿಹಾದ್‌ ಕೃತ್ಯ ಎಂದು ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯುವತಿಗೆ ಬೆದರಿಕೆಯೊಡ್ಡುತ್ತಿದ್ದ

24 ತುಂಡು ಮಾಡುತ್ತೇನೆ ಎಂದು ಹಿಂದೂ ಯುವತಿಗೆ ಬೆದರಿಕೆಯೊಡ್ಡಿದ ಆರೋಪಿ ಬಂಧನ Read More »

ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರನ್ನು ಸುಲಿಗೆ ಮಾಡಿದರೆ ಪರ್ಮಿಟ್‌ ರದ್ದು

ಟಿಕೆಟ್‌ ದರ ಹೆಚ್ಚಿಸಿ ಪ್ರಯಾಣಿಕರನ್ನು ಸುಲಿಗೆ ಮಾಡುವ ಬಸ್‌ ಮಾಲೀಕರಿಗೆ ಕಠಿಣ ಎಚ್ಚರಿಕೆ ಬೆಂಗಳೂರು : ಹಬ್ಬ, ಸಾಲು ಸಾಲು ರಜೆಗಳು ಬಂದ ಸಂದರ್ಭದಲ್ಲಿ ಟಿಕೆಟ್‌ ದರ ಹೆಚ್ಚಿಸಿ ಜನರನ್ನು ಸುಲಿಗೆ ಮಾಡುವ ಖಾಸಗಿ ಬಸ್‌ ಮಾಲೀಕರಿಗೆ ಸರಕಾರ ಖಡಕ್‌ ಎಚ್ಚರಿಕೆ ನೀಡಿದೆ. ಈಗ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಿಂಗಳಾಂತ್ಯ ಹಾಗೂ ನವೆಂಬರ್‌ ಮೊದಲ ವಾರದಲ್ಲಿ ಸಾಲುಸಾಲು ರಜೆಗಳಿದ್ದು, ಖಾಸಗಿ ಬಸ್‌ಗಳ ಟಿಕೆಟ್‌ ದರ ದುಪ್ಪಟ್ಟು ಆಗಿದೆ. ಇದಕ್ಕೆ ರಾಜ್ಯ ಸಾರಿಗೆ ಇಲಾಖೆ ಕಡಿವಾಣ ಹಾಕಲು ಮುಂದಾಗಿದ್ದು,

ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರನ್ನು ಸುಲಿಗೆ ಮಾಡಿದರೆ ಪರ್ಮಿಟ್‌ ರದ್ದು Read More »

error: Content is protected !!
Scroll to Top